Site icon Vistara News

Stars Holiday Fashion: ಸ್ಯಾಂಡಲ್‌ವುಡ್‌ ಗರ್ಲ್ಸ್ ಗ್ಯಾಂಗ್‌ ಕಲರ್‌ಫುಲ್‌ ಹಾಲಿ ಡೇ, ಫ್ಯಾಷನ್‌ಗೆ ಟ್ರಾವೆಲ್‌ ಪ್ರಿಯ ಹುಡುಗಿಯರು ಫಿದಾ

Stars Holiday Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ಯಾಂಡಲ್‌ವುಡ್‌ ನಟಿ ಅಶಿಕಾ, ಅನುಷಾ ರಂಗನಾಥ್‌ ಹಾಗೂ ತೇಜಸ್ವಿನಿ ಶರ್ಮಾ ಅವರನ್ನೊಳಗೊಂಡ ಗರ್ಲ್ಸ್ ಗ್ಯಾಂಗ್‌ನ ಕಲರ್‌ಫುಲ್‌ ಹಾಲಿಡೇ ಫ್ಯಾಷನ್‌ಗೆ ಟ್ರಾವೆಲ್‌ ಪ್ರಿಯ ಹುಡುಗಿಯರು ಫಿದಾ ಆಗಿದ್ದಾರೆ.

ಹೌದು. ಅತ್ಯಾಕರ್ಷಕ ವೈಬ್ರೆಂಟ್‌ ಶೇಡ್‌ಗಳನ್ನೊಳಗೊಂಡ ಕಲರ್‌ಫುಲ್‌ ಫ್ಯಾಷೆನಬಲ್‌ ಔಟ್‌ಫಿಟ್ಸ್‌ನಲ್ಲಿ ಸ್ಯಾಂಡಲ್‌ವುಡ್‌ ಗರ್ಲ್ಸ್ ಗ್ಯಾಂಗ್‌ ಮಾಲ್ಡೀವ್ಸ್‌ನ ತೀರದಲ್ಲಿ ಕಾಣಿಸಿಕೊಂಡಿದ್ದು, ಹಾಲಿಡೇ ಸೀಸನ್‌ ಫ್ಯಾಷನ್‌ಗೆ ಸೈ ಎಂದಿದೆ. ಸೀಸನ್‌ಗೆ ತಕ್ಕಂತೆ ಮ್ಯಾಚ್‌ ಆಗುವ ಹಾಲಿ ಡೇ ಫ್ಯಾಷನ್‌ಗೆ ಇವರೆಲ್ಲರೂ ನಾಂದಿ ಹಾಡಿದ್ದು, ಇದು ಸೋಷಿಯಲ್‌ ಮೀಡಿಯಾದಲ್ಲಿನ ಟ್ರಾವೆಲ್‌ ಪ್ರಿಯ ಹುಡುಗಿಯರನ್ನು ಸೆಳೆದಿದೆ.

ನಟಿಯರ ಹಾಲಿಡೇ ಲುಕ್‌

ಅಂದಹಾಗೆ, ಸೀಸನ್‌ಗೆ ತಕ್ಕಂತೆ ಹಾಲಿಡೇ ಲುಕ್‌ ಆಗಾಗ್ಗೆ ಬದಲಾಗುತ್ತಿರುತ್ತದೆ. ಕೆಲವೊಮ್ಮೆ ಕಲರ್‌ಗಳು ಬದಲಾಗುತ್ತವೆ, ಡಿಸೈನ್ಸ್‌ ಬದಲಾಗುತ್ತವೆ. ಇದಕ್ಕೆ ಪೂರಕ ಎಂಬಂತೆ, ಟ್ರಾವೆಲ್‌ ಮಾರ್ಟ್ ಆಯೋಜಿಸಿದ್ದ ಈ ಹಾಲಿಡೇಯಲ್ಲಿ ನಟಿ ಅಶಿಕಾ, ಅನುಷಾ ರಂಗನಾಥ್‌ ಹಾಗೂ ತೇಜಸ್ವೀನಿ ಶರ್ಮಾ ಧರಿಸಿರುವ ಬೀಚ್‌ ಸೈಡ್‌ ಟ್ರಾವೆಲ್‌ ಔಟ್‌ಫಿಟ್‌ಗಳು ಪಕ್ಕಾ ಹಾಲಿಡೇಯ ಸಂಭ್ರಮ ಹೆಚ್ಚಿಸಿದಂತಿವೆ. ಇನ್ನು ಮುಂಬರುವ ಸೀಸನ್‌ನ ಟ್ರೆಂಡ್‌ ಲಿಸ್ಟ್‌ನ ಟಾಪ್‌ನಲ್ಲಿವೆ.

ಅದರಲ್ಲೂ ಬೀಚ್‌ ಸೈಡ್‌ ರಿಲಾಕ್ಸಿಂಗ್‌ ಟೈಮ್‌ಗೆ ಹೇಳಿಮಾಡಿಸಿದಂತಿವೆ. ಇವು ನೋಡಲು ಕೂಡ ಆಕರ್ಷಕವಾಗಿ ಕಾಣುವುದಲ್ಲದೇ, ಇಂದಿನ ಜನರೇಷನ್‌ನ ಕ್ರೇಝಿ ವಿಷಯಗಳಲ್ಲೊಂದಾದ ಇನ್ಸ್ಟಾ ಫ್ಯಾಷನ್‌ ರೀಲ್ಸ್‌ಗೆ ಹೇಳಿಮಾಡಿಸಿದಂತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಅವರ ಪ್ರಕಾರ, ವಿಂಟರ್‌ ಸೀಸನ್‌ ಮುಕ್ತಾಯದ ಹಂತ ತಲುಪಿದೆ. ಇನ್ನೇನಿದ್ದರೂ ಬೇಸಿಗೆ ಹಾಗೂ ಸ್ಪ್ರಿಂಗ್‌ ಸಮ್ಮರ್‌ ಕಾಲ. ಅದರಲ್ಲೂ ಬೀಚ್‌ ಸೈಡ್‌ ಫ್ಯಾಷನ್‌ ಟ್ರೆಂಡಿಯಾಗುವ ಕಾಲ. ಈ ಬಾರಿಯ ವೈಬ್ರೆಂಟ್‌ ಕಲರ್‌ಗಳಲ್ಲಿ ಸ್ಥಾನ ಪಡೆದಿರುವ ಸಾಕಷ್ಟು ಡಿಸೈನರ್‌ವೇರ್‌ಗಳು ನಟಿಯರನ್ನು ಸವಾರಿ ಮಾಡತೊಡಗಿವೆ.

ಕಲರ್‌ಫುಲ್‌ ಗಲ್ರ್ಸ್ ಟೀಮ್‌

ಮಾಲ್ಡೀವ್ಸ್‌ನ ಅದಾರನ್‌ ವಾಡೂನ ತೀರದಲ್ಲಿನ ಹವಾಮಾನಕ್ಕೆ ತಕ್ಕಂತೆ ಅನುಷಾರ ಲೆಮೆನ್‌ ಯೆಲ್ಲೋ ಫ್ರಾಕ್‌, ತೇಜಸ್ವಿನಿ ಶರ್ಮಾರ ರೆಡ್‌ ಲಾಂಗ್‌ ಫ್ರಾಕ್‌, ಸ್ನೇಹಿತೆ ಸೋನಾಲಿಯ ಲ್ಯಾವೆಂಡರ್‌ ಫ್ರಾಕ್‌, ಅಶಿಕಾರ ಪೀಚ್‌ ಲಾಂಗ್‌ ಫ್ರಿಲ್‌ ಮ್ಯಾಕ್ಸಿ ಇಡೀ ಹಾಲಿಡೇ ಲುಕ್‌ನ ರಂಗು ಹೆಚ್ಚಿಸಿದೆ. ಇದು ಇವರೆಲ್ಲರ ಫ್ಯಾಷನ್‌ ಸೆನ್ಸ್‌ಗೆ ಫುಲ್‌ ಮಾಕ್ರ್ಸ್ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Non wearable Fashion: ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದ ನತಾಶಾ ಪ್ಯಾರಾಚೂಟ್‌ ಲುಕ್‌

Exit mobile version