ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಾಂಪ್ರದಾಯಿಕ ಸಂಸ್ಕೃತಿಗೆ ಸಾಥ್ ನೀಡುವ ಡಿಸೈನರ್‌ವೇರ್‌ಗಳಲ್ಲಿ ಸಿನಿಮಾ , ಕಿರುತೆರೆ ತಾರೆಯರು ಹಾಗೂ ಫ್ಯಾಷನ್ ಸೆಲೆಬ್ರೆಟಿಗಳು ಸಂಕ್ರಾಂತಿ ಹಬ್ಬವನ್ನು (Stars Sankaranti celebration 2024) ಆಚರಿಸಿದರು. ಅದರಲ್ಲೂ ನಮ್ಮ ನೆಲದ ಸಂಸ್ಕೃತಿ ಬಿಂಬಿಸುವ ಟ್ರೆಡಿಷನಲ್ ಔಟ್‌ಫಿಟ್ ಹಾಗೂ ಹಬ್ಬದ ಗ್ರ್ಯಾಂಡ್ ಡಿಸೈನರ್‌ವೇರ್‌ಗಳಲ್ಲಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ಅಷ್ಟು ಮಾತ್ರವಲ್ಲ, ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಔಟ್‌ಫಿಟ್ ಹಾಗೂ ಹಬ್ಬದ ಲುಕ್‌ನ ಸ್ಟೈಲ್ ಹಾಗೂ ಫ್ಯಾಷನ್ ಸ್ಟೇಟ್‌ಮೆಂಟನ್ನು ಅಪ್‌ಲೋಡ್ ಮಾಡಿ ಅಭಿಮಾನಿಗಳನ್ನು ಸೆಳೆದರು.
ಸ್ಯಾಂಡಲ್‌ವುಡ್ ತಾರೆಯರ ಟ್ರೆಡಿಷನಲ್ ಔಟ್‌ಫಿಟ್ಸ್
ನಟ ಧ್ರುವಾ ಸರ್ಜಾ ಪಕ್ಕಾ ಹಳ್ಳಿಗನಂತೆ ಔಟ್‌ಫಿಟ್ ಧರಿಸಿ ಎತ್ತುಗಳೊಂದಿಗೆ ಕಿಚ್ಚು ಹಾಯಿಸಿದ್ದು ಅಭಿಮಾನಿಗಳನ್ನು ಮಾತ್ರವಲ್ಲ, ಸಿನಿಮಾ ಪ್ರೇಮಿಗಳನ್ನು ಸೆಳೆಯಿತು. ಇನ್ನು ಇವರಂತೆಯೇ, ನಟ ದರ್ಶನ್ ಅವರ ಮಗನೊಂದಿಗೆ ದೇಸಿ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡರು. ನಟ ಯಶ್ ಕೂಡ ಪಂಚೆ ಹಾಗೂ ಶರ್ಟ್ ಧರಿಸಿ ಕುಟುಂಬದೊಂದಿಗೆ ಸೇರಿ ಗಾಳಿ ಪಟ ಹಾರಿಸಿದರು. ಇವರಂತೆಯೇ ಇತರೇ ನಟರು ಕೂಡ ಕುಟುಂಬದೊಂದಿಗೆ ಆಚರಿಸಿದ್ದು ವಿಶೇಷವಾಗಿತ್ತು.
ಇನ್ನು ನಟಿಯರ ಲಿಸ್ಟ್‌ನಲ್ಲಿ ನಟಿಯರಾದ ಅಶಿಕಾ ರಂಗನಾಥ್, ರಚಿತಾ ರಾಮ್, ಶ್ರೀನಿಧಿ ಶೆಟ್ಟಿ, ಹರ್ಷಿಕಾ ಪೊಣ್ಣಚ್ಚ, ಮಾಲಾ ಶ್ರೀ, ಪ್ರಿಯಾಂಕಾ ಉಪೇಂದ್ರ, ಅದಿತಿ ಪ್ರಭುದೇವಾ ಸೇರಿದಂತೆ ಸಾಕಷ್ಟು ನಟಿಯರು ಸೀರೆ ಹಾಗೂ ಹಾಫ್ ಸೀರೆ ಧರಿಸಿ ಹಬ್ಬದ ಲುಕ್‌ನಲ್ಲಿ ಸಂಭ್ರಮಿಸಿದರು. ನಟಿ ರಾಧಿಕಾ ಕುಮಾರ ಸ್ವಾಮಿ ಸೇರಿದಂತೆ ಸಾಕಷ್ಟು ನಟಿಯರು ಎಳ್ಳು-ಬೆಲ್ಲ ಹಾಗೂ ಕಬ್ಬನ್ನು ಕೈಗಳಲ್ಲಿ ಹಿಡಿದು ಹಬ್ಬಕ್ಕೆ ವಿಶ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು.
ಕಿರುತೆರೆ ತಾರೆಯರ ಸಂಕ್ರಾಂತಿ ಔಟ್‌ಫಿಟ್ಸ್
ಕಿರುತೆರೆ ನಟ-ನಟಿಯರು ಮೊದಲೇ ಈ ಹಬ್ಬದ ಸಡಗರ-ಸಂಭ್ರಮದ ಎಪಿಸೋಡ್‌ಗಳಲ್ಲಿ ಕಾಣಿಸಿಕೊಂಡಿದ್ದರಿಮದ ಹಬ್ಬದ ದಿನ ತಮ್ಮ ಈ ಔಟ್‌ಫಿಟ್‌ಗಳನ್ನು ಪ್ರತ್ಯೇಕವಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರದರ್ಶಿಸಿದರು. ಒಬ್ಬರಿಗಿಂತ ಒಬ್ಬರ ಡಿಸೈನರ್‌ವೇರ್‌ಗಳು ಭಿನ್ನವಾಗಿದ್ದವು ಎನ್ನಬಹುದು ಎನ್ನುತ್ತಾರೆ ಫ್ಯಾಷನ್ ವಿಮರ್ಶಕಿ ವಿದ್ಯಾ ವಿವೇಕ್.
ಫ್ಯಾಷನ್ ಲೋಕದ ಸೆಲೆಬ್ರೆಟಿಗಳ ಸಂಕ್ರಾಂತಿ
ಸಂಕ್ರಾಂತಿ ಟ್ರೆಡಿಷನಲ್ ಸೀರೆ ಹಾಗೂ ಔಟ್‌ಫಿಟ್ ಧರಿಸಿ ಹಬ್ಬ ಆಚರಿಸಿದರವರಲ್ಲಿ ಫ್ಯಾಷನ್ ಲೋಕದ ಸೆಲೆಬ್ರೆಟಿಗಳು ಹೊರತಾಗಿರಲಿಲ್ಲ! ಮಿಸೆಸ್ ಇಂಡಿಯಾ ಕರ್ನಾಟಕ ಡೈರೆಕ್ಟರ್ ಪ್ರತಿಭಾ ಸೌಂಶಿಮಠ್ ತಮ್ಮ ಉತ್ತರ ಕರ್ನಾಟಕದ ಕಡೆ ಆಚರಿಸುವ ಶೈಲಿಯಲ್ಲಿ ಕಾಣಿಸಿಕೊಂಡರೇ, ಇತರೇ ಮಾಡೆಲ್‌ಗಳು, ಕ್ವೀನ್‌ಗಳು ಹಾಫ್ ಸೀರೆ ಹಾಗೂ ಸೀರೆಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಮೂಲಕ ಹಬ್ಬದ ಪ್ರೇಮ ತೋರ್ಪಡಿಸಿದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sankranti Fashion 2024: ಸಂಕ್ರಾಂತಿ ಸೆಲೆಬ್ರೇಷನ್‌ಗೆ ಬಂತು ಬಿಗ್ ಬಾರ್ಡರ್ ರೇಷ್ಮೆ ಲಂಗ-ದಾವಣಿ