ಶೀಲಾ ಸಿ. ಶೆಟ್ಟಿ, ಬೆಂಗಳೂರು
ಡ್ರೆಸ್‌ಕೋಡ್ ಹಾಗೂ ಸ್ಟೈಲಿಂಗ್‌ನಲ್ಲಿ ತರುವ ಬದಲಾವಣೆಯು ಪ್ಲಂಪಿ ಹಾಗೂ ಗಿಡ್ಡ ಹುಡುಗಿಯರನ್ನೂ ಕೂಡ ಉದ್ದವಾಗಿ ಕಾಣುವಂತೆ ಬಿಂಬಿಸುತ್ತದೆ.
ಹೌದು. ಧರಿಸುವ ಯಾವುದೇ ಉಡುಪಿನಲ್ಲಿ ಕೇವಲ ಸ್ಟೈಲಾಗಿ ಕಾಣಿಸುವುದು ಮಾತ್ರವಲ್ಲ, ಉದ್ದವಾಗಿಯೂ ಕಾಣಿಸಬೇಕೆಂಬ ಆಸೆ ಬಹುತೇಕರಿಗಿರುತ್ತದೆ. ಹೈ ಹೀಲ್ಸ್ ಸ್ಯಾಂಡಲ್ಸ್ ಹೊರತುಪಡಿಸಿ ಸ್ಟೈಲಿಂಗ್‌ನಲ್ಲಿ ಕೊಂಚ ಬದಲಾವಣೆ ಹಾಗೂ ಉಡುಪುಗಳ ಆಯ್ಕೆಯಲ್ಲಿ ಜಾಣತನ ತೋರುವುದರಿಂದ ಹೈಟ್ ಆಗಿ ಕಾಣಿಸಬಹುದು. ಇದಕ್ಕಾಗಿ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್ಸ್.
- ವರ್ಟಿಕಲ್ ಲೈನ್ಸ್ ಡ್ರೆಸ್ ಆಯ್ಕೆ
ಪ್ರಿಂಟೆಡ್ ಡ್ರೆಸ್‌ಗಳ ಆಯ್ಕೆ ಮಾಡುವುದಾದದಲ್ಲಿ ಆದಷ್ಟೂ ವರ್ಟಿಕಲ್ ಸ್ಟ್ರೈಪ್ಸ್ ಆಯ್ಕೆ ಮಾಡಿ. ಇವು ಧರಿಸಿದಾಗ ಉದ್ದನಾಗಿ ಕಾಣುವಂತೆ ಇಲ್ಯೂಷನ್ ಕ್ರಿಯೇಟ್ ಮಾಡುತ್ತವೆ. ಉದಾಹರಣೆಗೆ ಸ್ಟ್ರೈಫ್ಸ್ ಫ್ರಾಕ್, ಪ್ಯಾಂಟ್, ಮ್ಯಾಕ್ಸಿ, ಟಾಪ್ ಸೇರಿದಂತೆ ಹಲವು ಜೆಮೆಟ್ರಿಕಲ್ ಡಿಸೈನವು ದೊರೆಯುತ್ತವೆ, ಅವುಗಳನ್ನೇ ಆಯ್ಕೆ ಮಾಡಿ. ಯಾವುದೇ ಕಾರಣಕ್ಕೂ ಹಾರಿಝಾಂಟಲ್ ಸ್ಟ್ರೈಪ್ಸ್ ಇರುವ ಉಡುಪಿನ ಆಯ್ಕೆ ಬೇಡ. ಇದು ನಿಮ್ಮನ್ನು ಪ್ಲಂಪಿಯಾಗಿ ಬಿಂಬಿಸುತ್ತದೆ ಎಂಬುದು ನೆನಪಿನಲ್ಲಿಡಿ.
- ಹೈ ವೇಸ್ಟ್ ಪ್ಯಾಂಟ್ ಧರಿಸಿ
ಹೈ ವೇಸ್ಟ್ ಪ್ಯಾಂಟ್‌ಗಳು ಟಮ್ಮಿಯ ಭಾಗದ ಮೇಲೆ ಕೂರುವುದರಿಂದ ನೋಡಲು ನಿಮ್ಮ ಕಾಲುಗಳು ಉದ್ದನಾಗಿ ಕಾಣುತ್ತವೆ. ಇದಕ್ಕೆ ಕ್ರಾಪ್ ಟಾಪ್ ಧರಿಸುವುದರಿಂದ ನೀವು ಉದ್ದನಾಗಿ ಕಾಣುತ್ತೀರಿ. ಹಾಗೆಂದು ತೀರಾ ಲಾಂಗ್ ಟಾಪ್ ಧರಿಸಿದಲ್ಲಿ ಯಾವುದೇ ಬದಲಾವಣೆ ಕಾಣದು.
- ದೊಗಲೆ ಡ್ರೆಸ್‌ಗಳನ್ನು ಆವಾಯ್ಡ್ ಮಾಡಿ
ಆದಷ್ಟೂ ಸ್ಲಿಮ್ ಫಿಟ್ ಡ್ರೆಸ್‌ಗಳನ್ನು ಆಯ್ಕೆ ಮಾಡಿ. ಲೂಸಾದ ಅಥವಾ ದೊಗಲೆಯಾದ ಡ್ರೆಸ್‌ಗಳು ನಿಮ್ಮನ್ನು ಮತ್ತಷ್ಟು ಪ್ಲಂಪಿಯಾಗಿರುವಂತೆ ಬಿಂಬಿಸಬಹುದು. ಇಲ್ಲವೇ ಕುಳ್ಳಗೆ ಕಾಣುವಂತೆ ಮಾಡಬಹುದು. ಹಾಗಾಗಿ ದೊಗಲೆ ಹಾಗೂ ಫಿಟ್ಟಿಂಗ್ ಇರದ ಉಡುಪುಗಳನ್ನು ಧರಿಸದಿರುವುದು ಉತ್ತಮ.
- ಮಾನೋಕ್ರೋಮ್ ಶೇಡ್ಸ್
ನೀವು ಮಾನೋಕ್ರೋಮ್ ಶೇಡ್‌ನ ಉಡುಪುಗಳನ್ನು ಆಯ್ಕೆ ಮಾಡಿದಲ್ಲಿ ಟಾಲ್ ಲುಕ್‌ನ ಇಲ್ಯೂಷನ್ ಕ್ರಿಯೇಟ್ ಮಾಡಬಹುದು. ಒಂದೇ ಕಲರ್‌ನ ಡಿಫರೆಂಟ್ ಶೇಡ್ ಆದರೂ ಓಕೆ. ಇವು ನೋಡಲು ಒಂದೇ ತರಹದ್ದಾಗಿ ಕಾಣುವುದರಿಂದ ಉದ್ದನಾಗಿ ಕಾಣುವಂತೆ ಬಿಂಬಿಸುತ್ತವೆ. ಸಾಲಿಡ್ ಕಲರ್ಸ್ ಆಯ್ಕೆಕೂಡ ಉತ್ತಮ.
- ಫ್ರಿಲ್ ಉಡುಪು ಬೇಡ
ಹೆಚ್ಚು ಫ್ರಿಲ್ ಹಾಗೂ ನೆರಿಗೆಗಳಿರುವ ಟಾಪ್ ಮತ್ತು ಫ್ರಾಕ್‌ಗಳನ್ನು ಧರಿಸಬೇಡಿ. ಇವು ದೇಹದ ಭಾಗವನ್ನು ಅಗಲ ಕಾಣುವಂತೆ ಮಾಡಿ ಕುಳ್ಳಗೆ ಕಾಣುವಂತೆ ಬಿಂಬಿಸುತ್ತವೆ. ಇನ್ನು ಅಗಲವಾದ ನೆಕ್‌ಲೈನ್ ಹಾಗೂ ವಿ ನೆಕ್‌ಲೈನ್ ಇರುವಂತಹ ಡ್ರೆಸ್‌ಗಳು ಟಾಲ್ ಇಲ್ಯೂಷನ್ ಕ್ರಿಯೆಟ್ ಮಾಡುತ್ತವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | International fashion day | ಭಾರತೀಯ ಟಾಪ್ ಫ್ಯಾಷನ್ ವಿನ್ಯಾಸಕರು