ತುಂಬ ಬ್ಯುಸಿ ಆಗಿದ್ದೀರಾ? ಆಗಾಗ ಪಾರ್ಲರಿಗೆ ಹೋಗೋದು ಬೇರೆ ಬೇರೆ ಥರದ ಹೇರ್‌ಸ್ಟೈಲ್ ಮಾಡೋದು, ಉದ್ದ ಕೂದಲನ್ನು ಸ್ಟೈಲಿಷ್ ಆಗಿಯೂ ಕಾಣಿಸುವಂತೆ ಮಾಡಿಕೊಳ್ಳಲು ಮನೆಯಲ್ಲಿ ಹೆಣಗಾಟ, ಹಾಗೂ ಅದಕ್ಕೆ ಬೇಕಾದ ಕಾಳಜಿಗಳಿಗೆ ಸಮಯವೇ ಸಿಗುತ್ತಿಲ್ಲವೇ? ಹಾಗಾದರೆ ಇದಕ್ಕಿರುವ ಬೆಸ್ಟ್ ಉಪಾಯ ಎಂದರೆ ಹೇರ್‌ಕಟ್. ಅತ್ಯಂತ ಕಡಿಮೆ ಕಾಳಜಿ ಬಯಸುವಂತಹ ಶಾರ್ಟ್ ಹೇರ್‌ಕಟ್‌ಗಳು.
ಹೌದು. ಸ್ಟೈಲಿಶ್ ಆಗಿಯೂ ಕಾಣಬೇಕು, ಟ್ರೆಂಡೀ ಆಗಿರಬೇಕು, ಆದರೆ ಉದ್ದ ಕೂದಲ ಕಾಳಜಿ ಮಾತ್ರ ಸಾದ್ಯವಿಲ್ಲ ಎಂದು ಬಯಸುವವರಿಗೂ ಥರಹೇವಾರಿ ಕಟ್‌ಗಳಿವೆ. ಇಂಥದ್ದರಲ್ಲಿ ನಿಮ್ಮ ಮುಖಕ್ಕೊಪ್ಪುವ ಹೇರ್‌ಕಟ್ ಒಂದನ್ನು ನೋಡಿ ಮಾಡಿಸಿಕೊಂಡರೆ ಮುಗೀತು, ಬೆಳಗ್ಗೆ ಎದ್ದು ಹೆಚ್ಚು ತಲೆಬಿಸಿಯ ಅಗತ್ಯವೇ ಇಲ್ಲ.
೧. ಸಿಂಗಲ್ ಲೆಂಥ್ ಹೇರ್: ನಿಮ್ಮ ಕೂದಲು ನೇರವಾಗಿ, ದಟ್ಟವಾಗಿ ಸಿಲ್ಕೀ ಆಗಿದೆಯೇ? ಹಾಗಿದ್ದರೆ ಈ ಮಾದರಿಯ ಹೇರ್‌ಕಟ್ ನಿಮಗೆ ಚೆನ್ನಾಗಿ ಒಪ್ಪಬಹುದು. ಯಾವುದೇ ಲೇಯರ್ ಕಟ್ ಮಾಡಿಕೊಳ್ಳದೇ, ಒಂದೇ ಉದ್ದಕ್ಕೆ ಸಮನಾಗಿ ಕೂದಲನ್ನು ಕತ್ತರಿಸುವುದು. ಎಷ್ಟು ಉದ್ದ ಎಂಬುದು ನಿಮಗೆ ಬಿಟ್ಟಿದ್ದು. ಸಾಮಾನ್ಯವಾಗಿ ಭುಜದವರೆಗೆ ಈ ಮಾದರಿಯಲ್ಲಿ ಕತ್ತರಿಸಿದರೆ ಬಹಳ ಸುಂದರವಾಗಿ ಕಾಣುತ್ತದೆ. ತಲೆಗೆ ಸ್ನಾನ, ಎಣ್ಣೆ ಹಚ್ಚುವುದು ಬಾಚುವುದು, ಸೆಟ್ ಮಾಡಿಕೊಳ್ಳುವುದು ಎಲ್ಲದಕ್ಕೂ ಇದು ಸುಲಭವಾದ ಹೇರ್‌ಕಟ್. ಫ್ಯಾಷನ್ ಇನ್‌ಫ್ಲುಯೆಂಜರ್‌ಗಳೂ ಕೂಡಾ ಈ ಮಾದರಿಯ ಹೇರ್‌ಕಟ್‌ನ ಬಹಳವಾಗಿ ಇಷ್ಟಪಡುತ್ತಾರೆ. ಇದು ನಿಮಗೊಂದು ಶಾರ್ಪ್ ಹಾಗೂ ಆತ್ಮವಿಶ್ವಾಸದ ಲುಕ್ ನೀಡುತ್ತದೆ.
೨. ಶಾರ್ಟ್ ಲೇಯರ್ಸ್: ನಿಮ್ಮ ಕೂದಲು ದಟ್ಟವಾಗಿ ನಯವಾಗಿ, ಗುಂಗುರು, ಅಲೆಅಲೆಯಾಗಿರುವ, ಅಥವಾ ನೇರವಾದದ್ದೇ ಆಗಿರಲಿ, ಶಾರ್ಟ್ ಲೇಯರ್ ಕಟ್ ಚೆನ್ನಗಿಯೇ ಒಪ್ಪುತ್ತದೆ. ಲೇಯರ್ ಕಟ್ ಯಾವಾಗಳು ಕೂದಲನ್ನು ದಟ್ಟವಾಗಿರುವಂತೆ ಕಾಣಿಸುತ್ತದೆ ಹಾಗೂ ನಿಮ್ಮ ಮುಖಕ್ಕೊಂದು ಡಿಫರೆಂಟ್ ಲುಕ್ ನೀಡುತ್ತದೆ. ಉದ್ದವಾಗಿಟ್ಟು ಲೇಯರ್ ಮಾಡುವುದರಿಂದ ಭುಜದವರೆಗಿನ ಲೇಯರ್ ಕಟ್ ಸೊಗಸಾಗಿ ಸ್ಟೈಲಿಷ್ ಆಗಿಯೂ ಕಾಣಿಸುತ್ತದೆ.
೩. ಲೇಯರ್ಡ್ ಬಾಬ್: ನಂಬಿದರೆ ನಂಬಿ, ಗುಂಗುರು ದಪ್ಪ ಕೂದಲಿಗೆ ಶಾರ್ಟ್ ಲೇಯರ್ಡ್ ಬಾಬ್ ಕೂಡಾ ಚೆನ್ನಾಗಿಯೇ ಒಪ್ಪುತ್ತದೆ. ಬಾಬ್ ಮಾಡಿಸಿಕೊಂಡು, ಮುಂದಿನ ಕೂದಲಿಗೆ ಸ್ವಲ್ಪವೇ ಸ್ವಲ್ಪ ಲೇಯರ್ ಕೊಟ್ಟು ಹಿಂದಿನ ಭಾಗಕ್ಕೆ ಉತ್ತಮ ಲೇಯರ್ ಕೊಡುವುದರಿಂದ ನಿಮ್ಮ ಗುಂಗುರು ಅದ್ಭುತವಾಗಿ ಕಾಣುತ್ತದೆ. ಸೆಟ್ ಮಾಡಿಕೊಳ್ಳುವ ಅಗತ್ಯವೇ ಬೀಳುವುದಿಲ್ಲ.
೪. ಸೈಡ್ ಸ್ವೆಪ್ಟ್ ಬ್ಯಾಂಗ್ಸ್: ನಿಮ್ಮ ಕೂದಲು ದಟ್ಟವಾಗಿರಲಿ, ತೆಳುವಾಗಿರಲಿ ಈ ಸ್ಟೈಲ್ ಎಂತಹ ಕೂದಲಿನವರಿಗೂ ಒಪ್ಪುತ್ತದೆ. ಮುಂಭಾಗದ ಕೂದಲನ್ನು ಒಂದು ಬದಿಗೆ ತಿರುಗಿಸಿ ಹಿಂದಿನದನ್ನು ಹಾಗೆಯೇ ಬಿಟ್ಟು ಸಾಮಾನ್ಯ ಟ್ರಿಮ್ ಮಾಡಿಸಿಕೊಂಡರೂ ಸಾಕಾಗುತ್ತದೆ. ಈ ಹೇರ್‌ಕಟ್ ಅದ್ಭುತವಾಗಿ ಕಾಣುತ್ತದೆ. ನೀವು ಈವರೆಗೆ ಮಾಡದ, ಚಂದ ಕಾಣಿಸುತ್ತದೋ ಇಲ್ಲವೋ ಎಂಬ ಬಗ್ಗೆ ಸಂದೇಹದಿಂದ ಹಿಂದೇಟು ಹಾಕುತ್ತಲೇ ಇರುವ ಮಂದಿ ನೀವಾಗಿದ್ದರೆ, ಇಂತಹ ಕಟ್ ಒಳ್ಳೆಯದು. ಈ ಕಟ್‌ನಲ್ಲಿ ಮತ್ತೆ ಕೂದಲು ಉದ್ದ ಬೆಳೆಸಲೂ ಸಹ ಸುಲಭವೇ.
೫. ಬ್ಲಂಟ್ ಬಾಬ್: ನಿಮ್ಮದು ತೆಳು ನೇರವಾದ ಕೂದಲಾಗಿದ್ದರೆ ಹಾಗೂ ನೋಡಲು ದಟ್ಟವಾಗಿ ಕಾಣಬೇಕೆಂದಿದ್ದರೆ ಈ ಹೇರ್‌ಕಟ್ ಸೂಕ್ತ. ಸ್ಟೈಲಿಶ್ ಸ್ಮಾರ್ಟ್ ಆಗಿ ಕಾಣಿಸಬಹುದಾದ ಸುಲಭವಾಗಿ ಕಾಳಜಿ ಮಾಡಬಹುದಾದ ಹೇರ್‌ಕಟ್ ಇದು.
೬. ಕ್ಲಾಸಿಕ್ ಲಾಬ್: ನೇರವಾದ ಕೂದಲಿನವರಿಗೆ ಚಂದ ಕಾಣಿಸಬಹುದಾದ ಇನ್ನೊಂದು ಶಾರ್ಟ್ ಹೇರ್‌ಕಟ್. ಕುತ್ತಿಗೆಯಿಂದ ಸ್ವಲ್ಪ ಕೆಳಗಿಳಿವಂತೆ ಕಟ್ ಮಾಡಿದರೆ, ಮುಂದೆ ಬೈತಲೆ ತೆಗೆದು ಎರಡೂ ಬದಿ ಇಳಿಬಿಟ್ಟರೆ ಅದ್ಭುತವಾಗಿ ಕಾಣಿಸುತ್ತದೆ. ಸೀರಂಗಳ ಮುಖಾಂತರ ಹಾರಾಡುವ ಕೂದಲನ್ನು ನೇರವಾಗಿ ಹಾಗೆಯೇ ಕೂರುವಂತೆಯೂ ಸೆಟ್ ಮಾಡಿಕೊಳ್ಳಬಹುದು. ಇದೂ ಅಷ್ಟೆ, ಹೆಚ್ಚು ಸಮಯ ಬೇಡದ ಹೇರ್‌ಕಟ್.
ಇದನ್ನೂ ಓದಿ | french-hairstyle-for-yoga