ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಅದಿತಿ ರಾವ್ ಹೈದರಿ ಉಟ್ಟ ಮನಮೋಹಕ ಫ್ಲೋರಲ್ ಸೀರೆ ಇದೀಗ ಫ್ಯಾಷನ್ ಲೋಕದಲ್ಲಿ ಟ್ರೆಂಡಿಯಾಗಿದೆ. ಹೌದು. ಈ ಸಮ್ಮರ್ ಸೀಸನ್ ಫ್ಯಾಷನ್‌ಗೆ (Summer Floral Saree Trend) ಎಂಟ್ರಿ ಕೊಟ್ಟ ಫ್ಲೋರಲ್ ಸೀರೆಯಲ್ಲಿ ನಟಿ ಅದಿತಿ ಹೈದರಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಮಾತ್ರವಲ್ಲ, ಸೀರೆ ಪ್ರಿಯ ಯುವತಿಯರನ್ನು ಸೆಳೆದಿದೆ. ಇದಕ್ಕೆ ಪೂರಕ ಎಂಬಂತೆ, ಈಗಾಗಲೇ ನಾನಾ ಬಗೆಯ ಫ್ಲೋರಲ್ ಸೀರೆಗಳು ಈ ಸೀಸನ್‌ನಲ್ಲಿ ಟ್ರೆಂಡ್ ಹುಟ್ಟು ಹಾಕಿವೆ.
ಅದಿತಿಯ ಬ್ರಿತೆಬಲ್ ಫ್ಲೋರಲ್ ಸೀರೆ
ಹಾಫ್ ವೈಟ್ ಅಥವಾ ಕ್ರೀಮಿಶ್ ಶೇಡ್‌ನಂತೆ ಇಲ್ಯೂಷನ್ ಕ್ರಿಯೇಟ್ ಮಾಡುವ ಅದಿತಿ ಉಟ್ಟಿರುವ ಫ್ಲೋರಲ್ ಸೀರೆ ಸಮ್ಮರ್ ಸೀಸನ್‌ನ ಟ್ರೆಂಡ್ ಲಿಸ್ಟ್‌ನಲ್ಲಿದೆ. ಗಾಳಿಯಾಡುವಂತಹ ಫ್ಯಾಬ್ರಿಕ್‌ನದ್ದಾಗಿದೆ. ನೋಡಲು ತಕ್ಷಣಕ್ಕೆ ಟಿಶ್ಯೂ ಅಥವಾ ಅರ್ಗಾನ್ಝಾ ಸೀರೆ ಎಂದೆನಿಸುತ್ತದೆ. ಬೇಸಿಗೆ ಧಗೆಗೆ ಹೇಳಿ ಮಾಡಿಸಿದಂತಿದೆ. ಶೀರ್ ಫ್ಯಾಬ್ರಿಕ್‌ನಲ್ಲಿರುವ ಈ ಸೀರೆಯ ಒಡಲಿನ ತುಂಬೆಲ್ಲಾ ಕೇಸರಿ ಹೂವುಗಳ ಚಿತ್ತಾರವಿದೆ. ಈ ಹೂವುಗಳ ಪ್ರಿಂಟ್ಸ್ ತಂಪನ್ನೆರೆಯುವ ಕೂಲ್ ಡಿಸೈನ್‌ಗಳನ್ನು ಪ್ರತಿಬಿಂಬಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇನ್ನು ನೋಡಲು ತೀರಾ ಸಿಂಪಲ್ ಆಗಿರುವ ಈ ಸೀರೆಗೆ ಮ್ಯಾಚ್ ಮಾಡಿರುವ ಬ್ಲೌಸ್ ಕೂಡ ಶೀರ್ ಫ್ಯಾಬ್ರಿಕ್‌ನದ್ದಾಗಿದ್ದು ರೆಟ್ರೋ ಲುಕ್ ನೀಡುವಲ್ಲಿ ಯಶಸ್ವಿಯಾಗಿದೆ. ಈ ಸೀಸನ್‌ಗೆ ಫ್ರೆಶ್ ಫೀಲಿಂಗ್ ನೀಡುವುದರೊಂದಿಗೆ ಅದಿತಿಯನ್ನು ಆಕರ್ಷಕವಾಗಿ ಬಿಂಬಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಗ.
ಸೀಸನ್ ಟ್ರೆಂಡ್‌ನಲ್ಲಿ ಫ್ಲೋರಲ್ ಸೀರೆಗಳು
ಅಂದಹಾಗೆ, ಫ್ಲೋರಲ್ ಸೀರೆಗಳು ಇಂದಿನ ಕ್ರಿಯೇಷನ್ ಅಲ್ಲವೇ ಅಲ್ಲ, ರೆಟ್ರೋ ಫ್ಯಾಷನ್‌ನಿಂದ ಹಿಡಿದು ಇಂದಿನ ಜೆನ್-ಝಿ ಜನರೇಷನ್ ಹುಡುಗಿಯರನ್ನು ಸೆಳೆಯುವಂತಹ ನಾನಾ ಬಗೆಯ ಆಕರ್ಷಕ ಹೂವಿನ ಪ್ರಿಂಟ್ಸ್‌ನಲ್ಲಿ ಬಂದಿವೆ. ಸಮ್ಮರ್ ಸೀಸನ್‌ನ ಸೀರೆ ಫ್ಯಾಷನ್‌ನ ಟಾಪ್ ಲಿಸ್ಟ್‌ನಲ್ಲಿವೆ. ಕೆಲವು ಸೀಸನ್‌ನಲ್ಲಿ ಒತ್ತೊತ್ತಾಗಿ ಹರಡಿರುವ ಹೂವಿನ ಪ್ರಿಂಟ್ಸ್ ಇರುವ ಸೀರೆಗಳು ಟ್ರೆಂಡಿಯಾದರೇ, ಕೆಲವು ಬಾರಿ ಹೂ ಬಳ್ಳಿಗಳ ಚಿತ್ತಾರವಿರುವ ಸೀರೆಗಳು ಸೀಸನ್‌ಗೆ ಎಂಟ್ರಿ ನೀಡುತ್ತವೆ. ಈ ಬಾರಿ ಕೊಂಚ ಮೂಡನ್ನು ರಿಫ್ರೆಶ್ ಮಾಡುವಂತಹ ಬ್ರೈಟ್ ಹಾಗೂ ಲೈಟ್ ಶೇಡ್‌ನ ನಾನಾ ಹೂವುಗಳ ಚಿತ್ತಾರವಿರುವ ಮನಮೋಹಕ ಸೀರೆಗಳು ಟಿರ್ಶ್ಯೂ, ಅರ್ಗಾನ್ಝಾ ಕ್ರೆಪ್, ಜಾರ್ಜೆಟ್, ಲೆನಿನ್, ಕಾಟನ್, ಸಿಲ್ಕ್ ಸೇರಿದಂತೆ ಲೈಟ್‌ವೈಟ್ ಕಾನ್ಸೆಪ್ಟ್‌ನಲ್ಲಿ ಬಂದಿವೆ. ಹಾಗಾಗಿ ಇವು ಮಹಿಳೆಯರನ್ನು ಮಾತ್ರವಲ್ಲದೇ ಯುವತಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಫ್ಲೋರಲ್ ಸೀರೆ ಖರೀದಿಸಬೇಕೇ? ಹಾಗಾದಲ್ಲಿ ಗಮನದಲ್ಲಿಡಿ
- ಆದಷ್ಟೂ ಟ್ರೆಂಡಿ ಫ್ಲೋರಲ್ ಚಿತ್ತಾರದ ಸೀರೆಗಳನ್ನು ಆಯ್ಕೆ ಮಾಡಿ.
- ಲೈಟ್‌ವೈಟ್ ಫ್ಯಾಬ್ರಿಕ್ನವು ವರ್ಕಿಂಗ್ ಮಹಿಳೆಯರಿಗೆ ಬೆಸ್ಟ್.
- ತಿಳಿ ವರ್ಣದ ಶೇಡ್ ಇರುವಂತಹ ಫ್ಲೋರಲ್ ಸೀರೆಗಳು ಈ ಸೀಸನ್‌ಗೆ ಸೂಕ್ತ.
- ಲೈಟ್ ವೈಟ್, ಲೆಮೆನ್ ಯೆಲ್ಲೋ, ಪಿಸ್ತಾ ಗ್ರೀನ್, ಕೇಸರಿ ಸೇರಿದಂತೆ ನಾನಾ ಶೇಡ್ನವು ಟ್ರೆಂಡ್ನಲ್ಲಿವೆ.
- ನಿರ್ವಹಣೆ ಸುಲಭವಿರುವಂತವನ್ನು ಖರೀದಿಸುವುದು ಉತ್ತಮ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?