ಬೆಂಗಳೂರು: ಸ್ಯಾಂಡಲ್‌ವುಡ್ ಬಾಲ ನಟ ಮಾಸ್ಟರ್ ಓಂ ಇದೀಗ ಕರ್ನಾಟಕ ಸೂಪರ್ ಟೀನ್ ಮಾಡೆಲ್ ಟೈಟಲ್ ತನ್ನದಾಗಿಸಿಕೊಂಡಿದ್ದಾನೆ.
ಪ್ರತಿಷ್ಠಿತ ವೆಲೋಝ್ ಈವ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಗ್ಲಾಮರಸ್ ಸೂಪರ್ ಮಾಡೆಲ್ ಪೇಜೆಂಟ್‌ನಲ್ಲಿ ಟೈಟಲ್ ವಿಜೇತನಾಗುವುದರೊಂದಿಗೆ ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ನೀಡಲಾಗುವ ರಾಜ್ಯ ಬಾಲ ಪ್ರಶಸ್ತಿಗೂ ಪಾತ್ರನಾಗಿದ್ದಾನೆ.
ಆಚಾರ್ಯ ಪಾಠಶಾಲೆಯ ನೆಚ್ಚಿನ ವಿದ್ಯಾರ್ಥಿ
ಆಚಾರ್ಯ ಪಾಠಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಓಂ, ಓದಿನಲ್ಲೂ ಮುಂದಿದ್ದಾನೆ. ಹಾಗಾಗಿ ಶಾಲೆಯ ಅಧ್ಯಾಪಕರ ಬೆಂಬಲ ಸದಾ ಇದೆ. ಚಿಕ್ಕ ಮಗುವಾಗಿರುವಾಗಿನಿಂದಲೇ ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ.
ಏಕೈಕ ಕನ್ನಡಿಗ
ಕೊವೀಡ್‌ಗೂ ಮುನ್ನ ಇಂಟರ್‌ನ್ಯಾಷನಲ್ ಕಿಡ್ಸ್ ಫ್ಯಾಷನ್ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ , ಸಿನಿಮಾ ಹಾಗೂ ಫ್ಯಾಷನ್ ಕ್ಷೇತ್ರ ಎರಡರಲ್ಲೂ ದಶಕಗಳಿಂದ ಗುರುತಿಸಿಕೊಂಡಿರುವ ಏಕೈಕ ಸೌತ್ ಇಂಡಿಯನ್ ಸೂಪರ್ ಕಿಡ್ ಮಾಡೆಲ್ ಎಂಬ ಗೌರವಕ್ಕೂ ಪಾತ್ರನಾಗಿದ್ದಾನೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸುಮಾರು 30ಕ್ಕೂ ಹೆಚ್ಚು ಫ್ಯಾಷನ್ ಶೋಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಸೆಲೆಬ್ರಿಟಿ ಶೋ ಸ್ಟಾಪರ್ ಆಗಿ ರ್ಯಾಂಪ್ ವಾಕ್ ಮಾಡಿದ್ದಾನೆ.
ಬಾಲನಟನಾಗಿ ನಟನೆ
ಜಗ್ಗೇಶ್ ಅವರ ಮಗನಾಗಿ “ಕಾಳಿದಾಸ ಕನ್ನಡ ಮೇಷ್ಟ್ರುʼ ಹಾಗೂ ತಮಿಳಿನ “ಕಾಫಿʼ ಚಿತ್ರ ಸೇರಿದಂತೆ ಈಗಾಗಲೇ ಮಾಸ್ಟರ್ ಓಂ ಸುಮಾರು 10 ಚಲನಚಿತ್ರಗಳಲ್ಲಿ ನಟಿಸಿದ್ದಾನೆ. ಜತೆಜತೆಯೇ ಮಾಡೆಲಿಂಗ್‌ನಲ್ಲೂ ಬಿಝಿಯಾಗಿದ್ದಾನೆ. ಬಾಷ್, ಮ್ಯಾಕ್ಸ್, ಡ್ರೆಸ್‌ಬೆರ್ರಿ, ಪ್ಯಾಂಟಲೂನ್ಸ್, ಜೀಪ್ರೋ ಸೇರಿದಂತೆ 35ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದಾನೆ.
ಇದನ್ನೂ ಓದಿ| Queens Royal Fashion | ಹೀಗಿತ್ತು ಕ್ವೀನ್ ಎಲಿಜಬೆತ್ ಯೂನಿಕ್ ಸಿಗ್ನೇಚರ್ ಸ್ಟೈಲ್