Site icon Vistara News

Model hunt : ಅದ್ಧೂರಿಯಾಗಿ ನಡೆದ ದಿ ಫಿನಿಕ್ಸ್ ಮೆಗಾ ಮಾಡೆಲ್‌ ಹಂಟ್‌ 2023

Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ನವ ಮಾಡೆಲ್‌ಗಳ ಅನ್ವೆಷಣೆಗಾಗಿ ನಡೆದ ದಿ ಫಿನಿಕ್ಸ್‌ ಮೆಗಾ ಮಾಡೆಲ್‌ ಹಂಟ್‌ (Model hunt) ಯಶಸ್ವಿಯಾಗಿ ನಡೆಯಿತು. ಫ್ಯಾಷನ್‌ ಗುರು, ಪ್ರಸಾದ್‌ ಬಿದ್ದಪ್ಪ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಳೆದ ಅಗಸ್ಟ್‌ನಲ್ಲಿ ನಡೆದ ಅಡಿಷನ್‌ನಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಾಡೆಲ್‌ಗಳು ಪಾಲ್ಗೊಂಡಿದ್ದರು. ಅವರಲ್ಲಿ ಸರಿ ಸುಮಾರು 200ಕ್ಕೂ ಹೆಚ್ಚು ಮಾಡೆಲ್‌ಗಳು ಆಯ್ಕೆಗೊಂಡಿದ್ದರು. ನಂತರ, ಗ್ರ್ಯಾಂಡ್‌ ಫಿನಾಲೆಯಲ್ಲಿ ಭಾಗವಹಿಸಿದರು. ನಾನಾ ಸುತ್ತುಗಳಲ್ಲಿ ಪಾಲ್ಗೊಂಡ ಈ ಮಾಡೆಲ್‌ಗಳು ತೀರ್ಪುಗಾರರ ಪ್ರಶ್ನೆಗಳಿಗೆ ಉತ್ತರಿಸಿ ಸೈ ಎನಿಸಿಕೊಂಡರು. ಪ್ರಿಂಟ್‌, ಟೆಲಿವಿಷನ್‌, ಸಿನಿಮಾ, ಇಂಟರ್‌ನ್ಯಾಷನಲ್‌ ಹೀಗೆ ನಾನಾ ಕೆಟಗರಿಯಲ್ಲಿ ಕಾಣಿಸಿಕೊಂಡು ರ್ಯಾಂಪ್‌ನಲ್ಲಿ ಹೆಜ್ಜೆ ಹಾಕಿದರು.

ಮೆಗಾ ಮಾಡೆಲ್‌ ಹಂಟ್‌ ವಿಜೇತರ ಪಟ್ಟಿ

ಮೆಗಾ ಮಾಡೆಲ್‌ ಹಂಟ್‌ನ ಸ್ಯಾಂಡಲ್‌ವುಡ್‌ ವಿಭಾಗದಲ್ಲಿ ಗೋವಿಂದ್‌ ಅಮರ್‌ನಾಥ್‌, ದೇವ್‌ ಗಾಯತ್ರಿ ವಿಜೇತರಾದರು. ಅತ್ಯುತ್ತಮ ಸ್ಕಿನ್‌ ವಿಭಾಗದಲ್ಲಿ ಕರಣ್‌ ದೇಸಾಯಿ, ಹೇರ್‌ ಕೆಟಗರಿಯಲ್ಲಿ ಬಿಶನ್‌ ಮಾದಪ್ಪ, ಕೆರಿಸ್ಸಾ ಬೋಪಣ್ಣ ಆಯ್ಕೆಯಾದರು. ಆರ್ಯನ್‌ ಗುಪ್ತಾ, ಅಮೃತಾ ಪ್ರಶಾಂತ್‌ ಟೆಲಿವಿಷನ್‌ ಕೆಟಗರಿಗೆ ಸೇರಿದರೇ, ಲಹಿನ್‌ ರೋಷನ್‌, ಅಂಬರ್‌, ಮಿಷ್ಟಿ ಬಾಲಿವುಡ್‌ ಕೆಟಗರಿಯಲ್ಲಿ ವಿಜೇತರಾದರು. ಬೆಸ್ಟ್‌ ಬಾಡಿ ಕೆಟಗರಿಯಲ್ಲಿ ರಾಝಿಬ್‌, ಲಿಪಿಕಾ ಹೆಗ್ಗೆ, ಪ್ರಿಂಟ್‌ ಕೆಟಗರಿಯಲ್ಲಿ ನಿತೀಶ್‌ ಸಿಂಹ, ವಿಶಾಖ ಪರ್ಮಾರ್‌, ರನ್‌ವೇ ವಿಭಾಗದಲ್ಲಿ ಧನುಶ್‌ ಗೌಡ, ಶ್ರಾವ್ಯಾ ವಿಜೇತರ ಪಟ್ಟಿ ಸೇರಿದರು.

ಇದನ್ನೂ ಓದಿ : Stars Festival fashion: ಗಣೇಶ ಹಬ್ಬದ ಸೆಲೆಬ್ರೇಷನ್‌ಗೆ ಟ್ರೆಡಿಷನಲ್‌ ಲುಕ್‌ನಲ್ಲಿ ಮಿನುಗಿದ ತಾರೆಯರು

ದುಬೈನ ಕೆವಿನ್‌ ಒಲಿವರ್‌ ಫ್ಯಾಷನ್‌ ಕೊರಿಯಾಗ್ರಾಫಿ

ಈ ಮೆಗಾ ಫ್ಯಾಷನ್ ಹಂಟ್‌ನ ಮಾಡೆಲ್‌ಗಳಿಗೆ ಗ್ರೂಮಿಂಗ್‌ ತರಬೇತಿ ಹಾಗೂ ಫ್ಯಾಷನ್‌ ಕೊರಿಯಾಗ್ರಾಫಿಯನ್ನು ದುಬೈನ ಕೆವಿನ್‌ ಒಲಿವರ್‌ ಮಾಡಿದ್ದರು. ಇವರಿಗೆ ಮಾಡೆಲ್‌ ಆರ್ರಿ ದಬ್ಬಾಸ್‌ ಹಾಗೂ ಡಾ. ಕರಿಷ್ಮಾ ಸಾಥ್‌ ನೀಡಿದ್ದರು.

ಈ ಶೋನಲ್ಲಿ ಖ್ಯಾತ ಡಿಸೈನರ್‌ ಸುನೀತ್‌ ವರ್ಮಾ, ಫ್ಯಾಷನ್‌ ಫೋಟೋಗ್ರಾಫರ್‌ ವಾಸಿಮ್‌ ಅಕ್ರಂ, ಫ್ಯಾಷನ್‌ ಉದ್ಯಮಿ ಅವಿವಾ ಬಿಡ್ಡಪ್ಪ, ಫಿನಿಕ್ಸ್‌ ಮಿಲ್ಸ್‌ ಮಾಲ್ಸ್‌ ನಿರ್ದೇಶಕ ಗಜೇಂದ್ರ ಸಿಂಗ್‌ ರಾಥೋಡ್‌, ನಿರ್ದೇಶಕಿ ರಿತು ಮೆಹ್ತಾ ಹಾಜರಿದ್ದರು.
(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

Exit mobile version