Vastu Tips: ಕೆಟ್ಟ ಶಕ್ತಿ ದೂರ ಮಾಡಿ ಪಾಸಿಟಿವ್ ಎನರ್ಜಿ ತುಂಬಲು ಆಫೀಸ್‌ನಲ್ಲಿ ಈ ಗಿಡಗಳನ್ನು ಇಡಿ
Ramesh B
ಬೆಂಗಳೂರು: ನಾವು ಮನೆ ಬಿಟ್ಟರೆ ಅತೀ ಹೆಚ್ಚಿನ ಸಮಯ ಕಳೆಯುವುದು ಆಫೀಸ್‌ನಲ್ಲಿ. ಹೀಗಾಗಿ ಆಫೀಸ್‌ನಲ್ಲಿ ಧನಾತ್ಮಕ ಶಕ್ತಿ ಮತ್ತು ಕೆಲಸಕ್ಕೆ ಪೂರಕ ವಾತಾವರಣ ಇರುವುದು ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಗಿಡಗಳನ್ನು ನೀವು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಇಟ್ಟರೆ ಅದು ಅದೃಷ್ಟ ಮತ್ತು ಪಾಸಿಟಿವ್ ಎನರ್ಜಿಯನ್ನು ಹೊತ್ತು ತರುತ್ತದೆ. ಸಾಧಾರಣವಾಗಿ ಸಸ್ಯಗಳನ್ನು ಬೆಳವಣಿಗೆ ಮತ್ತು ಧನಾತ್ಮಕ ಶಕ್ತಿಯೆಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಯಾವೆಲ್ಲ ಗಿಡಗಳನ್ನು ನೀವು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಇರಿಸಬೇಕು ಎನ್ನುವ ವಿವರ ಇಲ್ಲಿದೆ (Vastu Tips).
ತುಳಸಿ
ಮಲ್ಲಿಗೆ
ಮಲ್ಲಿಗೆ ಗಿಡ ಸಂಪತ್ತನ್ನು ಆಕರ್ಷಿಸುವ ಗುಣ ಹೊಂದಿದೆ.
ಬಿದಿರು
ಬಿದಿರು ಗಿಡ ಅದೃಷ್ಟಕ್ಕೆ ಕಾರಣವಾಗುತ್ತದೆ.
ಲೋಳೆಸರ
ಔಷಧೀಯ ಗುಣಗಳನ್ನು ಹೊಂದಿರುವ ಅಲೋವೆರಾ (ಲೋಳೆಸರ) ಸಂಪತ್ತನ್ನು ಆಕರ್ಷಿಸುತ್ತದೆ.
ಇಂಗ್ಲಿಷ್ ಐವಿ
ಗಾಳಿಯನ್ನು ಶುದ್ಧೀಕರಿಸುವ ಗುಣ ಹೊಂದಿರುವ ಇಂಗ್ಲಿಷ್ ಐವಿ (English ivy) ಸಸ್ಯ ಅದೃಷ್ಟವನ್ನು ಆಕರ್ಷಿಸುವ ಗುಣ ಹೊಂದಿದೆ.
ಪೀಸ್ ಲಿಲ್ಲಿ
ಕೆಟ್ಟ ಶಕ್ತಿಯನ್ನು ದೂರ ಮಾಡಿ ಅದೃಷ್ಟವನ್ನು ಆಕರ್ಷಿಸುವ ಗುಣ ಈ ಗಿಡಕ್ಕಿದೆ (Peace lily). ಆದ್ದರಿಂದಲೇ ಇದನ್ನು ಲಕ್ಕಿ ಪ್ಲಾಂಟ್ ಎಂದು ಕರೆಯಲಾಗುತ್ತದೆ.
ಜಡೆ ಗಿಡ
ಅದೃಷ್ಟ ಮತ್ತು ಸಂಪತ್ತಿನ ಸಂಕೇತ ಈ ಜಡೆ ಗಿಡ (Jade plant).
ಸ್ನೇಕ್ ಪ್ಲಾಂಟ್
ಮಾನಸಿಕ ಒತ್ತಡ ಕಡಿಮೆ ಮಾಡುವ ಸ್ನೇಕ್ ಪ್ಲಾಂಟ್ (Snake plant) ಧನಾತ್ಮಕ ಶಕ್ತಿಯನ್ನು ತನ್ನತ್ತ ಸೆಳೆಯುತ್ತದೆ.
ಬ್ಲ್ಯೂ ಮಿಸ್ಟ್ ಫ್ಲವರ್
ಮಾನಸಿಕ ಒತ್ತಡ ಕಡಿಮೆ ಮಾಡಿ ಸೃಜನಾತ್ಮಕ ಆಲೋಚನೆಗಳನ್ನು ಉತ್ತೇಜಿಸುವ ಗುಣ ಬ್ಲ್ಯೂ ಮಿಸ್ಟ್ ಫ್ಲವರ್ (Blue mist flower) ಗಿಡಕ್ಕಿದೆ.
ರೋಸ್‌ಮೇರಿ
ಋಣಾತ್ಮಕ ಶಕ್ತಿಯಿಂದ ನಿಮ್ಮನ್ನು ರೋಸ್‌ಮೇರಿ (Rosemary plant) ಗಿಡ ಕಾಪಾಡುತ್ತದೆ.