Site icon Vistara News

Vastu Tips: ಮನೆ ಹಾಲ್‌ನ ಕಲರ್‌ ಕಾಂಬಿನೇಷನ್‌ ಹೀಗಿರಲಿ

living room

living room

ಬೆಂಗಳೂರು: ಭಾರತ ಮೂಲದ ವಾಸ್ತು ಶಾಸ್ತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ನೆಮ್ಮದಿಯ ಜೀವನಕ್ಕೆ, ಆರೋಗ್ಯ ವೃದ್ಧಿಗೆ ಮನೆಯನ್ನು ಯಾವ ರೀತಿ ನಿರ್ಮಿಸಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ಹೇಳುತ್ತದೆ. ಯಾವ ದಿಕ್ಕಿಗೆ ಮನೆ ಮುಖ ಮಾಡಬೇಕು, ಮನೆಗೆ ಯಾವ ರೀತಿಯ ಬಣ್ಣ ಬಳಿಯಬೇಕು, ಯಾವ ವಸ್ತುವನ್ನು ಎಲ್ಲಿಡಬೇಕು ಮುಂತಾದ ವಿಚಾರಗಳಿಗೆ ಸಂಬಂಧಿಸಿ ವಾಸ್ತು ಶಾಸ್ತ್ರ ಕೆಲವು ಸಲಹೆಗಳನ್ನು ನೀಡುತ್ತದೆ. ಮನೆಯ ಮುಖ್ಯ ಸ್ಥಳ ಎಂದೇ ಪರಿಗಣಿಸಲ್ಪಡುವ ಹಾಲ್‌ ವಿಚಾರದಲ್ಲಿ ನಾವು ಕೆಲವೊಂದು ವಾಸ್ತು ಸಲಹೆಗಳನ್ನು ಪಾಲಿಸಬೇಕು. ಹಾಲ್‌ನಲ್ಲಿ ಯಾವ ರೀತಿಯ ಕಲರ್‌ ಕಾಂಬಿನೇಷನ್‌ ಬಳಸಬೇಕು ಎನ್ನುವ ವಿವರ ಇಲ್ಲಿದೆ (Vastu Tips).

ನೀಲಿ ಮತ್ತು ಬಿಳಿ ಕಾಂಬಿನೇಷನ್‌

ವಾಸ್ತು ಪ್ರಕಾರ, ಬಿಳಿ ಮತ್ತು ನೀಲಿ ಬಣ್ಣಗಳ ಸಂಯೋಜನೆ ಪ್ರಶಾಂತತೆ, ಪರಿಶುದ್ಧತೆ ಮತ್ತು ಮನಸ್ಸಿನ ಸ್ಪಷ್ಟತೆಯನ್ನು ಪ್ರತಿಬಿಂಬಿಸುತ್ತದೆ. ಇದಲ್ಲದೆ ಈ ಬಣ್ಣಗಳ ಕಾಂಬಿನೇಷನ್‌ ಟ್ರೆಂಡಿಯೂ ಆಗಿದೆ. ವಾಸ್ತು ಪ್ರಕಾರ ಬಿಳಿ ಬಣ್ಣವು ಶಾಂತಿಯ ಭಾವನೆಯನ್ನು ಪ್ರತಿನಿಧಿಸುತ್ತದೆ ಮತ್ತು ಮನಸ್ಸಿಗೆ ಸ್ಪಷ್ಟತೆಯನ್ನು ತರಲು ಇದು ಸಹಾಯ ಮಾಡುತ್ತದೆ. ನೀಲಿ ಬಣ್ಣವು ವಿಶ್ರಾಂತಿ ಮತ್ತು ಪ್ರಶಾಂತತೆಯನ್ನು ಸೂಚಿಸುತ್ತದೆ. ಹೀಗಾಗಿ ಈ ಎರಡು ಬಣ್ಣಗಳನ್ನು ಸಂಯೋಜನೆ ಹಾಲ್‌ಗೆ ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.

ಹಳದಿ

ನೀವು ಹಳದಿ ಬಣ್ಣವನ್ನು ಇಷ್ಟಪಡುವಿರಾದರೆ ಇದೂ ಕೂಡ ಹಾಲ್‌ಗೆ ಹೊಂದಿಕೆಯಾಗುತ್ತದೆ. ಸೂರ್ಯನ ಬಣ್ಣವೂ ಆಗಿರುವುದರಿಂದ ಹಳದಿ ಮಾನಸಿಕ ನೆಮ್ಮದಿ, ಸಂತಸವನ್ನು ತರಬಲ್ಲದು. ಹಳದಿ ಗೋಡೆ ಮತ್ತು ಕಂದು ಬಣ್ಣದ ಪೀಠೋಪಕರಣ ಹಾಲ್‌ಗೆ ಅತ್ಯುತ್ತಮ ಆಯ್ಕೆ. ಅಲ್ಲದೆ ಹಳದಿ ಶಕ್ತಿ ಮತ್ತು ಚೈತನ್ಯವನ್ನು ಪ್ರತಿನಿಧಿಸುತ್ತದೆ. ಜತೆಗೆ ಆಶಾವಾದ, ಸೃಜನಶೀಲತೆ ಮತ್ತು ಸಂತೋಷ ಪ್ರತೀಕವೂ ಹೌದು.

ಬಳಿ, ಕಂದು ಮತ್ತು ಕಿತ್ತಳೆ ಬಣ್ಣದ ಕಾಂಬಿನೇಷನ್‌

ಈ ಕಾಂಬಿನೇಷನ್‌ ಮೂಲಕ ನೀವು ಟ್ರೆಂಡಿಯಾಗಿರುವ ಜತೆಗೆ ವಾಸ್ತು ಶಾಸ್ತ್ರವನ್ನು ಅನುಸರಿಸಿದಂತಾಗುತ್ತದೆ. ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಗೋಡೆ, ಕಂದು ಬಣ್ಣದ ನೆಲ ಮತ್ತು ಬಿಳಿ ಪೀಠೋಪಕರಣ ಮನೆಯ ಅಂದವನ್ನು ಹೆಚ್ಚಿಸಲಿದೆ. ಈ ಕಲರ್‌ ಕಾಂಬಿನೇಷನ್‌ ಸಂತೋಷವನ್ನು ಹೆಚ್ಚಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ದೂರವಿರಿಸುತ್ತದೆ. ಕಿತ್ತಳೆ ಬಣ್ಣ ಧನಾತ್ಮಕ ಶಕ್ತಿಯನ್ನು ಆಕರ್ಷಿಸಿ ಮನೆಯ ಸದಸ್ಯರ ಸಂಬಂಧವನ್ನು ಇನ್ನಷ್ಟು ಆಪ್ತವಾಗಿಸುತ್ತದೆ. ಬಿಳಿ ಮತ್ತು ಕಂದು ಬಣ್ಣ ನೆಮ್ಮದಿಯನ್ನು ಒದಗಿಸುತ್ತದೆ. ಹೀಗಾಗಿ ಈ ಮೂರು ಬಣ್ಣಗಳ ಸಂಯೋಜನೆ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ.

ಪಿಂಕ್‌

ಗುಲಾಬಿ ಅಥವಾ ಪಿಂಕ್‌ ಬಣ್ಣ ಆನಂದದ ಸಂಕೇತ. ಲೈಟ್‌ ಪಿಂಕ್‌ ಬಣ್ಣದ ಗೋಡೆ ಮತ್ತು ಬಿಳಿ ಪೀಠೋಪಕರಣ ನಿಮ್ಮ ಮನೆಗೆ ಉತ್ತಮ ಫಲಿತಾಂಶವನ್ನೇ ಒದಗಿಸಲಿದೆ. ಮಾತ್ರವಲ್ಲ ನೀವು ಮರದ ನೆಲ ಮತ್ತು ಪಿಂಕ್‌ ಗೋಡೆಯ ಕಾಂಬಿನೇಷನ್‌ ಪ್ರಯತ್ನಿಸಬಹುದು. ಕಂದು ಮತ್ತು ಪಿಂಕ್‌ ಬಣ್ಣಗಳ ಸಂಯೋಜನೆ ಶಾಂತಿ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ.

ಬಿಳಿ ಮತ್ತು ಹಸುರು ಕಾಂಬಿನೇಷನ್‌

ಹಸುರು ಬಣ್ಣ ಅಭಿವೃದ್ಧಿ, ಸಮೃದ್ಧಿ ಮತ್ತು ಆರೋಗ್ಯದ ಪ್ರತೀಕ. ಒಂದು ವೇಳೆ ನೀವು ಹಾಲ್‌ನ ಪೂರ್ತಿ ಗೋಡೆಗೆ ಹಸುರು ಬಣ್ಣ ಬಳಿಯಲು ಇಷ್ಟ ಪಡದಿದ್ದರೆ ಕೆಲವು ಭಾಗಕ್ಕಾದರೂ ಬಳಸಿ. ಬಿಳಿ ಮತ್ತು ಹಸುರು ಬಣ್ಣಗಳ ಸಂಯೋಜನೆಯನ್ನು ಗೋಡೆಗೆ ನೀಡಬಹುದು. ಗೋಡೆಗೆ ಗಾಢ ಹಸುರು ಬಣ್ಣ ಬಳಿದರೆ ಬಿಳಿ ಬಣ್ಣದ ಸೋಫಾ ಬಳಸಿ.

ಕೆಂಪು

ಶಕ್ತಿ ಮತ್ತು ದೃಢ ನಿಶ್ಚಯದ ಬಣ್ಣ ಕೆಂಪು. ಆದರೆ ಹಾಲ್‌ಗೆ ಕೆಂಪು ಬಣ್ಣ ಅಷ್ಟು ಸೂಕ್ತವಲ್ಲ. ಒಂದು ವೇಳೆ ಕೆಂಪು ಬಣ್ಣ ಬೇಕೇ ಬೇಕು ಎಂದಿದ್ದರೆ ಪೀಠೋಪಕರಣಗಳಲ್ಲಿ ಅದನ್ನು ಬಳಸಬಹುದು. ಆದರೆ ಕೆಂಪು ಬಣ್ಣ ಇಡೀ ರೂಮ್‌ ಅನ್ನು ಆವರಿಸದಂತೆ ನೋಡಿಕೊಳ್ಳಿ.

ಇದನ್ನೂ ಓದಿ: Vastu Tips: ಮನೆಯ ವಾಸ್ತು ದೋಷಗಳನ್ನು ಹೀಗೆ ಹೋಗಲಾಡಿಸಿ

Exit mobile version