Vastu Tips: ಮನೆ ಹಾಲ್‌ನ ಕಲರ್‌ ಕಾಂಬಿನೇಷನ್‌ ಹೀಗಿರಲಿ - Vistara News

ಲೈಫ್‌ಸ್ಟೈಲ್

Vastu Tips: ಮನೆ ಹಾಲ್‌ನ ಕಲರ್‌ ಕಾಂಬಿನೇಷನ್‌ ಹೀಗಿರಲಿ

Vastu Tips: ಮನೆಯ ಕೇಂದ್ರ ಸ್ಥಾನ ಎಂದೇ ಗುರುತಿಸಲ್ಪಡುವ ಹಾಲ್‌ನಲ್ಲಿ ಯಾವ ರೀತಿಯ ಕಲರ್‌ ಕಾಂಬಿನೇಷನ್‌ ಬಳಸಬೇಕು ಎನ್ನುವ ವಿವರ ಇಲ್ಲಿದೆ.

VISTARANEWS.COM


on

living room
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತ ಮೂಲದ ವಾಸ್ತು ಶಾಸ್ತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ನೆಮ್ಮದಿಯ ಜೀವನಕ್ಕೆ, ಆರೋಗ್ಯ ವೃದ್ಧಿಗೆ ಮನೆಯನ್ನು ಯಾವ ರೀತಿ ನಿರ್ಮಿಸಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ಹೇಳುತ್ತದೆ. ಯಾವ ದಿಕ್ಕಿಗೆ ಮನೆ ಮುಖ ಮಾಡಬೇಕು, ಮನೆಗೆ ಯಾವ ರೀತಿಯ ಬಣ್ಣ ಬಳಿಯಬೇಕು, ಯಾವ ವಸ್ತುವನ್ನು ಎಲ್ಲಿಡಬೇಕು ಮುಂತಾದ ವಿಚಾರಗಳಿಗೆ ಸಂಬಂಧಿಸಿ ವಾಸ್ತು ಶಾಸ್ತ್ರ ಕೆಲವು ಸಲಹೆಗಳನ್ನು ನೀಡುತ್ತದೆ. ಮನೆಯ ಮುಖ್ಯ ಸ್ಥಳ ಎಂದೇ ಪರಿಗಣಿಸಲ್ಪಡುವ ಹಾಲ್‌ ವಿಚಾರದಲ್ಲಿ ನಾವು ಕೆಲವೊಂದು ವಾಸ್ತು ಸಲಹೆಗಳನ್ನು ಪಾಲಿಸಬೇಕು. ಹಾಲ್‌ನಲ್ಲಿ ಯಾವ ರೀತಿಯ ಕಲರ್‌ ಕಾಂಬಿನೇಷನ್‌ ಬಳಸಬೇಕು ಎನ್ನುವ ವಿವರ ಇಲ್ಲಿದೆ (Vastu Tips).

ನೀಲಿ ಮತ್ತು ಬಿಳಿ ಕಾಂಬಿನೇಷನ್‌

ವಾಸ್ತು ಪ್ರಕಾರ, ಬಿಳಿ ಮತ್ತು ನೀಲಿ ಬಣ್ಣಗಳ ಸಂಯೋಜನೆ ಪ್ರಶಾಂತತೆ, ಪರಿಶುದ್ಧತೆ ಮತ್ತು ಮನಸ್ಸಿನ ಸ್ಪಷ್ಟತೆಯನ್ನು ಪ್ರತಿಬಿಂಬಿಸುತ್ತದೆ. ಇದಲ್ಲದೆ ಈ ಬಣ್ಣಗಳ ಕಾಂಬಿನೇಷನ್‌ ಟ್ರೆಂಡಿಯೂ ಆಗಿದೆ. ವಾಸ್ತು ಪ್ರಕಾರ ಬಿಳಿ ಬಣ್ಣವು ಶಾಂತಿಯ ಭಾವನೆಯನ್ನು ಪ್ರತಿನಿಧಿಸುತ್ತದೆ ಮತ್ತು ಮನಸ್ಸಿಗೆ ಸ್ಪಷ್ಟತೆಯನ್ನು ತರಲು ಇದು ಸಹಾಯ ಮಾಡುತ್ತದೆ. ನೀಲಿ ಬಣ್ಣವು ವಿಶ್ರಾಂತಿ ಮತ್ತು ಪ್ರಶಾಂತತೆಯನ್ನು ಸೂಚಿಸುತ್ತದೆ. ಹೀಗಾಗಿ ಈ ಎರಡು ಬಣ್ಣಗಳನ್ನು ಸಂಯೋಜನೆ ಹಾಲ್‌ಗೆ ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.

ಹಳದಿ

ನೀವು ಹಳದಿ ಬಣ್ಣವನ್ನು ಇಷ್ಟಪಡುವಿರಾದರೆ ಇದೂ ಕೂಡ ಹಾಲ್‌ಗೆ ಹೊಂದಿಕೆಯಾಗುತ್ತದೆ. ಸೂರ್ಯನ ಬಣ್ಣವೂ ಆಗಿರುವುದರಿಂದ ಹಳದಿ ಮಾನಸಿಕ ನೆಮ್ಮದಿ, ಸಂತಸವನ್ನು ತರಬಲ್ಲದು. ಹಳದಿ ಗೋಡೆ ಮತ್ತು ಕಂದು ಬಣ್ಣದ ಪೀಠೋಪಕರಣ ಹಾಲ್‌ಗೆ ಅತ್ಯುತ್ತಮ ಆಯ್ಕೆ. ಅಲ್ಲದೆ ಹಳದಿ ಶಕ್ತಿ ಮತ್ತು ಚೈತನ್ಯವನ್ನು ಪ್ರತಿನಿಧಿಸುತ್ತದೆ. ಜತೆಗೆ ಆಶಾವಾದ, ಸೃಜನಶೀಲತೆ ಮತ್ತು ಸಂತೋಷ ಪ್ರತೀಕವೂ ಹೌದು.

ಬಳಿ, ಕಂದು ಮತ್ತು ಕಿತ್ತಳೆ ಬಣ್ಣದ ಕಾಂಬಿನೇಷನ್‌

ಈ ಕಾಂಬಿನೇಷನ್‌ ಮೂಲಕ ನೀವು ಟ್ರೆಂಡಿಯಾಗಿರುವ ಜತೆಗೆ ವಾಸ್ತು ಶಾಸ್ತ್ರವನ್ನು ಅನುಸರಿಸಿದಂತಾಗುತ್ತದೆ. ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಗೋಡೆ, ಕಂದು ಬಣ್ಣದ ನೆಲ ಮತ್ತು ಬಿಳಿ ಪೀಠೋಪಕರಣ ಮನೆಯ ಅಂದವನ್ನು ಹೆಚ್ಚಿಸಲಿದೆ. ಈ ಕಲರ್‌ ಕಾಂಬಿನೇಷನ್‌ ಸಂತೋಷವನ್ನು ಹೆಚ್ಚಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ದೂರವಿರಿಸುತ್ತದೆ. ಕಿತ್ತಳೆ ಬಣ್ಣ ಧನಾತ್ಮಕ ಶಕ್ತಿಯನ್ನು ಆಕರ್ಷಿಸಿ ಮನೆಯ ಸದಸ್ಯರ ಸಂಬಂಧವನ್ನು ಇನ್ನಷ್ಟು ಆಪ್ತವಾಗಿಸುತ್ತದೆ. ಬಿಳಿ ಮತ್ತು ಕಂದು ಬಣ್ಣ ನೆಮ್ಮದಿಯನ್ನು ಒದಗಿಸುತ್ತದೆ. ಹೀಗಾಗಿ ಈ ಮೂರು ಬಣ್ಣಗಳ ಸಂಯೋಜನೆ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ.

ಪಿಂಕ್‌

ಗುಲಾಬಿ ಅಥವಾ ಪಿಂಕ್‌ ಬಣ್ಣ ಆನಂದದ ಸಂಕೇತ. ಲೈಟ್‌ ಪಿಂಕ್‌ ಬಣ್ಣದ ಗೋಡೆ ಮತ್ತು ಬಿಳಿ ಪೀಠೋಪಕರಣ ನಿಮ್ಮ ಮನೆಗೆ ಉತ್ತಮ ಫಲಿತಾಂಶವನ್ನೇ ಒದಗಿಸಲಿದೆ. ಮಾತ್ರವಲ್ಲ ನೀವು ಮರದ ನೆಲ ಮತ್ತು ಪಿಂಕ್‌ ಗೋಡೆಯ ಕಾಂಬಿನೇಷನ್‌ ಪ್ರಯತ್ನಿಸಬಹುದು. ಕಂದು ಮತ್ತು ಪಿಂಕ್‌ ಬಣ್ಣಗಳ ಸಂಯೋಜನೆ ಶಾಂತಿ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ.

ಬಿಳಿ ಮತ್ತು ಹಸುರು ಕಾಂಬಿನೇಷನ್‌

ಹಸುರು ಬಣ್ಣ ಅಭಿವೃದ್ಧಿ, ಸಮೃದ್ಧಿ ಮತ್ತು ಆರೋಗ್ಯದ ಪ್ರತೀಕ. ಒಂದು ವೇಳೆ ನೀವು ಹಾಲ್‌ನ ಪೂರ್ತಿ ಗೋಡೆಗೆ ಹಸುರು ಬಣ್ಣ ಬಳಿಯಲು ಇಷ್ಟ ಪಡದಿದ್ದರೆ ಕೆಲವು ಭಾಗಕ್ಕಾದರೂ ಬಳಸಿ. ಬಿಳಿ ಮತ್ತು ಹಸುರು ಬಣ್ಣಗಳ ಸಂಯೋಜನೆಯನ್ನು ಗೋಡೆಗೆ ನೀಡಬಹುದು. ಗೋಡೆಗೆ ಗಾಢ ಹಸುರು ಬಣ್ಣ ಬಳಿದರೆ ಬಿಳಿ ಬಣ್ಣದ ಸೋಫಾ ಬಳಸಿ.

ಕೆಂಪು

ಶಕ್ತಿ ಮತ್ತು ದೃಢ ನಿಶ್ಚಯದ ಬಣ್ಣ ಕೆಂಪು. ಆದರೆ ಹಾಲ್‌ಗೆ ಕೆಂಪು ಬಣ್ಣ ಅಷ್ಟು ಸೂಕ್ತವಲ್ಲ. ಒಂದು ವೇಳೆ ಕೆಂಪು ಬಣ್ಣ ಬೇಕೇ ಬೇಕು ಎಂದಿದ್ದರೆ ಪೀಠೋಪಕರಣಗಳಲ್ಲಿ ಅದನ್ನು ಬಳಸಬಹುದು. ಆದರೆ ಕೆಂಪು ಬಣ್ಣ ಇಡೀ ರೂಮ್‌ ಅನ್ನು ಆವರಿಸದಂತೆ ನೋಡಿಕೊಳ್ಳಿ.

ಇದನ್ನೂ ಓದಿ: Vastu Tips: ಮನೆಯ ವಾಸ್ತು ದೋಷಗಳನ್ನು ಹೀಗೆ ಹೋಗಲಾಡಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

International Yoga Day 2024: ಯೋಗಾಭ್ಯಾಸಕ್ಕೆ ಪುರುಷರ ಉಡುಗೆಗಳು ಹೀಗಿರಬೇಕು

International Yoga Day 2024: ಪುರುಷರ ಯೋಗ ಔಟ್‌ಫಿಟ್ಸ್‌ಗಳು ತೀರಾ ಸಿಂಪಲ್‌! ಇವುಗಳನ್ನು ಧರಿಸಿದಾಗ ಫ್ಯಾಷನಬಲ್‌ ಆಗಿ ಕಾಣಿಸುವುದಿಲ್ಲ, ಬದಲಿಗೆ ಸಿಂಪಲ್‌ ಲುಕ್‌ ಜೊತೆಗೆ ಕಂಫರ್ಟಬಲ್‌ ಫೀಲ್‌ ನೀಡುತ್ತವೆ. ಈ ಲಿಸ್ಟ್‌ನಲ್ಲಿ ಯಾವ್ಯಾವ ಔಟ್‌ಫಿಟ್‌ಗಳಿವೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

International Yoga Day 2024
ಚಿತ್ರ ಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೆನ್ಸ್ ಯೋಗ ಔಟ್‌ಫಿಟ್ಸ್‌ನಲ್ಲಿ (International Yoga Day 2024) ಸಿಂಪಲ್‌ ಹಾಗೂ ಆರಾಮದಾಯಕ ಎಂದೆನಿಸುವ ಔಟ್‌ಫಿಟ್ಸ್‌ಗಳು ಮಾತ್ರ ಈ ಸೀಸನ್‌ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿವೆ. ಹೌದು. ಪುರುಷರು ಧರಿಸುವ ಯೋಗಾಭ್ಯಾಸದ ಔಟ್‌ಫಿಟ್ಸ್‌ಗಳು ಯುವತಿಯರ ಯೋಗ ಸೆಟ್‌ ಫ್ಯಾಷನ್‌ವೇರ್‌ಗಳಂತೆ ಟ್ರೆಂಡಿಯೂ ಆಗಿಲ್ಲ! ಫ್ಯಾಷೆನಬಲ್‌ ಕೂಡ ಇಲ್ಲ! ಬದಲಿಗೆ ನಾನಾ ಸಂದರ್ಭಗಳಿಗೆ ಧರಿಸಬಹುದಾಗಿದೆ.

International Yoga Day 2024

ಆರಾಮದಾಯಕ ಉಡುಪುಗಳಿಗೆ ಪ್ರಾಮುಖ್ಯತೆ

“ಸಿಂಪಲ್‌ ಶಾರ್ಟ್ಸ್ ಕುರ್ತಾ-ಕಾಟನ್‌ ಪ್ಯಾಂಟ್‌ ಹೊರತುಪಡಿಸಿದಲ್ಲಿ, ಪುರುಷರಿಗೆ ನೋಡಲು ಸಿಂಪಲ್‌ ಲುಕ್‌ ನೀಡುವುದರೊಂದಿಗೆ ಕಂಫರ್ಟಬಲ್‌ ಫೀಲ್‌ ನೀಡುವಂತಹ ಕೆಲವು ವೆಸ್ಟರ್ನ್‌ ಔಟ್‌ಫಿಟ್‌ಗಳು ಯೋಗಾಭ್ಯಾಸದ ಪ್ರಾಕ್ಟೀಸ್‌ಗೆ ಸಾಥ್‌ ನೀಡುತ್ತಿವೆ. ಪುರುಷರು ಮೊದಲು ಪ್ರಾಮುಖ್ಯತೆ ನೀಡುವುದು ಆರಾಮದಾಯಕ ಉಡುಗೆಗಳಿಗೆ ಮಾತ್ರ. ಅದು ಯಾವುದೇ ದೊಡ್ಡ ಬ್ರಾಂಡ್‌ನದ್ದಾದರೂ ಸರಿಯೇ ಸಿಂಪಲ್‌ & ಕಂಫರ್ಟಬಲ್‌ ಎಂದೆನಿಸುವಂತಹ ಔಟ್‌ಫಿಟ್‌ಗಳು ಆಯ್ಕೆ ಅವರದ್ದಾಗಿರುತ್ತದೆ” ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್‌ಗಳು.

International Yoga Day 2024

ಜಾಗರ್ಸ್ ಆಯ್ಕೆ

ಬಹುತೇಕ ಪುರುಷರು ತಮ್ಮ ಯೋಗಾಭ್ಯಾಸಕ್ಕೆ ಅತಿ ಸಾಮಾನ್ಯವಾಗಿ ಧರಿಸುವ ಜಾಗರ್ಸ್ ಸೆಟ್‌ಗಳನ್ನು ಧರಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಪ್ರಮುಖ ಕಾರಣ, ಧರಿಸಿದಾಗ ಇವು ಆರಾಮದಾಯಕ ಎನಿಸುತ್ತವೆ. ಜೊತೆಗೆ ಬ್ರಿಥಬಲ್‌ ಫ್ಯಾಬ್ರಿಕ್‌ನಿಂದ ಇವು ಸಿದ್ಧಗೊಂಡಿರುವುದರಿಂದ ದೇಹವನ್ನು ಉಸಿರುಗಟ್ಟಿಸುವುದಿಲ್ಲ. ಹಾಗಾಗಿ ಅತಿ ಹೆಚ್ಚು ಪುರುಷರು ಇವನ್ನೇ ಚೂಸ್‌ ಮಾಡತೊಡಗಿದ್ದಾರೆ.

International Yoga Day 2024

ಹುಡುಗರ ಆಯ್ಕೆಯಲ್ಲಿ ಬರ್ಮುಡಾ ಶಾರ್ಟ್ಸ್

ಇನ್ನು, ಕಾಲೇಜು ಯುವಕರು ಹಾಗೂ ಈ ಜನರೇಷನ್‌ನವರು ಯೋಗಾಭ್ಯಾಸಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಔಟ್‌ಫಿಟ್‌ಗಳಲ್ಲಿ ಬರ್ಮುಡಾ ಶಾರ್ಟ್ಸ್ ಪ್ರಥಮ ಸ್ಥಾನ ಪಡೆದಿದೆ. ಇವು ಕಂಫರ್ಟಬಲ್‌ ಫೀಲ್‌ ನೀಡುವುದರೊಂದಿಗೆ ತಮ್ಮ ಜನರೇಷನ್‌ಗೆ ಮ್ಯಾಚ್‌ ಆಗುತ್ತವೆ ಎಂಬುದು ಅವರ ಯೋಚನೆಯಾಗಿದೆ ಎನ್ನುತ್ತಾರೆ ಯೋಗ ಎಕ್ಸ್‌ಫರ್ಟ್‌ ರಾಜ್‌ ವಿರಾಜ್‌. ಅವರ ಪ್ರಕಾರ, ಅವರವರ ವಯಸ್ಸಿಗೆ ತಕ್ಕಂತೆ ಇವುಗಳ ಆಯ್ಕೆಯಲ್ಲಿ ಬದಲಾವಣೆ ಕಾಣಬಹುದಂತೆ.

ಸ್ವೆಟ್‌ ಪ್ಯಾಂಟ್ಸ್–ಟೀ ಶರ್ಟ್ಸ್

ಸ್ವೆಟ್‌ ಪ್ಯಾಂಟ್ಸ್ ಹಾಗೂ ಕೊಂಚ ಲೂಸಾಗಿರುವ ಕಾಲರ್‌ ಇಲ್ಲದ ಟೀ ಶರ್ಟ್‌ಗಳನ್ನು ಕೂಡ ಅತಿ ಹೆಚ್ಚು ಪುರುಷರು ಯೋಗಾಭ್ಯಾಸಕ್ಕಾಗಿ ಧರಿಸುತ್ತಾರಂತೆ. ಇದಕ್ಕೆ ಕಾರಣವೂ ಇದೆ. ಈ ಔಟ್‌ಫಿಟ್‌ ಯೋಗ ಮಾತ್ರವಲ್ಲದೇ, ಇತರೇ ಸಮಯದಲ್ಲೂ ಧರಿಸಬಹುದು. ಟು ಇನ್‌ ವನ್‌ ಔಟ್‌ಫಿಟ್‌ಗಳಂತೆ ಬಳಬಹುದು ಹಾಗೂ ಮಿಕ್ಸ್‌ ಮ್ಯಾಚ್‌ ಕೂಡ ಮಾಡಬಹುದು. ಹಾಗಾಗಿ ಇವುಗಳ ಬಳಕೆ ಕೂಡ ಹೆಚ್ಚು ಎನ್ನುತ್ತಾರೆ ಸ್ಟೈಲಿಸ್ಟ್ ಧವನ್‌.

ಇದನ್ನೂ ಓದಿ: Yoga Fashion: ಯೋಗ ಕೋ-ಆರ್ಡ್ ಸೆಟ್‌ಗೆ ಸಿಕ್ತು ಗ್ಲಾಮರ್‌ ಟಚ್‌!

ಮೆನ್ಸ್ ಯೋಗ ಔಟ್‌ಫಿಟ್ಸ್ ಟಿಪ್ಸ್

  • ಟೈಟ್‌ ಫಿಟ್‌ ಔಟ್‌ಫಿಟ್ಸ್ ಧರಿಸುವುದು ನಾಟ್‌ ಓಕೆ.
  • ಫ್ಯಾಷನ್‌ಗಿಂತ ಕಂಫರ್ಟಬಲ್‌ ಆಗಿರುವುದು ಮುಖ್ಯ.
  • ಈ ಔಟ್‌ಫಿಟ್‌ ಜೊತೆ ಆಕ್ಸೆಸರೀಸ್‌ ಧರಿಸಕೂಡದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಆರೋಗ್ಯ

Health Tips Kannada: ಊಟದ ನಂತರ ಮೊಸರು ಸೇವಿಸಿದರೆ ಎಷ್ಟೊಂದು ಪ್ರಯೋಜನ ಗೊತ್ತೆ?

Health Tips Kannada: ಮೊಸರನ್ನುಸೇವಿಸಿದರೆ ಅದು ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೇ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ಹೃದಯದ ಆರೋಗ್ಯವನ್ನು ಉತ್ತೇಜಿಸುವ ಮೊಸರನ್ನು ಊಟದ ಬಳಿಕ ಸೇವಿಸುವುದರಿಂದ (Health Benefits) ಐದು ಪ್ರಮುಖ ಪ್ರಯೋಜನಗಳಿವೆ.

VISTARANEWS.COM


on

By

Health Tips Kannada
Koo

ಕ್ಯಾಲ್ಸಿಯಂ, ಪ್ರೊಟೀನ್, ವಿಟಮಿನ್ ಬಿ2, (Health Tips Kannada) ವಿಟಮಿನ್ ಬಿ12, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ಗಳು ಹೇರಳವಾಗಿರುವ ಮೊಸರನ್ನು (curd) ಊಟದ ಅನಂತರ (After Meal ) ಸೇವಿಸುವುದರಿಂದ ಸಾಕಷ್ಟು (Health Benefits) ಪ್ರಯೋಜನಗಳಿವೆ. ಮೊಸರು ಸೇವನೆಯು ಜೀರ್ಣಕ್ರಿಯೆಗೆ (digestion) ಸಹಾಯ ಮಾಡುತ್ತದೆ, ಕರುಳಿನ ಆರೋಗ್ಯವನ್ನು (gut health) ಹೆಚ್ಚಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಮೊಸರು ದೇಹವನ್ನು ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ದೇಹದ ಪೋಷಣೆ ಮಾಡುವುದರ ಜೊತೆಗೆ ಮನಸ್ಸನ್ನು ಶಾಂತಗೊಳಿಸುತ್ತದೆ. ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವನ್ನು ಸೇರಿಸುವ ಮೂಲಕ ಹುದುಗಿಸಿದ ಹಾಲಿನಲ್ಲಿ ಮೊಸರನ್ನು ತಯಾರಿಸಲಾಗುತ್ತದೆ. ಇದು ಮೂಳೆಯ ಆರೋಗ್ಯ ಮತ್ತು ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಆರೋಗ್ಯ ಪ್ರಯೋಜನಗಳನ್ನು ಉತ್ತೇಜಿಸಲು ದಿನಕ್ಕೆ 100- 200 ಗ್ರಾಂ ಮೊಸರನ್ನು ಮಾತ್ರ ಸೇವಿಸಬೇಕು. ಆದರೂ ಅತಿಯಾಗಿ ಮೊಸರು ತಿನ್ನುವುದು ಜೀರ್ಣಕ್ರಿಯೆಯಲ್ಲಿ ಅಸ್ವಸ್ಥತೆ, ತೂಕ ಹೆಚ್ಚಳ ಮತ್ತು ಲ್ಯಾಕ್ಟೋಸ್ ವೈಪರೀತ್ಯಕ್ಕೆ ಕಾರಣವಾಗುತ್ತದೆ.

ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಯಾಕೆಂದರೆ ಇದು ಪ್ರೋಬಯಾಟಿಕ್‌ಗಳ ಪೂರೈಕೆಗೆ ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಅದರಲ್ಲಿರುವ ಪೌಷ್ಟಿಕಾಂಶದ ಅಂಶ ಮತ್ತು ಪ್ರೋಬಯಾಟಿಕ್ ಗುಣಲಕ್ಷಣಗಳಿಂದಾಗಿ ಒಟ್ಟಾರೆ ಆರೋಗ್ಯಕ್ಕೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಮೊಸರನ್ನು ಊಟದ ನಂತರ ಸೇವಿಸಿದರೆ ಅದು ಶಕ್ತಿಯನ್ನು ಹೆಚ್ಚಿಸುವುದು. ಊಟದ ಅನಂತರ ಸೇವಿಸಿದರೆ ಜೀರ್ಣಕ್ರಿಯೆಯನ್ನು ವರ್ಧಿಸಲು ಸಹಾಯ ಮಾಡುತ್ತದೆ. ಆದರೆ ರಾತ್ರಿಯ ಅನಂತರ ಮೊಸರು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಯಾಕೆಂದರೆ ಅದು ನಿದ್ರೆಗೆ ಸಮಸ್ಯೆಯಾಗಬಹುದು ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ಹೃದಯದ ಆರೋಗ್ಯವನ್ನು ಉತ್ತೇಜಿಸುವ ಮೊಸರನ್ನು ಊಟದ ಬಳಿಕ ಸೇವಿಸುವುದರಿಂದ ಐದು ಪ್ರಮುಖ ಪ್ರಯೋಜನಗಳಿವೆ.


ಆರೋಗ್ಯಕರ ಜೀರ್ಣಕ್ರಿಯೆ

ಮೊಸರು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಯಾಕೆಂದರೆ ಇದರಲ್ಲಿರುವ ವಿಟಮಿನ್, ಪ್ರೋಟೀನ್ ಮತ್ತು ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯಾಗಳು ಸಮೃದ್ಧವಾಗಿವೆ.

ರೋಗನಿರೋಧಕ ಶಕ್ತಿ ಹೆಚ್ಚಳ

ಮೊಸರಿನಲ್ಲಿರುವ ಪ್ರೋಬಯಾಟಿಕ್ ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಅದರ ಸಕ್ರಿಯ ಬ್ಯಾಕ್ಟೀರಿಯಾ ಗುಣಲಕ್ಷಣಗಳು ಸೂಕ್ಷ್ಮಜೀವಿಗಳಿಂದ ಉಂಟಾಗುವ ಕಾಯಿಲೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಮಧುಮೇಹ ನಿಯಂತ್ರಣ

ಮೊಸರಿನಲ್ಲಿರುವ ಜೀರ್ಣವಾಗುವ ಪ್ರೋಟೀನ್‌ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಗ್ರೀಕ್ ಮೊಸರು ಹೃದ್ರೋಗದ ಅಪಾಯವನ್ನು ಕಾಪಾಡಿಕೊಳ್ಳಲು ಬಹಳ ಸಹಾಯಕವಾಗಿದೆ.

ತೂಕ ನಷ್ಟ

ಮೊಸರಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಅದು ಕಾರ್ಟಿಸೋಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಸರಿನ ಸೇವನೆಯು ಕಾರ್ಟಿಸೋಲ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಯಾಕೆಂದರೆ ಇದು ಅಸಮತೋಲಿತ ಜೀವನಶೈಲಿಯಿಂದ ಉತ್ತುಂಗಕ್ಕೇರುವ ಹಾರ್ಮೋನ್ ಆಗಿದ್ದು, ಸೊಂಟದ ರೇಖೆಯಲ್ಲಿ ಕೊಬ್ಬನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ

ದೈನಂದಿನ ದಿನಚರಿಯಲ್ಲಿ ಮೊಸರು ಸೇರಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ರಕ್ತದೊತ್ತಡ ನಿಯಂತ್ರಣ

ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯವನ್ನು ಆರೋಗ್ಯಕರವಾಗಿಡಬಹುದು.

ಹಲ್ಲಿನ ಆರೋಗ್ಯ

ಮೊಸರು ಕ್ಯಾಲ್ಸಿಯಂ ಮತ್ತು ರಂಜಕದ ಮೂಲವಾಗಿದೆ. ಇದು ಹಲ್ಲುಗಳ ಎನಾಮೆಲ್‌ಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಹಲ್ಲಿನ ಕೊಳೆತವನ್ನು ತಡೆಯುತ್ತದೆ. ದೈನಂದಿನ ಆಹಾರದಲ್ಲಿ ಮೊಸರನ್ನು ಸೇರಿಸುವುದರಿಂದ ಬಾಯಿಯ ನೈರ್ಮಲ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಹಲ್ಲಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Mobile Addiction: ನಿಮ್ಮ ಮಗುವನ್ನು ಮೊಬೈಲ್ ಚಟದಿಂದ ತಪ್ಪಿಸಬೇಕೆ? ಈ 5 ಸಲಹೆ ಅನುಸರಿಸಿ

ಊಟದ ಅನಂತರ ಮೊಸರು ಯಾಕೆ ಸೇವಿಸಬೇಕು?

ಮೊಸರನ್ನು ಯಾವಾಗಲೂ ಊಟದ ಅನಂತರ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಯಾಕೆಂದರೆ ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವುದು. ಅದರಲ್ಲಿ ಪ್ರೋಬಯಾಟಿಕ್ ಅಂಶ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮೊಸರು ಶೀತವನ್ನು ಉಂಟು ಮಾಡುತ್ತದೆ. ಹೀಗಾಗಿ ಇದನ್ನು ಬೆಚ್ಚಗಿನ ವಾತಾವರಣದಲ್ಲಿ ದೇಹವನ್ನು ತಂಪಾಗಿರಿಸಲು ಸೇವಿಸುವುದು ಉತ್ತಮ. ಯಾವುದೇ ರೀತಿಯ ಡೈರಿ ಉತ್ಪನ್ನದ ಅಲರ್ಜಿ ಇದ್ದರೆ ಮೊಸರು ತಿನ್ನಬಾರದು ಅಥವಾ ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸಿ.

Continue Reading

ಯೋಗ ದಿನ

International Yoga Day 2024: ಈ ಉಸಿರಾಟದ ತಂತ್ರಗಳು ಮಾನಸಿಕ ಒತ್ತಡ ನಿವಾರಿಸುತ್ತವೆ!

International Yoga Day 2024: ಇದು ಒತ್ತಡದ ಜಗತ್ತು. ಈ ಒತ್ತಡದಿಂದ ಬಿಡುಗಡೆಯ ನಿಟ್ಟುಸಿರೊಂದು ಬರಬೇಡವೇ? ಅದಕ್ಕಾಗಿ ಉಸಿರನ್ನೇ ನೆಚ್ಚಿಕೊಳ್ಳಿ ಎನ್ನುತ್ತಾರೆ ಯೋಗಾಸಕ್ತರು. ಹೌದು, ಕೆಲವು ಉಸಿರಾಟದ ತಂತ್ರಗಳಿಂದ ಒತ್ತಡ ನಿವಾರಣೆ ಮಾಡಿ, ಮನಸಿಗೆ ನೆಮ್ಮದಿಯನ್ನೂ ದೇಹಕ್ಕೆ ಆರೋಗ್ಯವನ್ನೂ ತಂದುಕೊಳ್ಳಬಹುದು. ಏನು ತಂತ್ರಗಳವು? ಸ್ವಾಸ್ಥ್ಯ ಹೆಚ್ಚಳಕ್ಕೆ ಹೇಗೆ ಉಸಿರಾಡಬೇಕು- ಎಂಬೆಲ್ಲ ಮಾಹಿತಿಗಳು ಇಲ್ಲಿವೆ. ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಪ್ರಾಣಾಯಾಮದ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Benefits of Bhramari
Koo

ಉಸಿರನ್ನು ನಾನಾ ಅವಧಿಗಳು, ಆವರ್ತನಗಳು (Breathing Exercises) ಮತ್ತು ಪ್ರಮಾಣಗಳಲ್ಲಿ ಹಿಡಿಯುವ ಮತ್ತು ಬಿಡುವ ಮೂಲಕ ಮನಸ್ಸು ಮತ್ತು ದೇಹವನ್ನು ಏಕತ್ರಗೊಳಿಸುವ ಕ್ರಮವೆಂದೇ ಪ್ರಾಣಾಯಾಮ ಪ್ರಖ್ಯಾತವಾಗಿದೆ. ಬೇಡದ ವಸ್ತು ಮತ್ತು ಶಕ್ತಿಗಳಿಂದ ದೇಹ-ಮನಸ್ಸುಗಳನ್ನು ಮುಕ್ತಗೊಳಿಸುವುದರ ಜೊತೆಗೆ, ದೇಹಕ್ಕೆ ಆಮ್ಲಜನಕದ ಹರಿವನ್ನು ಹೆಚ್ಚಿಸಿ, ಒತ್ತಡ ನಿವಾರಿಸುವ ಗುಣವನ್ನು ಇದು ಹೊಂದಿದೆ. ಎತ್ತಣವೂ ಇರುವುದು ಒತ್ತಡವೊಂದೇ ಈ ಲೋಕದಲ್ಲಿ. ಹಾಗೆಂದು ಉಬ್ಬೆ ಹಾಕಿದಂಥ ಬದುಕನ್ನು ಬದುಕಲಾದೀತೆ? ಈ ಒತ್ತಡದಿಂದ ಬಿಡುಗಡೆಯ ನಿಟ್ಟುಸಿರೊಂದು ಬರಬೇಡವೇ? ಅದಕ್ಕಾಗಿ ಉಸಿರನ್ನೇ ನೆಚ್ಚಿಕೊಳ್ಳಿ ಎನ್ನುತ್ತಾರೆ ಯೋಗಾಸಕ್ತರು. ಹೌದು, ಕೆಲವು ಉಸಿರಾಟದ ತಂತ್ರಗಳಿಂದ ಒತ್ತಡ ನಿವಾರಣೆ ಮಾಡಿ, ಮನಸಿಗೆ ನೆಮ್ಮದಿಯನ್ನೂ ದೇಹಕ್ಕೆ ಆರೋಗ್ಯವನ್ನೂ ತಂದುಕೊಳ್ಳಬಹುದು. ಏನು ತಂತ್ರಗಳವು? ಸ್ವಾಸ್ಥ್ಯ ಹೆಚ್ಚಳಕ್ಕೆ ಹೇಗೆ ಉಸಿರಾಡಬೇಕು- ಎಂಬೆಲ್ಲ ಮಾಹಿತಿಗಳು (International Yoga Day 2024) ಇಲ್ಲಿವೆ.

Benefits of Bhramari

ಭ್ರಾಮರಿ

ಹೊರಗಿನ ಶಬ್ದಗಳು ಅತಿಯಾದಾಗ ಒಳಗಿನ ಧ್ವನಿ ಕೇಳುವುದಿಲ್ಲ. ಆಗ ಹೊರಗದ್ದಲವನ್ನು ಲಯ ಮಾಡುವ ಇನ್ನೊಂದು ಧ್ವನಿ ಒಳಗಿನಿಂದ ಬೇಕಾಗುತ್ತದೆ. ಇದಕ್ಕೆ ಭ್ರಾಮರಿ ಪ್ರಾಣಾಯಾಮವನ್ನು ಉದಾಹರಿಸಬಹುದು. ಅಂದರೆ, ದುಂಬಿ ಝೇಂಕಾರದಂಥ ದನಿಯನ್ನು ಮಾಡುವ ಉಸಿರಾಟದ ಕ್ರಮವಿದು. ಹೊರಗಿನ ಗಲಾಟೆಯನ್ನು ಕೇಳದಂತೆ ಮಾಡಿ, ನಮ್ಮ ಆಂತರ್ಯದ ದನಿಗೆ ಕಿವಿಯಾಗಿಸುವ ತಂತ್ರವಿದು.

4-4ರ ಉಸಿರಾಟ

ಉಸಿರಾಟ ಕ್ರಮ ಯಾವುದೇ ಆದರೂ, ನಮ್ಮ ಗಮನ ಸಂಪೂರ್ಣವಾಗಿ ಇರಬೇಕಾದದ್ದು ಉಸಿರಿನ ಮೇಲೆಯೇ. ನಮ್ಮ ಗಮನ ಕೇಂದ್ರೀಕರಿಸಲು ಸೂಕ್ತವಾದಂಥ ಈ 4-4ರ ಕ್ರಮಕ್ಕೆ ಬಾಕ್ಸ್‌ ಕ್ರಮ ಎಂದೂ ಕರೆಯಲಾಗುತ್ತದೆ. ಅಂದರೆ, 4 ಸೆಕೆಂಡ್‌ ಉಸಿರು ಒಳಗೆ ತೆಗೆದುಕೊಳ್ಳಿ (ಪೂರಕ), 4 ಸೆಕೆಂಡ್‌ ಉಸಿರು ನಿಲ್ಲಿಸಿ (ಕುಂಭಕ), 4 ಸೆಕೆಂಡ್‌ ಉಸಿರು ಹೊರಗೆ ಬಿಡಿ (ರೇಚಕ), 4 ಸೆಕೆಂಡ್‌ ನಿಲ್ಲಿಸಿ (ಕುಂಭಕ)- ಇದನ್ನೇ ಪುನರಾವರ್ತಿಸಿ. ಮಂಗನಂತಾಡುವ ಮನಸ್ಸನ್ನು ಒಂದೆಡೆ ನಿಲ್ಲಿಸಲು ಇದು ಸೂಕ್ತ.

Kapalbhati Pranayama Yoga Poses For Bright And Glowing Skin

ಕಪಾಲಭಾತಿ

ಶಬ್ದದ ಅರ್ಥ ತಲೆಬುರುಡೆಯ ಬೆಳಕು ಎಂಬುದಾಗಿ! ಆದರೆ ಸಶಕ್ತವಾಗಿ ಉಸಿರನ್ನು ಒಳಗೆಳೆದುಕೊಳ್ಳುವ ಈ ತಂತ್ರದಿಂದ ದೇಹದ ಯಾವುದೇ ನಾಡಿ ಮತ್ತು ಚಕ್ರಗಳಲ್ಲಿ ಇರಬಹುದಾದ ತಡೆಯನ್ನು ನಿವಾರಿಸುವ ವಿಧಾನವಾಗಿ ಇದು ಬಳಕೆಯಾಗುತ್ತದೆ. ಮಾತ್ರವಲ್ಲ, ಶರೀರವನ್ನು ಡಿಟಾಕ್ಸ್‌ ಮಾಡಿ, ನರ, ಪರಿಚಲನೆ, ಎದೆ ಮತ್ತು ಕಿಬ್ಬೊಟ್ಟೆಗಳನ್ನು ಸಶಕ್ತ ಮಾಡುವಂಥ ಕ್ಲಿಷ್ಟ ಎನ್ನಬಹುದಾದ ಪ್ರಾಣಾಯಾಮವಿದು.

4-7-8ರ ಉಸಿರಾಟ

ಒತ್ತಡ ನಿವಾರಣೆಗೆ ಈ ಉಸಿರಾಟದ ತಂತ್ರ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಕ್ರಮದಲ್ಲಿ, 4 ಸೆಕೆಂಡ್‌ ಉಸಿರು ಒಳಗೆಳೆದುಕೊಳ್ಳಿ, 7 ಸೆಕೆಂಡ್‌ ನಿಲ್ಲಿಸಿ, 8 ಸೆಕೆಂಡ್‌ಗೆ ಉಸಿರನ್ನು ಬಾಯಿಯಿಂದ ನಿಧಾನಕ್ಕೆ ಹೊರಗೆ ಬಿಡಿ. ಅಂದರೆ 4 ಸೆಕೆಂಡ್‌ ಪೂರಕ, 7 ಸೆಕೆಂಡ್‌ ಕುಂಭಕ, 8 ಸೆಕೆಂಡ್‌ಗಳ ರೇಚಕವನ್ನು ಹಲವಾರು ನಿಮಿಷಗಳ ಕಾಲ ಪುನರಾವರ್ತಿಸುವುದು ಕ್ರಮ.

ಭಸ್ತ್ರಿಕಾ

ಕಿಡಿಗೆ ತಿದಿಯೂದಿದಂತೆ ಉಸಿರಾಡುವ ಕ್ರಮವೆಂದು ಇದನ್ನು ಬಣ್ಣಿಸಬಹುದು. ಏಕೋ ಬೆಳಗ್ಗೆ ಎದ್ದಾಗಿನಿಂದ ಸುಸ್ತು, ಶಕ್ತಿಯೇ ಇಲ್ಲ ಎಂಬಂಥ ಸಮಯದಲ್ಲಿ ಮೂರು ಆವರ್ತ ಭಸ್ತ್ರಿಕಾ ಮಾಡುವುದು ನೆರವಾಗಬಹುದು. ದೀರ್ಘವಾಗಿ ಮತ್ತು ಸಶಕ್ತವಾಗಿ ಉಸಿರನ್ನು ಎಳೆದುಕೊಳ್ಳುವುದು ಮತ್ತು ಬಿಡುವುದು ಇದರ ವೈಶಿಷ್ಟ್ಯ. ದೇಹ ಮತ್ತು ಮನಸ್ಸುಗಳ ಅಗ್ನಿಯನ್ನು ಪ್ರಖರವಾಗಿ ಜ್ವಲಿಸುವಂತೆ ಮಾಡಿ, ಅಜೀರ್ಣದಂಥ ತೊಂದರೆಯನ್ನು ನಿವಾರಣೆ ಮಾಡುತ್ತದೆ.

Nadi Shodhana Pranayama

ನಾಡಿಶೋಧನ

ನಿಮ್ಮ ಕೆಲಸದಲ್ಲಿ ಶ್ರದ್ಧೆ, ಗಮನವನ್ನು ಕೇಂದ್ರೀಕರಿಸಲಾಗುತ್ತಿಲ್ಲವೇ? ಒಂಬತ್ತು ಸುತ್ತುಗಳ ನಾಡಿಶೋಧನ ಪ್ರಾಣಾಯಾಮ ಇದಕ್ಕೆ ಉಪಶಮನ ನೀಡಬಲ್ಲದು. ನಾಡಿಗಳಲ್ಲಿರುವ ತಡೆಗಳನ್ನು ನಿವಾರಿಸಿ, ಪ್ರಾಣಶಕ್ತಿಯ ಸಂಚಾರವನ್ನು ಸುಸೂತ್ರ ಮಾಡುವ ಅರ್ಥದಲ್ಲೇ ಈ ಪ್ರಾಣಾಯಾಮಕ್ಕೆ ಹೆಸರಿಡಲಾಗಿದೆ. ಮೂಗಿನ ಹೊಳ್ಳೆಗಳಲ್ಲಿ ಒಂದನ್ನು ಮುಚ್ಚಿಕೊಂಡು ಇನ್ನೊಂದರಲ್ಲಿ ಉಸಿರೆಳೆದುಕೊಂಡು, ಉಸಿರು ಬಿಡುವಾಗ ಮುಚ್ಚಿದ ಹೊಳ್ಳೆಯನ್ನು ತೆರೆದು, ತೆರೆದಿದ್ದನ್ನು ಮುಚ್ಚಿಕೊಳ್ಳುವುದು. ದೇಹದ ತ್ರಿದೋಷಗಳನ್ನು ಸಮತೋಲನಕ್ಕೆ ತರುವ ಸಾಧ್ಯತೆ ಈ ರೀತಿಯ ಉಸಿರಾಟಕ್ಕಿದೆ.

ಇದನ್ನೂ ಓದಿ: International Yoga Day 2024: ಅಂತಾರಾಷ್ಟ್ರೀಯ ಯೋಗ ದಿನ ಭಾರತದ ಹೆಮ್ಮೆ; ಈ ವರ್ಷದ ಥೀಮ್‌ ಏನು?

ಶೀತಲಿ

ಬೇಡದ ಯೋಚನೆಗಳಿಂದ ತಲೆ ಕೆಟ್ಟು ಗೊಬ್ಬರವಾಗಿದೆಯೇ? ಮೈಮನಸ್ಸುಗಳನ್ನು ಶೀತಲಗೊಳಿಸುವ ಉಸಿರಾಟದ ತಂತ್ರವಿದು. ನಾಲಿಗೆಯನ್ನು ಹೊರಗೆ ಚಾಚಿ, ಸುರುಳಿ ಸುತ್ತಿ. ಇದರ ಮೂಲಕ ಉಸಿರನ್ನು ದೀರ್ಘವಾಗಿ ಒಳಗೆಳೆದುಕೊಳ್ಳಿ. ನಂತರ ಮೂಗಿನಿಂದ ಉಸಿರನ್ನು ಹೊರಗೆ ಬಿಡಿ. ಇದನ್ನೇ ಪುನರಾವರ್ತಿಸಿ. ಯೋಚನೆಗಳಿಂದ ಕಾದ ದೇಹ-ಮನಸ್ಸಿಗೆ ಈ ಮೂಲಕ ತಂಪೆರೆಯಬಹುದು.

Continue Reading

ಯೋಗ ದಿನ

International Yoga Day 2024: ನಗುವುದೂ ಒಂದು ಯೋಗ; ನಕ್ಕರೆ ಅದೇ ಸ್ವರ್ಗ!

International Yoga Day 2024: ನಗುತ್ತಿರುವ ಜೀವಗಳ ಪ್ರತಿರೋಧಕ ಶಕ್ತಿಯೂ (Laughter Yoga) ಪ್ರಬಲವಾಗಿಯೇ ಇರುತ್ತದೆ. ಸದಾ ಸಂತೋಷದಲ್ಲಿರುವವರಿಗೆ ರೋಗಬಾಧೆ, ಸೋಂಕುಗಳ ಉಪಟಳ ಕಡಿಮೆ. ಎಷ್ಟೋ ಪಾರ್ಕುಗಳಲ್ಲಿ ಒಂದಿಷ್ಟು ಮಂದಿ ಒಟ್ಟಿಗೇ ನಿಂತು ಒದ್ದಾಡುತ್ತಾ ನಗುವುದನ್ನು ಅಥವಾ ಅವರ ಒದ್ದಾಟ ನೋಡಿ ಇತರರು ನಗುವುದನ್ನು ಹಲವು ಬಾರಿ ಕಂಡಿರಬಹುದು. ಇವೆಲ್ಲಾ ಆರಂಭವಾದ ಶುರುವಿನ ದಿನಗಳಲ್ಲಿ ಅವರನ್ನು ನೋಡಲೆಂದೇ ದಾರಿಹೋಕರು ಒಂದೆರಡು ಕ್ಷಣ ನಿಂತು, ತಾವೂ ನಕ್ಕು ಹೋಗುತ್ತಿದ್ದುದುಂಟು. ಆದರೆ ಇದೊಂದು ವ್ಯಾಯಾಮದ ಭಾಗವಾಗಿ ಮಾಡುತ್ತಿರುವ ಕ್ರಿಯೆ ಎಂಬುದು ಅರ್ಥವಾಗುತ್ತಿದ್ದಂತೆ, ಲಾಫ್ಟರ್‌ ಯೋಗ ಜನಪ್ರಿಯವಾಗಿದೆ.

VISTARANEWS.COM


on

International Yoga Day 2024
Koo

ಲಾಫ್ಟರ್‌ ಯೋಗದ ಲಾಭಗಳ (International Yoga Day 2024) ಬಗ್ಗೆ ಹೇಳುವುದಾದರೆ, ದೇಹ ಮತ್ತು ಮನಸ್ಸುಗಳ ಮೇಲಿನ ಒತ್ತಡ ನಿವಾರಣೆಯಾಗುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ನಗುತ್ತಿರುವ ಜೀವಗಳ ಪ್ರತಿರೋಧಕ ಶಕ್ತಿಯೂ ಪ್ರಬಲವಾಗಿಯೇ ಇರುವುದು ಕುತೂಹಲದ ಸಂಗತಿ. ಸದಾ ಸಂತೋಷದಲ್ಲಿರುವವರಿಗೆ ರೋಗಬಾಧೆ, ಸೋಂಕುಗಳ ಉಪಟಳ ಕಡಿಮೆ. ಎಷ್ಟೋ ಪಾರ್ಕುಗಳಲ್ಲಿ ಒಂದಿಷ್ಟು ಮಂದಿ ಒಟ್ಟಿಗೇ ನಿಂತು ಒದ್ದಾಡುತ್ತಾ ನಗುವುದನ್ನು ಅಥವಾ ಅವರ ಒದ್ದಾಟ ನೋಡಿ ಇತರರು ನಗುವುದನ್ನು ಹಲವು ಬಾರಿ ಕಂಡಿರಬಹುದು. ಇವೆಲ್ಲಾ ಆರಂಭವಾದ ಶುರುವಿನ ದಿನಗಳಲ್ಲಿ ಅವರನ್ನು ನೋಡಲೆಂದೇ ದಾರಿಹೋಕರು ಒಂದೆರಡು ಕ್ಷಣ ನಿಂತು, ತಾವೂ ನಕ್ಕು ಹೋಗುತ್ತಿದ್ದುದುಂಟು. ಆದರೆ ಇದೊಂದು ವ್ಯಾಯಾಮದ ಭಾಗವಾಗಿ ಮಾಡುತ್ತಿರುವ ಕ್ರಿಯೆ ಎಂಬುದು ಅರ್ಥವಾಗುತ್ತಿದ್ದಂತೆ, ಲಾಫ್ಟರ್‌ ಯೋಗವೂ ಈಗ ಜನಪ್ರಿಯವಾಗಿದೆ.

Adult outdoor yoga

ಏನಿದು ನಗುಯೋಗ?

ಉದ್ದೇಶಪೂರ್ವಕವಾಗಿ ದೀರ್ಘ ಸಮಯದವರೆಗೆ ನಗುತ್ತಿರುವ ಕ್ರಿಯೆಯನ್ನು ನಗುಯೋಗ ಎನ್ನುತ್ತಾರೆ. ಈ ಯೋಗ ಮಾಡುವುದಕ್ಕೆ ಸುಲಭ ಎಂಬಂತೆ ಕಂಡರೂ, ಸುಮ್ಮನೆ ನಗುವ ಅಭ್ಯಾಸ ಯಾರಿಗೂ ಇರುವುದಿಲ್ಲವಲ್ಲ! ತಡೆಯಲಾದೆ, ತನ್ನಷ್ಟಕ್ಕೆ ಬಂದ ನಗುವೇ ಆಗಲೀ, ಕಚುಗುಳಿ ಇಟ್ಟ ಒತ್ತಾಯದ ನಗುವೇ ಇರಲಿ, ನಗುವಿಗಿರುವ ಆರೋಗ್ಯ ಸುಧಾರಣೆಯ ಗುಣವನ್ನು ಅಲ್ಲಗಳೆಯಲಾಗದು. ನಗುವ ಅಭ್ಯಾಸ ಮಾಡಿಕೊಂಡರೆ ಲಾಭಗಳು ಹಲವಾರು ಇರುವುದಂತೂ ಹೌದು. ಹಾಗಾದರೆ ಏನೆಲ್ಲಾ ಪ್ರಯೋಜನಗಳಿವೆ ನೋಡೋಣವೇ?

ಹೇಗೆ ಉಪಯುಕ್ತ?

ತನ್ನಷ್ಟಕ್ಕೇ ನಗು ಬಂದಾಗ, ನಕ್ಕೂನಕ್ಕು ಕಣ್ಣಲ್ಲಿ ನೀರು ಬರುವಂತಾದಾಗ, ಇನ್ನೂ ವಿಪರೀತ ನಕ್ಕು ಹೊಟ್ಟೆ ನೋಯುವಷ್ಟಾದಾಗ- ದೇಹ-ಮನಸ್ಸುಗಳು ಹಗುರಾದ ಭಾವನೆ ಬರುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ. ಮೂಲತಃ ಒತ್ತಡ ನಿವಾರಣೆಯ ಅದ್ಭುತ ತಂತ್ರವಿದು. ಆದರೆ ಹಾಗೆ ನಗುವಂಥ ಕಾರಣಗಳು ಪ್ರತಿದಿನ ದೊರೆಯಬೇಕಲ್ಲ. ಅದರ ಅಗತ್ಯವಿಲ್ಲ ಎನ್ನುತ್ತಾರೆ ನಗುಯೋಗದ ರಾಯಭಾರಿಗಳು. ಒತ್ತಾಯದ ನಗು ಅಥವಾ ವ್ಯಾಯಾಮಕ್ಕಾಗಿ ನಕ್ಕಿದ್ದೇ ಆದರೂ, ಇದರಿಂದ ಉಪಯೋಗವಿದೆ. ಲಾಫ್ಟರ್‌ ಯೋಗಕ್ಕಾಗಿ ದೀರ್ಘ ಉಸಿರಾಟ ಅಗತ್ಯವಾಗಿ ಬೇಕಾಗುತ್ತದೆ. ಒಬ್ಬರಿಗಿಂತ ಹೆಚ್ಚು ಮಂದಿ ಈ ಕ್ರಿಯೆಯಲ್ಲಿ ಪಾಲ್ಗೊಂಡರಂತೂ ಒಬ್ಬರನ್ನೊಬ್ಬರು ನೋಡುತ್ತಲೇ ಸಹಜವಾಗಿ ನಗತೊಡಗುತ್ತಾರೆ. ನಗುವವರನ್ನು ನೋಡಿ ನಗುವುದೂ ಮೋಜಲ್ಲವೇ! ನಗು ಸಕಾರಣವೋ ಅಕಾರಣವೋ ಎಂಬುದು ಎಂಡಾರ್ಫಿನ್‌ನಂಥ ದೇಹದ ಹ್ಯಾಪಿ ಹಾರ್ಮೋನುಗಳಿಗೆ ತಿಳಿಯುವುದಿಲ್ಲ. ನಗುವಿನ ಕ್ರಿಯೆಗೆ ಅವು ಪ್ರತಿಕ್ರಿಯಿಸುತ್ತವೆ. ಈ ಸಂತೋಷದ ಚೋದಕಗಳ ಸ್ರವಿಸುವಿಕೆಯಿಂದ ದೇಹಕ್ಕೆ ಹಲವಾರು ರೀತಿಯ ಉಪಕಾರ ಆಗುವುದಂತೂ ನಿಶ್ಚಿತ. ನಗೆಯೋಗದ ಲಾಭಗಳ ಬಗ್ಗೆ ಹೇಳುವುದಾದರೆ, ದೇಹ ಮತ್ತು ಮನಸ್ಸುಗಳ ಮೇಲಿನ ಒತ್ತಡ ನಿವಾರಣೆಯಾಗುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ನಗುತ್ತಿರುವ ಜೀವಗಳ ಪ್ರತಿರೋಧಕ ಶಕ್ತಿಯೂ ಪ್ರಬಲವಾಗಿಯೇ ಇರುವುದು ಕುತೂಹಲದ ಸಂಗತಿ. ಹೌದು, ಸದಾ ಸಂತೋಷದಲ್ಲಿರುವವರಿಗೆ ರೋಗಬಾಧೆ, ಸೋಂಕುಗಳ ಉಪಟಳ ಕಡಿಮೆ. ಇವರಲ್ಲಿ ಆಮ್ಲಜನಕದ ಮಟ್ಟ ಕುಸಿಯುವುದು ಅಪರೂಪ. ಉದಾಸೀನ ಭಾವ ದೂರಾಗುತ್ತಿದ್ದಂತೆ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಮರಳಿ, ಹೃದಯ ಕ್ಷೇಮವಾಗಿರುತ್ತದೆ. ಇಡೀ ದಿನದ ಮೂಡ್‌ ಉತ್ತಮವಾಗಿದ್ದರೆ ಮಾಡುವ ಕೆಲಸದಲ್ಲೂ ಯಶಸ್ಸು- ನಗುವುದಕ್ಕೆ ಇನ್ನೂ ಹೆಚ್ಚಿನ ಕಾರಣಗಳು ಬೇಕೆ?

ಇದನ್ನೂ ಓದಿ: International Yoga Day 2024: ಹಿರಿಯರಿಗೆ ಸೂಕ್ತವಾದ ಯೋಗಾಸನಗಳಿವು

ಮಾಡುವುದು ಹೇಗೆ?

ಹೌದಪ್ಪಾ… ಸುಮ್ಮನೇ ತಮ್ಮಷ್ಟಕ್ಕೆ ನಗುವವರಿಗೆ ಲೋಕದಲ್ಲಿ ʻಬೇರೆʼ ಹೆಸರೇ ಇದೆ! ಹುಡುಗಾಟಕ್ಕಲ್ಲ, ಕಾರಣವಿಲ್ಲದೆ ನಗುವುದು ಖಂಡಿತಕ್ಕೂ ಸುಲಭವಲ್ಲ. ಇದಕ್ಕೆ ಕೆಲವು ಸರಳ ಕ್ರಮಗಳನ್ನು ಪ್ರಯತ್ನಿಸಬಹುದು. ಮೊದಲಿಗೆ, ಲಾಫ್ಟರ್‌ ಯೋಗದ ಅಭ್ಯಾಸಿಗಳ ಗುಂಪಿಗೆ ಸೇರುವುದು ಒಳ್ಳೆಯದು. ಇದರಿಂದ ಮುಜುಗರವಿಲ್ಲದೇ ಮನಬಿಚ್ಚಿ ಅಕಾರಣವಾಗಿ ನಗಬಹುದು. ಒಂದೊಮ್ಮೆ ನಿಮ್ಮ ವಲಯದಲ್ಲಿ ಅಂಥ ಗುಂಪುಗಳಿಲ್ಲ ಎಂದಾದರೆ ಚಿಂತಿಲ್ಲ, ನಿಮ್ಮಷ್ಟಕ್ಕೇ ನೀವೇ ನಗುವುದಕ್ಕೆ ಮುಜುಗರ ಬೇಡ. ಹೆಚ್ಚು ಜನರಿಲ್ಲದ ಜಾಗವನ್ನು ಆಯ್ದುಕೊಳ್ಳಿ. ಮನೆಯೊಳಗಿದ್ದರೆ ಕನ್ನಡಿ ಮುಂದೆಯೂ ನಿಲ್ಲಬಹುದು. ನಮಗಿಂತ ತಮಾಷೆಯ ವಸ್ತು ಯಾವುದಿದೆ ಲೋಕದಲ್ಲಿ?
ಆರಂಭದಲ್ಲಿ ಕೆಲವು ಲಘು ವ್ಯಾಯಾಮಗಳು ನೆರವಾಗುತ್ತವೆ. ಕೆಲವು ಸರಳ ಸ್ಟ್ರೆಚ್‌ಗಳು ಅಥವಾ ನಿಂತಲ್ಲೇ ಜಾಗಿಂಗ್‌ನಂತಹ ವ್ಯಾಯಾಮಗಳೂ ಸಾಕಾಗುತ್ತವೆ. ದೀರ್ಘ ಉಸಿರಾಟದೊಂದಿಗೆ ಚಪ್ಪಾಳೆ ತಟ್ಟುವ ಕ್ರಮವುಂಟು. ದೀರ್ಘವಾಗಿ ಒಳಗೆಳೆದುಕೊಂಡ ಉಸಿರನ್ನು ಹೊರಗೆ ಬಿಡುವಾಗ ನಗುವುದು- ಕಷ್ಟವಾದರೂ ಪ್ರಾರಂಭಿಸಿ. ʻಹಹ್ಹಹ್ಹಾ, ಹಿಹ್ಹಿಹ್ಹೀ, ಹುಹ್ಹುಹ್ಹೂ…ʼ ಮುಂತಾಗಿ ಪ್ರಾರಂಭಿಸಿ, ಅದನ್ನೇ ಆವರ್ತನಗೊಳಿಸುತ್ತಾ ಹೋಗುವುದು ಒಂದು ಕ್ರಮ. ಪ್ರಾರಂಭದಲ್ಲಿ ʻಇದೇನು ಹುಚ್ಚು!ʼ ಎಂಬ ಭಾವ ಇದ್ದರೂ ಕ್ರಮೇಣ ಆ ಹುಚ್ಚೇ ಇಷ್ಟವಾಗತೊಡಗುತ್ತದೆ. ನಗು ಇಲ್ಲರಿಗೂ ಇಷ್ಟವೇ- ಆದರೆ ನಗುವುದಿಲ್ಲವಷ್ಟೇ.

Continue Reading
Advertisement
Protest by BJP in Yallapur against petrol and diesel price hike
ಉತ್ತರ ಕನ್ನಡ9 mins ago

Uttara Kannada News: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ಯಲ್ಲಾಪುರದಲ್ಲಿ ಬಿಜೆಪಿಯಿಂದ ಪ್ರತಿಭಟನೆ

Renuka swamy Murder case
ಬೆಂಗಳೂರು19 mins ago

Renuka Swamy Murder : ನಟ ದರ್ಶನ್ ಹಲ್ಲೆ ಮಾಡುವುದನ್ನು ವಿಡಿಯೊ ಮಾಡಿದ್ದ ಮೂವರು ಅರೆಸ್ಟ್‌; ಸಿಕ್ಕೇ ಬಿಡ್ತಾ ದೊಡ್ಡ ಸಾಕ್ಷಿ!

International Yoga Day 2024
ಫ್ಯಾಷನ್29 mins ago

International Yoga Day 2024: ಯೋಗಾಭ್ಯಾಸಕ್ಕೆ ಪುರುಷರ ಉಡುಗೆಗಳು ಹೀಗಿರಬೇಕು

Amithab Bacchan
Latest43 mins ago

Amithab Bacchan :14ನೇ ವರ್ಷಕ್ಕೆ ಕಾಲಿಟ್ಟ ʼರಾವಣ್ʼ ಚಿತ್ರ; ಮಗನನ್ನು ಹೊಗಳಿ ಸೊಸೆಯನ್ನು ನಿರ್ಲಕ್ಷಿಸಿದ ಅಮಿತಾಭ್!

BCCI
ಕ್ರೀಡೆ44 mins ago

BCCI: ಟೀಮ್​ ಇಂಡಿಯಾದ ತವರಿನ ಕ್ರಿಕೆಟ್​ ಸರಣಿಯ ವೇಳಾಪಟ್ಟಿ ಪ್ರಕಟ

Amitabh Bachchan touched Aswini Dutt feet
ಬಾಲಿವುಡ್47 mins ago

Amitabh Bachchan: ಅಶ್ವಿನಿ ದತ್ ಕಾಲಿಗೆ ನಮಸ್ಕರಿಸಿದ ಅಮಿತಾಭ್‌; ʻಬಿಗ್‌ ಬಿʼ ಕೊಂಡಾಡಿದ ರಾಮ್ ಗೋಪಾಲ್ ವರ್ಮಾ!

Citroen C3 Aircross
ಪ್ರಮುಖ ಸುದ್ದಿ52 mins ago

Citroen C3 Aircross : ಧೋನಿ ಹೆಸರಿನಲ್ಲಿ ಬಿಡುಗಡೆಯಾಗಿದೆ ಈ ಕಾರು, ಕೇವಲ 100 ಕಾರಷ್ಟೇ ಉತ್ಪಾದನೆ

Mysuru News
ಮೈಸೂರು54 mins ago

Mysuru News : ಪತ್ನಿ ಶೀಲ ಶಂಕಿಸಿ ಬೆಂಕಿ ಹಚ್ಚಿ ಸುಟ್ಟು ಹಾಕಿದವನಿಗೆ ಜೀವಾವಧಿ ಶಿಕ್ಷೆ

Yuva spoorthi samvaada programme on June 22 in Shivamogga
ಕರ್ನಾಟಕ60 mins ago

Shivamogga News: ಶಿವಮೊಗ್ಗದಲ್ಲಿ ಜೂ.22ರಂದು ಯುವ ಸ್ಫೂರ್ತಿ ಸಂವಾದ ಕಾರ್ಯಕ್ರಮ

IIT Bombay
Latest1 hour ago

IIT Bombay: ಹಿಂದೂ ದೇವರ ಅವಹೇಳನಕಾರಿ ನಾಟಕ; ಐಐಟಿ ವಿದ್ಯಾರ್ಥಿಗಳಿಗೆ ದಂಡ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು3 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ4 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ4 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ5 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ6 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ6 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌