ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟೇಜ್ ಹ್ಯಾಂಡ್‌ಲೂಮ್ ಸೀರೆಯಲ್ಲಿ ವಾಕ್ ಮಾಡಿದ ಮಹಿಳೆಯರ ಒಬ್ಬೊಬ್ಬರ ಸೀರೆಯು ಒಂದೊಂದು ಕಥೆ ಹೇಳುತ್ತಿತ್ತು. ಸೀರೆಯನ್ನು ನೇಯ್ದ ಕಲಾವಿದನ ಕಲೆಯನ್ನು ಪ್ರತಿಬಿಂಬಿಸಿತ್ತು.
ವಯಸ್ಸಿನ ಭೇದ-ಬಾವವಿಲ್ಲದೆ ವಿಂಟೇಜ್ ಹ್ಯಾಂಡ್‌ಲೂಮ್ ಸೀರೆಯನ್ನುಟ್ಟ ಮಹಿಳೆಯರು ಪ್ರೊಫೆಷನಲ್ ಮಾಡೆಲ್‌ಗಳು ನಾಚುವಂತೆ ವಾಕ್ ಮಾಡಿದರು. ಇಲ್ಲಿ ಹೈಟೆಕ್ ರ್ಯಾಂಪ್ ಇರಲಿಲ್ಲ. ಬದಲಿಗೆ ನ್ಯಾಚುರಲ್ ಸ್ಟೇಜನ್ನು ರ್ಯಾಂಪ್‌ನಂತೆ ಬಳಸಿಕೊಳ್ಳಲಾಗಿತ್ತು. ವಾಕ್‌ಗೆ ದೇಸಿ ಲುಕ್ ನೀಡುವ ಸಲುವಾಗಿ ಕಲಾತ್ಮಕವಾಗಿರುವ ಬ್ಯಾಕ್‌ಗ್ರೌಂಡ್ ಆರಿಸಿಕೊಳ್ಳಲಾಗಿತ್ತು. ಪಟ್ಟೆದ ಅಂಚು, ಇಳಕಲ್ ಸೀರೆ, ಕೊತ್ಪಾದ್, ಬುಜೋಡಿ ಸೇರಿದಂತೆ ನಾನಾ ಹ್ಯಾಂಡ್‌ಲೂಮ್ ಸೀರೆಗಳಲ್ಲಿ ಮಾನಿನಿಯರು ವಾಕ್ ಮಾಡಿದರು. ಸಿಕ್ಸ್ ಯಾಡ್ರ್ಸ್ ಲವ್ ಸಂಸ್ಥೆಯ ವಿಂಟೇಜ್ ಹ್ಯಾಂಡ್‌ಲೂಮ್ ಸೀರೆಯ ಶೋನಲ್ಲಿ ಈ ರ್ಯಾಂಪ್ ವಾಕ್ ನಡೆಯಿತು.
ಹ್ಯಾಂಡ್ಲೂಮ್ ಕಲಾವಿದರಿಗೆ ಪ್ರೋತ್ಸಾಹ
ಸುಮಾರು ೧೯ ವರ್ಷದ ಯುವತಿಯಿಂದಿಡಿದು ೬೦ ವರ್ಷದ ಗೃಹಿಣಿಯರು, ಹ್ಯಾಂಡ್‌ಲೂಮ್ ಸೀರೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರದ ವಿವಿಧೆಡೆ ಸಿದ್ಧಪಡಿಸಲಾದ ನೇಯ್ದ ಹ್ಯಾಂಡ್‌ಲೂಮ್ ಸೀರೆಗಳನ್ನು ಧರಿಸಿ ವಾಕ್ ಮಾಡಿದ್ದು ಈ ಕಾರ್ಯಕ್ರಮದ ಹೈಲೈಟಾಗಿತ್ತು. ಹ್ಯಾಂಡ್‌ಲೂಮ್ ಸೀರೆಗಳ ಹಿಂದಿರುವ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ಹ್ಯಾಂಡ್‌ಲೂಮ್ ಸೀರೆಗಳ ಬಗ್ಗೆ ಹಾಗೂ ಕೈಮಗ್ಗ ಸೀರೆಗಳ ಕುರಿತು ಚರ್ಚಿಸಲಾಯಿತು.
ದೇಸಿ ಕಲಾವಿದರಿಗೆ ಪ್ರೋತ್ಸಾಹ
ಹ್ಯಾಂಡ್‌ಲೂಮ್ ಸೀರೆಯ ಮಹತ್ವ ಹಾಗೂ ಮಹಿಳೆಯರ ಸಬಲೀಕರಣ ಕುರಿತಂತೆ ಡಾ. ಪದ್ಮಾಕ್ಷಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ಹ್ಯಾಂಡ್‌ಲೂಮ್ ಸೀರೆಗಳನ್ನು ಖರೀದಿ ಮಾಡುವರಿಂದ ದೇಸಿ ಕಲಾವಿದರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಅಲ್ಲದೇ, ನಮ್ಮತನವನ್ನು ಬಿಂಬಿಸುವ ಸೀರೆಗಳ ಉತ್ಪನ್ನ ಮೊದಲಿಗಿಂತ ಹೆಚ್ಚಾಗುತ್ತದೆ. ಪ್ರತಿ ಮಹಿಳೆಯು ಆದಷ್ಟೂ ಇಂತಹ ಸೀರೆಗಳನ್ನು ಖರೀದಿಸಲು ಮುಂದಾಗಬೇಕು. ಹ್ಯಾಂಡ್‌ಲೂಮ್ ಉಳಿವಿಗೆ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ಸದಸ್ಯರು ಸಭೆಯಲ್ಲಿ ಚರ್ಚಿಸಿದರು. ಸಂಸ್ಥೆಯ ರೇಣುಕಾ ಪ್ರಕಾಶ್ ಗೌಡ, ಡಾ. ಪದ್ಮಾಕ್ಷಿ ಮತ್ತಿತರರು ಪಾಲ್ಗೊಂಡಿದ್ದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Fashion Show : ಚೆಂದುಳ್ಳಿ ಚೆಲುವೆಯರ ಫ್ಯಾಷನ್ ಮಾಯೆ