Site icon Vistara News

Wedding attire | ವೆಡ್ಡಿಂಗ್‌ ಅಟೈರ್ ಆಯ್ಕೆ ಮಾಡಿದ ರಿಚಾ ಛಡ್ಡಾ

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಾಲಿವುಡ್ ನಟಿ ರಿಚಾ ಛಡ್ಡಾ ಹಾಗೂ ನಟ ಅಲಿ ಅಫ್ಜಲ್‌ ಮದುವೆಯ ಅಟೈರ್‌ಗಳ ಬಗ್ಗೆ ಈಗಾಗಲೇ ಫ್ಯಾಷನ್‌ ಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.

ಐದು ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳು

ಮುಂದಿನ ತಿಂಗಳು ನಡೆಯಲಿರುವ ಈ ಮದುವೆಯಲ್ಲಿ ಇವರಿಬ್ಬರು ೫ ಸೆಲೆಬ್ರಿಟಿ ಡಿಸೈನರ್‌ಗಳ ಡಿಸೈನರ್‌ವೇರ್‌ಗಳನ್ನು ಧರಿಸಲಿದ್ದಾರಂತೆ. ಅವುಗಳಲ್ಲಿ ಒಂದು ಇಂಟರ್‌ನ್ಯಾಷನಲ್‌ ಬ್ರಾಂಡ್‌ನದ್ದು ಸೇರಿದೆಯಂತೆ.

ಅಂದಹಾಗೆ, ಇಬ್ಬರು ತಮ್ಮ ಧರ್ಮಗಳಿಗೂ ಒಗ್ಗುವಂತಹ ಡಿಸೈನರ್‌ವೇರ್‌ಗಳನ್ನು ಧರಿಸಲಿದ್ದಾರಂತೆ. ಮದುವೆಯ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳ ಆಯ್ಕೆ ಪ್ರಕ್ರಿಯೆ ಮುಗಿದಿದೆ. ನಮ್ಮ ಅಭಿರುಚಿಗೆ ತಕ್ಕಂತೆ ಸೆಲೆಕ್ಟ್‌ ಮಾಡಿದ್ದೇವೆ ಎನ್ನುವ ರಿಚಾ ಛಡ್ಡಾಗೆ ಮೊದಲೆಲ್ಲಾ ಅಷ್ಟಾಗಿ ಡಿಸೈನರ್‌ವೇರ್‌ಗಳ ಬಗ್ಗೆ ಆಸಕ್ತಿ ಇರಲಿಲ್ಲವಂತೆ. ಬಹಳಷ್ಟು ಬಾಲಿವುಡ್‌ ಮದುವೆಗಳನ್ನು ನೋಡಿದ ನಂತರ ಹಾಗೂ ಒಂದಿಷ್ಟು ಮ್ಯಾಗಝೀನ್‌ಗಳಿಗೆ ಇಬ್ಬರೂ ಸೇರಿ ವೆಡ್ಡಿಂಗ್‌ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳಲ್ಲಿ ಫೋಟೋ ಶೂಟ್‌ಗಳಲ್ಲಿ ಕಾಣಿಸಿಕೊಂಡ ನಂತರ ತಮ್ಮ ಮದುವೆಯ ವೆಡ್ಡಿಂಗ್‌ ಅಟೈರ್‌ ಬಗ್ಗೆ ಯೋಚನೆ ಮಾಡುವಂತಾಯಿತಂತೆ.

ಇನ್ನು ಭಾವಿ ಪತಿ, ಬಾಲಿವುಡ್‌ ನಟ ಅಲಿ ಅಫ್ಜಲ್‌ ಕೂಡ, ರಿಚಾ ಯಾವುದೇ ಡಿಸೈನರ್‌ವೇರ್‌ ಫೈನಲ್‌ ಮಾಡಿದರೂ ಸೈ ಎನ್ನುತ್ತಾರಂತೆ. ಒಟ್ಟಿನಲ್ಲಿ ಕಂಫರ್ಟಬಲ್‌ ಹಾಗೂ ಆಕರ್ಷಕವಾಗಿರಬೇಕು ಎಂಬುದು ಅಲಿ ಅಭಿಮತವಾಗಿದೆ ಎನ್ನುತ್ತಾರೆ ರಿಚಾ. ಈ ಮದುವೆ ಕುರಿತಂತೆ ಈಗಾಗಲೇ ಎಲ್ಲಾ ಪ್ಲಾನ್‌ಗಳು ಆಗಿದ್ದು, ಈ ಬಗ್ಗೆ ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲೂ ರಿಚಾ ಅನೌನ್ಸ್‌ ಮಾಡಿದ್ದಾರೆ.

ಎಲ್ಲರಿಗೂ ಗೊತ್ತಿರುವಂತೆ ರಿಚಾ ಛಡ್ಡಾ ೨೦೨೦ರಲ್ಲೆ ಮದುವೆಯಾಗಬೇಕಿತ್ತು. ಕೊರೊನಾ ಕಾರಣದಿಂದಾಗಿ ಮದುವೆಯನ್ನು ಮುಂದೂಡಿದ್ದರು. ತಮ್ಮ ಕನಸಿನಂತೆ ಎಲ್ಲರ ಸಮ್ಮುಖದಲ್ಲಿ ಗ್ರ್ಯಾಂಡ್‌ ಡಿಸೈನರ್‌ವೇರ್‌ ಧರಿಸಿ ಮದುವೆಯಾಗುವುದಕ್ಕಾಗಿ ಇಷ್ಟು ದಿನ ಕಾದಿದ್ದರಂತೆ.

ರಿಚಾ ಛಡ್ಡಾರ ಗೊತ್ತಿಲ್ಲದ ಫ್ಯಾಷನ್‌ ಸಿಕ್ರೇಟ್ಸ್‌

· ಪೇಟಾ ಸದಸ್ಯೆಯಾಗಿರುವ ರಿಚಾ ವೆಗನ್‌ ಸ್ಟೈಲ್‌ ಐಕಾನ್‌ ಎಂದೇ ಖ್ಯಾತಿ.

· ಪರಿಸರ ಸ್ನೇಹಿ ಉಡುಪುಗಳನ್ನು ಮಾತ್ರ ಧರಿಸುತ್ತಾರಂತೆ.

· ಲೆದರ್‌ ಫ್ಯಾಷನ್‌ ವಸ್ತುಗಳನ್ನು ಮುಟ್ಟುವುದೂ ಇಲ್ಲವಂತೆ

· ಕ್ವಿರ್ಕಿ ಸ್ಟೈಲ್‌ ಹಾಗೂ ಫ್ಯೂಷನ್‌ ಸೀರೆಗಳ ಪ್ರೇಮಿ.

· ಅಮ್ಮನ ನೆಕ್ಲೇಸ್‌ ಧರಿಸುವುದು ಇವರಿಗೆ ಇಷ್ಟವಂತೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Celebrity Fashion Corner | ಮಾಡೆಲಿಂಗ್‌ ಕ್ರಿಯೇಟಿವ್‌ ಕ್ಷೇತ್ರ ಎಂದ ಸೌಂದರ್ಯಗೌಡ

Exit mobile version