ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಡ್ಡಿಂಗ್ ಸೀಸನ್‌ನಲ್ಲಿ ಧರಿಸುವ ಗ್ರ್ಯಾಂಡ್ ಎಥ್ನಿಕ್‌ವೇರ್‌ಗಳಿಗೆ ಮ್ಯಾಚ್ ಆಗುವಂತಹ ಬಗೆಬಗೆಯ ಡಿಸೈನರ್ ಕ್ಲಚ್‌ಗಳು ಮಾರುಕಟ್ಟೆಗೆ (Wedding Fashion) ಕಾಲಿಟ್ಟಿವೆ. ನೋಡಿದರೇ ಕೊಳ್ಳಬೇಕೆನಿಸುವ ಡಿಸೈನ್‌ಗಳಲ್ಲಿ ಲಭ್ಯವಿರುವ ಈ ಕ್ಲಚ್‌ಗಳು ಇಂದು ಎಥ್ನಿಕ್ ಪ್ರಿಯರನ್ನು ಸೆಳೆದಿವೆ.
ವೆಡ್ಡಿಂಗ್‌ವೇರ್‌ಗೆ ಕ್ಲಚ್ ಸಾಥ್
ಗ್ರ್ಯಾಂಡ್ ಉಡುಪು ಧರಿಸಿ ಮದುವೆಯಲ್ಲಿ ಭಾಗವಹಿಸುವವರಿಗೆ ಈ ಕ್ಲಚ್ ಸಾಥ್ ನೀಡುತ್ತಿವೆ. ರೇಷ್ಮೆ ಸೀರೆ ಮಾತ್ರವಲ್ಲ, ಡಿಸೈನರ್ ಲೆಹೆಂಗಾ, ದಾವಣಿ-ಲಂಗ, ಗಾಗ್ರ, ಸಲ್ವಾರ್, ಕಮೀಝ್ ಹೀಗೆ ನಾನಾ ಬಗೆಯ ಡಿಸೈನರ್ ಉಡುಪುಗಳಿಗೆ ಮ್ಯಾಚ್ ಆಗುವ ವಿನ್ಯಾಸದಲ್ಲಿ ದೊರೆಯುತ್ತಿವೆ.
ಯಾವ್ಯಾವ ಬಗೆಯ ಕ್ಲಚ್‌ಗಳು ಲಭ್ಯ
ಕುಂದನ್ ಡಿಸೈನ್‌ನವು, ನಾನಾ ವರ್ಣಗಳ ಅಮೆರಿಕನ್ ಡೈಮಂಡ್ ಇಮಿಟೇಟ್ ಮಾಡುವಂತಹ ಕ್ರಿಸ್ಟಲ್ ಕ್ಲಚ್‌ಗಳು, ಬೀಡ್ಸ್ ಕ್ಲಚ್, ಪರ್ಲ್ ಕ್ಲಚ್, ವೆಲ್ವೆಟ್ ಕ್ಲಚ್, ಪರ್ಸ್ ಶೈಲಿಯವು, ಸ್ವಿಂಗ್ ಶೈಲಿಯ ಚೈನ್ ಇರುವಂತಹ ಕ್ಲಚ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಡಿಸೈನರ್ ವೇರ್‌ಗಳೊಂದಿಗೆ ಹಾಕಿಕೊಂಡಾಗ ಆಕರ್ಷಕವಾಗಿ ಕಾಣುತ್ತವೆ. ಈ ಸೀಸನ್‌ನಲ್ಲಿ ಬೇಸಿಕ್ ಮೇಕಪ್ ಆಕ್ಸೆಸರೀಸ್ ಹಾಗೂ ಮೊಬೈಲ್ ಇರಿಸಿಕೊಳ್ಳುವಂತಹ ಕ್ಲಚ್‌ಗಳಿಗೆ ಇಂದು ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಡಿಸೈನರ್ಸ್. ಇನ್ನು ಕ್ಲಚ್‌ಗಳಲ್ಲಿಕುಂದನ್ ವರ್ಕ್, ಮಿರರ್ ವರ್ಕ್, ಪ್ಯಾಚ್ ವರ್ಕ್, ಮಿಕ್ಸ್ ಮ್ಯಾಚ್ ಕ್ಲಚ್‌ಗಳು ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ.
ಕ್ಲಚ್‌ಗಳ ಬಗ್ಗೆ ತಿಳಿದಿರಿ
ಕ್ಲಚ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಷ್ಟು ಕಂಪಾರ್ಟ್‌ಮೆಂಟ್‌ಗಳು ಇವೆ ಎಂದು ಪರೀಕ್ಷಿಸಿ. ಶಾಪಿಂಗ್‌ಗೆ ಹೋಗುವಾಗ ಕ್ಲಚ್ ಬೇಡ. ವ್ಯಾನಿಟಿ ಬ್ಯಾಗ್ ಸೂಕ್ತ. ಕ್ಲಚ್‌ಗಳನ್ನು ಪ್ರವಾಸಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಎಂಬುದು ನೆನಪಿರಲಿ. ಯಾಕೆಂದರೆ, ಅದರಲ್ಲಿಹೆಚ್ಚಿನ ವಸ್ತುಗಳನ್ನು ಇಡಲಾಗದು.
ನಿರ್ವಹಣೆ ಹೀಗೆ ಮಾಡಿ
ಕುಂದನ್ ವರ್ಕ್ ಅಥವಾ ಇನ್ಯಾವುದೇ ಡಿಸೈನರ್ ವರ್ಕ್ ಇರುವ ಕ್ಲಚ್‌ಗಳನ್ನು ವೈಟ್ ಕಾಟನ್ ಬಟ್ಟೆಯಲ್ಲಿಸುತ್ತಿ ಇಟ್ಟರೆ ತುಂಬ ದಿನ ಬಾಳಿಕೆ ಬರುತ್ತದೆ. ಮದುವೆ ಸಮಾರಂಭದಿಂದ ಬಂದ ತಕ್ಷ ಣ ಕ್ಲಚ್‌ನಲ್ಲಿ ಏನಾದರೂ ಇದ್ದರೆ ಖಾಲಿ ಮಾಡಿ ಇಡಿ. ಕ್ಲಚ್‌ಗಳನ್ನು ತೊಳೆಯಬೇಡಿ. ಚಿಕ್ಕ ಟಿಶ್ಯೂ ಪೇಪರ್‌ನಿಂದ ನಿಧಾನವಾಗಿ ಕ್ಲೀನ್ ಮಾಡಿ ಪ್ಯಾಕ್ ಮಾಡಿ ಇಡಿ.
ಆಕರ್ಷಕವಾಗಿ ಕಾಣಿಸಲು ಕ್ಲಚ್
- ಗ್ರ್ಯಾಂಡ್ ಸೀರೆಗಳಿಗೆ ಹಾಗೂ ಡಿಸೈನರ್ ವೇರ್ಗೆ ಅಂದವಾದ ಕ್ಲಚ್ ಕೈಯಲ್ಲಿಹಿಡಿಯುವುದು ಇಂದಿನ ಟ್ರೆಂಡ್.
- ಕ್ಲಚ್ ಆದಷ್ಟೂ ಕಾಂಪಾಕ್ಟ್ ಆಗಿದ್ದಷ್ಟೂ ಚೆನ್ನಾಗಿ ಕಾಣುತ್ತದೆ.
- ಗೋಲ್ಡ್, ಸಿಲ್ವರ್ ಕ್ಲಚ್‌ಗಳು ಎಲ್ಲಾ ಡಿಸೈನರ್ವೇರ್ಗೂ ಸೂಟ್ ಆಗುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?