ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆ ಸೀಸನ್‌ನಲ್ಲಿ ಸೀರೆಯ ಡಿಸೈನರ್ ಬ್ಲೌಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ವಿಂಟರ್ ವೆಡ್ಡಿಂಗ್ ಸೀಸನ್‌ನಲ್ಲಿ ಮೊದಲಿಗಿಂತ ಬೇಡಿಕೆಯನ್ನು ಇವು ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಡಿಸೈನರ್‌ಗಳು. ರೇಷ್ಮೆ ಸೀರೆಗಳು ಮಾತ್ರವಲ್ಲ, ಮದುವೆಗೆ ಧರಿಸುವ ಡಿಸೈನರ್ ಲೆಹೆಂಗಾ ಹಾಗೂ ಡಿಸೈನರ್ ಸೀರೆಗಳ ಬ್ಲೌಸ್‌ಗಳನ್ನು ಡಿಸೈನ್ ಮಾಡಿಸುವವರು ಇಂದು ಹೆಚ್ಚಾಗಿದ್ದಾರೆ. ಇನ್ನು ಸ್ಪೆಷಲ್ ಬ್ಲೌಸ್ ಡಿಸೈನರ್ ರಫೀಕ್ ಹೇಳುವಂತೆ, ಕಳೆದ ಒಂದು ತಿಂಗಳಿನಿಂದಲೇ ಬೋಟಿಕ್ ಹಾಗೂ ಟೈಲರ್‌ಗಳು ಸಾಕಷ್ಟು ಬಿಝಿಯಾಗಿದ್ದಾರೆ. ಅತಿ ಹೆಚ್ಚಾಗಿ ರೇಷ್ಮೆ ಸೀರೆಗಳ ಡಿಸೈನರ್ ಬ್ಲೌಸ್ ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ಡಿಸೈನ್ ಎಕ್ಸ್‌ಪರ್ಟ್‌ಗಳಾದ ಮಾಸ್ಟರ್‌ಗಳ ಸಹಾಯ ಪಡೆಯುತ್ತಿದ್ದಾರೆ.
ಇಂದು ಮದುವೆಗಳಲ್ಲಿ ಮದುವೆಯಾಗುವ ಹೆಣ್ಣುಮಗಳು ಮಾತ್ರವಲ್ಲ, ಇಡೀ ಕುಟುಂಬ ಹಾಗೂ ಆಪ್ತ ವಲಯದ ಎಲ್ಲಾ ಸ್ತ್ರೀಯರು ಟ್ರೆಡಿಷನಲ್ ಸೀರೆ ಇಲ್ಲವೇ ಡಿಸೈನರ್ ಸೀರೆ ಧರಿಸಲು ಇಷ್ಟಪಡುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಬ್ಲೌಸ್‌ಗಳನ್ನು ಗ್ರ್ಯಾಂಡ್ ಡಿಸೈನ್ ಮಾಡಿಸಿ ಧರಿಸುತ್ತಾರೆ. ಹಾಗಾಗಿ ಇಂದು ವೆಡ್ಡಿಂಗ್ ಸೀಸನ್‌ನಲ್ಲಿ ಡಿಸೈನರ್ ಬ್ಲೌಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಡಿಸೈನರ್ ಕಮ್ ಟೈಲರ್ ರಂಗನಾಥ್.
ರೇಷ್ಮೆ ಸೀರೆಗೆ ಹ್ಯಾಂಡ್‌ವರ್ಕ್
ಕೈಗಳಿಂದ ಮಾಡುವಂತಹ ಹ್ಯಾಂಡ್‌ವರ್ಕ್ ಡಿಸೈನ್‌ಗೆ ಇಂದು ಬೇಡಿಕೆ ಹೆಚ್ಚು. ಇವು ನೋಡಲು ಸುಂದರವಾಗಿ ಕಾಣುತ್ತವಲ್ಲದೇ, ಫಿನಿಶಿಂಗ್ ಚೆನ್ನಾಗಿರುತ್ತವೆ. ಅದರಲ್ಲೂ ಬಹಳಷ್ಟು ಮಹಿಳೆಯರು ಸಿನಿಮಾಗಳಲ್ಲಿ ಟ್ರೆಂಡಿಯಾಗಿರುವ ಡಿಸೈನ್‌ಗಳ ಮೊಬೈಲ್ ಸ್ಕ್ರೀನ್‌ಶಾಟ್ ತೆಗೆದುಕೊಂಡು ಬಂದು ಬ್ಲೌಸ್ ಡಿಸೈನ್ ಮಾಡಿಸುತ್ತಾರೆ ಎನ್ನುತ್ತಾರೆ ಡಿಸೈನರ್ ರಜನೀಶ್.
ಕೈಗೆಟಕುವ ಬೆಲೆಗೆ ಮೆಷಿನ್ ವರ್ಕ್ ಡಿಸೈನ್
ಇನ್ನು ಹ್ಯಾಂಡ್‌ವರ್ಕ್ ಡಿಸೈನ್‌ನ ಬೆಲೆ ದುಬಾರಿಯಾಗಿರುವುದರಿಂದ ಬಹಳಷ್ಟು ಮಹಿಳೆಯರು ಮೆಷಿನ್ ವರ್ಕ್ ಮಾಡಿಸುತ್ತಾರೆ. ಈ ಡಿಸೈನ್‌ಗಳಿಗೆ ಬೆಲೆ ಕಡಿಮೆ. ಹ್ಯಾಂಡ್ ವರ್ಕಿಂಗ್‌ಗಿಂತ ಆಕರ್ಷಕವಾಗಿ ಕಾಣುವುದಿಲ್ಲವಾದರೂ ಕೊಟ್ಟ ಹಣಕ್ಕೆ ಮೋಸವಿಲ್ಲ. ನೋಡಲು ಪೋಟೋಗಳಲ್ಲಿ ಚೆನ್ನಾಗಿಯೇ ಕಾಣುತ್ತದೆ. ಸೂಕ್ತ ಡಿಸೈನ್ ಆಯ್ಕೆ ಮಾಡುವುದು ಮುಖ್ಯ. ಕೈಗೆಟಕುವ ಬೆಲೆಯಾದ್ದರಿಂದ ಬಹಳಷ್ಟು ಮಹಿಳೆಯರು ಮೆಷಿನ್ ವರ್ಕ್ ಡಿಸೈನ್‌ಗಳನ್ನೇ ಪ್ರಿಫರ್ ಮಾಡುತ್ತಾರೆ ಎನ್ನುತ್ತಾರೆ ಮೆಷಿನ್ ವರ್ಕ್‌ನಲ್ಲಿ ಡಿಸೈನ್ ಮಾಡುವ ಡಿಸೈನರ್ ಮಹಮ್ಮದ್.
ಬ್ಲೌಸ್‌ಗೆ ಡಿಸೈನ್ ಮಾಡಿಸುವ ಮುನ್ನ ಒಂದಿಷ್ಟು ವಿಷಯ ಗಮನದಲ್ಲಿಡಿ
- ಹ್ಯಾಂಡ್‌ವರ್ಕ್ ದುಬಾರಿ. ಹಾಗಾಗಿ ಮೊದಲೇ ಬೆಲೆ ತಿಳಿದುಕೊಂಡು ನಿರ್ಧರಿಸಿ.
- ಆಯಾ ಡಿಸೈನ್‌ಗೆ ತಕ್ಕಂತೆ ಬೆಲೆ ನಿಗದಿಯಾಗಿರುತ್ತದೆ ಎಂಬುದು ಅರಿವಿರಲಿ.
- ರೇಷ್ಮೆ ಸೀರೆಯ ಫ್ಯಾಬ್ರಿಕ್ಗೆ ತಕ್ಕಂತೆ ಡಿಸೈನ್ ಮಾಡಿಸಿ.
- ಟ್ರೆಂಡಿಯಾಗಿರುವುದಕ್ಕಿಂತ ನಿಮಗೆ ಹೊಂದುವಂತಹ ಡಿಸೈನ್‌ಗೆ ಆದ್ಯತೆ ನೀಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Wedding Fashion | ವಿಂಟರ್ ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾದ ಪುರುಷರ ಗ್ರ್ಯಾಂಡ್ ಡಿಸೈನರ್‌ವೇರ್ಸ್