ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಿಮ್ಮ ಮದುವೆಯ ಆರತಕ್ಷತೆಗೆ ಧರಿಸುವ ಗ್ರ್ಯಾಂಡ್ ಡಿಸೈನರ್ ಡ್ರೀಮ್ ಲೆಹೆಂಗಾ (grand wedding lehenga) ಹೇಗಿರಬೇಕು ಎಂಬ ಪ್ರಶ್ನೆಗೆ ನಿಮ್ಮ ಉತ್ತರ ಮನಮೋಹಕವಾಗಿರಬೇಕು ಎಂಬುದಲ್ಲವೇ? ಹಾಗಾದಲ್ಲಿ ನಿಮ್ಮ ಮದುವೆ ಅಥವಾ ನಿಮ್ಮ ಮನೆಯವರ ಮದುವೆಗೆ ಟ್ರೆಂಡಿ ಹಾಗೂ ಬ್ಯೂಟಿ ಫುಲ್ ಲೆಹೆಂಗಾ ಆಯ್ಕೆ ಮಾಡುವಾಗ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರು ಲೆಹೆಂಗಾ ಪ್ರಿಯರಿಗೆ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಈ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ.
ಮದುವೆಗಾದಲ್ಲಿ ಗ್ರ್ಯಾಂಡ್ ಲೆಹೆಂಗಾ
ಮದುವೆಯ ಆರತಕ್ಷತೆಗೆ ಇಂದು ಬಹುತೇಕ ಹೆಣ್ಣುಮಕ್ಕಳು ಲೆಹೆಂಗಾ ಧರಿಸಲು ಇಷ್ಟಪಡುತ್ತಾರೆ. ಇದು ಇತ್ತೀಚೆಗೆ ಸಾಮಾನ್ಯವಾಗಿದೆ ಕೂಡ. ಹಾಗಾಗಿ ಆರತಕ್ಷತೆಗೆ ಧರಿಸುವ ಲೆಹೆಂಗಾ ಗ್ರ್ಯಾಂಡ್ ಆಗಿರಬೇಕು. ಗ್ರ್ಯಾಂಡ್ ಎಂದಾಕ್ಷಣ ಅದು ಮಿನುಗುವುದಲ್ಲ. ಫ್ಯಾಬ್ರಿಕ್ ಉತ್ತಮ ಗುಣಮಟ್ಟದ್ದಾಗಿರಬೇಕು. ಧರಿಸಿದಾಕ್ಷಣ ಡಿಸೈನ್ ಮಾಡಿರುವ ಶೈನಿಂಗ್ ವಸ್ತುಗಳು ಬಿದ್ದು ಹೋಗುವಂತಿರಬಾರದು. ಹಾಗಾಗಿ ಗ್ರ್ಯಾಂಡ್ ಲೆಹೆಂಗಾ ಫ್ಯಾಬ್ರಿಕ್ ಖರೀದಿಸುವಾಗ ಮೊದಲು ಕೈಗಳಲ್ಲಿ ಮುಟ್ಟಿ ನೋಡಿ. ಒಮ್ಮೆ ನಿಧಾನವಾಗಿ ಕೊಡವಿ ನೋಡಿ. ಆದರೂ ಕಲಾತ್ಮಕ ಕುಸುರಿ ಚಿತ್ತಾರಗಳು ಉದುರದಿದ್ದಲ್ಲಿ ಅವನ್ನೇ ಆಯ್ಕೆ ಮಾಡಿ.
ಸ್ಕಿನ್‌ಟೋನ್‌ಗೆ ತಕ್ಕಂತೆ ಬಣ್ಣದ ಆಯ್ಕೆ
ಕೆಲವರು ನೋಡಲು ತೀರಾ ಬೆಳ್ಳಗಿರುತ್ತಾರೆ. ಆದರೂ ಮತ್ತಷ್ಟು ಬಿಳುಚಿಕೊಂಡಿರುವಂತಹ ವರ್ಣಗಳದ್ದನ್ನು ಆಯ್ಕೆ ಮಾಡುತ್ತಾರೆ. ಕಪ್ಪು ವರ್ಣದವರು ತೀರಾ ಡಾರ್ಕ್ ವರ್ಣದನ್ನು ಆರಿಸುತ್ತಾರೆ. ಇದು ತಪ್ಪು. ಲೆಹೆಂಗಾ ಫ್ಯಾಬ್ರಿಕ್‌ನ ವರ್ಣ ಮುಖವನ್ನು ರಿಫ್ಲೆಕ್ಟ್ ಮಾಡುತ್ತದೆ. ಅಂತಹ ಕಲರ್‌ಗಳನ್ನು ಆಯ್ಕೆ ಮಾಡಬೇಕು. ಇದಕ್ಕಾಗಿ ನೀವು ಪರಿಣಿತರ ಅಥವಾ ಸ್ಟೈಲಿಸ್ಟ್‌ಗಳ ಸಹಾಯ ಪಡೆಯಬಹುದು.
ಸೆಲೆಬ್ರಿಟಿ ಗ್ರ್ಯಾಂಡ್ ಲೆಹೆಂಗಾ
ಲೆಹೆಂಗಾ ಧರಿಸಿ ಸೆಲೆಬ್ರೆಟಿ ಲುಕ್ ಪಡೆಯಲು ಬಯಸುವುದಾದಲ್ಲಿ ಆದಷ್ಟೂ ಟ್ರೆಂಡಿ ಡಿಸೈನ್‌ನವನ್ನು ಖರೀದಿಸಿ. ಇದಕ್ಕಾಗಿ ನೀವು ಹೀಗೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಮದುವೆಯಾದ ಸೆಲೆಬ್ರಿಟಿಗಳ ಚಿತ್ರಗಳನ್ನು ಸೇವ್ ಮಾಡಿಕೊಳ್ಳಿ. ಅದೇ ರೀತಿಯ ಕಡಿಮೆ ಬೆಲೆಯ ರಿಪ್ಲೀಕಾ ಲೆಹೆಂಗಾಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.
ಪರ್ಫೆಕ್ಟ್ ಬೋಟಿಕ್ ಡಿಸೈನರ್/ಟೈಲರ್ ಸೆಲೆಕ್ಷನ್
ಹೌದು. ಲೆಹೆಂಗಾ ಆಯ್ಕೆ ಮಾಡಿದರೆ ಸಾಲದು. ಅದಕ್ಕಾಗಿ ನೀವು ನುರಿತ ಬೋಟಿಕ್ ಡಿಸೈನರ್ ಅಥವಾ ಟೈಲರ್ ಹುಡುಕಿ ಹೊಲಿಯಲು ನೀಡಬೇಕು. ಪರ್ಫೆಕ್ಟ್ ಫಿಟ್ ಆಗುವಂತೆ ಹೊಲಿದು ಕೊಟ್ಟರೆ ನಿಮ್ಮ ಬಹುತೇಕ ಟಾಸ್ಕ್ ಮುಗಿದಂತೆ. ಮದುವೆಗೂ ಮುನ್ನವೇ ಟ್ರಯಲ್ ನೋಡಿ. ಮ್ಯಾಚ್ ಆಗುವ ಜ್ಯುವೆಲರಿ, ಹೇರ್‌ಸ್ಟೈಲ್, ಮೇಕಪ್ ಎಲ್ಲವನ್ನು ಮೊದಲೇ ಪ್ಲಾನ್ ಮಾಡಿ. ಆಗ ನೀವು ಮದುವೆಯ ದಿನ ಆಕರ್ಷಕವಾಗಿ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sandalwood Star Fashion : ಅಜೆರ್ಬೈಜಾನ್‌ನ ವಿಂಟರ್ ಸ್ಟ್ರೀಟ್ ಫ್ಯಾಷನ್‌ಗೆ ಸೈ ಎಂದ ನಟಿ ಶ್ರದ್ಧಾ ಶ್ರೀನಾಥ್
FAQʼs
1. ಲೆಹೆಂಗಾದಲ್ಲಿ ಯಾವ ಕೃತಿ ಟ್ರೆಂಡಿಂಗ್ ಆಗಿದೆ?
Ans: ಅನಾರ್ಕಲಿ ಮತ್ತು ಛತ್ರಿ ಲೆಹೆಂಗಾಗಳು ಪ್ರಸ್ತುತ ಲೆಹೆಂಗಾ ಶೈಲಿಗಳಲ್ಲಿ ಜನಪ್ರಿಯವಾಗಿವೆ ಮತ್ತು ಕಾಲಾತೀತವಾಗಿ ಉಳಿದಿವೆ. ಮದುವೆಗಳು ಮತ್ತು ಹಬ್ಬಗಳಂತಹ ವಿಶೇಷ ಕಾರ್ಯಕ್ರಮಗಳಿಗಾಗಿ, ನೀವು ಕಸೂತಿ, ಮುದ್ರಿತ, ಘನ ಅಥವಾ ನೀಲಿಬಣ್ಣದ ಅನಾರ್ಕಲಿ
2. ಲೆಹೆಂಗಾದಲ್ಲಿ ಎಷ್ಟು ವಿಧಗಳಿವೆ?
Ans: 8 ವಿವಿಧ ರೀತಿಯ ಲೆಹೆಂಗಾ ಶೈಲಿಗಳು.
3. ಲೆಹೆಂಗಾಗಳು ಮದುವೆಗೆ ಮಾತ್ರವೇ?
Ans: ಲೆಹೆಂಗಾಗಳು ಮದುವೆಗಳಿಗೆ ಸೀಮಿತವಾಗಿಲ್ಲ ಮತ್ತು ಹಬ್ಬಗಳು, ಧಾರ್ಮಿಕ ಸಮಾರಂಭಗಳು, ಪಾರ್ಟಿಗಳು ಮತ್ತು ಸಾಂಪ್ರದಾಯಿಕ ಕೂಟಗಳಂತಹ ಇತರ ಕಾರ್ಯಕ್ರಮಗಳಿಗೆ ಸಹ ಧರಿಸಬಹುದು.