Wedding Fashion: ವೆಡ್ಡಿಂಗ್‌ ಗ್ರ್ಯಾಂಡ್‌ ಲೆಹೆಂಗಾ ಆಯ್ಕೆ ಹೇಗಿರಬೇಕು ? - Vistara News

ಫ್ಯಾಕ್ಟ್ ಚೆಕ

Wedding Fashion: ವೆಡ್ಡಿಂಗ್‌ ಗ್ರ್ಯಾಂಡ್‌ ಲೆಹೆಂಗಾ ಆಯ್ಕೆ ಹೇಗಿರಬೇಕು ?

ನಿಮ್ಮ ಮದುವೆಗೆ ಧರಿಸುವ ಗ್ರ್ಯಾಂಡ್‌ ಲೆಹೆಂಗಾ ಹೇಗಿರಬೇಕು? ಟ್ರೆಂಡಿಯಾಗಿರುವ ಡಿಸೈನ್‌ ಆಯ್ಕೆ ಮಾಡುವುದು ಹೇಗೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಮಾಹಿತಿ ನೀಡಿದ್ದಾರೆ. ಇಲ್ಲಿದೆ ವಿವರ.

VISTARANEWS.COM


on

Wedding Fashion
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಿಮ್ಮ ಮದುವೆಯ ಆರತಕ್ಷತೆಗೆ ಧರಿಸುವ ಗ್ರ್ಯಾಂಡ್‌ ಡಿಸೈನರ್‌ ಡ್ರೀಮ್‌ ಲೆಹೆಂಗಾ (grand wedding lehenga) ಹೇಗಿರಬೇಕು ಎಂಬ ಪ್ರಶ್ನೆಗೆ ನಿಮ್ಮ ಉತ್ತರ ಮನಮೋಹಕವಾಗಿರಬೇಕು ಎಂಬುದಲ್ಲವೇ? ಹಾಗಾದಲ್ಲಿ ನಿಮ್ಮ ಮದುವೆ ಅಥವಾ ನಿಮ್ಮ ಮನೆಯವರ ಮದುವೆಗೆ ಟ್ರೆಂಡಿ ಹಾಗೂ ಬ್ಯೂಟಿ ಫುಲ್‌ ಲೆಹೆಂಗಾ ಆಯ್ಕೆ ಮಾಡುವಾಗ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರು ಲೆಹೆಂಗಾ ಪ್ರಿಯರಿಗೆ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಈ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ.

Wedding Fashion

ಮದುವೆಗಾದಲ್ಲಿ ಗ್ರ್ಯಾಂಡ್‌ ಲೆಹೆಂಗಾ

ಮದುವೆಯ ಆರತಕ್ಷತೆಗೆ ಇಂದು ಬಹುತೇಕ ಹೆಣ್ಣುಮಕ್ಕಳು ಲೆಹೆಂಗಾ ಧರಿಸಲು ಇಷ್ಟಪಡುತ್ತಾರೆ. ಇದು ಇತ್ತೀಚೆಗೆ ಸಾಮಾನ್ಯವಾಗಿದೆ ಕೂಡ. ಹಾಗಾಗಿ ಆರತಕ್ಷತೆಗೆ ಧರಿಸುವ ಲೆಹೆಂಗಾ ಗ್ರ್ಯಾಂಡ್‌ ಆಗಿರಬೇಕು. ಗ್ರ್ಯಾಂಡ್‌ ಎಂದಾಕ್ಷಣ ಅದು ಮಿನುಗುವುದಲ್ಲ. ಫ್ಯಾಬ್ರಿಕ್‌ ಉತ್ತಮ ಗುಣಮಟ್ಟದ್ದಾಗಿರಬೇಕು. ಧರಿಸಿದಾಕ್ಷಣ ಡಿಸೈನ್‌ ಮಾಡಿರುವ ಶೈನಿಂಗ್‌ ವಸ್ತುಗಳು ಬಿದ್ದು ಹೋಗುವಂತಿರಬಾರದು. ಹಾಗಾಗಿ ಗ್ರ್ಯಾಂಡ್‌ ಲೆಹೆಂಗಾ ಫ್ಯಾಬ್ರಿಕ್‌ ಖರೀದಿಸುವಾಗ ಮೊದಲು ಕೈಗಳಲ್ಲಿ ಮುಟ್ಟಿ ನೋಡಿ. ಒಮ್ಮೆ ನಿಧಾನವಾಗಿ ಕೊಡವಿ ನೋಡಿ. ಆದರೂ ಕಲಾತ್ಮಕ ಕುಸುರಿ ಚಿತ್ತಾರಗಳು ಉದುರದಿದ್ದಲ್ಲಿ ಅವನ್ನೇ ಆಯ್ಕೆ ಮಾಡಿ.

Wedding Fashion

ಸ್ಕಿನ್‌ಟೋನ್‌ಗೆ ತಕ್ಕಂತೆ ಬಣ್ಣದ ಆಯ್ಕೆ

ಕೆಲವರು ನೋಡಲು ತೀರಾ ಬೆಳ್ಳಗಿರುತ್ತಾರೆ. ಆದರೂ ಮತ್ತಷ್ಟು ಬಿಳುಚಿಕೊಂಡಿರುವಂತಹ ವರ್ಣಗಳದ್ದನ್ನು ಆಯ್ಕೆ ಮಾಡುತ್ತಾರೆ. ಕಪ್ಪು ವರ್ಣದವರು ತೀರಾ ಡಾರ್ಕ್ ವರ್ಣದನ್ನು ಆರಿಸುತ್ತಾರೆ. ಇದು ತಪ್ಪು. ಲೆಹೆಂಗಾ ಫ್ಯಾಬ್ರಿಕ್‌ನ ವರ್ಣ ಮುಖವನ್ನು ರಿಫ್ಲೆಕ್ಟ್‌ ಮಾಡುತ್ತದೆ. ಅಂತಹ ಕಲರ್‌ಗಳನ್ನು ಆಯ್ಕೆ ಮಾಡಬೇಕು. ಇದಕ್ಕಾಗಿ ನೀವು ಪರಿಣಿತರ ಅಥವಾ ಸ್ಟೈಲಿಸ್ಟ್‌ಗಳ ಸಹಾಯ ಪಡೆಯಬಹುದು.

ಸೆಲೆಬ್ರಿಟಿ ಗ್ರ್ಯಾಂಡ್‌ ಲೆಹೆಂಗಾ

ಲೆಹೆಂಗಾ ಧರಿಸಿ ಸೆಲೆಬ್ರೆಟಿ ಲುಕ್‌ ಪಡೆಯಲು ಬಯಸುವುದಾದಲ್ಲಿ ಆದಷ್ಟೂ ಟ್ರೆಂಡಿ ಡಿಸೈನ್‌ನವನ್ನು ಖರೀದಿಸಿ. ಇದಕ್ಕಾಗಿ ನೀವು ಹೀಗೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಮದುವೆಯಾದ ಸೆಲೆಬ್ರಿಟಿಗಳ ಚಿತ್ರಗಳನ್ನು ಸೇವ್‌ ಮಾಡಿಕೊಳ್ಳಿ. ಅದೇ ರೀತಿಯ ಕಡಿಮೆ ಬೆಲೆಯ ರಿಪ್ಲೀಕಾ ಲೆಹೆಂಗಾಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.

Wedding Fashion

ಪರ್ಫೆಕ್ಟ್‌ ಬೋಟಿಕ್‌ ಡಿಸೈನರ್‌/ಟೈಲರ್‌ ಸೆಲೆಕ್ಷನ್‌

ಹೌದು. ಲೆಹೆಂಗಾ ಆಯ್ಕೆ ಮಾಡಿದರೆ ಸಾಲದು. ಅದಕ್ಕಾಗಿ ನೀವು ನುರಿತ ಬೋಟಿಕ್‌ ಡಿಸೈನರ್‌ ಅಥವಾ ಟೈಲರ್‌ ಹುಡುಕಿ ಹೊಲಿಯಲು ನೀಡಬೇಕು. ಪರ್ಫೆಕ್ಟ್‌ ಫಿಟ್‌ ಆಗುವಂತೆ ಹೊಲಿದು ಕೊಟ್ಟರೆ ನಿಮ್ಮ ಬಹುತೇಕ ಟಾಸ್ಕ್‌ ಮುಗಿದಂತೆ. ಮದುವೆಗೂ ಮುನ್ನವೇ ಟ್ರಯಲ್‌ ನೋಡಿ. ಮ್ಯಾಚ್‌ ಆಗುವ ಜ್ಯುವೆಲರಿ, ಹೇರ್‌ಸ್ಟೈಲ್‌, ಮೇಕಪ್‌ ಎಲ್ಲವನ್ನು ಮೊದಲೇ ಪ್ಲಾನ್‌ ಮಾಡಿ. ಆಗ ನೀವು ಮದುವೆಯ ದಿನ ಆಕರ್ಷಕವಾಗಿ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Sandalwood Star Fashion : ಅಜೆರ್ಬೈಜಾನ್‌ನ ವಿಂಟರ್‌ ಸ್ಟ್ರೀಟ್‌ ಫ್ಯಾಷನ್‌ಗೆ ಸೈ ಎಂದ ನಟಿ ಶ್ರದ್ಧಾ ಶ್ರೀನಾಥ್‌

FAQʼs

1. ಲೆಹೆಂಗಾದಲ್ಲಿ ಯಾವ ಕೃತಿ ಟ್ರೆಂಡಿಂಗ್ ಆಗಿದೆ?

Ans: ಅನಾರ್ಕಲಿ ಮತ್ತು ಛತ್ರಿ ಲೆಹೆಂಗಾಗಳು ಪ್ರಸ್ತುತ ಲೆಹೆಂಗಾ ಶೈಲಿಗಳಲ್ಲಿ ಜನಪ್ರಿಯವಾಗಿವೆ ಮತ್ತು ಕಾಲಾತೀತವಾಗಿ ಉಳಿದಿವೆ. ಮದುವೆಗಳು ಮತ್ತು ಹಬ್ಬಗಳಂತಹ ವಿಶೇಷ ಕಾರ್ಯಕ್ರಮಗಳಿಗಾಗಿ, ನೀವು ಕಸೂತಿ, ಮುದ್ರಿತ, ಘನ ಅಥವಾ ನೀಲಿಬಣ್ಣದ ಅನಾರ್ಕಲಿ

2. ಲೆಹೆಂಗಾದಲ್ಲಿ ಎಷ್ಟು ವಿಧಗಳಿವೆ?

Ans: 8 ವಿವಿಧ ರೀತಿಯ ಲೆಹೆಂಗಾ ಶೈಲಿಗಳು.

3. ಲೆಹೆಂಗಾಗಳು ಮದುವೆಗೆ ಮಾತ್ರವೇ?

Ans: ಲೆಹೆಂಗಾಗಳು ಮದುವೆಗಳಿಗೆ ಸೀಮಿತವಾಗಿಲ್ಲ ಮತ್ತು ಹಬ್ಬಗಳು, ಧಾರ್ಮಿಕ ಸಮಾರಂಭಗಳು, ಪಾರ್ಟಿಗಳು ಮತ್ತು ಸಾಂಪ್ರದಾಯಿಕ ಕೂಟಗಳಂತಹ ಇತರ ಕಾರ್ಯಕ್ರಮಗಳಿಗೆ ಸಹ ಧರಿಸಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Fact Check

Fact Check: ಬೈಕ್ ಕದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರೆ ಪಂಜಾಬ್ ಸಿಎಂ ಭಗವಂತ್ ಮಾನ್?

Viral news: ಹತ್ತು ವರ್ಷಗಳ ಹಿಂದೆ ಬೈಕ್ ದರೋಡೆ ಪ್ರಕರಣದಲ್ಲಿ ಮಾನ್ ಅವರು ಬಂಧನಕ್ಕೊಳಗಾದ ಛಾಯಾ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ನಿಜವೇ ?

VISTARANEWS.COM


on

By

Viral news
Koo

ಪಂಜಾಬ್: ನಿರಂತರ ಒಂದಲ್ಲ ಒಂದು (Fact Check) ಕಾರಣದಿಂದ ಸುದ್ದಿಯಲ್ಲಿರುವ ಹೊಸದಾಗಿ ಚುನಾಯಿತರಾದ ಪಂಜಾಬ್ (Punjab) ಮುಖ್ಯಮಂತ್ರಿ (Chief Minister) ಭಗವಂತ್ ಮಾನ್ (Bhagwant Mann) ಅವರನ್ನು ಈ ಹಿಂದೆ ಬೈಕ್ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಪಡಿಸಲಾಗಿತ್ತು ಎನ್ನುವ ಫೋಟೋ ಸಹಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral news) ಆಗಿದೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ವಿವಾದಗಳಿಗೆ ಹೊಸದೇನಲ್ಲ. ರಾಜ್ಯದ ಅತ್ಯುನ್ನತ ಹುದ್ದೆಗೇರಿದ ಬಳಿಕ ಅವರ ಕುರಿತು ಜನರು ತಮ್ಮ ಅಭಿಪ್ರಾಯಗಳನ್ನು ಮತ್ತು ಹಳೆಯ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಸಾಕಷ್ಟು ಮಂದಿ ವೀಕ್ಷಿಸುತ್ತಿದ್ದಾರೆ.

ಇದೀಗ ಸುಮಾರು ಒಂದು ದಶಕದ ಹಿಂದೆ ಬೈಕ್ ದರೋಡೆ ಪ್ರಕರಣದಲ್ಲಿ ಮಾನ್ ಬಂಧನಕ್ಕೊಳಗಾದ ಛಾಯಾ ಚಿತ್ರ ಎಂದು ಹೇಳುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾನ್ ಅವರು ಇತರ ಮೂವರೊಂದಿಗೆ ನೆಲದ ಮೇಲೆ ಕುಳಿತಿರುವ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: Video Viral: ಜಲ ತರಂಗ್‌ನಲ್ಲಿ ಮಹಿಳೆ ನುಡಿಸಿದ ಐಗಿರಿ ನಂದಿನಿ ವಿಡಿಯೋ ವೈರಲ್

ಈ ಫೋಟೋ ದ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದ ನ್ಯೂಸ್‌ಚೆಕರ್ ಇದು ಸುಳ್ಳೆಂದು ತಿಳಿಸಿದೆ. ಆದರೂ ಈ ಚಿತ್ರವನ್ನು ಟ್ವಿಟರ್‌ನಲ್ಲಿ ಸಾಕಷ್ಟು ಮಂದಿ ವೀಕ್ಷಿಸುತ್ತಿದ್ದಾರೆ ಮತ್ತು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಭಗವಂತ್ ಮಾನ್ ಅವರು 2022ರ ಮಾರ್ಚ್ 16ರಂದು ಪಂಜಾಬ್ ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಮಾಜಿ ಶಾಸಕರಿಗೆ ಪಿಂಚಣಿ ಪಾವತಿ, ಶಿಕ್ಷಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಅವರ ಸರ್ಕಾರದ ‘ದೊಡ್ಡ’ ನಿರ್ಧಾರಗಳಿಗಾಗಿ ಅವರು ನಿರಂತರ ಸುದ್ದಿಯಲ್ಲಿದ್ದಾರೆ.


ಮಾನ್ ಅವರನ್ನು ಪಂಜಾಬ್‌ನಲ್ಲಿ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗಿನಿಂದ ಹಾಸ್ಯನಟ-ರಾಜಕಾರಣಿ ಮಾನ್ ಅವರನ್ನು ಪದೇ ಪದೇ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಪಂಜಾಬ್ ಸಿಎಂ ಬಗೆಗಿನ ಹಲವಾರು ಸುಳ್ಳು ಮಾಹಿತಿಗಳನ್ನು ನ್ಯೂಸ್‌ಕೆಕರ್ ತನಿಖೆ ನಡೆಸಿದೆ.

ಇದೀಗ ವೈರಲ್ ಆಗಿರುವ ಚಿತ್ರದ ಹುಡುಕಾಟ ನಡೆಸಿದಾಗ ಪಂಜಾಬಿ ಗಾಯಕ ಮತ್ತು ನಟ ಕರಮ್‌ಜಿತ್ ಅನ್ಮೋಲ್ ಅವರು ಮ್ಯಾಚ್ 18ರಂದು ಫೇಸ್‌ಬುಕ್ ನಲ್ಲಿ ಮಾಡಿರುವ ಪೋಸ್ಟ್ ಸಿಕ್ಕಿದೆ. ಅದರಲ್ಲಿ ಅವರು ಭಗವಂತ್ ಮಾನ್ ಮತ್ತು ಮಂಜಿತ್ ಸಿಧು ಅವರೊಂದಿಗೆ ಹೋಳಿ ನೆನಪುಗಳು ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಬೈಕ್ ಕಳ್ಳತನ ಪ್ರಕರಣದಲ್ಲಿ ಮಾನ್ ಬಂಧನ ಎಂಬಂತೆ ಬಿಂಬಿಸಿರುವ ಈ ಚಿತ್ರ ದ ಹೇಳಿಕೆಯನ್ನು ಮಂಜಿತ್ ಸಿಧು ಅವರು ತಳ್ಳಿಹಾಕಿದ್ದಾರೆ. ಇದು ನಕಲಿ ಸುದ್ದಿ ಎಂದು ಹೇಳಿದ್ದಾರೆ.


ಈ ಚಿತ್ರವನ್ನು 1994 ಅಥವಾ 1995 ರಲ್ಲಿ ಕೆನಡಾದ ಗಾಯಕ ಹರ್ಭಜನ್ ಮಾನ್ ಭಾರತಕ್ಕೆ ಬಂದಾಗ ಪಟಿಯಾಲದಲ್ಲಿ ತೆಗೆದಿದ್ದಾರೆ. ಹೋಳಿ ಹಬ್ಬದಂದು ಹರ್ಭಜನ್ ಮಾನ್ ಅವರ ಮನೆಯ ಟೆರೇಸ್‌ನಲ್ಲಿ ಚಿತ್ರ ತೆಗೆಯಲಾಗಿದೆ. ಭಗವಂತ್ ಮಾನ್, ಕರಮ್ಜಿತ್ ಅನ್ಮೋಲ್ ಮತ್ತು ಹರ್ಭಜನ್ ಮಾನ್ ಕೂಡ ಅಲ್ಲಿ ಹಾಜರಿದ್ದರು. ಭಗವಂತ್ ಮಾನ್ ಮತ್ತು ನಾನು ಕಾಲೇಜು ದಿನಗಳಿಂದಲೂ ಸ್ನೇಹಿತರಾಗಿದ್ದೇವೆ ಎಂದು ಸಿಧು ತಿಳಿಸಿದ್ದಾರೆ.

ಈ ಕುರಿತು ಮತ್ತಷ್ಟು ಸ್ಪಷ್ಟಿಕರಣಕ್ಕಾಗಿ ಮಾನ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಅನ್ನು ಪರಿಶೀಲಿಸಲಾಗಿದೆ. ಆದರೆ ಯಾವುದೇ ಅಪರಾಧ ಪ್ರಕರಣದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ಅದರಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ತಿಳಿದು ಬಂದಿದೆ.

Continue Reading

ವೈರಲ್ ನ್ಯೂಸ್

Viral news: ಚುನಾವಣೆಗೆ ಮೊದಲೇ 19 ಲಕ್ಷ ಇವಿಎಂ ಕಾಣೆಯಾಗಿದ್ದು ನಿಜವೇ? ಏನಿದರ ಅಸಲಿಯತ್ತು ?

Viral news: ಲೋಕಸಭೆ ಚುನಾವಣೆಗೂ ಮುನ್ನ 1.9 ಮಿಲಿಯನ್ ಇವಿಎಂಗಳನ್ನು ಕಳವು ಮಾಡಲಾಗಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಳವಾಗಿರುವ ಇವಿಎಂ ಗಳು ಎಲ್ಲಿ ಹೋಗಿವೆ ? ಈ ಸುದ್ದಿ ಎಲ್ಲಿಂದ ಬಂತು ಗೊತ್ತೇ ?

VISTARANEWS.COM


on

By

Viral news
Koo

ನವದೆಹಲಿ: ಲೋಕಸಭಾ ಚುನಾವಣೆ- 2024ರ (Lok sabha election-2024) ಮೊದಲ ಹಂತದ ಮತದಾನ ಪ್ರಕ್ರಿಯೆಗಳು ಶುಕ್ರವಾರ ದೇಶದ ವಿವಿಧ ಭಾಗಗಳಲ್ಲಿ ನಡೆದಿದೆ. ಮತದಾನ ಪ್ರಾರಂಭಕ್ಕೂ ಮೊದಲು 1.9 ಮಿಲಿಯನ್ ಎಲೆಕ್ಟ್ರಾನಿಕ್ ಮತಯಂತ್ರಗಳು (EVM) ಕಾಣೆಯಾಗಿವೆ ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ (social media) ಸಂದೇಶ ಹರಡಿದ್ದು (viral news) ಇದು ಸುಳ್ಳು ಎಂದು ತಿಳಿದು ಬಂದಿದೆ.

ಏಪ್ರಿಲ್ 19ರಂದು 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಾರಂಭವಾಗುವ ಮೊದಲು ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಇದರಲ್ಲಿ 1.9 ಮಿಲಿಯನ್ ಎಲೆಕ್ಟ್ರಾನಿಕ್ ಮತಯಂತ್ರಗಳು ಕಾಣೆಯಾಗಿದೆ ಎಂದು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅನೇಕ ಬಳಕೆದಾರರು ಹೇಳಿಕೊಂಡಿದ್ದರು.

ಈ ಕುರಿತು ತನಿಖೆ ನಡೆಸಿದ ವಿಶ್ವಸ್ ನ್ಯೂಸ್ ಈ ಹೇಳಿಕೆ ಸುಳ್ಳು ಎಂದು ಪತ್ತೆ ಹಚ್ಚಿದೆ. ಚುನಾವಣಾ ಆಯೋಗವೂ ಕೂಡ ಇದೊಂದು ನಕಲಿ ಸುದ್ದಿ ಎಂದು ಹೇಳಿದೆ. ಈ ವರ್ಷದ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಕೂಡ ಇವಿಎಂ ನಾಪತ್ತೆಯಾಗಿರುವ ಆರೋಪಗಳನ್ನು ತಳ್ಳಿಹಾಕಿತ್ತು.

ಇದನ್ನೂ ಓದಿ: Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!


ಸುಳ್ಳು ಸುದ್ದಿ

ಸಾಮಾಜಿಕ ಮಾಧ್ಯಮ ಬಳಕೆದಾರ ನಿಹಾಲ್ ಸಿಂಗ್ ನಿಗಮ್ ಅವರು, 1.9 ಮಿಲಿಯನ್ ಇವಿಎಂ ಯಂತ್ರಗಳನ್ನು ಕಳವು ಮಾಡಲಾಗಿದೆ ಮತ್ತು ಈ ಬಗ್ಗೆ ಯಾವುದೇ ಕುರುಹು ಕಂಡು ಬಂದಿಲ್ಲ ಎನ್ನುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಂದಿನಿಂದ ಈ ಪೋಸ್ಟ್ ಭಾರೀ ವೈರಲ್ ಆಗಿದೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಲವಾರು ಬಳಕೆದಾರರು ಇದನ್ನು ಹಂಚಿಕೊಂಡಿದ್ದಾರೆ.


ತನಿಖೆಯಲ್ಲೇನಿದೆ?

ದಿ ಎಕನಾಮಿಕ್ ಟೈಮ್ಸ್ ನ ಮಾರ್ಚ್ 15 ವರದಿಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು 2016 ಮತ್ತು 2019 ರ ನಡುವೆ ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲಿ 1.9 ಮಿಲಿಯನ್ ಇವಿಎಂಗಳು ನಾಪತ್ತೆಯಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಅರ್ಜಿಯನ್ನು ವಜಾಗೊಳಿಸಿತ್ತು. 1.9 ಮಿಲಿಯನ್ ಇವಿಎಂಗಳು ಕಾಣೆಯಾಗಿದೆ ಎಂದು ಐಎನ್‌ಸಿ ಹೇಳಿರುವುದು ಸಂಪೂರ್ಣವಾಗಿ ಆಧಾರ ರಹಿತವಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

2019ರಲ್ಲಿಯೂ ನಾಪತ್ತೆಯಾದ ಇವಿಎಂಗಳ ವರದಿಗಳು ಬಂದಿದ್ದವು. ಫ್ರಂಟ್‌ಲೈನ್ ಮತ್ತು ಟಿವಿ9 ಭಾರತ ವರ್ಷ್ ಈ ಕುರಿತು ವರದಿಗಳನ್ನು ಪ್ರಕಟಿಸಿತ್ತು. ಇದನ್ನೂಚುನಾವಣಾ ಆಯೋಗವು ಆಧಾರ ರಹಿತ ಎಂದು ಹೇಳಿ ಟ್ವಿಟ್ ಮಾಡಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ FAQ ವಿಭಾಗದಲ್ಲಿಯೂ ಈ ಸಮಸ್ಯೆಯನ್ನು ಉಲ್ಲೇಖಿಸಲಾಗಿದೆ. ವೈರಲ್ ಹಕ್ಕು ಕುರಿತು ಚುನಾವಣಾ ಆಯೋಗದ ಅಧಿಕಾರಿಗಳನ್ನು ಸಂಪರ್ಕಿಸಿರುವ ವಿಶ್ವಸ್ ನ್ಯೂಸ್ ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಷಯದ ಕುರಿತು ಸ್ಪಷ್ಟೀಕರಣವನ್ನು ನೀಡಲಾಗಿದೆ ಎಂದು ತಿಳಿಸಿರುವುದಾಗಿ ತಿಳಿದು ಬಂದಿದೆ.

Continue Reading

ದೇಶ

Lok Sabha Election: ಏ.19ರವರೆಗೆ ಲೋಕಸಭೆ ಚುನಾವಣೆ; ಮೇ 22ಕ್ಕೆ ರಿಸಲ್ಟ್?

Lok Sabha Election: ಮಾರ್ಚ್ 12ರಂದು ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭವಾಗಿ, ಏಪ್ರಿಲ್ 19ರಂದು ಮತದಾನ ನಡೆಯಲಿದೆ ಮತ್ತು ಮೇ 22ರಂದು ಫಲಿತಾಂಶ ಪ್ರಕಟವಾಗಲಿದೆ ಎಂಬ ವಾಟ್ಸಾಪ್ ಮೆಸೇಜ್ ಭಾರೀ ವೈರಲ್ ಆಗಿದೆ. ಅಸಲಿ ಸಂಗತಿ ಏನು?

VISTARANEWS.COM


on

Lok Sabha Election on April 19 and Result on May 22
Koo

ನವದೆಹಲಿ: ಲೋಕಸಭೆ ಚುನಾವಣಾ (Lok Sabha Election) ವೇಳಾ ಪಟ್ಟಿ ಕುರಿತು ಎಲ್ಲರಲ್ಲೂ ಕುತೂಹಲವಿದೆ(Election Schedule). ಯಾವಾಗ ದಿನಾಂಕ ಪ್ರಕಟವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ, ಏಪ್ರಿಲ್ 19ರಂದು ಚುನಾವಣೆ ನಡೆದು, ಮೇ 22ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ವಾಟ್ಸಾಪ್‌ ಮೆಸೇಜ್‌ವೊಂದು ಭಾರೀ ವೈರಲ್ ಆಗಿದೆ(WhatsApp Message Viral). ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಚುನಾವಣಾ ಆಯೋಗವು(Election Commission of India), ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಾಗುತ್ತದೆಯೇ ಹೊರತು, ಪಠ್ಯ ಅಥವಾ ವಾಟ್ಸಾಪ್ ಮೆಸೇಜ್ ಮೂಲಕ ಅಲ್ಲ. ಹಾಗಾಗಿ ಇದೊಂದು ಫೇಕ್ ನ್ಯೂಸ್ (Fake News) ಎಂದು ಕೇಂದ್ರ ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.

ಸಾರ್ವತ್ರಿಕ ಚುನಾವಣೆಯ ಸಂಪೂರ್ಣ ವೇಳಾಪಟ್ಟಿಯ ನಕಲಿ ಸಂದೇಶವೊಂದು ಹರಿದಾಡುತ್ತಿದೆ. ಮಾದರಿ ನೀತಿ ಸಂಹಿತೆ ಜಾರಿಗೆ ತರುವ ಮೂಲಕ ಮಾರ್ಚ್ 12 ರಂದು ಚುನಾವಣೆಯನ್ನು ಅಧಿಸೂಚಿಸಲಾಗುವುದು ಎಂದು ಅದರಲ್ಲಿ ತಿಳಿಸಲಾಗಿದೆ. ನಾಮಪತ್ರ ಸಲ್ಲಿಸಲು ಮಾರ್ಚ್ 28 ಕೊನೆಯ ದಿನಾಂಕ ಮತ್ತು ಏಪ್ರಿಲ್ 19 ಮತದಾನ ಮತ್ತು ಮೇ 22ರಂದು ಫಲಿತಾಂಶ ನಡೆಯಲಿದೆ ಎಂದು ನಕಲಿ ಸುದ್ದಿಯಲ್ಲಿ ತಿಳಿಸಲಾಗಿದೆ.

ಚುನಾವಣಾ ಆಯೋಗದ ಲೆಟರ್‌ಹೆಡ್‌‌ನಲ್ಲಿ ನಕಲಿ ಸಂದೇಶವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡಲು ಪ್ರಾರಂಭಿಸಿತು. ಸಾರ್ವತ್ರಿಕ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸುವುದು ಹೇಗೆ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ.

ಈ ಗೊಂದಲದ ನಡುವೆಯೇ ನಿನ್ನೆ ಚುನಾವಣಾ ಆಯೋಗ ವೈರಲ್ ಸಂದೇಶ ನಕಲಿ ಎಂದು ಸ್ಪಷ್ಟಪಡಿಸಿದೆ. ಲೋಕಸಭಾ ಚುನಾವಣೆಯ ವೇಳಾಪಟ್ಟಿಯ ಕುರಿತು ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿ ನಕಲಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶವು ನಕಲಿಯಾಗಿದೆ. ಆಯೋಗವು ಇಲ್ಲಿಯವರೆಗೆ ಯಾವುದೇ ದಿನಾಂಕಗಳನ್ನು ಘೋಷಿಸಿಲ್ಲ ಎಂದು ಎಕ್ಸ್ ವೇದಿಕೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಪೋಸ್ಟ್ ಮಾಡಿದೆ.

ಎಲೆಕ್ಷನ್ ವೇಳಾಪಟ್ಟಿಯನ್ನು ಆಯೋಗವು ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡುತ್ತದೆ. #VerifyBeforeYouAmplify ಎಂಬ ಹ್ಯಾಷ್ ಟ್ಯಾಗ್ ಬಳಸಿರುವ ಆಯೋಗವು, ವಾಟ್ಸಾಪ್ ಸಂದೇಶಗಳನ್ನು ಫಾರ್ವರ್ಡ್ ಮಾಡುವಾಗ ದೃಢೀಕರಿಸಬೇಕು ಎಂದು ಹೇಳಿದೆ.

ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯಿಂದ ಪ್ರಸಾರವಾದ ಆಂತರಿಕ ಟಿಪ್ಪಣಿ ಗೊಂದಲಕ್ಕೆ ಕಾರಣವಾದ ಒಂದು ತಿಂಗಳ ಬಳಿಕ ಈ ನಕಲಿ ಸಂದೇಶವೂ ವೈರಲ್ ಆಗಿದೆ. ಈ ಆಂತರಿಕ ಟಿಪ್ಪಣಿಯಲ್ಲಿ ಏಪ್ರಿಲ್ 16 ಅನ್ನು ತಾತ್ಕಾಲಿಕ “ಚುನಾವಣೆ ದಿನಾಂಕ” ಎಂದು ಉಲ್ಲೇಖಿಸಲಾಗಿದ್ದು ಮತ್ತು ಅಧಿಕಾರಿಗಳಿಗೆ ಸಿದ್ಧತೆಗಳನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿತ್ತು.

ಈ ಸುದ್ದಿಯನ್ನೂ ಓದಿ: Lok Sabha Election: ಈ ದಿನಾಂಕದಂದು ಲೋಕಸಭೆ ಚುನಾವಣಾ ವೇಳಾಪಟ್ಟಿ ಪ್ರಕಟ

Continue Reading

ದೇಶ

Fact Check: ಅಮುಲ್‌ನಿಂದ ʼಶರಮ್‌ʼ ಹೆಸರಿನ ಚೀಸ್ ಬಿಡುಗಡೆ?

Fact Check: ಇತ್ತೀಚೆಗೆ ಅಮುಲ್‌ ಶರಮ್‌ ಹೆಸರಿನ ಚೀಸ್‌ ಬಿಡುಗಡೆ ಮಾಡಿದೆ ಎನ್ನುವ ಸುದ್ದಿ ವೈರಲ್‌ ಆಗಿತ್ತು. ಆದರೆ ಇದೀಗ ಕಂಪೆನಿ ಸ್ಪಷ್ಟನೆ ನೀಡಿ, ಇದು ನಕಲಿ ಸುದ್ದಿ ಎಂದು ಎಚ್ಚರಿಸಿದೆ.

VISTARANEWS.COM


on

amul
Koo

ನವದೆಹಲಿ: ಇತ್ತೀಚೆಗೆ ಶರಮ್ (Sharam) ಹೆಸರಿನ ಅಮುಲ್ ಚೀಸ್ (Amul cheese) ಪ್ಯಾಕೆಟ್‌ನ ಪೋಸ್ಟ್ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದನ್ನು ʼಶರಮ್ ನಾಮ್ ಕಿ ಚೀಜ್ ಭಿ ಹೋತಿ ಹೈʼ (Sharam naam ki cheez bhi hoti hai) ಎಂಬ ಹಿಂದಿ ನುಡಿಗಟ್ಟನ್ನು ಆಧರಿಸಿ ಪೋಸ್ಟ್‌ ಮಾಡಲಾಗಿತ್ತು. ನಾಚಿಕೆಯಿಲ್ಲದ ಯಾರಾದರೂ ವರ್ತಿಸುವಾಗ ಸಾಮಾನ್ಯವಾಗಿ ಈ ನುಡಿಗಟ್ಟನ್ನು ಬಳಸಲಾಗುತ್ತದೆ. ವೈರಲ್ ಪೋಸ್ಟ್‌ನಲ್ಲಿ ಹಿಂದಿಯ ʼಚೀಜ್ʼ ಅನ್ನು ಇಂಗ್ಲಿಷ್‌ನ ʼಚೀಸ್‌ʼ ಆಗಿ ಅನುವಾದಿಸಲಾಗಿದೆ. ಈ ವೈರಲ್‌ ಪೋಸ್ಟ್‌ನಲ್ಲಿ ಚೀಸ್ ತುಂಡಿನ ಚಿತ್ರವನ್ನು ಪ್ಯಾಕೆಟ್ ಮೇಲೆ ಮುದ್ರಿಸಿರುವುದು ಕಂಡು ಬಂದಿದೆ. ಈ ಕುರಿತು ಸ್ಪಷ್ಟನೆ ನೀಡಿದ ಅಮುಲ್‌, ʼʼಕಂಪನಿ ಇಂತಹ ಯಾವುದೇ ಉತ್ಪನ್ನ ಹೊರ ತಂದಿಲ್ಲʼʼ ಎಂದು (Fact Check) ಸ್ಪಷ್ಟಪಡಿಸಿದೆ.

ಅಮುಲ್‌ ಹೇಳಿದ್ದೇನು?

ಅಮುಲ್ ಇದಕ್ಕೆ ಪ್ರತಿಕ್ರಿಯಿಸಿ, ಇದು ನಮ್ಮ ಉತ್ಪನ್ನವಲ್ಲ ಮತ್ತು ಕೃತಕ ಬುದ್ಧಿಮತ್ತೆ (Artificial intelligence) ತಂತ್ರಜ್ಞಾನವನ್ನು ಬಳಸಿಕೊಂಡು ಚಿತ್ರವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದೆ. ಅಲ್ಲದೆ ಬ್ರ್ಯಾಂಡ್‌ನ ಅನುಮತಿಯಿಲ್ಲದೆ ಪೋಸ್ಟ್‌ ರಚಿಸಿ ಪೋಸ್ಟ್ ಹರಿಯಬಿಡಲಾಗಿದೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಮುಲ್‌ ಸ್ಪಷ್ಟಪಡಿಸಿದೆ.

“ಹೊಸ ರೀತಿಯ ಅಮುಲ್ ಚೀಸ್‌ಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್‌ ಮತ್ತು ಸೋಷಿಯಲ್‌ ಮೀಡಿಯಾಗಳಲ್ಲಿ ನಕಲಿ ಸಂದೇಶವನ್ನು ಫಾರ್ವರ್ಡ್ ಮಾಡಲಾಗುತ್ತಿದೆ. ಪೋಸ್ಟ್‌ನ ಸೃಷ್ಟಿಕರ್ತರು ನಮ್ಮಿಂದ ಯಾವುದೇ ಅನುಮತಿಯಿಲ್ಲದೆ ಇದನ್ನು ಪೋಸ್ಟ್ ಮಾಡಿದ್ದಾರೆ. ಈ ಪ್ಯಾಕ್ ಅನ್ನು ಎಐ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಅಮುಲ್ ಬ್ರ್ಯಾಂಡ್‌ ಅನ್ನು ಕಳಪೆಯಂತೆ ಚಿತ್ರಿಸಲಾಗಿದೆʼʼ ಎಂದು ಕಂಪನಿ ಹೇಳಿದೆ.

“ಈ ಪೋಸ್ಟ್‌ನಲ್ಲಿ ತೋರಿಸಿರುವ ಪ್ಯಾಕ್ ಅಮುಲ್ ಚೀಸ್ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇವೆ. ಈ ಪೋಸ್ಟ್ ಅನ್ನು ತಪ್ಪು ಮಾಹಿತಿಯನ್ನು ಹರಡಲು ಮತ್ತು ಗ್ರಾಹಕರಲ್ಲಿ ಅನಗತ್ಯ ಭಯ ಹಾಗೂ ಗೊಂದಲವನ್ನು ಮೂಡಿಸಲು ಬಳಸಲಾಗಿದೆ. ದಯವಿಟ್ಟು ನಮ್ಮ ಈ ಸಂದೇಶವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಅಮುಲ್ ಎಂದಿಗೂ ಅತ್ಯುತ್ತಮ ಉತ್ಪನ್ನಗಳನ್ನು ಒದಗಿಸುವ ಭರವಸೆ ನೀಡುತ್ತದೆʼʼ ಎಂದು ಕಂಪನಿ ಹೇಳಿದೆ.

ಹಿಂದೆಯೂ ಸುಳ್ಳು ಸುದ್ದಿ ಹರಡಿತ್ತು

ಅಮುಲ್‌ ಉತ್ಪನ್ನಗಳ ವಿರುದ್ಧ ಹಿಂದೆಯೂ ಪಿತೂರಿ ನಡೆದಿತ್ತು. ಅಮುಲ್ ಬೆಣ್ಣೆಯನ್ನು ಚೀನಾದಲ್ಲಿ ಪ್ಯಾಕ್ ಮಾಡಲಾಗುತ್ತಿದೆ ಎಂದು ಕಳೆದ ವರ್ಷ ಫೆಬ್ರವರಿಯಲ್ಲಿ ನಕಲಿ ಸಂದೇಶ ಪ್ರಸಾರವಾಗಿತ್ತು. ಕೂಡಲೇ ಎಚ್ಚೆತ್ತ ಕಂಪನಿಯು ಇದು ನಕಲಿ ಸಂದೇಶ ಎಂದು ಸ್ಪಷ್ಟನೆ ನೀಡಿತ್ತು. ಸುಳ್ಳು ಸುದ್ದಿ ಹಬ್ಬಿಸುವವರಿಗೆ ನೋಟಿಸ್ ರವಾನಿಸಿ, ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿತ್ತು.

ನಕಲಿ ಉತ್ಪನ್ನ ಮತ್ತು ಕಂಪನಿಯ ನಿಜವಾದ ಉತ್ಪನ್ನಗಳನ್ನು ಹೋಲಿಕೆ ಮಾಡುವ ವಿಡಿಯೊವನ್ನು ಪೋಸ್ಟ್‌ ಮಾಡಿ, ತಪ್ಪು ಮಾಹಿತಿಯನ್ನು ಸೃಷ್ಟಿಸಿ ಗ್ರಾಹಕರಲ್ಲಿ ಭಯ ಮತ್ತು ಗೊಂದಲ ಮೂಡಲು ಬಳಸಲಾಗಿದೆ ಎಂದು ಹೇಳಿತ್ತು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸೂಚನೆಯ ಪ್ರಕಾರ, ಎಲ್ಲ ಹಾಲಿನ ಉತ್ಪನ್ನಗಳು ಪ್ಯಾಕ್‌ನ ಮುಂಭಾಗದಲ್ಲಿ ವೆಜ್ ಲೋಗೋವನ್ನು ತೋರಿಸುವುದು ಕಡ್ಡಾಯ ಅದನ್ನೂ ಗಮನಿಸುವಂತೆ ಹೇಳಿತ್ತು.

ಇದನ್ನೂ ಓದಿ: Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

Continue Reading
Advertisement
Gurucharan Singh soon to get married faced financial crunch
ಸಿನಿಮಾ19 mins ago

Gurucharan Singh: ನಿಗೂಢವಾಗಿ ನಾಪತ್ತೆಯಾದ ಈ ನಟನಿಗೆ ಶೀಘ್ರದಲ್ಲೇ ಮದುವೆ!

IPL 2024
ಪ್ರಮುಖ ಸುದ್ದಿ24 mins ago

IPL 2024 : ಡೇವಿಡ್ ವಾರ್ನರ್ ಅವರೊಂದಿಗೆ ‘ಈ’ ಅದ್ಭುತ ಐಪಿಎಲ್ ದಾಖಲೆಯನ್ನು ಸರಿಗಟ್ಟಿದ ಕೊಹ್ಲಿ

War 2 A galaxy of stars descended at a Mumbai restaurant on Sunday evening
ಸ್ಯಾಂಡಲ್ ವುಡ್40 mins ago

War 2 Movie: `ವಾರ್‌2′, `ಬ್ರಹ್ಮಾಸ್ತ್ರ’ ತಂಡಕ್ಕೆ ಸ್ಪೆಷಲ್‌ ಡಿನ್ನರ್‌ ಪಾರ್ಟಿ ಆಯೋಜಿಸಿದ ಅಯಾನ್ ಮುಖರ್ಜಿ !

hd revanna prajwal revanna
ಪ್ರಮುಖ ಸುದ್ದಿ47 mins ago

Hasan Pen Drive Case: ಎಲ್ಲೂ ಕಾಣದ ಪ್ರಜ್ವಲ್‌, ಇಂದು ಎಚ್‌ಡಿ ರೇವಣ್ಣ ಹೈಕೋರ್ಟ್‌ ಮೊರೆ

ವಿದೇಶ58 mins ago

Stab wound: ಗರ್ಲ್‌ಫ್ರೆಂಡ್‌ನ ಚುಚ್ಚಿ ಕೊಲ್ಲೋ ಮುನ್ನ ಗೂಗಲ್‌ ಸರ್ಚ್‌ ಮಾಡಿದ್ದ ಹಂತಕ!

Actress Haripriya Vasishta Simha Buys A Swanky New SUV Car
ಸ್ಯಾಂಡಲ್ ವುಡ್1 hour ago

Actress Haripriya: ಐಷಾರಾಮಿ ಕಾರು ಖರೀದಿಸಿದ ʻಸಿಂಹಪ್ರಿಯಾʼ! ಬೆಲೆ ಎಷ್ಟು?

Kane Williamson
ಕ್ರೀಡೆ2 hours ago

Kane Williamson : ನ್ಯೂಜಿಲ್ಯಾಂಡ್ ವಿಶ್ವ ಕಪ್​ ತಂಡಕ್ಕೆಕೇನ್​ ವಿಲಿಯಮ್ಸನ್​ ನಾಯಕ

PM Narendra Modi
ಕರ್ನಾಟಕ2 hours ago

PM Narendra Modi: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಅಬ್ಬರದ ಪ್ರಚಾರಕ್ಕೆ ಸಿದ್ಧತೆ

PM Not OBC Said by Rahul Gandhi and BJP hits back to him
ಪ್ರಮುಖ ಸುದ್ದಿ2 hours ago

PM Narendra Modi: ಸಂಪತ್ತು ಮರುಹಂಚಿಕೆಯ ರಾಹುಲ್ ಗಾಂಧಿ ಐಡಿಯಾ ನಗರ ನಕ್ಸಲ್ ಚಿಂತನೆ: ಪಿಎಂ ಮೋದಿ

ವೈರಲ್ ನ್ಯೂಸ್2 hours ago

Viral Video: ನಾಲ್ಕನೇ ಮಹಡಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದ ಮಗು; ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 29 2024
ಭವಿಷ್ಯ5 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202418 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202420 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 202422 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202422 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ2 days ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

ಟ್ರೆಂಡಿಂಗ್‌