Site icon Vistara News

Wedding Fashion: ರೆಟ್ರೋ ವೆಡ್ಡಿಂಗ್‌ ರಿಸೆಪ್ಷನ್‌ ಫ್ಯಾಷನ್‌ ಟ್ರೆಂಡ್‌ ಸೆಟ್‌ ಮಾಡಿದ ತಾರಾ ದಂಪತಿ ನಿಹಾಲ್‌-ರಿಶಿಕಾ

Wedding Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ಯಾಂಡಲ್‌ವುಡ್‌ನ ತಾರಾ ದಂಪತಿ ನಟ ನಿಹಾಲ್‌ ಹಾಗೂ ನಿರ್ದೇಶಕಿ ರಿಶಿಕಾ ಶರ್ಮಾ ಮದುವೆಯ ಆರತಕ್ಷತೆಯಲ್ಲಿ ಧರಿಸಿದ್ದ ರೆಟ್ರೊ ವೆಡ್ಡಿಂಗ್‌ ಲುಕ್‌ಗೆ ಸಾಥ್‌ ನೀಡುವ ಇಂಡೋ-ವೆಸ್ಟರ್ನ್ ಫ್ಯಾಷನ್‌, ಈ ಸೀಸನ್‌ನ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿದೆ. ಸಾಕಷ್ಟು ಮದುವೆಗಳಲ್ಲಿ ಈ ಲುಕ್‌ ಟ್ರೆಂಡ್‌ ಸೆಟ್‌ ಮಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಮದುವೆಯ ಪ್ರತಿ ಕಾರ್ಯಕ್ರಮಗಳಲ್ಲೂ ಅತ್ಯಾಕರ್ಷಕ ವೆಡ್ಡಿಂಗ್‌ ಫ್ಯಾಷನ್‌ನಲ್ಲಿರುವ ಸಾಕಷ್ಟು ಸಾಂಪ್ರದಾಯಿಕ ಉಡುಪುಗಳಲ್ಲಿ ಕಾಣಿಸಿಕೊಂಡ ಈ ತಾರಾ ಜೋಡಿ, ಪ್ರಾದೇಶಿಕ ಔಟ್‌ಫಿಟ್‌ ಹಾಗೂ ಜ್ಯುವೆಲರಿ ಡಿಸೈನ್‌ಗಳಿಗೆ ಪ್ರಾಮುಖ್ಯತೆ ನೀಡಿತ್ತು. ಇದು ಅವರನ್ನು ಆಕರ್ಷಕವಾಗಿ ಬಿಂಬಿಸಿತ್ತು ಕೂಡ. ಬಾಲಿವುಡ್‌ನ ನವ ಜೋಡಿಗಳಂತೆಯೇ ಇವರೂ ಕೂಡ ಒಂದೊಂದು ವೆಡ್ಡಿಂಗ್‌ ಫ್ಯಾಷನ್‌ ಫೋಟೋಗಳಲ್ಲಿ ಕಾಣಿಸಿಕೊಂಡು, ಫ್ಯಾಷನ್‌ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ನಿಹಾಲ್‌ ಪ್ಯಾಂಟ್‌ಸೂಟ್‌-ರಿಶಿಕಾ ಟ್ರೆಡಿಷನಲ್‌ ರೇಷ್ಮೆ ಸೀರೆ

ಆರತಕ್ಷತೆಯಲ್ಲಿ ನಿಹಾಲ್‌ ಟೈ ಜೊತೆಗೆ ಧರಿಸಿದ ಪಾಸ್ಟೆಲ್‌ ಶೇಡ್‌ನ ಪ್ಯಾಂಟ್‌ ಸೂಟ್‌ ವೆಸ್ಟರ್ನ್ ಲುಕ್‌ಗೆ ಸಾಥ್‌ ನೀಡಿದರೇ, ಗೋಲ್ಡನ್‌ ಸಾದಾ ಬಾರ್ಡರ್‌ನ ಚೆಕ್ಸ್‌ ಬಾಕ್ಸ್‌ನ ಬ್ರಿಕ್‌ ರೆಡ್‌ ವರ್ಣ ಮಿಶ್ರಿತ ರೇಷ್ಮೆ ಸೀರೆ ರಿಶಿಕಾ ಅವರ ಟ್ರೆಡಿಷನಲ್‌ ಲುಕ್‌ಗೆ ನಾಂದಿ ಹಾಡಿತ್ತು. ಈ ಜೋಡಿಯ ಈ ಮಿಕ್ಸ್‌-ಮ್ಯಾಚ್‌ ಕಾನ್ಸೆಪ್ಟ್‌ ಈ ಸೀಸನ್‌ನ ರೆಟ್ರೊ ವೆಡ್ಡಿಂಗ್‌ ರಿಸೆಪ್ಷನ್‌ ಫ್ಯಾಷನ್‌ಗೆ ನಾಂದಿ ಹಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಅತ್ಯಾಕರ್ಷಕ ಗೋಲ್ಡನ್‌ ಲುಕ್‌

ಇನ್ನು ಈ ಸೀಸನ್‌ನ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿರುವ ಗೋಲ್ಡನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ನಿಹಾಲ್‌ ಹಾಗೂ ರಿಶಿಕಾ ದಂಪತಿ ಕಂಪ್ಲೀಟ್‌ ಬಂಗಾರ ವರ್ಣದಲ್ಲಿ ಮಿನುಗಿದ್ದರು. ಬಂಗಾರ ವರ್ಣದ ಡಿಸೈನರ್‌ ಬ್ಲೌಸ್‌ಹೊಂದಿದ ಗೋಲ್ಡನ್‌ ರೇಷ್ಮೆ ಸೀರೆಯಲ್ಲಿ ರಿಶಿಕಾ, ಎಂಬಾಲಿಶ್ಡ್ ಶೆರ್ವಾನಿ ಶೈಲಿ ಹಾಗೂ ಬಂದ್ಗಾಲ ಮಾದರಿಯ ಟ್ರೆಡಿಷನಲ್‌ ಸೂಟ್‌ನಲ್ಲಿ ನಿಹಾಲ್‌ ಕಂಗೊಳಿಸಿದ್ದರು. ಇದಕ್ಕೂ ಮುನ್ನ ನಡೆದ ಮಹೂರ್ತ ಸಮಾರಂಭದಲ್ಲಿ ಇಬ್ಬರೂ ಕಲರ್‌ ಕಾಂಬಿನೇಷನ್‌ನ ಟ್ವಿನ್ನಿಂಗ್‌ ಮಾಡಿದ್ದರು. ಇದು ನೋಡಲು ಮನಮೋಹಕವಾಗಿ ಅವರನ್ನು ಬಿಂಬಿಸಿತ್ತು ಎಂಬುದು ಫ್ಯಾಷನ್‌ ವಿಮರ್ಶಕರ ಅಭಿಪ್ರಾಯ. ಒಟ್ಟಿನಲ್ಲಿ, ಈ ದಂಪತಿಗಳ ವೆಡ್ಡಿಂಗ್‌ ಫ್ಯಾಷನ್‌ ಈ ಸೀಸನ್‌ನ ಪ್ರಾದೇಶಿಕ ಫ್ಯಾಷನ್‌ ಪ್ರಿಯರನ್ನು ಗೆಲ್ಲುವಲ್ಲಿ ಹಾಗೂ ಟ್ರೆಂಡ್‌ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Fashion Sarees: ಮದುವೆ ಸೀಸನ್‌ನಲ್ಲಿ ಟ್ರೆಂಡಿಯಾದ ಗೋಲ್ಡನ್‌ ಶೇಡ್‌ ಸೀರೆಗಳು

Exit mobile version