ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನ ವೆಡ್ಡಿಂಗ್ ಸೀಸನ್ ಫ್ಯಾಷನ್‌ನಲ್ಲಿ ಡಿಸೈನರ್ ಪೋಟ್ಲಿಗಳು ಟ್ರೆಂಡಿಯಾಗಿವೆ. ನೋಡಲು ಆಕರ್ಷಕವಾಗಿ ಕಾಣುವ ಈ ಪೋಟ್ಲಿಗಳು ಗೋಲ್ಡನ್, ಸಿಲ್ವರ್, ಬೀಡ್ಸ್, ಪರ್ಲ್, ಎಂಬ್ರಾಯ್ಡರಿ, ಹ್ಯಾಂಡ್‌ವರ್ಕ್ ವಿನ್ಯಾಸ ಸೇರಿದಂತೆ ನಾನಾ ಡಿಸೈನವು ಮಾನಿನಿಯರ ಕೈಗಳನ್ನು ಬಳಸಿವೆ. ಇನ್ನು ಸಿಕ್ವೀನ್ಸ್ ಹಾಗೂ ಶಿಮ್ಮರ್ ಫ್ಯಾಬ್ರಿಕ್‌ನ ಪೋಟ್ಲಿಗಳು ಮದುವೆ ಮನೆಯವರ ಸಿಂಗಾರದ ಜೊತೆ ಕಾಣಿಸಿಕೊಳ್ಳುತ್ತಿವೆ.
ಡಿಸೈನರ್ ಫೋಟ್ಲಿ ಕಮಾಲ್
ಗ್ರ್ಯಾಂಡ್ ಆಗಿ ಕಾಣುವಂತೆ ಡಿಸೈನ್ ಮಾಡಿದ ಆಕರ್ಷಕ ಎಥ್ನಿಕ್ ಕೈ ಚೀಲವನ್ನು ಫೋಟ್ಲಿ ಎನ್ನಲಾಗುತ್ತದೆ. ಮೂಲತಃ ಉತ್ತರ ಭಾರತದಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಿದ್ದ ಈ ಪೋಟ್ಲಿಗಳು ರಾಜ-ಮಹಾರಾಜರ ಕಾಲದಿಂದಲೂ ಇವೆ. ಬರಬರುತ್ತಾ ಶ್ರೀಮಂತ ವರ್ಗದವರ ಹಾಗೂ ಫ್ಯಾಷನ್ ಪ್ರಿಯರ ಕೈ ಸೇರಿತು. ಇದೀಗ ಮದುವೆ ಫ್ಯಾಷನ್‌ನ ಭಾಗವಾಗಿದೆ.
ಟ್ರೆಂಡ್‌ನಲ್ಲಿರುವ ಬಗೆಬಗೆಯ ಫೋಟ್ಲಿ
ಕೆಲವೊಂದು ಥ್ರೆಡ್‌ವರ್ಕ್, ಶೈನಿಂಗ್ ಫ್ಯಾಬ್ರಿಕ್‌ನಲ್ಲಿ ತಯಾರಾಗಿರುತ್ತವೆ. ಇನ್ನು ಕೆಲವು ಕ್ರಿಸ್ಟಲ್, ಕುಂದನ್, ಕಲಾಂಕರಿ ವಿನ್ಯಾಸದಲ್ಲಿ ಮಿಂದೆದ್ದಿರುತ್ತವೆ. ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ. ಚೌಕ, ಆಯಾತಾಕಾರ, ಪೆಂಟಾಗನಲ್ ಹೀಗೆ ನಾನಾ ಶೇಪ್‌ನಲ್ಲಿಇವು ದೊರಕುತ್ತವೆ. ಒಂದಕ್ಕಿಂತ ಒಂದು ಭಿನ್ನವಾಗಿರುವ ಇವು ಇಂದು ಹೆಚ್ಚಿರುವ ಬೇಡಿಕೆಯಿಂದಾಗಿ ಫೋಟ್ಲಿ ತಯಾರಕರ ಜೀವನವನ್ನು ಅಭಿವೃದ್ಧಿಪಡಿಸಿವೆ. ಸಾಫ್ಟ್ ಫ್ಯಾಬ್ರಿಕ್‌ನಲ್ಲಿಸಿದ್ಧಗೊಳ್ಳುತ್ತಿದ್ದ ಇವು, ಇದೀಗ ರೇಷ್ಮೆ ಸೇರಿದಂತೆ ನಾನಾ ಫ್ಯಾಬ್ರಿಕ್‌ನಲ್ಲೂ ತಯಾರಾಗುತ್ತಿದ್ದು ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಡಿಸೈನರ್ ರಿಚಾ.
ಎಥ್ನಿಕ್ ಫ್ಯಾಷನ್‌ಗೆ ಸೂಪರ್ ಮ್ಯಾಚಿಂಗ್
ಟ್ರೆಡಿಷನಲ್ ಉಡುಪಿಗೆ ಕೈಗಳಲ್ಲಿ ಪರ್ಸ್ ಬದಲು ಡಿಸೈನರ್ ಫೋಟ್ಲಿ ಹಿಡಿದುಕೊಂಡಲ್ಲಿನೋಡಲು ಚೆನ್ನಾಗಿ ಕಾಣುತ್ತದೆ. ಅನಾರ್ಕಲಿ, ಲಾಂಗ್ ಕುರ್ತಾ, ಲೆಹೆಂಗಾ, ಗಾಗ್ರ ಹೀಗೆ ನಾನಾ ಬಗೆಯ ಉಡುಪುಗಳಿಗೆ ಕ್ಲಚ್ ಬದಲು ಫೋಟ್ಲಿ ಹಿಡಿದಲ್ಲಿ ನೋಡಲು ಗ್ರ್ಯಾಂಡ್ ಲುಕ್ ನೀಡುತ್ತದೆ. ಜೊತೆಗೆ ಟ್ರೆಡಿಷನಲ್ ಟಚ್ ನೀಡುತ್ತದೆ ಎನ್ನುತ್ತಾರೆ ಡಿಸೈನರ್ಸ್.
ಸೀರೆಗೆ ಡಿಸೈನರ್ ಪೋಟ್ಲಿ
ಎಥ್ನಿಕ್ ಲುಕ್ ನೀಡುವ ಸೀರೆಗೆ ಫೋಟ್ಲಿ ಸಖತ್ ಮ್ಯಾಚ್ ಆಗುತ್ತದೆ. ಅದರಲ್ಲೂ ರೇಷ್ಮೆ ಸೀರೆಗಳಿಗಂತೂ ಈ ಫೋಟ್ಲಿ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಫೋಟ್ಲಿ ಮ್ಯಾಚಿಂಗ್ ಹೀಗೆ ಮಾಡಿ
ಯಾವುದೋ ಬಣ್ಣದ ಸೀರೆಗೆ ಹಾಗೂ ಹೊಂದದ ಫ್ಯಾಬ್ರಿಕ್‌ಗೆ ಫೋಟ್ಲಿಹಿಡಿದಲ್ಲಿ ಮಿಸ್ ಮ್ಯಾಚ್ ಆಗಬಹುದು. ಸುಂದರವಾಗಿ ಕಾಣದಿರಬಹುದು. ಹಾಗಾಗಿ ಇದಕ್ಕಾಗಿ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ ಎನ್ನುತ್ತಾರೆ ಡಿಸೈನರ್ಸ್. ರೇಷ್ಮೆ ಸೀರೆಗೆ ಆದಷ್ಟೂ ಸಿಲ್ಕ್‌ನಿಂದ ಮಾಡಿರುವಂತದ್ದನ್ನು ಸೆಲೆಕ್ಟ್ ಮಾಡಿ. ಡಿಸೈನರ್ ಸೀರೆಗಾದಲ್ಲಿ ಬೀಡ್ಸ್, ಕ್ರಿಸ್ಟಲ್‌ನದ್ದನ್ನು ಕೊಳ್ಳಿ ಎನ್ನುತ್ತಾರೆ.
ಫೋಟ್ಲಿ ಪ್ರಿಯರಿಗೆ ಒಂದಿಷ್ಟು ಟಿಪ್ಸ್
- ಡ್ರೆಸ್ಕೋಡ್ಗೆ ಹೊಂದುವಂತಹ ಡಿಸೈನ್ನ ಪೋಟ್ಲಿ ಆಯ್ಕೆ ಮಾಡಿ.
- ಬ್ಯಾಗ್ನಂತಿರುವ ಪೋಟ್ಲಿಗಿಂತ ಹ್ಯಾಂಡಲ್ ಇರುವ ಪರ್ಸ್ನಂತವು ಬೆಸ್ಟ್.
- ಚಿಕ್ಕದಾಗಿದ್ದರೇ ಕ್ಯಾರಿ ಮಾಡಲು ಉತ್ತಮ.
- ಮದುವೆ ಸಮಾರಂಭಗಳಿಗೆ ಹೇಳಿ ಮಾಡಿಸಿದ ಆಕ್ಸೆಸರೀಸ್
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sandalwood Star Fashion: ಮನಮೋಹಕ ಕಟೌಟ್ ಡ್ರೆಸ್‌ನಲ್ಲಿ ನ್ಯೂ ಸೀಸನ್ ವೆಲ್‌ಕಮ್ ಮಾಡಿದ ನಟಿ ನಿಮಿಕಾ ರತ್ನಾಕರ್