ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗ್ರ್ಯಾಂಡ್ ಲುಕ್ ನೀಡುವ ಡಿಸೈನರ್ ಬಾರ್ಡರ್ ರೇಷ್ಮೆ ಸೀರೆಗಳು ಮರಳಿವೆ.
ಮುಂಬರುವ ಹಬ್ಬ ಹಾಗೂ ವೆಡ್ಡಿಂಗ್ ಸೀಸನ್‌ಗೆ ಈ ಡಿಸೈನರ್ ಗ್ರ್ಯಾಂಡ್ ಬಾರ್ಡರ್ ರೇಷ್ಮೆ ಸೀರೆಗಳು ಮರಳಿದ್ದು, ಸೀರೆ ಪ್ರಿಯರನ್ನು ಬರಸೆಳೆದಿವೆ.
ಬಾರ್ಡರ್‌ಗೂ ಸಿಕ್ತು ಗ್ರ್ಯಾಂಡ್ ಲುಕ್
ಮೊದಲೆಲ್ಲಾ ಬಾರ್ಡರ್ ರೇಷ್ಮೆ ಸೀರೆ ಎಂದರೇ ಕೇವಲ ಒಂದತ್ತು ಡಿಸೈನ್‌ನವು ಮಾತ್ರ ದೊರೆಯುತ್ತಿದ್ದವು. ಆದರೆ, ಈಗ ಹಾಗಿಲ್ಲ, ಬಾರ್ಡರ್‌ನಲ್ಲೆ ಸಾವಿರಾರು ರೇಷ್ಮೆ ಸೀರೆಗಳು ಲಭ್ಯ.
ಉದಾಹರಣೆಗೆ., ಒಂದರ ಮೇಲೊಂದು ದೊಡ್ಡ ದೊಡ್ಡ ಗೆರೆ ಎಳೆದಂತೆ ಕಾಣುವ ಲೆಯರ್ ಬಾರ್ಡರ್, ಕೆಳಗೆ ಹೂವಿನ ಸಿಂಗಾರವನ್ನೊಳಗೊಂಡ ಫ್ಲೋರಲ್ ಬಾರ್ಡರ್, ಮೇಲ್ಭಾಗದಲ್ಲಿ ಕುಸುರಿ ಚಿತ್ತಾರ ಹೊಂದಿರುವ ಡಿಸೈನರ್ ಬಾರ್ಡರ್, ಆಕರ್ಷಕ ಪ್ಲೇನ್ ವರ್ಣಮಯ ಶೇಡ್‌ಗಳ ಬಾರ್ಡರ್ ಸೇರಿದಂತೆ ಲೆಕ್ಕವಿಲ್ಲದಷ್ಟು ಡಿಸೈನರ್ ಬಾರ್ಡರ್ ರೇಷ್ಮೆ ಸೀರೆಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ.
ಮದುವೆಗೆ ಜರತಾರಿ ಬಾರ್ಡರ್
ಇನ್ನು ಮದುವೆ ಹಾಗೂ ಹಬ್ಬದ ಸಂಭ್ರಮ ಹೆಚ್ಚಿಸಲು ಬಾರ್ಡರ್ ರೇಷ್ಮೆ ಸೀರೆಗಳು ಮನಮೋಹಕ ವಿನ್ಯಾಸದಲ್ಲಿ ನಾನಾ ಬ್ರಾಂಡ್‌ಗಳಲ್ಲಿ ಬಿಡುಗಡೆಗೊಂಡಿವೆ. ಕಂಟೆಂಪರರಿ ಡಿಸೈನ್‌ಗೆ ತಕ್ಕಂತೆ ನಾನಾ ಬಗೆಯ ವಿಭಿನ್ನ ಡಿಸೈನ್‌ಗಳಲ್ಲಿಒಂದರ ಮೇಲೊಂದು ಅಂಟಿಸಿದಂತಹ ಬಾರ್ಡರ್ ರೇಷ್ಮೆ ಸೀರೆಗಳು ಇಂದು ಟ್ರೆಂಡ್‌ನಲ್ಲಿವೆ ಎನ್ನುತ್ತಾರೆ ಮಾಡೆಲ್ ಹಾಗೂ ಮಿಸೆಸ್ ಇಂಡಿಯಾ ಎಲಿಗೆಂಟ್ ೨೦೨೧ ಟೈಟಲ್‌ವಿಜೇತರಾದ ಆಶಾ ಕಿರಣ್.
ಟ್ರೆಡಿಷನಲ್ ಬಾರ್ಡರ್ ಡಿಸೈನ್‌ಗೂ ಬೇಡಿಕೆ
ಅವರ ಪ್ರಕಾರ, ಮನಮೋಹಕ ಸ್ಟ್ರೈಪ್ಸ್ ಬಾರ್ಡರ್, ಫ್ಲೋರಲ್ ಬಾರ್ಡರ್, ಪ್ರಾಣಿ-ಪಕ್ಷಿಗಳ ಚಿತ್ತಾರವನ್ನೊಳಗೊಂಡವು, ರಂಗೋಲಿ ಡಿಸೈನ್‌ನ ಹಳೆಯ ವಿನ್ಯಾಸದ ಟ್ರೆಡಿಷನಲ್ ಬಾರ್ಡರ್ ರೇಷ್ಮೆ ಸೀರೆಗಳಿಗೆ ಹೊಸ ಮೆರಗು ಸಿಕ್ಕಿದೆ.
ಕಸ್ಟಮೈಸ್ಡ್ ಬಾರ್ಡರ್ ರೇಷ್ಮೆ ಸೀರೆಗಳು
ಅಷ್ಟು ಮಾತ್ರವಲ್ಲ, ಇತ್ತೀಚೆಗೆ ಮದುವೆ ಹಾಗೂ ಸಮಾರಂಭಗಳಿಗೆ ಒಂದೇ ಬಗೆಯ ಡಿಸೈನ್ ಹೊಂದಿರುವ ಸಾಕಷ್ಟು ಬಾರ್ಡರ್ ರೇಷ್ಮೆ ಸೀರೆಗಳನ್ನು ಆರ್ಡರ್ ನೀಡಿ ಕಸ್ಟಮೈಸ್ಡ್ ಮಾಡಿಸಲಾಗುತ್ತಿದೆ. ಹ್ಯಾಂಡ್‌ಲೂಮ್ ಬಾರ್ಡರ್ ರೇಷ್ಮೆ ಸೀರೆಗಳನ್ನು ಮಹಿಳೆಯರ ಮನೋಭಿಲಾಷೆಗೆ ತಕ್ಕಂತೆ ಕಸ್ಟಮೈಸ್ಡ್ ಮಾಡಿಕೊಡಲಾಗುತ್ತದೆ ಎನ್ನುತ್ತಾರೆ ರೇಷ್ಮೆ ಸೀರೆ ಮಾರಾಟಗಾರರು.
ಬಾರ್ಡರ್ ರೇಷ್ಮೆ ಸೀರೆ ಪ್ರಿಯರಿಗೆ ಒಂದಿಷ್ಟು ಟಿಪ್ಸ್ :
- ರೇಷ್ಮೆ ಸೀರೆಯ ಬಾರ್ಡರ್ಗಳ ಮೇಲೆ ನೇರವಾಗಿ ಐರನ್ ಮಾಡಬೇಡಿ.
- ಬ್ಲೌಸ್ನ ಬಾರ್ಡರ್ ಮೇಲೆ ಮತ್ತೊಮ್ಮೆ ವಿನ್ಯಾಸ ಮಾಡಿಸಬೇಡಿ.
- ಬಾರ್ಡರ್ಗಳು ನೀಟಾಗಿ ಕೂರಲು ಸೀರೆಗೆ ಫಾಲ್ ಹಾಕಿಸಿ.
- ನೆಲ ಸಾರಿಸುವಂತೆ ಬಾರ್ಡರ್ ಸೀರೆಯನ್ನು ಉಡಬೇಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Season Fashion | ಟ್ರೆಂಡಿಯಾದ ಕಲರ್‌ಫುಲ್ ಜುಮಕಿ