Site icon Vistara News

Wedding Hairstyle | ಮದುವೆಯ ಕೇಶ ವಿನ್ಯಾಸಕ್ಕೆ ಎಂಟ್ರಿ ಕೊಟ್ಟ ರೋಸ್‌ ಬನ್‌ ಹೇರ್‌ಸ್ಟೈಲ್‌

Wedding Hairstyle

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮದುವೆಯ ಸೀಸನ್‌ನಲ್ಲಿ ಅಲಂಕಾರದ ಭಾಗವಾದ ಹೇರ್‌ಸ್ಟೈಲ್‌ನಲ್ಲಿ ಇದೀಗ ರೋಸ್‌ ಬನ್‌ ಹೇರ್‌ಸ್ಟೈಲ್‌ ಜನಪ್ರಿಯತೆ ಪಡೆದುಕೊಂಡಿದೆ. ನಾನಾ ವಿನ್ಯಾಸದಲ್ಲಿ ಮೂಡಿಸುವ ಗುಲಾಬಿ ಹೂಗಳ ಹೇರ್‌ಸ್ಟೈಲ್‌ ಹೆಣ್ಣುಮಕ್ಕಳ ಮನ ಗೆದ್ದಿದೆ.

ಆಕರ್ಷಕ ಗುಲಾಬಿ ಹೂಗಳ ಕೇಶ ವಿನ್ಯಾಸ

ಹೇರ್‌ ಬನ್‌ ರೋಸ್‌ ಹೇರ್‌ಸ್ಟೈಲ್‌, ಮಲ್ಟಿಪಲ್‌ ರೋಸ್‌ ಲೇಯರ್‌ ಹೇರ್‌ಸ್ಟೈಲ್‌, ಮಿಕ್ಸ್‌ ಮ್ಯಾಚ್‌ ಫ್ಲೋರಲ್‌, ಜಡೆ ಮಧ್ಯೆ ಬಳಸುವ ಲಿಟಲ್‌ ರೋಸ್‌ ಸ್ಟೈಲ್‌, ತ್ರೀ ರೋಸ್‌ ಸ್ಟೈಲ್‌, ಮೊಗ್ಗಿನ ಜಡೆಯೊಂದಿಗೆ ಗುಲಾಬಿಯ ಹೇರ್‌ಸ್ಟೈಲ್‌, ಕಂಪ್ಲೀಟ್‌ ರೋಸ್‌ ಬನ್‌ ಸೇರಿದಂತೆ ನಾನಾ ಬಗೆಯ ಗುಲಾಬಿ ಹೂಗಳ ಹೇರ್‌ಸ್ಟೈಲ್‌ಗಳು ಈ ಮದುವೆಯ ಸೀಸನ್‌ನ ಕೇಶ ವಿನ್ಯಾಸದ ಕೆಟಗರಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಅದರಲ್ಲೂ ಆರತಕ್ಷತೆ ಕಾರ್ಯಕ್ರಮದಲ್ಲಿ ಮದುಮಗಳಿಗೆ ಆಕರ್ಷಕ ಲುಕ್‌ ನೀಡುವ ಕೇಶ ವಿನ್ಯಾಸವಾಗಿ ಇದು ಪರಿವರ್ತನೆಯಾಗಿದೆ.

ನೈಜ ಗುಲಾಬಿ ಹೂವಿನ ಹೇರ್‌ಬನ್‌

ಮದುವೆಗಳಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ನೈಜ ಚಿಕ್ಕ ಚಿಕ್ಕ ಗುಲಾಬಿಗಳ ಹೇರ್‌ಬನ್‌ ವಿನ್ಯಾಸ, ನೋಡಲು ಅತ್ಯಾಕರ್ಷಕವಾಗಿ ಕಾಣುತ್ತದೆ. ಮದುವೆಯ ಆರತಕ್ಷತೆ ಕಾರ್ಯಕ್ರಮಕ್ಕೆ ಸೂಟ್‌ ಆಗುವ ಈ ಕೇಶ ವಿನ್ಯಾಸದಲ್ಲಿ ಕೇವಲ ಮದುವೆಯಾಗುವ ಮದುಮಗಳು ಮಾತ್ರವಲ್ಲ, ಸ್ನೇಹಿತೆಯರು, ಆಪ್ತರು ಕೂಡ ಕಾಣಿಸಿಕೊಳ್ಳತೊಡಗಿದ್ದಾರೆ. ರೆಡ್‌, ಪಿಂಕ್‌ ಹಾಗೂ ಯೆಲ್ಲೂ ಗುಲಾಬಿಗಳ ಕೇಶ ವಿನ್ಯಾಸಕ್ಕೆ ಹೆಚ್ಚು ಡಿಮ್ಯಾಂಡ್‌ ಇದೆ. ಅದರಲ್ಲೂ ಕಂಪ್ಲೀಟ್‌ ರೋಸ್‌ ಬನ್‌ ಹೆಚ್ಚು ಪಾಪ್ಯುಲರ್‌ ಆಗಿದೆ. ಚಿಕ್ಕ ಚಿಕ್ಕ ಗುಲಾಬಿಗಳು ಒಂದೆಡೆ ಸೇರಿಸಿ ಈ ಹೇರ್‌ಸ್ಟೈಲ್‌ ಮಾಡಲಾಗುತ್ತದೆ. ಧರಿಸಿದ ಸೀರೆ ಅಥವಾ ಲೆಹೆಂಗಾ ಇದಕ್ಕೆ ಮ್ಯಾಚ್‌ ಆದರಂತೂ ನೋಡಲು ಎರಡು ಕಣ್ಣು ಸಾಲದು ಎನ್ನುತ್ತಾರೆ ವೆಡ್ಡಿಂಗ್‌ ಸ್ಪೆಷಲ್‌ ಹೇರ್‌ ಡಿಸೈನರ್‌ ರೇಖಾ ರಾಣಿ. ಅವರ ಪ್ರಕಾರ, ಇದು ಅತಿ ಸುಲಭವಾಗಿ ಮಾಡಬಹುದಾದ ಹೇರ್‌ಸ್ಟೈಲ್‌. ಇದಕ್ಕೆ ಹೆಚ್ಚು ಕಾಳಜಿಯ ಅಗತ್ಯವು ಇರುವುದಿಲ್ಲ ಎನ್ನುತ್ತಾರೆ.

ಕೃತಕ ಗುಲಾಬಿಯ ಹೇರ್‌ ಬನ್‌ ಆಕ್ಸೆಸರೀಸ್‌

ಮರುಬಳಕೆ ಮಾಡಬಹುದಾದ ಕೃತಕ ರೋಸ್‌ ಹೇರ್‌ ಡಿಸೈನಿಂಗ್‌ ಬನ್‌ಗಳು ಇಂದು ಫ್ಯಾನ್ಸಿ ಶಾಪ್‌ಗಳಲ್ಲಿ ದೊರೆಯುತ್ತಿವೆ. ಯಾವುದೇ ಸಮಾರಂಭದಲ್ಲೂ ಇವನ್ನು ಬಳಸಬಹುದಾಗಿದ್ದು, ಸುಲಭವಾಗಿ ಖುದ್ದು ಕೇಶ ವಿನ್ಯಾಸ ಮಾಡಿಕೊಳ್ಳಬಹುದು. ಕೂದಲನ್ನು ಬಾಚಿ, ತುರುಬು ಹಾಕಿ ಇವನ್ನು ಕವರಿಂಗ್‌ನಂತೆ ಹಾಕಿದರಾಯಿತು. ರೋಸ್‌ ಹೇರ್‌ ಬನ್‌ ವಿನ್ಯಾಸ ಸಿದ್ಧ ಎನ್ನುತ್ತಾರೆ ಕೇಶ ವಿನ್ಯಾಸಕಿ ರಾಶಿ.

ರೋಸ್‌ ಹೇರ್‌ ಬನ್‌ ವಿನ್ಯಾಸ ಎಥ್ನಿಕ್‌ ಲುಕ್‌ಗೆ ಸಹಕಾರಿ.

ವಿನ್ಯಾಸ ಆದಷ್ಟೂ ಲೈಟ್‌ವೇಟ್‌ ಆಗಿರಲಿ.

ಚಿಕ್ಕ ಕೂದಲಿನವರಿಗೆ ಇದು ಹೇಳಿ ಮಾಡಿಸಿದ ವಿನ್ಯಾಸ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Wedding Fashion | ಅರಿಶಿಣ ಶಾಸ್ತ್ರದಲ್ಲಿ ಶಕುಂತಲೆಯಂತೆ ಕಂಡ ಅದಿತಿ; ಫ್ಯಾಷನ್ ರೂವಾರಿ ಯಾರು?

Exit mobile version