ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಡ್ಡಿಂಗ್ ಸೀಸನ್‌ನಲ್ಲಿ (Wedding Jewel Fashion) ಎಥ್ನಿಕ್ ಲುಕ್ ನೀಡುವ ಗ್ರ್ಯಾಂಡ್ ಲುಕ್ ನೀಡುವ ಕಿವಿಯೋಲೆಯೊಂದಿಗೆ ಧರಿಸುವ ಡಿಸೈನರ್ ಮಾಟಿ ಆಭರಣ ವೆಡ್ಡಿಂಗ್ ಸೀಸನ್‌ನಲ್ಲಿ ಇದೀಗ ಟ್ರೆಂಡಿಯಾಗಿದೆ. ನಾನಾ ವಿನ್ಯಾಸಗಳಲ್ಲಿ ಬಿಡುಗಡೆಗೊಂಡಿವೆ. ಸಿಂಪಲ್ ಡಿಸೈನ್‌ಗಳಿಗಿಂತ ಮಲ್ಟಿ ಲೇಯರ್, ಪರ್ಲ್ಸ್, ಗೋಲ್ಡನ್ ಬೀಡ್ಸ್ ಬಂಚ್, ಮಲ್ಟಿಪಲ್ ಚಿಕ್ಕ ಚಿಕ್ಕ ಜುಮ್ಕಾ ಲೇಯರ್, ಚೈನ್ ಲೇಯರ್, ಕ್ರಿಸ್ಟಲ್ಸ್ ಲೈನ್ಸ್, ಕಾಲ್ಗೆಜ್ಜೆ ಡಿಸೈನ್‌ನಂತವು, ಸಿಂಪಲ್ ಮಿನಿ ಕಾಸಿನ ಚೈನ್ಸ್, ಪೀಕಾಕ್ ಡಿಸೈನ್ಸ್ ಸೇರಿದಂತೆ ನಾನಾ ಶೈಲಿಯ ಮಿಕ್ಸ್ ಡಿಸೈನ್‌ನ ಲೇಯರ್ ಮಾಟಿಗಳು ಈ ವೆಡ್ಡಿಂಗ್ ಸೀಸನ್‌ನ ಬಾಗಿಲು ಬಡಿದಿವೆ.
ಡಿಸೈನರ್ ಮಾಟಿಗಳಿಗೂ ಡಿಮ್ಯಾಂಡ್
ಎರಡಕ್ಕಿಂತ ಹೆಚ್ಚು ಲೇಯರ್ ಹೊಂದಿರುವ ಮಲ್ಟಿ ಲೇಯರ್ ಮಾಟಿಗಳು ಇಂದು ಜ್ಯುವೆಲರಿ ಲೋಕದಲ್ಲಿ ಪ್ರಚಲಿತದಲ್ಲಿದ್ದು, ಹೆಚ್ಚು ಡಿಮ್ಯಾಂಡ್ ಸೃಷ್ಟಿಸಿಕೊಂಡಿವೆ. ಐದು ಲೇಯರ್‌ನ ಮಾಟಿಗಳು ಲಭ್ಯ. ಇವು ನೋಡಲು ಗ್ರ್ಯಾಂಡ್ ಲುಕ್ ನೀಡುವುದರೊಂದಿಗೆ ವಧನದ ಸೌಂದರ್ಯ ಹಾಗೂ ಕೇಶವಿನ್ಯಾಸಕ್ಕೆ ಸಾಥ್ ನೀಡುತ್ತವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಿತಿಕಾ. ಅವರ ಪ್ರಕಾರ, ಇವು ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುತ್ತವೆ.
ಆಕರ್ಷಕ ಪರ್ಲ್ ಮಾಟಿ
ಸಾಲು ಸಾಲಾಗಿರುವ ಮುತ್ತಿನ ಎಳೆಗಳಿರುವ ಪರ್ಲ್ ಮಾಟಿಯು ಇಂದು ಅತಿ ಹೆಚ್ಚು ಮಹಿಳೆಯರನ್ನು ಸೆಳೆದಿದೆ. ಇದು ಇಡೀ ಕೇಶರಾಶಿಯನ್ನು ಸುಂದರವಾಗಿ ಕಾಣುವಂತೆ ಮಾಡುತ್ತವೆ. ಗೋಲ್ಡ್ ಲೈನ್ ಜತೆಗೆ ಪರ್ಲ್ ಲೈನ್ ಲೇಯರ್ ಇರುವಂತಹ ಮಾಟಿಗಳು ಇಂದು ಹೆಚ್ಚು ಬೇಡಿಕೆಯಲ್ಲಿವೆ.
ಬಂಗಾರ ವರ್ಸಸ್ ಗೋಲ್ಡ್ ಪ್ಲೇಟೆಡ್
ಬಂಗಾರದ ಆ್ಯಂಟಿಕ್ ಡಿಸೈನ್‌ನ ಮಾಟಿಗಳಲ್ಲಿ ಲೈಟ್‌ವೈಟ್ ನವಕ್ಕೆ ಹೆಚ್ಚು ಆದ್ಯತೆ. ನೋಡಲು ಭಾರಿ ಡಿಸೈನ್‌ನಲ್ಲಿ ಇವು ಇದ್ದರೂ ಹೆಚ್ಚು ತೂಕವಿರುವುದಿಲ್ಲ. ಇನ್ನು ಗೋಲ್ಡ್ ಕವರ್ಡ್ ಡಿಸೈನರ್ ಲೇಯರ್ ಮಾಟಿಗಳು ಕೂಡ ಅತಿ ಹೆಚ್ಚಾಗಿ ಬೇಡಿಕೆ ಸೃಷ್ಟಿಸಿಕೊಂಡಿವೆ. ಇವನ್ನು ಯಾವುದೇ ಟ್ರೆಡಿಷನಲ್ ಔಟ್‌ಫಿಟ್‌ಗೆ ಮ್ಯಾಚ್ ಮಾಡಬಹುದು.
ಬ್ರೈಡಲ್ ಲುಕ್‌ಗೆ ಸಾಥ್
ಹೌದು. ಮದುವೆಯಲ್ಲಿ ಅದರಲ್ಲೂ ಮದುವೆಯಾಗುವ ವಧುವಿನ ಆಭರಣಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿವೆ. ಮದುಮಗಳ ಜ್ಯುವೆಲರಿ ಸೆಟ್‌ನಲ್ಲಿ ಇದೀಗ ಟ್ರೆಂಡಿಯಾಗಿರುವ ಈ ಡಿಸೈನರ್ ಲೇಯರ್ ಮಾಟಿಗಳು ಗ್ರ್ಯಾಂಡ್ ಎಥ್ನಿಕ್ ಲುಕ್ ನೀಡುತ್ತವೆ.
ಮಾಟಿ ಪ್ರಿಯರಿಗೆ ಸಲಹೆಗಳು
- ಕ್ಯಾಶುಯಲ್ ಉಡುಪಿಗೆ ನಾಟ್ ಓಕೆ.
- ಗ್ರ್ಯಾಂಡ್ ಸಮಾರಂಭಕ್ಕೆ ಹೇಳಿ ಮಾಡಿಸಿದಂತಿರುತ್ತವೆ.
- ಟ್ರೆಡಿಷನಲ್ ಔಟ್ಫಿಟ್ ಹೇರ್ಸ್ಟೈಲ್ಗೆ ಬೆಸ್ಟ್.
- ಹೇರ್ಸ್ಟೈಲ್ ನಂತರ ಮಾಟಿ ಧರಿಸುವುದು ಉತ್ತಮ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?