Site icon Vistara News

Viral News : ಸೀರೆ ಎತ್ತಿ ವೆಡ್ಡಿಂಗ್​ ಫೋಟೋಶೂಟ್​ ಮಾಡಿದ ಯುವತಿ; ಹಾವು ಕಾಣ್ತಿದೆ ಎಂದ ನೆಟ್ಟಿಗರು

Wedding photo shoot

ಬೆಂಗಳೂರು: ವೆಡ್ಡಿಂಗ್ ಫೋಟೋಶೂಟ್​ನ (PhotoShoot) ಸೃಜನಶೀಲತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಬ್ಬರಿಗಿಂತ ಒಬ್ಬರು ಮಿಗಿಲು ಎಂಬಂತೆ ತಮ್ಮ ಮದುವೆಯ ಫೋಟೊಗ್ರಫಿಗಳನ್ನು ಮಾಡಿಸಿ ಎಂಜಾಯ್​ ಮಾಡುತ್ತಾರೆ. ಮದುವೆ ಅನ್ನೊದು ಬದುಕಿನ ಅತ್ಯಂತ ಸ್ಮರಣೀಯ ಘಟ್ಟವಾಗಿರುವ ಕಾರಣ ಫೋಟೋ ಶೂಟ್​ಗೆ ಸಿಕ್ಕಾಪಟ್ಟೆ ಖರ್ಚು ಮಾಡುತ್ತಾರೆ. ಕಾಂಪಿಟೀಶನ್​ ಜಾಸ್ತಿ ಇರುವ ಕಾರಣ ಫೋಟೋಗ್ರಾಫರ್​ಗಳು (photographer) ಕೂಡ ಭಿನ್ನ ಭಿನ್ನ ಆ್ಯಂಗಲ್​ನ ಫೋಟೋಗಳನ್ನು ತೆಗೆದು ತಮ್ಮ ಕ್ಲೈಂಟ್​ಗಳನ್ನು ಖುಷಿ ಪಡಿಸುತ್ತಾರೆ. ಇದೇ ರೀತಿ ವಿಭಿನ್ನವಾಗಿ ಫೋಟೋ ತೆಗೆಸಿಕೊಳ್ಳಲು ಹೋದ ಯುವತಿಯೊಬ್ಬಳನ್ನು ನೆಟ್ಟಿಗರು ಟ್ರೋಲ್ ಮಾಡಿದ (Viral News) ಪ್ರಸಂಗವೊಂದು ನಡೆದಿದೆ.

ಈ ಫೋಟೋಶೂಟ್​ ಅನ್ನು ಪರಿಸರದ ನಡುವೆ ಮಾಡಲಾಗಿದೆ. ಚಂದದ ಯುವತಿ ಸೀರೆಯಟ್ಟುಕೊಂಡು ಬಂದು ಪೋಸ್ ಕೊಡುತ್ತಾಳೆ. ಕೊಡುವ ವೇಳೆ ಆಕೆ ತನ್ನ ಸೀರೆಯನ್ನು ಸಾಧ್ಯವಾದಷ್ಟು ಮೇಲಕ್ಕೆತ್ತುತ್ತಾಳೆ. ಈ ಸಂದರ್ಭ ನೆಟ್ಟಿಗರ ಪಾಲಿಗೆ ಕಣ್ಣಿಗೆ ಹಬ್ಬವಾಗಿತ್ತು. ಸಂದರ್ಭಕ್ಕೆ ತಕ್ಕ ಹಾಗೆ ತಮ್ಮ ಮನಸ್ಸಿನ ಭಾವಕ್ಕೆ ಪೂರಕವಾಗಿ ಬಗೆಬಗೆಯ ಕಾಮೆಂಟ್​ಗಳನ್ನು ಮಾಡಿದ್ದಾರೆ. ಅದರಲ್ಲೂ ಒಬ್ಬರು ಆಕೆ ಸೀರೆ ಎತ್ತಿರುವ ಉಮೇದು ನೋಡಿ ಹಾವು ಕಾಣ್ತಿದೆಯಲ್ಲಮ್ಮಾ ಎಂದು ಬರೆದುಕೊಂಡಿದ್ದಾರೆ.

ಅಂದ ಹಾಗೆ ಆ ವ್ಯಕ್ತಿ ಒಳಗೆ ಹಾವು ಕಾಣ್ತಿದೆ ಬರೆಯುವುದಕ್ಕೆ ಕಾರಣವಿದೆ. ಆ ಯುವತಿ ಸೀರೆ ಎತ್ತಿ ಫೋಟೋ ಶೂಟ್ ಮಾಡಿದ್ದು ಮತ್ಯಾವುದಕ್ಕೂ ಅಲ್ಲ. ತಮ್ಮ ಕಾಲಿನಲ್ಲಿ ತೊಡೆಯ ತನಕ ಹಾಕಿಕೊಂಡಿರುವ ಟ್ಯಾಟೂ ಪ್ರದರ್ಶಿಸಲು. ಯುವತಿ ತನ್ನ ಎಡಗಾಲಿನಲ್ಲಿ ಹೆಡೆ ಬಿಚ್ಚಿ ನಿಂತಿರುವ ಸರ್ಪದ ಟ್ಯಾಟೂ ಹಾಕಿಕೊಂಡಿದ್ದಾಳೆ. ಹೀಗಾಗಿ ಅದನ್ನು ನೋಡಿದ ಕೆಲವರು ಹಾವು ಕಾಣ್ತಿದೆ ಎಂದು ಬರೆದುಕೊಂಡಿದ್ದಾರೆ.

ಗೌರಮ್ಮ ಏನೂ ಅಲ್ಲ

ಸೀರೆ ಉಟ್ಟ ತಕ್ಷಣ ಅವರು ಗೌರಮ್ಮನಂತಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ವಿಷಯ ಮೊದಲಿನಂತಿಲ್ಲ. ಸೀರೆ ಎಂಬುದು ಈಗ ಟ್ರೆಂಡ್​ ಸೆಟ್ ಮಾಡಬಲ್ಲ ಉಡುಪು. ಹೀಗಾಗಿ ಮಾಡ್​ ಆಗಿರುವ ಯುವತಿ ಬೇಕೆಂತಲೇ ಸೀರೆ ಉಟ್ಟುಕೊಂಡು ಫೋಟೋ ಶೂಟ್ ಮಾಡಿಕೊಂಡಿದ್ದಾಳೆ. ಜತೆಗೊಂದು ಸುಂದರ ಸನ್​ ಗ್ಲಾಸ್​ ಕೂಡ ಧರಿಸಿಕೊಂಡಿದ್ದಾಳೆ. ಹೀಗಾಗಿ ಸಿಕ್ಕಾಪಟ್ಟೆ ಮಾಡರ್ನ್​ ಆಗಿರುವ ಯವತಿ ಸೀರೆ ಉಟ್ಟುಕೊಂಡು ಫೋಟೋ ಶೂಟ್​ ಮಾಡಿಕೊಂಡಿದ್ದಾಳೆ ಎಂದು ಅಂದಾಜಿಸಬಹುದು.

ಕಾಮೆಂಟ್​ ಬರೆಯುವ ಅಬ್ಬರದಲ್ಲಿ ವ್ಯಕ್ತಿಯೊಬ್ಬರು, ಸೀರೆ ಎತ್ತಿ ಎಲ್ಲ ತೋರಿಸಿದ್ಯಲ್ಲ ಎಂದು ಬರೆದುಕೊಂಡಿದ್ದಾರೆ. ಮನಸ್ಸಲ್ಲೇ ಮಂಡಿಗೆ ತಿನ್ನುತ್ತಾ ಆ ವ್ಯಕ್ತಿ ಬುದ್ಧಿ ಮಾತು ಹೇಳಿದಂಗಿದೆ. ಇನ್ನೊಬ್ಬರು, ನೀವು ತೋರಿಸಲು ಹೊರಟಿದ್ದೇನು ಹಾಗೂ ಬಚ್ಚಿಡಲು ಹೊರಟಿದ್ದೇನು ಎಂಬುದನ್ನು ತಿಳಿಸಿ ಎಂಬುದಾಗಿಯೂ ಹಂಬಲ್​ ರಿಕ್ವೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ : Viral News : ತನ್ನ ಹಾಸಿಗೆಯಲ್ಲಿ ಒಂದಿಷ್ಟು ಜಾಗ ಹಂಚಿಕೊಂಡು ಈ ಮಹಿಳೆ ಸಂಪಾದಿಸಿದೆಷ್ಟು ನೋಡಿ!

ಇನ್ನೊಬ್ಬರು ಟ್ಯಾಟೂ ಇನ್ನೂ ಮೇಲಿನ ತನಕ ಇರಬೇಕು ಅನಿಸುತ್ತದೆ. ಸೀರೆ ಇನ್ನೂ ಮೇಲಕ್ಕೆತ್ತಿ ಪೂರ್ತಿ ಟ್ಯಾಟೂ ತೋರಿಸಿ ಎಂದು ಮನವಿ ಮಾಡಿದ್ದಾರೆ. ಇನ್ನೊಬ್ಬರು ಈ ರೀತಿ ಎಲ್ಲ ಸೀರೆ ಎತ್ತಿ ತೋರಿಸೋದು ಕಲ್ಚರ್ ಅಲ್ಲ ಕಿವಿ ಮಾತು ಹೇಳಿದ್ದಾರೆ.

ಫಿಟ್​ ಆಗಲು ಸಲಹೆ

ಸೀರೆಯುಟ್ಟುಕೊಂಡು ಫೋಟೋ ಶೂಟ್ ಮಾಡಿರುವ ಯುವತಿ ಬಗ್ಗೆ ನೆಟ್ಟಿಗರು ಮಾಡಿರುವ ಬಗೆಬಗೆಯ ಕಾಮೆಂಟ್​​ಗಳ ನಡುವೆ ಗಮನ ಸೆಳೆದಿದ್ದು ಫಿಟ್ನೆಸ್ ಪಾಠ. ನಿನ್ನ ಕಾಲುಗಳು ಸ್ವಲ್ಪ ದಪ್ಪ ಕಾಣಿಸುತ್ತಿದವೆ. ದಯವಿಟ್ಟು ಸ್ವಲ್ಪ ವರ್ಕ್​ಔಟ್​ ಮಾಡಿ ತೆಳ್ಳಗಾಗಬೇಕು ಎಂದು ಸಲಹೆ ಕೊಟ್ಟಿದ್ದಾರೆ. ಇಷ್ಟೆಲ್ಲ ಫೋಟೋ ಶೂಟ್ ಮಾಡಿರುವ ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಅವರನ್ನು ವೆರೈಟಿ ವೆರೈಟಿಯಾಗಿ ಟ್ರೋಲ್ ಮಾಡಿರುವ ಪೇಜ್​ಗಳು ಲಭ್ಯವಿದೆ.

ಜಾರಿ ಬಿತ್ತು ಮೂಗುತಿ

ಯುವತಿಯ ಕಾಲು ಮತ್ತು ಟ್ಯಾಟೂ ಗಮನಿಸಿದ್ದ ಟ್ರೋಲಿಗರು ಕೊನೆಗೊಂದು ವಿಷಯ ಗಮನಿಸಿಲ್ಲ. ಅದರ ಬಗ್ಗೆ ಹೆಚ್ಚಿನ ಕಾಮೆಂಟ್​ಗಳೂ ಇಲ್ಲ. ಸೀರೆ ಎತ್ತಿ ಫೋಸ್​ ಕೊಡುವ ಭರದಲ್ಲಿ ಯುವತಿಯ ಆರ್ಟಿಫಿಶಿಯಲ್​ ಮೂಗುತಿ ಜಾರಿ ಬೀಳುತ್ತದೆ. ಕೊನೆಯಲ್ಲಿ ಆಕೆ ಅದನ್ನು ಎತ್ತಿಕೊಂಡು ಮೂಗಿಗೆ ಸಿಕ್ಕಿಸಿಕೊಳ್ಳುತ್ತಾರೆ. ಅಲ್ಲಿಗೆ ವಿಡಿಯೊ ಮುಕ್ತಾಯ.

Exit mobile version