Site icon Vistara News

Wedding Season: ವೆಡ್ಡಿಂಗ್‌ ಆಭರಣಗಳಿಗೆ ಹೆಚ್ಚಿದ ಬೇಡಿಕೆ

Wedding Season

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮದುವೆ ಸೀಸನ್‌ ಆರಂಭವಾಗುತ್ತಿದ್ದಂತೆ ನಾನಾ ವಿನ್ಯಾಸದ ವೆಡ್ಡಿಂಗ್‌ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ. ಅವುಗಳಲ್ಲಿಅತಿ ಹೆಚ್ಚಾಗಿ ಮದುಮಗಳು ಧರಿಸುವ ಟ್ರೆಡಿಷನಲ್ ಜುಮಕಿ, ಬಿಗ್‌ ಚೋಕರ್‌, ನೆಕ್‌ಲೆಸ್‌, ಡಿಸೈನರ್‌ ಮೂಗಿನ ನತ್ತು, ಕಡಗ ಹಾಗೂ ಬಳೆಗಳ ಸೆಟ್‌, ಹಾರ, ಬಾಜುಬಂದ್‌, ಡಾಬು ಸೇರಿದಂತೆ ಬ್ರೈಡಲ್‌ ಸೆಟ್‌ಗೆ ಪ್ರಾಮುಖ್ಯತೆ ಮೊದಲಿಗಿಂತ ಹೆಚ್ಚಾಗಿದೆ. ಇನ್ನು ಮದುಮಗನ ಚಾಯ್ಸ್‌ನಲ್ಲಿ ಎಂದಿನಂತೆ ಹೊಸ ವಿನ್ಯಾಸದ ಕತ್ತಿನ ಚೈನ್‌, ಬ್ರೆಸ್‌ಲೇಟ್‌ ಹಾಗೂ ಉಂಗುರಗಳು ಸೇರಿವೆ.

ಟ್ರೆಡಿಷನಲ್‌ ಜುಮಕಿ

ಸಿನಿಮಾದ ಮೂಲಕ ಬೆಳ್ಳಿಮೋಡ ಜುಮಕಿಗಳೆಂದೇ ಖ್ಯಾತಿ ಗಳಿಸಿದ್ದ ಮುತ್ತಿನ ಜುಮಕಿಗಳು ಮದುಮಗಳ ಕಿವಿಯನ್ನು ಅಲಂಕರಿಸುತ್ತಿವೆ. ಹರಳಿನಿಂದ ಕೂಡಿದಂತಹ ಬಿಗ್‌ ಜುಮಕಿ ಹಾಗೂ ಕಿವಿಯೋಲೆ ಹಾಗೂ ಹ್ಯಾಂಗಿಂಗ್ಸ್‌ ಜತೆಗೆ ದಪ್ಪನೆಯ ಕೊಂಡಿಯುಕ್ತ ಮಾಟಿ ಟ್ರೆಂಡ್‌ಗೆ ಮರಳಿದೆ.

ಬಿಗ್‌ ಚೋಕರ್‌/ನೆಕ್‌ಲೆಸ್‌ ಹಾಗೂ ಹಾರ

ಇಡೀ ಕುತ್ತಿಗೆಯನ್ನು ಆವರಿಸಿಕೊಳ್ಳುವ ಅಗಲವಾದ ಚೋಕರ್‌ ಅಥವಾ ಬ್ರೈಡಲ್‌ ನೆಕ್‌ಲೆಸ್‌ ಸೆಟ್‌ನ ಪ್ರಮುಖ ಆಭರಣಗಳ ಲಿಸ್ಟ್‌ನಲ್ಲಿ ಸೇರಿದೆ. ಸೆಮಿ ಹಾಗೂ ಪ್ರಿಶಿಯಸ್‌ ಸ್ಟೋನ್ಸ್‌ ಇರುವಂತವು ಟ್ರೆಂಡ್‌ನಲ್ಲಿ ಇಲ್ಲವಾದರೂ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇನ್ನು ಆ್ಯಂಟಿಕ್‌ ವಿನ್ಯಾಸದವು ಎಂದಿನಂತೆ ಮತ್ತಷ್ಟು ವಿನ್ಯಾಸದಲ್ಲಿ ಬಂದಿವೆ. ಇವಕ್ಕೆ ಹೊಂದುವಂತಹ ಟೂ ಇನ್‌ ವನ್‌ ಲಾಂಗ್‌ ಹಾರಗಳು ಬ್ರೈಡಲ್‌ ಸೆಟ್‌ನಲ್ಲಿ ಸೇರಿದ್ದು, ಗ್ರಾಂಡ್‌ ಲುಕ್‌ ನೀಡುವ ಇವಕ್ಕೆ ಆದ್ಯತೆ ಹೆಚ್ಚಾಗಿದೆ. “ಇನ್ನು ದೊಡ್ಡ ಲಕ್ಷ್ಮೀ ಪೆಡೆಂಟ್‌ನ ಹಾರ, ಹವಳದ ಹಾರ, ಆ್ಯಂಟಿಕ್‌ ಹಾರಗಳು ಟ್ರೆಂಡ್‌ನಲ್ಲಿವೆ. ಇದರೊಂದಿಗೆ ಇದೀಗ ಮಲ್ಟಿ ಲೆಯರ್‌ ಹಾರಗಳು ಪ್ರಚಲಿತದಲ್ಲಿವೆ” ಎನ್ನುತ್ತಾರೆ ಮಾಡೆಲ್‌ ರಾಣಿ.

ಮ್ಯಾಚಿಂಗ್‌ ಹರಳುಗಳ ಮೂಗಿನ ನತ್ತು

ಮದುವೆಯಲ್ಲಿ ಮದುಮಗಳ ರೇಷ್ಮೆಯ ಸೀರೆಯ ಮ್ಯಾಚಿಂಗ್‌ಗೆ ತಕ್ಕಂತೆ ಧರಿಸಬಹುದಾದ ಮೂಗಿನ ಅಂದ ಹೆಚ್ಚಿಸುವ ಡಿಸೈನರ್‌ ಮೂಗಿನ ನತ್ತುಗಳಿಗೆ ಡಿಮ್ಯಾಂಡ್‌ ಹೆಚ್ಚಾಗಿದೆ. ಡೈಮಂಡ್‌, ಸ್ವರೊಸ್ಕಿ, ರೂಬಿ, ಎಮರಾಲ್ಡ್‌ನ ನೋಸ್‌ ಪಿನ್‌ಗಳ ಮಾರಾಟ ಹೆಚ್ಚಾಗಿದೆ ಎನ್ನುತ್ತಾರೆ ಜುವೆಲ್‌ ಶಾಪ್‌ವೊಂದರ ಮ್ಯಾನೇಜರ್‌.

ಕಡಗ ಹಾಗೂ ಬಳೆಗಳು

ಕಡಗ ಹಾಗೂ ಬಳೆಗಳ ಸೆಟ್‌ಗೆ ಮೊದಲಿನಿಂದಲೂ ಗ್ರಾಹಕರು ಹೆಚ್ಚು. ಇದೀಗ ಗಾಜಿನ ಬಳೆಗಳ ಮಧ್ಯೆ ಧರಿಸಬಹುದಾದ ಚಿನ್ನದ ತೆಳುವಾದ ಬಳೆಗಳ ಸೆಟ್ ಟ್ರೆಂಡಿಯಾಗಿವೆ. ಹರಳುಗಳು, ಕ್ರಿಸ್ಟಲ್‌ಗಳು, ಮುತ್ತುಗಳಿಂದ ತಯಾರಿಸಿದಂತಹ ಕಡಗವು ಹೊಸ ವಿನ್ಯಾಸದಲ್ಲಿ ದೊರೆಯುತ್ತಿವೆ.

ಡಾಬು ಮತ್ತು ಬಾಜುಬಂದ್‌

ಟೂ ಇನ್‌ ವನ್‌ ಅಥವಾ ಮಲ್ಟಿ ಪರ್ಪಸ್‌ ಹಾರ ಅಂದರೆ, ಹಾರದಂತೆಯೂ ಧರಿಸಬಹುದು ಇಲ್ಲವೇ ಡಾಬುವಿನಂತೆಯೂ ಬಳಸಬಹುದು. ಈ ಬಗೆಯ ಆಭರಣಗಳು ಜುವೆಲರಿ ಪ್ರಿಯರನ್ನು ಸೆಳೆದಿವೆ. ಲೈಟ್‌ವೇಟ್‌ ಡಾಬು ಎಲ್ಲರನ್ನು ಸಮ್ಮೊಹನಗೊಳಿಸಿವೆ. ಇದರೊಂದಿಗೆ ನೋಡಲು ಚೋಕರ್‌ನಂತೆ ಕಾಣುವ ಬಾಜುಬಂದ್‌ ಕೂಡ ಹೆಣ್ಣುಮಕ್ಕಳನ್ನು ಆಕರ್ಷಿಸಿವೆ ಎನ್ನುತ್ತಾರೆ ಆಭರಣ ಅಂಗಡಿಯ ಮಾರಾಟಗಾರರು.

ಮದುಮಗನ ಆಭರಣಗಳು

ಮದುಮಗನ ಆಭರಣಗಳಲ್ಲಿ ಹೆಚ್ಚೆನೂ ಬದಲಾವಣೆಗಳಾಗಿಲ್ಲ. ಕೈಗಳಿಗೆ ಧರಿಸುವ ಬ್ರೆಸ್‌ಲೇಟ್‌ಗಳು ಹಲವು ವಿನ್ಯಾಸದಲ್ಲಿ ದೊರೆಯುತ್ತಿವೆ. ಕುತ್ತಿಗೆಗೆ ಧರಿಸುವ ಚೈನ್‌ ಜೊತೆಗೆ ಗಂಡುಭೇರುಂಢ, ಹುಲಿ ಉಗುರಿನ ಮಾದರಿ, ದೇವರ ಮಿನಿಯೇಚರ್‌, ಹೆಸರಿನ ಅಕ್ಷರಗಳ ಪೆಡೆಂಟ್‌ ಬಂದಿವೆ. “ ಮದುವೆಯಾಗುತ್ತಿರುವ ಯುವಕರು ಅವರವರ ವ್ಯಕ್ತಿತ್ವಕ್ಕೆ ಹೊಂದುವಂತೆ ಖರೀದಿಸುವುದು ಸಾಮಾನ್ಯವಾಗಿದೆ”ಎನ್ನುತ್ತಾರೆ ನಟ ಅರ್ನಾವ್‌ ವಿನ್ಯಾಸ್‌.

ವೆಡ್ಡಿಂಗ್‌ ಸೆಟ್‌ ಖರೀದಿಸುವವರ ಗಮನದಲ್ಲಿರಲಿ

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Jewel Fashion: ಫಂಕಿ ಲುಕ್‌ಗಾಗಿ ಧರಿಸಿ ಟ್ರೆಂಡಿ ಜೆಮೆಟ್ರಿಕ್‌ ಜುವೆಲರಿ

Exit mobile version