ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುಮಗಳ ಸೌಂದರ್ಯ ಹೆಚ್ಚಿಸುವ ವೆರೈಟಿ ಬ್ಯೂಟಿ ಪ್ಯಾಕೇಜ್‌ಗಳು ಈ ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.
ತಿಂಗಳಾನುಗಟ್ಟಲೇ ಮದುಮಗಳಿಗೆ ಸರ್ವಿಸ್ ನೀಡುವ ನಾನಾ ಬ್ಯೂಟಿ ಪ್ಯಾಕೇಜ್‌ಗಳು ಇದೀಗ ವೆಡ್ಡಿಂಗ್ ಸೀಸನ್‌ನ ಹೊಸ ಟ್ರೆಂಡ್‌ನಲ್ಲಿ ಸೇರಿದ್ದು, ಪರಿಣಾಮ, ಇದೀಗ ಬ್ಯೂಟಿ ಪ್ಯಾಕೇಜನ್ನು ಮದುವೆಯ ಒಂದು ಭಾಗವಾಗಿ ಪರಿಗಣಿಸಲಾಗುತ್ತಿದೆ.
ಮದುವೆಯ ಭಾಗವಾದ ಬ್ಯೂಟಿ ಪ್ಯಾಕೇಜ್
ಈ ಹಿಂದೆ ಕೇವಲ ಮದುವೆಯ ದಿನ ಹಾಗೂ ಸಮಾರಂಭಗಳಿಗೆ ಮಾತ್ರ ಬ್ಯೂಟಿ ಪಾರ್ಲರ್‌ಗೆ ಸಂಪರ್ಕಿಸುವ ಕಾಲವಿತ್ತು. ಆದರೆ, ಇದೀಗ ಈ ಕಾನ್ಸೆಪ್ಟ್ ಸಂಪೂರ್ಣ ಬದಲಾಗಿದೆ. ಮದುಮಗಳ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ನಿಶ್ಚಿತಾರ್ಥದಿಂದ ಹಿಡಿದು ಮದುವೆಯವರೆಗೂ ನಾನಾ ಬಗೆಯ ಬ್ಯೂಟಿ ಪ್ಯಾಕೇಜ್‌ಗಳು ಬಂದಿವೆ ಎನ್ನುತ್ತಾರೆ ಇಂಟರ್‌ನ್ಯಾಷನಲ್ ಹೇರ್ ಮತ್ತು ಬ್ಯೂಟಿ ಎಕ್ಸ್ಪರ್ಟ್ ಮಂಗಲಾ ಬಾನಸುಧೆ.
ಮದುಮಗಳ ಸ್ಕಿನ್‌ಟೋನ್‌ಗೆ ತಕ್ಕಂತೆ ಪ್ಯಾಕೇಜ್
ಅವರ ಪ್ರಕಾರ, ಮದುಮಗಳ ಸ್ಕಿನ್‌ಟೋನ್‌ಗೆ ತಕ್ಕಂತೆ ಬ್ಯೂಟಿ ಪ್ಯಾಕೇಜ್ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, ಕೊಂಚ ಡಾರ್ಕ್ ಸ್ಕಿನ್‌ನವರಿಗೆ ಅಗತ್ಯವಿರುವ ಫೇಶಿಯಲ್ಸ್, ಎಕ್ಸ್‌ಟ್ರಾ ಗ್ಲೋ ನೀಡುವಂತಹ ಆರೈಕೆಗಳನ್ನು ಸೇರಿಸಲಾಗುತ್ತದೆ. ಇನ್ನು ಮದುವೆಯಲ್ಲಿ ಹೆಚ್‌ಡಿ ಮೇಕಪ್ ಮಾಡಿಸುವವರಿಗೆ ಮೂರು ತಿಂಗಳು ಮೊದಲಿನಿಂದಲೇ ನಾನಾ ಬಗೆಯ ಫೇಶಿಯಲ್ಸ್, ಡಾರ್ಕ್ಸ್ಪಾಟ್ಸ್ ಹೋಗಲಾಡಿಸುವಂತಹ ಫೇಶಿಯಲ್ಸ್, ಫೇಸ್ ಪ್ಯಾಕ್ಸ್ ಹೊಂದಿರುವಂತಹ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಎನ್ನುತ್ತಾರೆ.
ಬ್ರೈಡೆಲ್ ಪ್ಯಾಕೇಜ್‌ನಲ್ಲಿ ಏನೇನಿರುತ್ತದೆ?
ಇನ್ನು ಸ್ಕಿನ್ ಕೇರ್, ಹೇರ್ ಕೇರ್, ಪೆಡಿಕ್ಯೂರ್, ಮೆನಿಕ್ಯೂರ್, ನೇಲ್ ಕೇರ್, ಮೇಕಪ್, ಸ್ಯಾರಿ ವೇರಿಂಗ್ ಎಲ್ಲವೂ ಈ ಬ್ರೈಡಲ್ ಪ್ಯಾಕೇಜ್‌ನಲ್ಲಿ ದೊರೆಯುತ್ತದೆ. ಬೆಲೆ ಆಯಾ ಬ್ಯೂಟಿ ಪಾರ್ಲರ್ ಹಾಗೂ ಕಸ್ಟಮೈಸ್ಡ್ ಬ್ಯೂಟಿ ಪ್ಯಾಕೇಜ್‌ಗಳ ಆಧಾರದ ಮೇಲೆ ಅವಲಂಭಿತವಾಗಿರುತ್ತದೆ. ಸ್ಟೈಲಿಶ್, ಮಾಡೆಲ್ ಪೂಜಾ ಹೇಳುವಂತೆ, ವೆಡ್ಡಿಂಗ್ ದಿನ ಗೊತ್ತಾದ ತಕ್ಷಣ ಬ್ರೈಡೆಲ್ ಪ್ಯಾಕೇಜ್ ಪ್ಲಾನ್ ಮಾಡುವುದು ಉತ್ತಮ. ಇದಕ್ಕಾಗಿ ಮೊದಲು ಉತ್ತಮ ಪಾರ್ಲರ್ ಆಯ್ಕೆ ಮಾಡಬೇಕಾಗುತ್ತದೆ. ಅಲ್ಲಿನ ಸೌಂದರ್ಯ ತಜ್ಞರೊಂದಿಗೆ ಮದುವೆಗೂ ಮುನ್ನ ಸಿಗುವ ದಿನಗಳು, ಮದುವೆಯ ದಿನದಂದು ಬೇಕಾಗುವ ಮೇಕಪ್ ಎಲ್ಲದರ ಬಗ್ಗೆ ವಿಚಾರ ವಿನಿಮಯ ಮಾಡಬೇಕಾಗುತ್ತದೆ. ಅಲ್ಲದೇ, ಮದುಮಗಳ ಸ್ಕಿನ್‌ಗೆ ಹೊಂದವಂತಹ ಫೇಶಿಯಲ್ಸ್, ಬ್ಲೀಚಿಂಗ್, ಹೇರ್‌ಕೇರ್ ಆರೈಕೆಯ ಬಗ್ಗೆಯೂ ಮಾಹಿತಿ ಪಡೆದುಕೊಳ್ಳುವುದು ಅಗತ್ಯವಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಉತ್ತಮ ರೀತಿಯ ಪ್ರಾಡೆಕ್ಟ್ ಬಳಸುತ್ತಾರೆಯೋ ಇಲ್ಲವೋ ಎಂಬುದನ್ನು ಅರಿಯುವುದು ಎಲ್ಲದಕ್ಕಿಂತ ಮುಖ್ಯ. ನಂತರ ಇವೆಲ್ಲಾ ಓಕೆಯಾದಲ್ಲಿ ಪ್ಯಾಕೇಜ್‌ಗೆ ಸೈ ಎನ್ನಬಹುದು ಎಂದು ಸಲಹೆ ನೀಡುತ್ತಾರೆ.
ಬ್ರೈಡಲ್ ಪ್ಯಾಕೇಜ್ ಪಡೆಯುವ ಮುನ್ನ
ಬ್ರೈಡಲ್ ಪ್ಯಾಕೇಜ್ ಪಡೆಯುವ ಮುನ್ನ ಒಂದಿಷ್ಟು ಅಂಶಗಳನ್ನು ತಿಳಿದುಕೊಳ್ಳುವುದು ಉತ್ತಮ.
- ಗುಣಮಟ್ಟದ ಸೇವೆ ನೀಡುವ ಬ್ಯೂಟಿಪಾರ್ಲರ್ ಆಯ್ಕೆ ಮಾಡಿ.
- ಬ್ಯೂಟಿಕೇರ್ ಕೌನ್ಸೆಲಿಂಗ್ ಸೌಲಭ್ಯ ಪಡೆದುಕೊಳ್ಳಿ.
- ಆರೈಕೆಯ ಆಧಾರದ ಮೇಲೆ ದರ ನಿಗದಿಯಾಗಿರುತ್ತದೆ.
- ಯಾವುದೇ ಆರೈಕೆಯನ್ನು ಮದುವೆಯ ಹಿಂದಿನ ದಿನ ಪ್ರಯೋಗಿಸಬಾರದು.
- ಸ್ಕಿನ್ ಅಲರ್ಜಿಯಾದಲ್ಲಿ ತೊರೆಯುವುದು ಉತ್ತಮ.
ಇದನ್ನೂ ಓದಿ| Wedding Season: ವೆಡ್ಡಿಂಗ್ ಆಭರಣಗಳಿಗೆ ಹೆಚ್ಚಿದ ಬೇಡಿಕೆ