Site icon Vistara News

Wedding trend | ವೆಡ್ಡಿಂಗ್‌ ಗ್ರ್ಯಾಂಡ್‌ ಮೆಹಂದಿ ಚಿತ್ತಾರಕ್ಕೆ 5 ಐಡಿಯಾ

Wedding trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ವೆಡ್ಡಿಂಗ್‌ನಲ್ಲಿ ಗ್ರ್ಯಾಂಡ್‌ ಲುಕ್‌ ನೀಡುವ ಮೆಹಂದಿ ಇಂದು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ರೂಪುಗೊಂಡಿದೆ. ಇದಕ್ಕೆ ಪೂರಕ ಎಂಬಂತೆ ಮೆಹಂದಿ ವಿನ್ಯಾಸಕಾರರೂ ಹೊಸ ಹೊಸ ವಿನ್ಯಾಸಗಳನ್ನು ಹುಟ್ಟು ಹಾಕುತ್ತಿದ್ದಾರೆ.

“ಇಂದು ಮದುಮಗಳು ಹಾಗೂ ಮದುಮಗನಿಗೆ ಮೆಹಂದಿ ಹಚ್ಚದಿರುವ ಮದುವೆಗಳು ಈಗ ಕಾಣ ಸಿಗುವುದೇ ಇಲ್ಲ. ವೆಡ್ಡಿಂಗ್‌ನಲ್ಲಿ ಮೆಹಂದಿ ಹಚ್ಚುವ ಶಾಸ್ತ್ರ ಇದೀಗ ಎಲ್ಲಾ ವರ್ಗದ ಬಾಂಧವರಲ್ಲೂ ಸಾಮಾನ್ಯವಾಗಿದೆ. ಮದುವೆಯಲ್ಲಿ ಯಾವತ್ತಿಗೂ ಗ್ರ್ಯಾಂಡ್‌ ಡಿಸೈನ್‌ಗೆ ಮಾನ್ಯತೆ. ಮೊಣಕೈ-ಮೊಣಕಾಲಿನವರೆಗೂ ಚಿತ್ತಾರ ಮೂಡಿಸುವ ಮೆಹಂದಿ ಡಿಸೈನ್‌ಗಳು ಪ್ರಚಲಿತದಲ್ಲಿವೆ” ಎನ್ನುತ್ತಾರೆ ಮೆಹಂದಿ ವಿನ್ಯಾಸಕಿ ರೂಪಾ. ವೆಡ್ಡಿಂಗ್‌ನಲ್ಲಿ ಮೆಹಂದಿ ವಿನ್ಯಾಸದ ಪ್ಲಾನಿಂಗ್‌ಗೆ ೫ ಐಡಿಯಾಗಳನ್ನು ಅವರಿಲ್ಲಿ ನೀಡಿದ್ದಾರೆ.

೧. ಮೊದಲು ಪ್ಲಾನ್‌ ಮಾಡಿ

ಮದುವೆಗೆ ಮುನ್ನ ನಡೆಯುವ ಮೆಹಂದಿ ಶಾಸ್ತ್ರದ ದಿನಾಂಕವನ್ನು ಮೊದಲೇ ನಿಗದಿಯಾದ ನಂತರ ಪ್ಲಾನ್‌ ಮಾಡಿ. ಗಡಿಬಿಡಿ ಮಾಡಿಕೊಳ್ಳಬೇಡಿ. ಬುಕ್‌ಲೆಟ್‌ ತರಿಸಿ, ಮದುಮಗ-ಮದುಮಗಳು ಮಾತನಾಡಿಕೊಂಡು ಯಾವ ಬಗೆಯ ಮೆಹಂದಿ ಚಿತ್ತಾರ ಬೇಕೆಂದು ಡಿಸೈಡ್‌ ಮಾಡಿ.

೨. ಮೆಹಂದಿ ಕಲಾವಿದರನ್ನು ಕರೆಸಿ

ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಮೆಹಂದಿ ಕಲಾವಿದರನ್ನು ಕರೆಸಿ ಮಾತುಕತೆ ನಡೆಸಿ. ನಿಮ್ಮ ಕುಟುಂಬದಲ್ಲೆ ಮೆಹಂದಿ ಕಲಾವಿದರಿದ್ದಲ್ಲಿ ಅವರ ಬಳಿ ತಮ್ಮ ಅಭಿರುಚಿಯ ಬಗ್ಗೆ ಮಾತನಾಡಿಕೊಳ್ಳಿ. ಮೊದಲೇ ನಿರ್ಧರಿಸಿ.

೩. ಟ್ರೆಂಡಿಯಾಗಿರುವುದನ್ನು ಚೂಸ್‌ ಮಾಡಿ

ಟ್ರೆಂಡಿಯಾಗಿರುವ ಮೆಹಂದಿ ವಿನ್ಯಾಸವನ್ನು ಸೆಲೆಕ್ಟ್‌ ಮಾಡಿಟ್ಟುಕೊಳ್ಳಿ. ಅದರಲ್ಲೂ ವೆಡ್ಡಿಂಗ್‌ ಮೆಹಂದಿ ವಿನ್ಯಾಸಗಳನ್ನೇ ಆಯ್ಕೆ ಮಾಡಿ.

೪. ಗುಣಮಟ್ಟದ ಮೆಹಂದಿ ಕೋನ್‌ ಬಳಕೆ

ಮದುವೆಯ ಸಮಯದಲ್ಲಿ ಆದಷ್ಟೂ ಗುಣಮಟ್ಟದ ಮೆಹಂದಿ ಕೊನ್‌ ಬಳಸಲು ವಿನ್ಯಾಸಕರಿಗೆ ಹೇಳಿ. ಸ್ಕಿನ್‌ಗೆ ಅಲರ್ಜಿಯಾಗುವ ಕೋನ್‌ಗಳನ್ನು ಆವಾಯ್ಡ್‌ ಮಾಡಿ.

೫. ಮೆಹಂದಿ ಶಾಸ್ತ್ರದ ಉಡುಪುಗಳ ಆಯ್ಕೆ

ಮೆಹಂದಿ ಶಾಸ್ತ್ರದಂದು ಧರಿಸುವ ಉಡುಪಿನ ಆಯ್ಕೆ ಸರಿಯಾಗಿರಲಿ. ಯಾಕೆಂದರೆ ಸಾವಿರಾರುಗಟ್ಟಲೆ ಸುರಿದು ಧರಿಸುವ ಡಿಸೈನರ್‌ವೇರ್‌ ಮೆಹಂದಿ ತಾಗಿ ಕಲೆಯಾಗಬಹುದು. ಹಾಗಾಗಿ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಆದಷ್ಟೂ ಉಡುಪಿನ ಆಯ್ಕೆ ಮಾಡಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Wedding beauty trend | ಮದುವೆ ಸಂಭ್ರಮಕ್ಕಿರಲಿ ಜಡೆ ಬಿಲ್ಲೆ ಸಿಂಗಾರ

Exit mobile version