ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಶಾ ಕಿರಣ್ ಮಾಡೆಲ್ ಮಾತ್ರವಲ್ಲ, ಫ್ಯಾಷನಿಸ್ಟ್, ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್. ಎಲ್ಲದಕ್ಕಿಂತ ಹೆಚ್ಚಾಗಿ ಮಿಸೆಸ್ ಇಂಡಿಯಾ ಎಲಿಗೆಂಟ್ ೨೦೨೧ ರ ವಿಜೇತೆ. ಸದಾ ಒಂದಲ್ಲ ಒಂದು ರೀತಿಯಲ್ಲಿ ಬಿಜಿಯಾಗಿರುವ ಅವರು ಈ ಬಾರಿಯ ವೀಕೆಂಡ್ ಸ್ಟೈಲ್‌ನಲ್ಲಿ ತಮ್ಮ ಸಂಕ್ರಾಂತಿ ಫ್ಯಾಷನ್, ಸ್ಟೈಲ್ ಬಗ್ಗೆ ಮಾತನಾಡಿದ್ದಾರೆ.
ಸದಾ ಫ್ಯಾಷನೆಬಲ್ ಆಗಿರುವ ನೀವು ವಿಂಟರ್ ಸೀಸನ್‌ಗೆ ಯಾವ ಬಗೆಯ ಸಲಹೆ ನೀಡುತ್ತೀರಾ?
ವಿಂಟರ್ ಸೀಸನ್‌ನಲ್ಲಿ ಆದಷ್ಟೂ ಜಾಕೆಟ್ ಹಾಗೂ ಕೋಟ್‌ಗಳನ್ನು ಪ್ರಿಫರ್ ಮಾಡುವುದು ಸೂಕ್ತ. ಉಲ್ಲನ್‌ವೇರ್‌ಗಳು ದೇಹವನ್ನು ಬೆಚ್ಚಗಿಡುತ್ತವೆ. ಕಾಟನ್ ಉಡುಪುಗಳನ್ನು ಕೆಲಕಾಲ ದೂರವಿಡುವುದು ಉತ್ತಮ. ಲಾಂಗ್ ಕೋಟ್ಸ್, ಟೈಟ್ ಫಿಟ್ ಉಡುಗೆಗಳು, ಹ್ಯಾಟ್, ಗ್ಲೌವ್ಸ್‌ಗಳು ಧರಿಸಿದಲ್ಲಿ ಅವು ಮತ್ತಷ್ಟು ಫ್ಯಾಷೆನಬಲ್ ಆಗಿ ಕಾಣುವಂತೆ ಬಿಂಬಿಸುತ್ತವೆ.
ನಿಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ಹೇಳಿ?
ನಾನಂತೂ ನನ್ನ ಇಷ್ಟಕ್ಕೆ ತಕ್ಕಂತೆ ಉಡುಪುಗಳನ್ನು ಧರಿಸುತ್ತೇನೆ. ಅದೇ ನನ್ನ ಫ್ಯಾಷನ್. ಇನ್ನು ಟ್ರೆಂಡ್ ಹಾಗೂ ಕಂಫರ್ಟಬಲ್‌ಗೆ ತಕ್ಕಂತೆ ನನ್ನ ಫ್ಯಾಷನ್ ಸದಾ ಬದಲಾಗುತ್ತದೆ. ಅದಕ್ಕೆ ತಕ್ಕಂತೆ ನನ್ನ ಸ್ಟೈಲ್ ಕೂಡ ಪರಿವರ್ತನೆಗೊಳ್ಳುತ್ತದೆ. ಒಟ್ಟಿನಲ್ಲಿ, ಆಕರ್ಷಕ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ನನ್ನದು.
ಬೆಂಗಳೂರು ಮಾಡೆಲಿಂಗ್ ಇಂಡಸ್ಟ್ರಿ ಬಗ್ಗೆ ನಿಮ್ಮ ಅನಿಸಿಕೆ ಏನು?
ಬೆಂಗಳೂರು ಮಾಡೆಲಿಂಗ್ ಕ್ಷೇತ್ರದಲ್ಲಿ ಈಗಾಗಲೇ ಹೆಸರು ಮಾಡಿದೆ. ಕೋವಿಡ್ ನಂತರದ ದಿನಗಳಲ್ಲಿ ಆರಂಭದಲ್ಲಿ ನಿಧಾನಗತಿಯಲ್ಲಿ ಮತ್ತೊಮ್ಮೆ ಚೇತರಿಸಿಕೊಂಡು ಫಿನಿಕ್ಸ್‌ನಂತೆ ಎದ್ದು ನಿಂತಿದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಮುಂದುವರಿಯಲು ಬಯಸುವವರಿಗೆ ಸದಾವಕಾಶ ಮಾಡಿಕೊಡುತ್ತಿದೆ. ಆದರೆ, ಈ ಕ್ಷೇತ್ರ ಬರಸೆಳೆದಾಗ ಆ ಅವಕಾಶವನ್ನು ಮಾಡೆಲ್‌ಗಳು ಸದುಪಯೋಗಪಡಿಸಿಕೊಳ್ಳಬೇಕು.
ಸಂಕ್ರಾಂತಿ ಹಬ್ಬಕ್ಕೆ ಹೇಗೆ ಟ್ರೆಡಿಷನಲ್ ಫ್ಯಾಷನ್‌ಗೆ ಬದಲಾಗುತ್ತೀರಾ?
ಸಂಕ್ರಾಂತಿಗೆ ಸೀರೆ ಉಡುತ್ತೇನೆ. ಈ ಬಾರಿ ಎಂಬ್ರಾಯ್ಡರಿ ಸಿಲ್ಕ್ ಸೀರೆಗೆ ಬ್ಲಾಕ್ ಡೀಪ್ ಕಟ್ ಬ್ಲೌಸ್ ಧರಿಸುತ್ತಿದ್ದೇನೆ. ಮೂಗಿಗೆ ಮಹಾರಾಷ್ಟ್ರದವರು ಧರಿಸುವ ನತ್ ಹಾಗೂ ಕಮರ್‌ಬಾಂದ್ ಧರಸಿಲಿದ್ದೇನೆ. ಇವು ನನಗೆ ಸಾಂಪ್ರದಾಯಿಕ ಲುಕ್ ನೀಡಲಿದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Saree Fashion | ಪೊಂಗಲ್ ಸೆಲೆಬ್ರೇಷನ್‌ಗೆ ಟ್ರೆಂಡಿಯಾದ 3 ಶೈಲಿಯ ಸೀರೆಗಳು