ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಟೈಲಿಶ್ ಆಗಿರುವ ಮಾಡೆಲ್ ಡೀನಾ ಪಿಂಟೋ ಫುಲ್ ಟೈಮ್ ಫ್ಯಾಷನ್ ಇನ್‌ಫ್ಲೂಯೆನ್ಸರ್. ಫ್ಯಾಷನ್, ಬ್ಯೂಟಿ ಹಾಗೂ ಲೈಫ್‌ಸ್ಟೈಲ್ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಲ್ಲ ಒಂದು ಕೆಲಸದಲ್ಲಿ ಸಕ್ರಿಯರಾಗಿರುವ ಡೀನಾ ಯಂಗ್ ಫ್ಯಾಷನ್ ಐಕಾನ್ ಎಂದರೂ ಅತಿಶಯೋಕ್ತಿಯಾಗದು. ಈ ವಾರದ ವೀಕೆಂಡ್‌ಸ್ಟೈಲ್‌ನಲ್ಲಿ ತಮ್ಮ ಫ್ಯಾಷನ್, ಸ್ಟೈಲ್ ಬಗ್ಗೆ ವಿಸ್ತಾರದೊಂದಿಗೆ ಅವರು ಮಾತನಾಡಿದ್ದಾರೆ.
ವಿಸ್ತಾರ: ಸದಾ ಸ್ಟೈಲಿಶ್ ಆಗಿರುವ ನಿಮ್ಮ ಫ್ಯಾಷನ್ ಲಿಸ್ಟ್‌ನಲ್ಲಿ ಏನಿದೆ?
ಡೀನಾ: ನಮ್ಮ ಐಡೆಂಟಿಟಿಯನ್ನು ತಿಳಿಸಿಕೊಡುವುದೇ ಫ್ಯಾಷನ್. ಸ್ಟೇಟ್‌ಮೆಂಟ್ ಆಕ್ಸೆಸರೀಸ್, ಸ್ಟೈಲ್‌ಗೆ ಸಾಥ್ ನೀಡುವ ಲೇಟೇಸ್ಟ್ ಡಿಸೈನರ್‌ವೇರ್‌ಗಳು, ಬೋಲ್ಡ್ ಹಾಗೂ ಯೂನಿಕ್ ಆಗಿರುವಂಥವು ನನ್ನ ಫ್ಯಾಷನ್ ಲಿಸ್ಟ್‌ನಲ್ಲಿವೆ.
ವಿಸ್ತಾರ: ನಿಮ್ಮ ಸ್ಟೈಲ್‌ಗೆ ಸಾಥ್ ನೀಡುವ ಡ್ರೆಸ್‌ಗಳ ಬಗ್ಗೆ ತಿಳಿಸಿ.
ಡೀನಾ: ಪರ್ಸನಲೀ ಫಿಟ್ಟೆಡ್ ಉಡುಪುಗಳೆಂದರೆ ಇಷ್ಟ. ಇನ್ನು ನಾನು ಯಾವುದೇ ಎಫರ್ಟ್ ಹಾಕದೇ ಕ್ಲಾಸಿಯಾಗಿ ಕಾಣಿಸಬಲ್ಲೆ. ಇದು ನನ್ನ ಪ್ಲಸ್ ಪಾಯಿಂಟ್ ಎಂದರೂ ತಪ್ಪಾಗಲಾರದು. ಇನ್ನು ಥೀಮ್‌ಗೆ ತಕ್ಕಂತೆ ಡ್ರೆಸ್ಸಿಂಗ್ ಮಾಡುವುದು ನನ್ನ ಸ್ಟೈಲ್‌ಗೆ ಸಾಥ್ ನೀಡುತ್ತದೆ.
ವಿಸ್ತಾರ: ಬೆಸ್ಟ್ ಸ್ಟೈಲಿಂಗ್‌ಗೆ ೩ ಸಿಂಪಲ್ ಟಿಪ್ಸ್ ತಿಳಿಸಿ.
ಡೀನಾ: ಖಂಡಿತ. ಮೊದಲಿಗೆ ನಿಮ್ಮ ಮೂಡನ್ನು ಚಾರ್ಜ್ ಮಾಡುವಂತಹ ಔಟ್‌ಫಿಟ್ ಧರಿಸಿ. ಎರಡನೆಯದು ಆತ್ಮವಿಶ್ವಾಸದಿಂದ ಡ್ರೆಸ್‌ವೇರ್ ಮಾಡಿ. ಮೂರನೆಯದು ಹೊಸತಲ್ಲದಿದ್ದರೂ ಇರುವ ಉಡುಪುಗಳನ್ನೇ ರಿಸೈಕಲ್ ಮಾಡಿ. ಹೊಸದಾಗಿ ಕಾಣುವಂತೆ ಮಿಕ್ಸ್ ಮ್ಯಾಚ್ ಮಾಡಿ ಧರಿಸಿ.
ವಿಸ್ತಾರ: ಸೀಸನ್ ಫ್ಯಾಷನ್ ಬಗ್ಗೆ ವಿವರಿಸಿ.
ಡೀನಾ: ಇದೀಗ ೯೦ರ ದಶಕದ ಫ್ಯಾಷನ್ ಟ್ರೆಂಡಿಯಾಗಿದೆ. ಸಿಕ್ವೇನ್ಸ್, ಶೀರ್ ಫ್ಯಾಬ್ರಿಕ್, ಲೋ ರೈಸ್ ಡ್ರೆಸ್‌ಗಳು , ಲೇಸ್ ಡಿಟೇಲಿಂಗ್, ಫ್ರಿಂಝ್ ಫ್ಯಾಷನ್ ಟ್ರೆಂಡ್‌ಗಳು ಮರುಕಳಿಸಿವೆ. ಸ್ಕಿನ್ನಿ ಜೀನ್ಸ್ ಇದೀಗ ಸೈಡಿಗೆ ಸರಿದಿದೆ. ನಮ್ಮ ಲುಕ್ಸ್‌ಗೆ ತಕ್ಕಂತೆ ಇವನ್ನು ಮ್ಯಾಚ್ ಮಾಡಿದಾಗ ಕಂಟೆಂಪರರಿ ಫ್ಯಾಷನ್‌ಗೆ ಸೈ ಎನ್ನಬಹುದು.
ವಿಸ್ತಾರ: ಈ ವರ್ಷದ ನಿಮ್ಮ ಫ್ಯಾಷನ್ ರೆಸಲ್ಯೂಷನ್ ಏನು?
ಡೀನಾ: ಸದಾ ಅತ್ಯುತ್ತಮ ಔಟ್‌ಫಿಟ್‌ಗಳನ್ನು ಧರಿಸುವುದು. ಆಕರ್ಷಕ ರೆಡ್ ಲಿಪ್‌ಸ್ಟಿಕ್, ಹೀಲ್ಸ್ ಟ್ರೆಂಡಿ ಔಟ್‌ಫಿಟ್‌ಗೆ ಮ್ಯಾಚ್ ಮಾಡುವುದು. ಫ್ಯಾಷೆನಬಲ್ ಜೀವನವನ್ನು ಸೆಲೆಬ್ರೇಟ್ ಮಾಡುವುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನು ಓದಿ: Wedding Silk Saree Fashion : ಟ್ರೆಂಡಿಯಾಯ್ತು ಜಗಮಗಿಸುವ ವೆಡ್ಡಿಂಗ್ ರೇಷ್ಮೆ ಸೀರೆಗಳು