ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೇಕಪ್ ಕ್ಷೇತ್ರದಲ್ಲಿ ಒಂದಿಷ್ಟು ಸಾಧನೆ ಮಾಡುವ ನಿಟ್ಟಿನಲ್ಲಿ ಸಾಗುತ್ತಿರುವ ರಾಶಿ ಸೃಜನ್ ಮದುವೆಗೂ ಮುನ್ನ ನಟಿ ಹಾಗೂ ಮಾಡೆಲ್ ಆಗಿದ್ದರು. ಇದೀಗ ಮೇಕಪ್ ಎಕ್ಸ್ಪರ್ಟ್ ಹಾಗೂ ಎಜುಕೇಟರ್ ಆಗಿದ್ದಾರೆ. ಈ ಬಾರಿಯ ವೀಕೆಂಡ್ ಸ್ಟೈಲ್‌ನಲ್ಲಿ ಅವರು ವಿಸ್ತಾರದೊಂದಿಗೆ ಫ್ಯಾಷನ್ ಹಾಗೂ ಮೇಕಪ್ ಕುರಿತಂತೆ ಮಾತನಾಡಿದ್ದಾರೆ.
ಮೇಕಪ್ ಎಕ್ಸ್ಪರ್ಟ್ ಆಗಿರುವ ನಿಮ್ಮ ಫ್ಯಾಷನ್ ಸ್ಟೇಟ್ಮೆಂಟ್ಗಳೇನು?
ನನ್ನದೇ ಆದ ಅತ್ಯಾಕರ್ಷಕ ಫ್ಯಾಷನ್ ಸ್ಟೇಟ್ಮೆಂಟ್‌ಗಳನ್ನು ಅಳವಡಿಸಿಕೊಂಡಿದ್ದೇನೆ. ಯಾವತ್ತೂ ಓವರ್ಡ್ರೆಸ್ ಮಾಡುವುದಕ್ಕೆ ಅಂಜುವುದಿಲ್ಲ. ಸೀಸನ್‌ಗೆ ತಕ್ಕ ಫ್ಯಾಷೆನಬಲ್ ಲುಕ್‌ಗಳು ಅದಕ್ಕೆ ಒಪ್ಪುವ ಮೇಕಪ್ ನನ್ನ ಫ್ಯಾಷನ್ ಸ್ಟೇಟ್ಮೆಂಟ್ನಲ್ಲಿ ಸೇರಿದೆ.
ನಿಮ್ಮ ವೀಕೆಂಡ್ ಸ್ಟೈಲ್ ಸ್ಟೇಟ್ಮೆಂಟ್ ಬಗ್ಗೆ ಹೇಳಿ ?
ಕ್ಲಾಸಿ ಹಾಗೂ ಕಂಫರ್ಟಬಲ್ ಆಗಿ ಕಾಣಿಸಿಕೊಳ್ಳುವುದು ನನ್ನ ವೀಕೆಂಡ್ ಸ್ಟೈಲ್ ಸ್ಟೇಟ್ಮೆಂಟ್. ಕಲರ್ಫುಲ್, ಬೋಲ್ಡ್ ಹಾಗೂ ಕ್ರಿಯೇಟಿವ್ ಸ್ಟೈಲನ್ನು ಬಿಂಬಿಸುವುದು ಕೂಡ ಅದರಲ್ಲೇ ಸೇರಿದೆ.
ನಿಮ್ಮ ಪ್ರಕಾರ, ಫ್ಯಾಷನ್‌ಗೂ ಮೇಕಪ್‌ಗೂ ಇರುವ ಸಂಬಂಧವೇನು? ಹೇಗೆ ವಿವರಿಸುತ್ತೀರಾ?
ಆರೋಗ್ಯಕರ ತ್ವಚೆ ಮೇಕಪನ್ನು ಮತ್ತಷ್ಟು ಹೈಲೈಟ್ ಮಾಡುತ್ತದೆ. ಇನ್ನು ನಾವು ಮಾಡುವ ಫ್ಯಾಷನ್‌ಗೆ ತಕ್ಕಂತೆ ಮೇಕಪ್ ಸಾಥ್ ನೀಡಿದಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣಬಹುದು. ನೋಡುಗರಿಗೆ ಇಷ್ಟವಾಗಬಹುದು. ಟ್ರೆಡಿಷನಲ್ ಮೇಕಪ್ ಸಾಂಪ್ರದಾಯಿಕ ಫ್ಯಾಷನ್ವೇರ್ಗಳನ್ನು ಸುಂದರವಾಗಿ ಬಿಂಬಿಸುತ್ತದೆ. ಇನ್ನು ವೆಸ್ಟರ್ನ್ ಔಟ್ಫಿಟ್ಗೆ ಅದಕ್ಕೆ ಸೂಟ್ ಆಗುವಂತಹ ಸಿಂಪಲ್ ಮೇಕಪ್ ಮಾಡಬೇಕಾಗುತ್ತದೆ.
ಮೇಕಪ್ ಪ್ರಿಯರಿಗೆ ಈ ಸೀಸನ್‌ಗೆ ನೀವು ನೀಡುವ ಸಲಹೆಗಳೇನು ?
ಚಳಿಗಾಲ ಮುಗಿಯಲು ಇನ್ನೇನು ಸ್ವಲ್ಪ ದಿನಗಳಿವೆ. ಆಗಲೇ ಬಿಸಿಲ ಝಳ ಜೋರಾಗಿದೆ. ಸೌಂದರ್ಯ ಕಾಪಾಡಿಕೊಳ್ಳಲು ದೇಹಕ್ಕೆ ನೀರಿನ ಅಗತ್ಯ ಮೊದಲಿಗಿಂತ ಹೆಚ್ಚಾಗುತ್ತದೆ. ದ್ರವ ರೂಪದ ಆಹಾರ ಹೆಚ್ಚು ಸೇವಿಸಬೇಕು. ಹೊರಗೆ ಹೋಗುವಾಗ ಸನ್ಸ್ಕ್ರೀನ್ ಬಳಸುವುದನ್ನು ಮರೆಯಬಾರದು. ಅತಿಯಾಗಿ ಮೇಕಪ್ ಕೂಡ ಬೇಡ. ಕಡಿಮೆ ಮೇಕಪ್ ಮಾಡಿ. ಆದಷ್ಟೂ ಸ್ವೆಟ್ ಪ್ರೂಫ್ ಮೇಕಪ್ ಪ್ರಾಡಕ್ಟ್ಸ್ ಬಳಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion : ಸ್ಯಾಂಡಲ್‌ವುಡ್‌ನಲ್ಲಿ ಪ್ಯಾಂಟ್‌ಸೂಟ್ ಟ್ರೆಂಡ್ ಹುಟ್ಟುಹಾಕಿದ ನಟಿ ಹರ್ಷಿಕಾ ಪೂಣಚ್ಚ