ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯ ನಂತರವೂ ಫ್ಯಾಷನ್ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಮಹಿಳೆಯರ ಸಾಲಿನಲ್ಲಿ ಪ್ರಿಯಾ ಪ್ರಶಾಂತ್ ಕುಮಾರ್ ಸೇರುತ್ತಾರೆ. ಮನೆ-ಬ್ಯುಸಿನೆಸ್ ಹಾಗೂ ಮಾಡೆಲಿಂಗ್ ಸೇರಿದಂತೆ ಎಲ್ಲದರಲ್ಲೂ ಅವಿರತವಾಗಿ ತಮ್ಮನ್ನು ೨೪/೭ ತೊಡಗಿಸಿಕೊಂಡಿರುವ ಮಹಿಳೆ ಎಂದರೂ ತಪ್ಪಾಗಲಾರದು. ಮದುವೆಯಾದ ನಂತರ ಒಂದಿಷ್ಟು ಚಾಲೆಂಜಿಂಗ್ ಆಗಿ ಜೀವನಶೈಲಿ ನಡೆಸಿದಲ್ಲಿ ಯಾವ ಮಹಿಳೆಯೂ ಕೂಡ ಯಶಸ್ವಿಯಾಗಬಲ್ಲಳು ಎನ್ನುತ್ತಾರವರು. ಈ ಬಾರಿಯ ವೀಕೆಂಡ್ ಸ್ಟೈಲ್‌ನಲ್ಲಿ ಅವರು ವಿಸ್ತಾರದೊಂದಿಗೆ ಮಾತನಾಡಿದ್ದು, ತಮ್ಮ ಫ್ಯಾಷನ್, ಸ್ಟೈಲ್ ಹಾಗೂ ಮಾಡೆಲಿಂಗ್‌ನಲ್ಲಿ ಆಸಕ್ತಿ ಇರುವ ವಿವಾಹಿತ ಮಹಿಳೆಯರಿಗೆ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ವಿವಾಹಿತ ಮಹಿಳೆಯಾಗಿ ಫ್ಯಾಷನ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಿಮ್ಮ ಫ್ಯಾಷನ್ ಜರ್ನಿ ಬಗ್ಗೆ ಹೇಳಿ?
೨೦೧೭ರಲ್ಲಿ ನನ್ನ ಫ್ಯಾಷನ್ ಜರ್ನಿ ಆರಂಭವಾಯಿತು. ನಾನು ಮಿಸೆಸ್ ಇಂಡಿಯಾ ಗ್ಯಾಲಕ್ಸಿ ರನ್ನರ್ ಅಪ್, ವಲ್ರ್ಡ್ ಬುಕ್ ಆಫ್ ರೆಕಾರ್ಡ್ಸ್ ಲಂಡನ್ ವುಮೆನ್ ಅಚೀವರ್ ಆವಾರ್ಡ್ ವಿನ್ನರ್. ಯಶಸ್ವಿ ಉದ್ಯಮಿ ಕೂಡ. ಮಾಡೆಲಿಂಗ್ ಜತೆಜತೆಗೆ ವಾರಕ್ಕೊಮ್ಮೆ ೧೦೮ ಮಹಿಳೆಯರಿಗೆ ಉಚಿತ ಡಾನ್ಸ್ ಹೇಳಿಕೊಡುತ್ತೇನೆ. ಸಂತಸದ ವಿಚಾರವೆಂದರ, ಇಬ್ಬರು ಮಕ್ಕಳ ತಾಯಾಗಿರುವ ನನ್ನ ವಯಸ್ಸು ೪೦ ದಾಟಿದರೂ ಫ್ಯಾಷನ್ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಸಾಕಷ್ಟು ಬ್ರಾಂಡ್‌ಗಳಿಗೆ ಶೋ ಸ್ಟಾಪರ್ ಆಗಿ ವಾಕ್ ಮಾಡಿದ್ದೇನೆ.
ನಿಮ್ಮ ಫ್ಯಾಷನ್ ಹಾಗೂ ಸ್ಟೈಲ್ ಮಂತ್ರ ಏನು?
ವ್ಯಕ್ತಿತ್ವಕ್ಕೆ ಸೂಟ್ ಆಗುವಂತೆ ಫ್ಯಾಷನ್ ಫಾಲೋ ಮಾಡುವುದು. ನಮ್ಮ ಐಡೆಂಟಿಟಿಯನ್ನು ಎತ್ತಿ ಹಿಡಿಯುವಂತೆ ಸ್ಟೈಲ್ ಮಂತ್ರ ಪಾಲಿಸುವುದು ನನ್ನ ಸಿದ್ಧಾಂತ.
ಮಾಡೆಲಿಂಗ್‌ಗೆ ಬರುವ ಗೃಹಿಣಿಯರಿಗೆ ನೀವು ಏನು ಸಲಹೆ ನೀಡುತ್ತೀರಾ?
ಸದಾ ಸಕ್ರಿಯರಾಗಿರಿ. ಸಕಾರಾತ್ಮಕವಾಗಿ ಯೋಚಿಸಿ, ಕೆಲಸ ಮಾಡಿ. ನಿಮ್ಮನ್ನು ನೀವು ಪ್ರೀತಿಸಿ. ಕುಟುಂಬದವರೊಂದಿಗೂ ಚೆನ್ನಾಗಿದ್ದುಕೊಂಡೇ ಕ್ಷೇತ್ರದಲ್ಲಿ ಮುಂದುವರಿಯಿರಿ. ಆಗ ಪ್ರೋತ್ಸಾಹ ಹೆಚ್ಚಾಗುವುದು.
ಇದುವರೆಗೂ ಸಾಕಷ್ಟು ಜ್ಯುವೆಲರಿ ಬ್ರಾಂಡ್‌ಗಳಿಗೆ ಶೋ ಸ್ಟಾಪರ್ ಆಗಿದ್ದೀರಾ? ಈ ಬಗ್ಗೆ ಹೇಳಿ…
ಮಲಬಾರ್, ಸುದರ್ಶನ್, ತನಿಷ್ಕ್, ಪಿಎಂಜೆ, ಜಾಯ್‌ಅಲುಕಾಸ್, ಮಂಗಳೂರು ಜ್ಯುವೆಲ್ಸ್ ಸೇರಿದಂತೆ ಸಾಕಷ್ಟು ಸಿಲ್ಕ್ ಸೀರೆ ಬ್ರಾಂಡ್‌ಗಳಿಗೂ ವಾಕ್ ಮಾಡಿದ್ದೇನೆ. ಇದು ನನಗೆ ಖುಷಿ ನೀಡಿದೆ. ಇಂಡಿಯನ್ ಎಥ್ನಿಕ್ ಫ್ಯಾಷನ್‌ಗೆ ನಾನು ಸೂಟ್ ಆಗುವುದರಿಂದ ಸಾಕಷ್ಟು ಅವಕಾಶ ಪಡೆದಿದ್ದೇನೆ.
ಮುಂಬರುವ ಫೆಸ್ಟೀವ್ ಸೀಸನ್ ಫ್ಯಾಷನ್‌ಗೆ ಸಲಹೆ ನೀಡಿ…
ಆದಷ್ಟೂ ಟ್ರೆಡಿಷನಲ್ ಲುಕ್‌ಗೆ ಪ್ರಾಮುಖ್ಯತೆ ನೀಡಿ. ಹೆವಿ ಜುವೆಲರಿ ಹಬ್ಬದ ಸೀಸನ್‌ಗೆ ಸೂಟ್ ಆಗುತ್ತದೆ. ಸೀರೆಯನ್ನು ಉಟ್ಟು ಸಂಭ್ರಮಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Weekend Style | ಸೀಸನ್‌ಗೆ ತಕ್ಕಂತೆ ಬದಲಾಗುವ ನಿಶಾ ಫ್ಯಾಷನ್