Site icon Vistara News

Weekend Style: ವ್ಯಕ್ತಿತ್ವಕ್ಕೆ ಮೆರುಗು ನೀಡುವ ಫ್ಯಾಷನ್‌ ನನ್ನದು ಆಶಾ ಧರಣ

Weekend Style

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪ್ರತಿ ವ್ಯಕ್ತಿಯ ಲೈಫ್‌ಸ್ಟೈಲ್‌ಗೆ ತಕ್ಕಂತೆ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳು ನಿರ್ಧರಿತವಾಗಿರುತ್ತವೆ ಎನ್ನುವ ಮಾಡೆಲ್‌ ಆಶಾ ಧರಣ, ಹೋಮ್‌ ಮೇಕರ್‌, ಉದ್ಯಮಿ ಹಾಗೂ ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲಿ ಸ್ಪರ್ಧಿಸಿ ಫಿನಾಲೆ ತಲುಪಿದವರು. ಈ ಬಾರಿಯ ವಿಸ್ತಾರದ ವೀಕೆಂಡ್‌ ಸ್ಟೈಲ್‌ (Weekend Style) ಕಾಲಮ್​ನಲ್ಲಿ ತಮ್ಮ ಫ್ಯಾಷನ್‌ ಹಾಗೂ ಪ್ಯಾಷನ್‌ ಬಗ್ಗೆ ಹಂಚಿಕೊಂಡಿದ್ದಾರೆ.

ಪೇಜೆಂಟ್‌ನಲ್ಲಿ ಫಿನಾಲೆ ತನಕ ಹೋಗಿದ್ದ ನಿಮ್ಮ ಫ್ಯಾಷನ್‌ ಮಂತ್ರ ಏನು?

ನನ್ನ ಪ್ರಕಾರ, ಫ್ಯಾಷನ್‌ ಎಂದರೇ ಅದು ಆಯಾ ವ್ಯಕ್ತಿಗೆ ಸಂಬಂಧಿಸಿದ್ದು. ಅವರವರ ಆಯ್ಕೆ ಹಾಗೂ ಲೈಫ್‌ಸ್ಟೈಲ್‌ ಮೇಲೆ ನಿರ್ಧರಿತವಾಗಿರುತ್ತದೆ. ಅವರವರ ಅಭಿರುಚಿಗೆ ತಕ್ಕಂತೆ ಫ್ಯಾಷನ್‌ ನೋಡಬಹುದು. ನನ್ನ ವಿಚಾರದಲ್ಲೂ ಅಷ್ಟೇ! ಬ್ಯೂಟಿಫುಲ್‌ ಆಗಿ ಫ್ಯಾಷನ್‌ ಕ್ಯಾರಿ ಮಾಡುವುದನ್ನು ಅಳವಡಿಸಿಕೊಂಡಿದ್ದೇನೆ.

ಸೀಸನ್‌ಗೆ ತಕ್ಕಂತೆ ಬದಲಾಗುವುದು ಅನಿವಾರ್ಯವೇ!

ಹೌದು. ಮೊದಲಿಗೆ ನಮ್ಮ ಬಾಡಿ ಟೈಪ್‌ಗೆ ಹೊಂದುವಂತೆ ಕಲರ್‌ ಹಾಗೂ ಡಿಸೈನ್‌ ನಿರ್ಧರಿಸಬೇಕು. ಹಾಗಾಗಿ ನಾನು ಸೀಸನ್‌ಗೆ ಮ್ಯಾಚ್‌ ಮಾಡುವಾಗ ಧರಿಸುವ ಡಿಸೈನರ್‌ವೇರ್‌ ಕಂಫರ್ಟಬಲ್‌ ಆಗಿದೆಯೇ ಎಂಬುದನ್ನು ನೋಡಿಕೊಳ್ಳುತ್ತೇನೆ. ನಂತರ ಡಿಸೈಡ್‌ ಮಾಡುತ್ತೇನೆ. ನ್ಯೂಟ್ರಲ್‌ ಕಲರ್ಸ್‌ ಹಾಗೂ ಸಮ್ಮಶ್ರಿತ ಕಲರ್ಸ್‌ ನನ್ನ ಲಿಸ್ಟ್‌ನಲ್ಲಿವೆ.

ಡ್ರೆಸ್‌ಕೋಡ್‌ಗಳನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡುತ್ತೀರಾ?

ವಿನ್ಯಾಸ, ಕಲರ್‌ ಹಾಗೂ ಕಂಫರ್ಟಬಲ್‌ ಇದೆಯಾ ಎಂಬುದನ್ನು ಪರಿಶೀಲಿಸಿ, ಸೆಲೆಕ್ಟ್‌ ಮಾಡುತ್ತೇನೆ.

ನೀವು ಫ್ಯಾಷನ್‌ ರೂಲ್ಸ್‌ ಫಾಲೋ ಮಾಡುತ್ತೀರಾ?

ಖಂಡಿತಾ ಇಲ್ಲ! ನನ್ನದೇ ಆದ ಒಂದಿಷ್ಟು ಆಯ್ಕೆಗಳಿವೆ. ಅದಕ್ಕೆ ತಕ್ಕಂತೆ ಮುನ್ನೆಡೆಯುತ್ತೇನೆ. ನನ್ನ ಉಡುಪುಗಳನ್ನು ಆದಷ್ಟೂ ನಾನೇ ಸ್ಟೈಲಿಂಗ್‌ ಮಾಡಿಕೊಳ್ಳುತ್ತೇನೆ. ಸ್ಟೈಲಾಗಿ ಕಾಣಿಸಿಕೊಳ್ಳುತ್ತೇನೆ. ಇದರಲ್ಲಿ ನನ್ನ ಸಂತೋಷವೂ ಅಡಗಿದೆ.

ಸ್ಟೈಲ್‌ ಎಂಬುದು ಪ್ರೊಫೆಷನಲ್‌ ಮಾಡೆಲ್‌ಗಳಿಗೆ ಮಾತ್ರ ಸೀಮಿತವೇ?

ಹಾಗೇನಿಲ್ಲ! ಎಲ್ಲರಿಗೂ ಅವರದ್ದೇ ಆದ ಸ್ಟೈಲಿಂಗ್‌ ಹಾಗೂ ಡ್ರೆಸ್‌ ಸೆನ್ಸ್‌ ಇರುತ್ತದೆ. ಅವರ ಕ್ಷೇತ್ರಕ್ಕೆ ಅನುಗುಣವಾಗಿ ಬದಲಾಗುತ್ತದೆ. ಮಾಡೆಲ್‌ಗಳು ಮಾತ್ರ ಸ್ಟೈಲಿಶ್‌ ಆಗಿರುತ್ತಾರೆ ಎಂಬುದನ್ನು ನಾನು ಒಪ್ಪುವುದಿಲ್ಲ!

ವಿವಾಹಿತ ಮಹಿಳೆಯರಿಗೆ ನೀವು ನೀಡುವ ಟಿಪ್ಸ್‌ ಏನು?

ನಿಮ್ಮ ಐಡೆಂಟಿಟಿ ಸ್ವಂತದ್ದಾಗಿರಲಿ. ಪರ್ಸನಾಲಿಟಿಗೆ ತಕ್ಕಂತೆ ಫ್ಯಾಷನೆಬಲ್‌ ಆಗಿ ಕಾಣಿಸಿಕೊಳ್ಳಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇನ್ನೂ ಓದಿ: Wedding Fashion: ಗ್ರ್ಯಾಂಡ್‌ ವೆಡ್ಡಿಂಗ್‌ ಫ್ಯಾಷನ್‌ವೇರ್‌ಗೆ ಡಿಸೈನರ್‌ ಕ್ಲಚ್‌ ಸಾಥ್‌

Exit mobile version