ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಮ್ಮಲ್ಲಿರುವ ಆತ್ಮವಿಶ್ವಾಸ ನಮ್ಮ ಫ್ಯಾಷನನ್ನು ಯೂನಿಕ್ ಆಗಿಸುತ್ತದೆ. ನಮ್ಮನ್ನು ನಾವು ಪ್ರೀತಿಸಿದಾಗ ತಂತಾನೆ ನಾವು ನೋಡಲು ಆಕರ್ಷಕವಾಗಿ ಕಾಣುತ್ತೇವೆ ಎನ್ನುವ ಸೂಪರ್ ಮಾಡೆಲ್ ಐಶಾನ್ಯಾ ಶಾನ್ ಈ ಬಾರಿಯ ವೀಕೆಂಡ್ ಸ್ಟೈಲ್‌ನಲ್ಲಿ ಮಾತನಾಡಿದ್ದಾರೆ.
ಸೂಪರ್ ಮಾಡೆಲ್ ಆಗಿರುವ ನಿಮ್ಮ ಫ್ಯಾಷನ್ ಮಂತ್ರ ಏನು?
ನಾನು ಯಾವತ್ತೂ ಟ್ರೆಂಡ್ ಫಾಲೋ ಮಾಡುವವರ ಲಿಸ್ಟ್‌ಗೆ ಸೇರುವುದಿಲ್ಲ! ನನಗೆ ಇಷ್ಟವಾಗಿರುವುದನ್ನೇ ಧರಿಸುತ್ತೇನೆ. ನನ್ನ ಆಯ್ಕೆ ಯಾವತ್ತೂ ನನ್ನನ್ನು ಸುಂದರವಾಗಿ ಆಕರ್ಷಕವಾಗಿ ಕಾಣುವಂತೆ ಮಾಡಿದೆ. ಒಂದು ವಾಕ್ಯದಲ್ಲಿ ಹೇಳುವುದಾದರೇ ನನ್ನದು ಪ್ರಯೋಗಾತ್ಮಕ ಫ್ಯಾಷನ್.
ನಿಮ್ಮ ಫ್ಯಾಷನ್ ಜರ್ನಿ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ
ನನ್ನ ಫ್ಯಾಷನ್ ಜರ್ನಿ ಆರಂಭವಾಗಿದ್ದು ಬೆಂಗಳೂರಿನಲ್ಲಿ. ನಂತರ ಮುಂಬಯಿಯ ಕಡೆ ತಿರುಗಿದೆ ಅಷ್ಟೇ! ನಮ್ಮ ಮನೆ ಕೂಡ ಉದ್ಯಾನನಗರಿಯೇ! ಆದರೆ ಬೆಂಗಳೂರು ಹಾಗೂ ಮುಂಬಯಿಯ ಫ್ಯಾಷನ್ ಪ್ರಪಂಚದಲ್ಲಿ ಅಜಗಜಾಂತರ. ಯಾವುದೇ ಮಾಡೆಲ್ ತನ್ನ ಫ್ಯಾಷನ್ ಜರ್ನಿ ಆರಂಭಿಸಲು ಬೆಂಗಳೂರೇ ಸೂಕ್ತ ತಾಣ. ಇಲ್ಲಿಯ ಫ್ಯಾಷನ್ ಪ್ರಪಂಚ ಎಲ್ಲರನ್ನೂ ಸ್ವಾಗತಿಸುತ್ತದೆ.
ಸೂಪರ್ ಮಾಡೆಲ್ ಆಗಿರುವ ನೀವು ನೀಡುವ ಸಲಹೆಗಳೇನು?
ಮಾಡೆಲ್‌ಗಳಾಗುವವರು ಮೊದಲು ಅವರ ಬಗ್ಗೆ ಗುರಿ ಬಗ್ಗೆ ಫೋಕಸ್ ಮಾಡಬೇಕು. ಕಾಂಪಿಟೇಟರ್‌ಗಳ ಬಗ್ಗೆ ಅಲ್ಲ, ಪ್ರತಿಸ್ಪರ್ಧಿ ಅಥವಾ ಇತರೇ ಮಾಡೆಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಯಾರೂ ಕಾಲೆಳೆದರೂ ಮುನ್ನುಗ್ಗುತ್ತಿರಬೇಕು.
ಸೀಸನ್‌ಗೆ ತಕ್ಕಂತೆ ನೀವು ಹೇಗೆ ನಿಮ್ಮ ಫ್ಯಾಷನ್ ಬದಲಿಸುತ್ತೀರಾ?
ನಾನು ಮೊದಲು ಭಾರತೀಯಳು, ಸೋ, ಎಲ್ಲರಂತೆ ನನಗೂ ಕಲರ್‌ಗಳ ಬಗ್ಗೆ ಪ್ರೀತಿಯಿದೆ. ಇಲ್ಲಿನ ಫ್ಯಾಷನ್ ಕಲ್ಚರ್ ಬಗ್ಗೆ ಒಲವಿದೆ. ಇನ್ನು ವಿಂಟರ್‌ನಲ್ಲಿ ಬೋರಾಗುವ ಬ್ಲ್ಯಾಕ್, ಬ್ರೌನ್ ಹಾಗೂ ಗ್ರೇಗಳ ಉಡುಪುಗಳನ್ನೇ ಧರಿಸಬೇಕಾಗಿಲ್ಲ. ಹಾಗಾಗಿ ನಾನು ಅರ್ತ್ ಟೋನ್ ಕಲರ್‌ಗಳಾದ ಕ್ರಿಮ್ಸನ್, ಟೀಲ್, ಗ್ರೀನ್, ಪ್ಲಮ್, ಮ್ಯಾಗ್ನೆಟಾ, ಆರೆಂಜ್, ಯೆಲ್ಲೋ, ರೆಡ್ ಶೇಡ್‌ಗಳನ್ನು ಪ್ರಯೋಗಿಸುತ್ತೇನೆ.
ನಿಮ್ಮ ಮಾಡೆಲಿಂಗ್ ಜರ್ನಿ ಹೇಗಿದೆ?
ಸಖತ್, ಸೂಪರ್! ಆರಂಭದಲ್ಲೆ ಯಂಗೆಸ್ಟ್ ಸೂಪರ್ ಮಾಡೆಲ್ ಟೈಟಲ್ ಪಡೆದುಕೊಂಡ ನಾನು ಇದುವರೆಗೂ ೮೦ಕ್ಕೂ ಹೆಚ್ಚು ಬ್ರಾಂಡೆಡ್ ಫ್ಯಾಷನ್ ಶೋಗಳಲ್ಲಿ ಸೆಲೆಬ್ರಿಟಿ ಸೂಪರ್ ಮಾಡೆಲ್ ಆಗಿ ವಾಕ್ ಮಾಡಿದ್ದೀನಿ. ಫ್ಯಾಷನ್ ವಲ್ರ್ಡ್ ನನಗೆ ಸಾಕಷ್ಟು ಖುಷಿಯನ್ನು ನೀಡಿದೆ. ಈ ಕ್ಷೇತ್ರಕ್ಕೆ ನಾನು ಆಭಾರಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star Fashion | ಫ್ರಿಂಝ್ ಮಿರರ್ ಡಿಸೈನರ್‌ವೇರ್‌ನಲ್ಲಿ ಮಿಂಚಿದ ನಟಿ ಕಾಜಲ್ ಅಗರ್‌ವಾಲ್