Site icon Vistara News

Weekend Style | ಯಶಸ್ವಿ ಮಾಡೆಲ್‌ಗೆ ಆತ್ಮವಿಶ್ವಾಸ ಅವಶ್ಯ ಎನ್ನುತ್ತಾರೆ ಚಂದನಾ ಗೌಡ

Weekend Style

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಾಲೇಜಿನ ದಿನಗಳಿಂದಲೇ ಸಖತ್‌ ಸಕ್ರಿಯರಾಗಿರುವ ಚಂದನಾ ಗೌಡ ಯಶಸ್ವಿ ಮಾಡೆಲ್‌. ಮಾಡೆಲಿಂಗ್‌ ಮಧ್ಯೆ ನಟನೆಯಲ್ಲೂ ತೊಡಗಿಸಿಕೊಂಡಿರುವ ಇವರು ದಕ್ಷಿಣ ಭಾರತದ ಸಾಕಷ್ಟು ಸೀರೆಗಳ ಬ್ರಾಂಡ್‌ಗಳ ಜಾಹೀರಾತುಗಳ ಮೂಲಕ ಚಿರಪರಿಚಿತರು. ಹಳ್ಳಿ ಹೈದ ಪ್ಯಾಟೆಗೆ ಬಂದ ರಿಯಾಲಿಟಿ ಶೋ ಮೂಲಕ ಕಿರುತೆರೆಯಲ್ಲೂ ಕಾಣಿಸಿಕೊಂಡು, ಆನಂದ ಭೈರವಿ ಧಾರಾವಾಹಿಯ ಮೂಲಕ ಮನೆಮಾತಾದರು. ನಂತರ, ಟರ್ಕಿಯಲ್ಲಿ ನಡೆದ ಫ್ಯೂಚರ್‌ ಫ್ಯಾಷನ್‌ ಫೇಸಸ್‌ ವಲ್ರ್ಡ್ ೨೦೧೯ ಪೇಜೆಂಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ರನ್ನರ್‌ ಅಪ್‌ ಸ್ಥಾನ ಪಡೆದು, ಮಿಸ್‌ ಗ್ರಾಂಡ್‌ ಸೀ ಏಷಿಯಾ ಟೈಟಲ್‌ ಪಟ್ಟವನ್ನು ಅಲಂಕರಿಸಿದರು. ತದನಂತರ ನಟ ಅದಿತ್ಯಾ ಜೊತೆ ಮುಂದುವರಿಯದ ಅಧ್ಯಾಯ ಸಿನಿಮಾದ ಮೂಲಕ ನಾಯಕಿಯಾಗಿ ಬಡ್ತಿಯನ್ನು ಪಡೆದರು. ಇದು ಚಂದನಾ ಗೌಡ ಸಂಕ್ಷಿಪ್ತ ವಿವರ. ಈ ಬಾರಿಯ ವಿಸ್ತಾರದ ವೀಕೆಂಡ್‌ ಸ್ಟೈಲ್‌ನಲ್ಲಿ ಚಂದನಾ ತಮ್ಮ ಫ್ಯಾಷನ್‌, ಸ್ಟೈಲ್‌ ಹಾಗೂ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.

ಮಾಡೆಲಿಂಗ್‌ ಮೂಲಕ ಆನ್‌ಸ್ಕ್ರೀನ್‌ಗೆ ಕಾಲಿಟ್ಟ ನಿಮ್ಮ ಜರ್ನಿ ಹೇಗಿತ್ತು ?

ಗಾಡ್‌ಫಾದರ್‌ ಇಲ್ಲದೇ ಆರಂಭಿಸಿದ ನನ್ನ ಪ್ರತಿ ಜರ್ನಿ ಕೂಡ ಟಫ್‌ ಆಗಿತ್ತು. ಫ್ಯಾಷನ್‌ ಕ್ಷೇತ್ರದಲ್ಲಿ ನಾನು ಆರಂಭದ ದಿನಗಳಲ್ಲಿ ಸವಾಲು ಎದುರಿಸಿದ್ದು ಮರೆಯುವ ಹಾಗಿಲ್ಲ. ಪ್ರತಿಯೊಂದು ಹೆಜ್ಜೆಯು ನನಗೆ ಮತ್ತಷ್ಟು ಹುಮ್ಮಸ್ಸನ್ನು ತುಂಬಿತ್ತು. ನಾನು ಸೋಲು ಹಾಗೂ ಗೆಲುವನ್ನು ಸಮನಾಗಿ ಸ್ವೀಕರಿಸುತ್ತಾ ಮುನ್ನಡೆದೆ. ಒಂದು ಕಾಲದಲ್ಲಿ ರಿಜೆಕ್ಟ್‌ ಮಾಡಿದವರು ಇಂದು ಅವರೇ ಕರೆದು ಗೌರವಿಸುವ ಮಟ್ಟಕ್ಕೆ ಬೆಳೆದೆ, ಯಶಸ್ವಿಯಾದೆ.

ಪ್ರೊಫೆಷನಲ್‌ ಮಾಡೆಲ್‌ ಆಗಿರುವ ನಿಮ್ಮ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ ಏನು ?

ಸಾವಿರ ಜನರ ಮಧ್ಯೆಯೂ ಗುರುತಿಸಲ್ಪಡುವ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ ನನ್ನದು. ಸಂದರ್ಭಕ್ಕೆ ತಕ್ಕಂತೆ ನನ್ನ ಸ್ಟೈಲ್‌ ಸ್ಟೇಟ್‌ಮೆಂಟ್‌ ಬದಲಾಗುತ್ತಿರುತ್ತದೆ. ಬ್ರಾಂಡ್‌ವೇರ್‌ ಬಳಕೆ ಮಾಡುತ್ತೇನೆ. ಹೂಡೀಸ್‌, ಸ್ನೀಕರ್ಸ್‌, ಜೀನ್ಸ್‌, ಫುಲ್‌ ಸ್ಲೀವ್‌ ಡ್ರೆಸ್‌, ಕುರ್ತಾ, ಜೆಗ್ಗಿಂಗ್ಸ್‌, ಫ್ರೀ ಫಿಟ್ಟಿಂಗ್‌ ಡ್ರೆಸ್‌ಗಳೆಂದರೆ ನನಗಿಷ್ಟ. ಆಕ್ಸೆಸರೀಸ್‌ ಕೂಡ ಇಷ್ಟ. ಸ್ಟ್ರೀಟ್‌ ಶಾಪಿಂಗ್‌ ಪ್ರಿಯೆ. ಎಲ್ಲದಕ್ಕಿಂತ ಹೆಚ್ಚಾಗಿ ನಾನು ನನ್ನ ಅಭಿರುಚಿಗೆ ತಕ್ಕಂತೆ ಫ್ಯಾಷನ್‌ ಫಾಲೋ ಮಾಡುತ್ತೇನೆ.

ಮಾಡೆಲ್‌ಗಳೆಂದಾಕ್ಷಣ ಸದಾ ಬ್ಯೂಟಿಫುಲ್‌ ಆಗಿ ಕಾಣುತ್ತಾರೆ ಎಂಬುದರ ಬಗ್ಗೆ ನೀವು ಹೇಳುವುದೇನು?

ನಮ್ಮಲ್ಲಿ ಮೊದಲು ಆತ್ಮವಿಶ್ವಾಸ, ಗುರಿ ಇರಬೇಕು. ನಂತರ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ತಂತಾನೇ ಆಕರ್ಷಕವಾಗಿ ಕಾಣಬಹುದು. ಇನ್ನು ನನ್ನ ವಿಷಯಕ್ಕೆ ಬಂದಲ್ಲಿ ಬಂದಲ್ಲಿ ಮಿನಿಮಲ್‌ ಮೇಕಪ್‌, ಮಸ್ಕರಾ ಇದ್ದರೇ ಅಷ್ಟು ಸಾಕು.

ಮಾಡೆಲಿಂಗ್‌ ಪ್ರಪಂಚದಲ್ಲಿ ಸವಾಲು ಎದುರಿಸುವವರಿಗೆ ನಿಮ್ಮ ಟಿಪ್ಸ್‌ ಏನು?

ಫಿಟ್ನೆಸ್‌ಗೆ ಮೊದಲು ಆದ್ಯತೆ ನೀಡಿ. ಆತ್ಮವಿಶ್ವಾಸದಿಂದ ಮುನ್ನುಗ್ಗಿ. ಸೌಂದರ್ಯವನ್ನು ಕಾಪಾಡಿಕೊಳ್ಳಿ. ಸೋಲನ್ನು ಒಪ್ಪಿಕೊಳ್ಳದೇ ಪ್ರಯತ್ನಿಸಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Weekend style | ಸೂಪರ್‌ ಮಾಡೆಲ್‌ ಐಶಾನ್ಯಾ ಶಾನ್‌ ಫ್ಯಾಷನ್‌ ಪ್ರೇಮ

Exit mobile version