ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾಡೆಲ್ ಆಗಿದ್ದ ಸೆಲೆಬ್ರಿಟಿ ಡಿಸೈನರ್ ಹರ್ಷ್ ಕುಮಾರ್ ಬೇಡಿ ನಂತರ ಡಿಸೈನಿಂಗ್ ಕಲಿತು ತಮ್ಮದೇ ಆದ ಹೆಚ್‌ಎಲ್‌ಡಿ ಬ್ರಾಂಡ್ ಮೂಲಕ ಸೆಲೆಬ್ರಿಟಿ ಡಿಸೈನರ್ ಆಗಿ ಫ್ಯಾಷನ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಗೋಲ್ಡ್ ಸೌಕ್ ಫ್ಯಾಷನ್ ವೀಕೆಂಡ್, ಬ್ರೈಡಲ್ ಶೋ ಸೇರಿದಂತೆ ನಾನಾ Ramp ಶೋಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಬಾರಿ ವಿಸ್ತಾರದ ವೀಕೆಂಡ್ ಫ್ಯಾಷನ್‌ನಲ್ಲಿ ಮಾಡೆಲಿಂಗ್, ಫ್ಯಾಷನ್ ಹಾಗೂ ಡಿಸೈನಿಂಗ್ ಲೋಕದ ಬಗ್ಗೆ ಮಾತನಾಡಿದ್ದಾರೆ.
ಮಾಡೆಲ್ ಕಮ್ ಸೆಲೆಬ್ರಿಟಿ ಡಿಸೈನರ್ ಆಗಿರುವ ನಿಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ಹೇಳಿ.
ಕ್ಲಾಸಿ ಕಲರ್ಸ್, ಡೆನಿಮ್ ಜಾಕೆಟ್ಸ್ ಜೀನ್ಸ್, ಬ್ರೈಟ್ ಟೀ ಶರ್ಟ್ ನನ್ನ ನೆಚ್ಚಿನ ಫ್ಯಾಷನ್‌ವೇರ್‌ಗಳು. ಇನ್ನು ಇವನ್ನು ಧರಿಸಿದಾಕ್ಷಣಾ ನನ್ನದೇ ಆದ ಸ್ಟೈಲ್ ಸ್ಟೇಟ್‌ಮೆಂಟ್ ರೂಪುಗೊಳ್ಳುತ್ತದೆ. ನನ್ನ ಫ್ಯಾಷನ್ ಸ್ಟೈಲ್‌ಮೆಂಟ್ ಜೊತೆ ಬೆರೆತಿದೆ ಎನ್ನಬಹುದು.
ನಿಮಗೆ ಎಥ್ನಿಕ್ ಫ್ಯಾಷನ್ ಬಗ್ಗೆ ಇರುವ ಒಲವಿನ ಬಗ್ಗೆ ತಿಳಿಸಿ.
ಮೊದಲಿನಿಂದಲೂ ನನಗೆ ನಮ್ಮ ಸಂಸ್ಕೃತಿಯ ಬಗ್ಗೆ ಒಲವು. ಹಾಗಾಗಿ ನನ್ನ ಡಿಸೈನ್‌ಗಳಲ್ಲಿ ಆದಷ್ಟೂ ಸ್ಥಳೀಯ ಪಾಪ್ಯುಲರ್ ಡಿಸೈನ್‌ಗಳು ಎದ್ದು ಕಾಣುತ್ತವೆ. ಉದಾಹರಣೆಗೆ, ಮೆನ್ಸ್ ಎಥ್ನಿಕ್ ಫ್ಯಾಷನ್‌ನಲ್ಲಿ ಬರುವ ಜೋಧ್‌ಪುರಿ ಹಾಗೂ ಶೆರ್ವಾನಿಯಲ್ಲೆ ಸೂಕ್ಷ್ಮ ವಿನ್ಯಾಸಗಳನ್ನು ಹೊಸ ರೂಪದಲ್ಲಿ ಬಿಂಬಿಸುವುದು, ಮಹಿಳೆಯರ ಡಿಸೈನರ್ ಸೀರೆ , ಲೆಹೆಂಗಾ, ಡಿಸೈನರ್ ಬ್ಲೌಸ್‌ನಲ್ಲಿ ಕಲಾತ್ಮಕ ಹೊಸ ವಿನ್ಯಾಸಗಳು ನಮ್ಮ ಬ್ರಾಂಡ್‌ನಲ್ಲಿ ಕಂಡು ಬರುತ್ತವೆ.
ಮಾಡೆಲಿಂಗ್ ಅಥವಾ ಡಿಸೈನಿಂಗ್ ಈ ಕ್ಷೇತ್ರದಲ್ಲಿ ನಿಮಗೆ ಇಷ್ಟವಾಗಿದ್ದು ಯಾವುದು ?
ಮಾಡೆಲಿಂಗ್ ಖುಷಿ ನೀಡುವ ಕ್ಷೇತ್ರ. ಡಿಸೈನಿಂಗ್ ಆತ್ಮಸಂತೃಪ್ತಿ ನೀಡುವ ಕ್ಷೇತ್ರ. ಹಾಗೆಂದು ಮಾಡೆಲ್ ಆಗಿರುವುದು ಸುಲಭವೇನಲ್ಲ, ಫಿಟ್ ಬಾಡಿ, ತ್ವಚೆ ಹಾಗೂ ಔಟ್‌ಲುಕ್ ಎಲ್ಲವೂ ಸದಾ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಡಿಸೈನಿಂಗ್ ನಲ್ಲಿ ನಮ್ಮ ಔಟ್‌ಲುಕ್‌ಗಿಂತ ನಾವು ಸಿದ್ಧಪಡಿಸುವ ಡಿಸೈನರ್‌ವೇರ್‌ಗಳು ನಮಗೆ ಹೆಸರು ತಂದು ಕೊಡುತ್ತವೆ. ಡಿಸೈನಿಂಗ್ ಕ್ಷೇತ್ರ ನನಗಿಷ್ಟ.
ಮುಂಬರುವ ಮಾಡೆಲ್‌ಗಳಿಗೆ ಯಾವ ಬಗೆಯ ಸಲಹೆಗಳನ್ನು ನೀಡಲು ಬಯಸುತ್ತೀರಾ?
ಬ್ರಾಂಡೆಡ್ ಉಡುಪುಗಳನ್ನು ಧರಿಸಿ ವಾಕ್ ಮಾಡುವುದು ದೊಡ್ಡಸ್ತಿಕೆಯಲ್ಲ! ಧರಿಸುವ ಉಡುಪು ಯಾವುದೇ ಬ್ರಾಂಡ್‌ನದ್ದಾಗಿರಲಿ ಅದನ್ನು ಧರಿಸಿ, ಪ್ರೆಸೆಂಟ್ ಮಾಡುವುದಿದೆಯಲ್ಲ! ಅದು ಮಾಡೆಲ್‌ಗಳ ಪ್ರೊಫೆಷನಲಿಸಂ ಆಗಬೇಕು. ನೋಡಿದ ತಕ್ಷಣ ಕಣ್ಮನ ಸೆಳೆಯುವಂತಿರಬೇಕು. ಅದಕ್ಕಾಗಿ ಆರೋಗ್ಯ, ಬ್ಯೂಟಿ ಬಗ್ಗೆ ಗಮನ ನೀಡಬೇಕು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star Saree Fashion | ನಟಿ ಶಿಲ್ಪಾ ಶೆಟ್ಟಿಯ ಟ್ರೆಂಚ್ ಕೋಟ್ ಸೀರೆಗೆ ಮಹಿಳೆಯರು ಫಿದಾ