ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಮತಾ ಕಡೇಮನಿ ಮಿಸೆಸ್ ಇಂಡಿಯಾ ಸೌತ್ ಟೈಟಲ್ ವಿಜೇತೆ. ವಿವಾಹಿತರಾಗಿದ್ದರೂ ಫ್ಯಾಷನ್ ಕ್ಷೇತ್ರದಲ್ಲಿ ಒಂದಲ್ಲ ಒಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಸಕ್ರಿಯರಾಗಿದ್ದಾರೆ. ಕಾರ್ಪೋರೇಟ್ ಕ್ಷೇತ್ರದಲ್ಲಿರುವವರಿಗೂ ಪೇಜೆಂಟ್‌ಗಳನ್ನು ನಡೆಸಿದ್ದಾರೆ. ಫ್ಯಾಷನ್ ಹಾಗೂ ಸ್ಟೈಲ್ ಎಂಬುದು ಮಾಡೆಲ್‌ನ ಜೀವನದ ಭಾಗ ಎನ್ನುವ ಅವರು ಈ ಬಾರಿಯ ವೀಕೆಂಡ್ ಸ್ಟೈಲ್‌ನಲ್ಲಿ ಮಾತನಾಡಿದ್ದಾರೆ.
ಈ ಕ್ಷೇತ್ರದಲ್ಲಿರುವ ನೀವು ಫ್ಯಾಷನನ್ನು ಹೇಗೆ ಡಿಫೈನ್ ಮಾಡುತ್ತೀರಾ?
ಫ್ಯಾಷನ್ ಎಂಬುದು ಇನ್ಸ್ಟಂಟ್ ಭಾಷೆ ಇದ್ದಂತೆ. ನಾವು ಹೇಗೆ ಅದನ್ನು ಫಾಲೋ ಮಾಡಿ ಪ್ರೆಸೆಂಟ್ ಮಾಡುತ್ತೇವೋ ಹಾಗೆಯೇ ಅದು ನಮ್ಮನ್ನು ಬಿಂಬಿಸುತ್ತದೆ. ಯಾವುದೇ ಫ್ಯಾಷನ್ ನಮ್ಮ ವ್ಯಕ್ತಿತ್ವ ಮಾತ್ರವಲ್ಲ, ನಮ್ಮ ಒಂದೊಂದು ನಡೆಯ ಮೇಲೂ ಡಿಪೆಂಡ್ ಆಗಿರುತ್ತದೆ.
ಬದಲಾಗುವ ಫ್ಯಾಷನನ್ನು ಯಾವುದಕ್ಕೆ ಹೋಲಿಸುತ್ತೀರಾ?
ನಾವು ಹೇಗೆ ಒಂದೇ ಆಹಾರವನ್ನು ಪ್ರತಿಬಾರಿ ತಿನ್ನುವುದಿಲ್ಲವೋ ಹಾಗೆಯೇ ನಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳು ಆಗಾಗ ಬದಲಾಗುತ್ತಿರುತ್ತದೆ. ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ ಅಲ್ಲವೇ!
ಹವಾಮಾನಕ್ಕೆ ತಕ್ಕಂತೆ ನಿಮ್ಮ ಫ್ಯಾಷನ್ ಬದಲಾಗುತ್ತದಾ? ಬದಲಾದಲ್ಲಿ ಅದು ಹೇಗೆ?
ಖಂಡಿತ, ಚಳಿಗಾಲವು ನಾನಾ ಪ್ರಯೋಗಾತ್ಮಕ ಫ್ಯಾಷನ್‌ಗೆ ಅನುವು ಮಾಡಿಕೊಡುತ್ತದೆ. ಇಂದಿನ ಜನರೇಷನ್‌ಗೆ ಆಯಾ ಸೀಸನ್‌ಗೆ ಯಾವ ಬಗೆಯ ಫ್ಯಾಷನ್ ಮಾಡಬೇಕು ಎಂಬುದು ಗೊತ್ತಿದೆ. ಇನ್ನು ನನ್ನ ವಿಂಟರ್ ಫ್ಯಾಷನ್‌ನಲ್ಲಿ ಓವರ್‌ಸೈಝಿನ ಔಟರ್‌ವೇರ್, ಪ್ಲೀಟೆಡ್ ಸ್ಕರ್ಟ್, ಲೇಯರ್ ಲುಕ್ ನೀಡುವ ಡ್ರೆಸ್‌ಗಳ ಕಲೆಕ್ಷನ್‌ಗಳಿವೆ. ಕಾಲಕ್ಕೆ ತಕ್ಕಂತೆ ಉಡುಪುಗಳನ್ನು ಧರಿಸುವುದು ಮೊದಲ ಆಯ್ಕೆ.
ವಿಂಟರ್ ಫ್ಯಾಷನ್ ಪ್ರಿಯರಿಗೆ ನೀವು ನೀಡುವ ವಿಂಟರ್ ಫ್ಯಾಷನ್ ಟಿಪ್ಸ್ ಏನು?
ವಾರ್ಡ್‌ರೋಬ್‌ನಲ್ಲಿರುವ ಉಡುಪುಗಳನ್ನು ಮಿಕ್ಸ್ ಮ್ಯಾಚ್ ಮಾಡಿ ಧರಿಸುವ ಟೆಕ್ನಿಕ್ ಮೊದಲು ಗೊತ್ತಿರಬೇಕು. ತಮ್ಮದೇ ಆದ ಸ್ಟೈಲ್ ಹುಟ್ಟುಹಾಕುವ ಚಾಕಚಕ್ಯತೆ ಅಳವಡಿಸಿಕೊಳ್ಳಬೇಕು. ಆಗಷ್ಟೇ ಚಳಿಗಾಲಕ್ಕೆ ತಕ್ಕಂತೆ ಹೆಚ್ಚು ಖರ್ಚಿಲ್ಲದೇ ಲೇಯರ್ ಲುಕ್ ತಮ್ಮದಾಗಿಸಿಕೊಳ್ಳಬಹುದು.
ಬೆಂಗಳೂರಿನ ಮಾಡೆಲಿಂಗ್ ಪ್ರಪಂಚದಲ್ಲಿನ ನಿಮ್ಮ ಜರ್ನಿ ಹೇಗಿದೆ?
ಇತ್ತೀಚೆಗೆ ಬೆಂಗಳೂರು ಫ್ಯಾಷನ್ ಪ್ರೇಮಿಗಳ ತವರಾಗುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಅವಕಾಶಗಳು ಎಲ್ಲಾ ವಯಸ್ಸಿನವರಿಗೂ ದೊರೆಯುತ್ತಿದೆ. ಇನ್ನು ಮಾಡೆಲಿಂಗ್ ಕ್ಷೇತ್ರದಲ್ಲಿ ನಾನೂ ಕೂಡ ಜವಾಬ್ದಾರಿಯುತ ಮಾಡೆಲ್ ಆಗಿರುವುದರಿಂದ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ನನ್ನ ಜರ್ನಿಯನ್ನು ಮುಂದುವರೆಸಿದ್ದೇನೆ. ನಿಜ ಹೇಳಬೇಕೆಂದರೇ, ಮಾಡೆಲಿಂಗ್ ಕ್ಷೇತ್ರ ನನಗೆ ಸಾಕಷ್ಟು ಸಂತೋಷ ನೀಡಿದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Weekend style | ಮಾಡೆಲಿಂಗ್‌ನಿಂದ ಡಿಸೈನಿಂಗ್‌ವರೆಗೆ ಹರ್ಷ್ ಬೇಡಿ ಫ್ಯಾಷನ್ ಜರ್ನಿ