ಶೀಲಾ ಸಿ. ಶೆಟ್ಟಿ, ಬೆಂಗಳೂರು
ಡಾ. ಸಂಗೀತಾ ಹೊಳ್ಳ ಸದಾ ಒಂದಲ್ಲ, ಒಂದು ಫ್ಯಾಷನ್ ಕುರಿತಾದ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಸೀನಿಯರ್ ಡೇಟಾ ಸೈಂಟಿಸ್ಟ್ ಆಗಿರುವ ಇವರು ಮಾಡೆಲಿಂಗ್ ಜತೆಗೆ ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಈಗಾಗಲೇ ತಾಜ್ ಮಿಸ್ ಯೂನಿವರ್ಸ್ ೨೦೨೨, ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್ ೨೦೧೯ನ ಮೊದಲ ರನ್ನರ್ ಅಪ್, ಮಿಸ್ ಕರ್ನಾಟಕ ೨೦೧೯, ಮಿಸ್ ಕ್ವೀನ್ ವಿನ್ನರ್, ಮಿಸ್ ಗಾರ್ಜಿಯಸ್ ದಿವಾ ಆಪ್ ಕರ್ನಾಟಕ ಸೇರಿದಂತೆ ನಾನಾ ಟೈಟಲ್‌ಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಬಾರಿಯ ವೀಕೆಂಡ್ ಸ್ಟೈಲ್‌ನಲ್ಲಿ ವಿಸ್ತಾರದೊಂದಿಗೆ ಮಾತನಾಡಿದ್ದಾರೆ.
ನಾನಾ ಟೈಟಲ್‌ಗಳನ್ನು ಗೆದ್ದಿರುವ ನಿಮ್ಮ ಪ್ರಕಾರ, ಫ್ಯಾಷನ್ ಅಂದ್ರೆ ಏನು ?
ನಮ್ಮತನವನ್ನು ಬಿಂಬಿಸುವುದೇ ಫ್ಯಾಷನ್! ನಮ್ಮ ಡ್ರೆಸ್ಸಿಂಗ್ ಹಾಗೂ ಧರಿಸುವ ಉಡುಪುಗಳು ನಮ್ಮ ಫ್ಯಾಷನ್ ಐಡೆಂಟಿಟಿ ಕ್ರಿಯೇಟ್ ಮಾಡುತ್ತವೆ. ನಾವು ಸೆಲೆಕ್ಟ್ ಮಾಡಿ ಧರಿಸುವ ಉಡುಪುಗಳೇ ನಮ್ಮ ಫ್ಯಾಷನ್ ಸೆನ್ಸನ್ನು ಬಿಂಬಿಸುತ್ತವೆ.
ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಏನು ?
ಕಂಫರ್ಟೇಬಲ್ ಆಗಿ ಕ್ಯಾರಿ ಮಾಡುವುದು ನನ್ನ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ಸೇರಿದೆ. ನನ್ನ ಪ್ರಕಾರ, ಕಂಫರ್ಟೇಬಲ್ ಹಾಗೂ ಎಲಿಗೆಂಟ್ ಆಗಿ ಕಾಣಿಸಿಕೊಳ್ಳುವುದು.
ನಿಮಗೆ ಸ್ಫೂರ್ತಿ ನೀಡುವ ಮಾಡೆಲ್‌ಗಳು ಯಾರು ?
ಮಾಡೆಲಿಂಗ್‌ನಿಂದ ನಟನೆಗೆ ಕಾಲಿಟ್ಟ ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ನನಗಿಷ್ಟ. ಇನ್ನು ಇಂಟರ್‌ನ್ಯಾಷನಲ್ ಮಾಡೆಲ್ ಅಂಡ್ರಿಯಾನಾ ಲೈಮಾ ಕೂಡ ಇಷ್ಟ. ಅವರೆಲ್ಲರನ್ನು ಹೊರತು ಪಡಿಸಿದಲ್ಲಿ ನಟಿ ಕಮ್ ಮಾಡೆಲ್ ಊರ್ವಶಿ ರೌಟೆಲಾ ಕೂಡ ಮಾಡೆಲ್‌ಗಳಿಗೆ ಮಾದರಿ.
ಫ್ಯಾಷನ್ ಕ್ಷೇತ್ರದಲ್ಲಿರುವ ನೀವು ಮುಂಬರುವ ಮಾಡೆಲ್‌ಗಳಿಗೆ ಮಾಡೆಲಿಂಗ್ ಕ್ಷೇತ್ರದ ಅನುಕೂಲತೆ ಹಾಗೂ ಅನನುಕೂಲತೆ ಬಗ್ಗೆ ತಿಳಿಸಿ
ಅನುಕೂಲತೆ ಎಂದರೇ, ಹೆಸರು, ಕೀರ್ತಿ ಹಾಗೂ ಹಣ ಎಲ್ಲವನ್ನು ಮಾಡೆಲಿಂಗ್ ಕ್ಷೇತ್ರ ನೀಡುತ್ತದೆ. ಆದರೆ, ಅದನ್ನು ಮೆಂಟೇನ್ ಮಾಡುವುದನ್ನು ಕಲಿಯಬೇಕು. ಹೆಸರನ್ನು ಉಳಿಸಿಕೊಳ್ಳಲು ಸದಾ ಹಾರ್ಡ್‌ವರ್ಕ್ ಮಾಡಬೇಕು. ಇನ್ನು ಅನಾನುಕೂಲತೆಯೆಂದರೇ, ಸದಾ ಫಿಟ್ನೆಸ್ ಹಾಗೂ ಬ್ಯೂಟಿ ಬಗ್ಗೆ ಗಮನ ನೀಡಬೇಕು. ಇಡುವ ಒಂದೊಂದು ಹೆಜ್ಜೆಯೂ ಸಾಮಾಜಿಕ ಕಳಕಳಿ ಹೊಂದಿರಬೇಕು. ಜಾಬ್ ಸೆಕ್ಯೂರಿಟಿ ಈ ಕ್ಷೇತ್ರದಲ್ಲಿಲ್ಲ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಈ ಕ್ಷೇತ್ರವನ್ನು ಪ್ರವೇಶಿಸುವುದು ಉತ್ತಮ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star Fashion | ಬ್ಲ್ಯಾಕ್ ಲೆದರ್ ವೆಸ್ಟರ್ನ್ ಔಟ್‌ಫಿಟ್‌ನಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಗ್ಲಾಮರಸ್ ಲುಕ್