Site icon Vistara News

Weekend Style: ಔಟ್‌ಲುಕ್‌ಗೆ ತಕ್ಕಂತೆ ಫ್ಯಾಷನ್‌ ಫಾಲೋ ಮಾಡುವ ಮಾಡೆಲ್‌ ರಾಜ್‌

Weekend Style

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಫ್ಯಾಷನ್‌ ಲೋಕದಲ್ಲಿ ಮಿಸ್ಟರ್ ರೆಡಿಯನ್ಸ್‌ ಫೇಸ್‌ ಆಫ್‌ ಸೌತ್‌ ಹಾಗೂ ಮಿಸ್ಟರ್‌ ಇಂಟೆಲೆಕ್ಚುಯಲ್‌ ಪ್ರೊಫೆಷನಲ್‌ನಂತಹ ಟೈಟಲ್‌ ಪಡೆದಿರುವ ರಾಜ್‌ ಮಾಡೆಲ್‌ ಮಾತ್ರವಲ್ಲ, ಮಕ್ಕಳ ಫ್ಯಾಷನ್‌ ಶೋ ಸೇರಿದಂತೆ ಸಾಕಷ್ಟು ಶೋಗಳಿಗೆ ಫ್ಯಾಷನ್‌ ಕೊರಿಯಗ್ರಾಫರ್‌ ಆಗಿದ್ದಾರೆ. ಈಗಾಗಲೇ ಹಲವಾರು ಶೋಗಳಲ್ಲಿ ಮಕ್ಕಳಿಗೆ ಫ್ಯಾಷನ್‌ ಕೊರಿಯಾಗ್ರಾಫಿ ಪಾಠ ಹೇಳಿ ಕೊಟ್ಟಿದ್ದಾರೆ. ಈ ಬಾರಿಯ ವಿಸ್ತಾರದ ವೀಕೆಂಡ್‌ ಫ್ಯಾಷನ್‌ನಲ್ಲಿ ತಮ್ಮ ಫ್ಯಾಷನ್‌, ಸ್ಟೈಲ್‌ ಹಾಗೂ ಹೋಳಿ ಫ್ಯಾಷನ್‌ ಬಗ್ಗೆ ಮಾತನಾಡಿದ್ದಾರೆ.

ಫ್ಯಾಷನ್‌ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ನಿಮ್ಮ ಫ್ಯಾಷನ್‌ ಏನು?

ಫ್ಯಾಷನ್‌ ಎಂಬುದು ಉಡುಪಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ನನ್ನ ಲೈಫ್‌ಸ್ಟೈಲ್‌ನೊಂದಿಗೆ ಬೆಸೆದುಕೊಂಡಿದೆ. ಆತ್ಮವಿಶ್ವಾಸ ಹಾಗೂ ಮುಖದ ಮೇಲಿನ ನಗು ನನ್ನ ಫ್ಯಾಷನ್‌ ಸ್ಟೈಲ್‌ಸ್ಟೇಟ್‌ಮೆಂಟ್‌ಗೆ ಸಾಥ್‌ ನೀಡಿದೆ. ಕ್ಯಾಶುವಲ್‌ ಧರಿಸುವುದು ನನಗಿಷ್ಟ. ಬ್ಲಾಕ್‌ ಹಾಗೂ ವೈಟ್‌ ಬಣ್ಣದ ಉಡುಪುಗಳು ನನ್ನ ಫ್ಯಾಷನ್‌ ಲಿಸ್ಟ್‌ನಲ್ಲಿವೆ.

ನೀವು ಬ್ರಾಂಡ್‌ ಫ್ರೀಕಾ?

ಖಂಡಿತಾ ಇಲ್ಲ. ಸಾಕಷ್ಟು ಪುರುಷರು ಬ್ರಾಂಡ್‌ ಫ್ರೀಕ್‌ ಆಗಿರುತ್ತಾರೆ. ನಾವು ಧರಿಸುವ ಯಾವುದೇ ಬ್ರಾಂಡ್‌ನ ಔಟ್‌ಫಿಟ್‌ ಆಗಲಿ ಅದು ನಮ್ಮನ್ನು ರೆಪ್ರೆಸೆಂಟ್‌ ಮಾಡಬೇಕು. ಟ್ರೆಂಡಿಯಾಗಿರುವುದನ್ನು ಬ್ರಾಂಡ್‌ನದ್ದಾಗಿರದಿದ್ದರೂ ನಾನು ಧರಿಸಲು ಬಯಸುತ್ತೇನೆ.

ಹುಡುಗರಿಗೆ ನೀವು ಯಾವ ಬಗೆಯ 3 ಸಿಂಪಲ್‌ ಟಿಪ್ಸ್‌ ನೀಡುತ್ತೀರಾ?

ನಿಮ್ಮ ಲುಕ್‌ ಬಗ್ಗೆ ಮೊದಲೇ ತಿಳಿದುಕೊಂಡು ಫ್ಯಾಷನ್‌ ಫಾಲೋ ಮಾಡಿ. ಆಕ್ಸೆಸರೀಸ್‌ ಹೆಚ್ಚು ಧರಿಸಬೇಡಿ. ವಾಚ್‌ ಧರಿಸಿ, ಮ್ಯಾನ್ಲಿ ಲುಕ್‌ ನಿಮ್ಮದಾಗುವುದು. ಔಟ್ಫಿಟ್‌ ಟ್ರೆಂಡಿಯಾಗಿರುವುದನ್ನು ಚೂಸ್‌ ಮಾಡಿ.

ನಿಮ್ಮ ಪ್ರಕಾರ, ಹೋಳಿ ಸೆಲೆಬ್ರೇಷನ್‌ಗೆ ಮೆನ್ಸ್‌ ಲುಕ್‌ ಹೇಗಿರಬೇಕು?

ಅತಿಯಾಗಿರಬಾರದು. ಪಾರ್ಟಿಯ ಡ್ರೆಸ್‌ಕೋಡ್‌ ಕಲರ್‌ ಧರಿಸಿ. ಆದಷ್ಟೂ ಸಿಂಪಲ್‌ ಔಟ್‌ಫಿಟ್‌ ಧರಿಸಿ. ಬಿಳಿ ಬಣ್ಣದ ಕುರ್ತಾ ಅಥವಾ ಶರ್ಟ್ ಧರಿಸಿ. ಜೀನ್ಸ್‌ನೊಂದಿಗೆ ಅಥವಾ ಫಾರ್ಮಲ್‌ ಪ್ಯಾಂಟ್‌ ಮ್ಯಾಚ್‌ ಮಾಡಿ. ಆರಾಮ ಏನಿಸುವಂತಹ ಜುಬ್ಬಾ-ಪೈಜಾಮ ಕೂಡ ಧರಿಸಬಹುದು. ಕಂಫರ್ಟ್ವೇರ್‌ ನಿಮ್ಮದಾಗಿರಲಿ.

ಹೋಳಿಯ ಪಾರ್ಟಿಗೆ ಸಾಥ್‌ ನೀಡುವ ಆಕ್ಸೆಸರೀಸ್‌ಗಳ್ಯಾವುವು?

ಆಕ್ಸೆಸರೀಸ್‌ ಧರಿಸುವುದು ನಾಟ್‌ ಓಕೆ. ಕಣ್ಣಿನ ರಕ್ಷಣೆಗೆ ಸನ್‌ಗ್ಲಾಸ್‌ ಧರಿಸುವುದು ಉತ್ತಮ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Weekend style : ಏಜ್ ಈಸ್ ಜಸ್ಟ್ ಎ ನಂಬರ್ ಎನ್ನುವ ಫ್ಯಾಷನ್ ಪ್ರೇಮಿ ಕಮಲ್ ಗಿಮಿರೆ

Exit mobile version