Site icon Vistara News

Weekend Style | ಟ್ರೆಂಡ್‌ಗೆ ತಕ್ಕಂತೆ ಬದಲಾಗುವ ಸುಜಯ್‌ ಫ್ಯಾಷನ್‌

Weekend Style

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸದಾ ಪ್ರಯೋಗಾತ್ಮಕ ಫ್ಯಾಷನ್‌ಗೆ ಪ್ರಯತ್ನಿಸುವ ೨೧ ವರ್ಷದ ಮಾಡೆಲ್‌ ಸುಜಯ್‌ ಅಂಜನ್‌ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ. ವ್ಯಾಸಂಗ ಮಾಡುತ್ತಲೇ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸುಜಯ್‌ ಸದಾ ಒಂದಲ್ಲ ಒಂದು ಕ್ರಿಯಾತ್ಮಕ ಸ್ಟೈಲ್‌ ಸ್ಟೇಟ್‌ಮೆಂಟನ್ನು ಫಾಲೋ ಮಾಡುತ್ತಿರುತ್ತಾರಂತೆ. ಈ ವಾರದ ವೀಕೆಂಡ್‌ ಫ್ಯಾಷನ್‌ ಕಾಲಂನಲ್ಲಿ ತಮ್ಮ ಫ್ಯಾಷನ್‌, ಸ್ಟೈಲ್‌ ಹಾಗೂ ಸೀಸನ್‌ ಟ್ರೆಂಡ್‌ಗಳ ಬಗ್ಗೆ ಹಂಚಿಕೊಂಡಿದ್ದಾರೆ.

ನಿಮ್ಮ ವೀಕೆಂಡ್‌ ಫ್ಯಾಷನ್‌ ಬಗ್ಗೆ ಹೇಳಿ?

ಒಂದೇ ಬಗೆಯ ಉಡುಪುಗಳಿಗೆ ನಾನು ಫಿಕ್ಸ್‌ ಆಗುವುದಿಲ್ಲ. ಪದೇಪದೆ ಹೊಸ ಫ್ಯಾಷನ್‌ ಹಾಗೂ ನನಗೆ ಹೊಂದುವಂತಹ ಉಡುಪುಗಳನ್ನು ಧರಿಸುತ್ತೇನೆ. ಇನ್ನು ವೀಕೆಂಡ್‌ ಫ್ಯಾಷನ್‌ನಲ್ಲಿ ಆ ಸಮಯಕ್ಕೆ ನನಗೆ ಯಾವುದು ಸೂಕ್ತ ಎಂಬುದನ್ನು ಆಯ್ಕೆ ಮಾಡಿ ಧರಿಸುತ್ತೇನೆ.

ನಿಮ್ಮ ಸ್ಟೈಲ್‌ ಸ್ಟೇಟ್‌ಮೆಂಟ್‌ ಬಗ್ಗೆ ವಿವರಿಸಿ?

ಟ್ರೆಂಡ್‌ಗೆ ತಕ್ಕಂತೆ ನನ್ನ ಸ್ಟೈಲ್‌ ಸ್ಟೇಟ್‌ಮೆಂಟ್‌ ಬದಲಾಗುತ್ತಿರುತ್ತದೆ. ಇನ್ನು ಬ್ಲ್ಯಾಕ್‌ ಶೇಡ್‌ ಅಂದ್ರೆ ನನಗೆ ಬಲು ಇಷ್ಟ. ಯಾವುದೇ ಸ್ಟೈಲ್‌ ಸ್ಟೇಟ್‌ಮೆಂಟ್‌ ಆದರೂ ಪಕ್ಕಾ ಆಗಿರುತ್ತೇನೆ. ಅಷ್ಟೊಂದು ನೀಟಾಗಿ ರೆಪ್ರೆಸೆಂಟ್‌ ಮಾಡುತ್ತೇನೆ.

· ಸೀಸನ್‌ಗೆ ತಕ್ಕಂತೆ ನಿಮ್ಮ ಔಟ್‌ಫಿಟ್‌ಗಳಲ್ಲಾಗುವ ಬದಲಾವಣೆಗಳೇನು?

ಸೀಸನ್‌ಗೆ ತಕ್ಕಂತೆ ಖಂಡಿತಾ ನನ್ನ ಔಟ್‌ಫಿಟ್‌ಗಳು ಬದಲಾಗುತ್ತವೆ. ಅದರಲ್ಲೂ ಆಯಾ ಸೀಸನ್‌ನ ಟ್ರೆಂಡಿ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡುತ್ತೇನೆ. ಹಾಗಾಗಿ ನೋಡಲು ಪರ್ಫೆಕ್ಟ್‌ ಜಂಟಲ್‌ಮೆನ್‌ ಲುಕ್‌ ದೊರಕುತ್ತದೆ. ನೋಡುಗರಿಗೂ ಆಕರ್ಷಕವಾಗಿ ಕಾಣುತ್ತದೆ. ಹುಡುಗರು ಆಯಾ ಸೀಸನ್‌ಗೆ ತಕ್ಕಂತೆ ಫ್ಯಾಷನ್‌ ಬದಲಿಸಿಕೊಂಡಲ್ಲಿ ನೋಡಲು ಹ್ಯಾಂಡ್ಸಮ್‌ ಆಗಿ ಕಾಣಬಹುದು.

ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ ಪರ್ಫೆಕ್ಟಾಗಿ ಪ್ರೆಸೆಂಟ್‌ ಮಾಡುವುದು ಹೇಗೆ?

ಉಡುಪು ಪರ್ಫೆಕ್ಟಾಗಿ ಧರಿಸುವುದು ಮಾತ್ರವಲ್ಲ, ಆತ್ಮವಿಶ್ವಾಸ ಕೂಡ ಅಗತ್ಯ. ಯಾವುದೇ ಲುಕ್ಕನ್ನು ಕ್ಲಾಸಿಯಾಗಿ ಬಿಂಬಿಸುವುದು ಗೊತ್ತಿರಬೇಕು. ನೋಡುಗರ ಕಣ್ಮನ ಸೆಳೆಯಬೇಕು. ಆಗಷ್ಟೇ ಔಟ್‌ಫಿಟ್‌ ಆಕರ್ಷಿಸಲು ಸಾಧ್ಯ ಎಂಬುದನ್ನು ಮರೆಯಬಾರದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Weekend Style| ಟ್ರೆಂಡ್‌ಗೆ ತಕ್ಕಂತೆ ಫ್ಯಾಷನ್ ಪಾಲಿಸುವ ದೀಪ್ತಿ ಮೋಹನ್

Exit mobile version