ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವಿಂಟರ್ ಫ್ಯಾಷನ್‌ನಲ್ಲಿ ಶರ್ಟ್ ಸ್ಟೈಲ್ ಹೂಡಿಗಳು ಜನಪ್ರಿಯಗೊಳ್ಳುತ್ತಿವೆ. ಶರ್ಟ್‌ನಂತೆ ಕಾಣುವ, ಜಾಕೆಟ್‌ನಂತೆ ಧರಿಸಿ, ಜತೆಯಲ್ಲಿಯೇ ಅಟ್ಯಾಚ್ ಆದಂತಹ ಕ್ಯಾಪನ್ನು ತಲೆ ಮೇಲೆ ಧರಿಸಬಹುದಾಗಿದೆ. ಟೀ ಶರ್ಟ್ ಹೂಡಿಯ ಕಾನ್ಸೆಪ್ಟ್ ಕೊಂಚ ಬದಲಾಗಿದೆ.
“ನೋಡಲು ಶರ್ಟ್‌ನಂತೆ ಕಂಡರೂ ಇದು ಶರ್ಟ್ ಅಲ್ಲ, ಫುಲ್ ಸ್ಲೀವ್‌ನಲ್ಲಿ ಲಭ್ಯವಿರುವ ಇವು ಮೈಯನ್ನು ಬೆಚ್ಚಗಿಡುತ್ತವೆ. ಚೆಕ್ಸ್, ಗಿಂಗ್ನಂ, ಸ್ಟ್ರೈಪ್ಸ್ ಹಾಗೂ ವೈಬ್ರೆಂಟ್ ಕಲರ್ಸ್‌ನಲ್ಲಿ ಶರ್ಟ್ ಹೂಡಿಗಳು ಈ ಬಾರಿಯ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ “ ಎನ್ನುತ್ತಾರೆ ಮಾಡೆಲ್ ನೇಹಾ ಗೋಯಲ್. ಅಂದಹಾಗೆ, ಹಾಲಿವುಡ್ ಸ್ಟಾರ್‌ಗಳು ಕೂಡ ಹೂಡಿ ಪ್ರೇಮಿಗಳು. ನೋಡಲು ಸ್ಟೈಲಿಶ್ ಲುಕ್ ನೀಡುವ ಕ್ರಾಪ್ ಹೂಡಿ, ಸ್ಲೀವ್‌ಲೆಸ್ ಹೂಡಿಗಳನ್ನು ಹೆಚ್ಚು ಧರಿಸುತ್ತಾರೆ. ಬಾಲಿವುಡ್‌ಗರು ಏರ್‌ಪೋರ್ಟ್ ಲುಕ್‌ಗಾಗಿ ಈ ಹೂಡಿಗಳನ್ನು ಬಳಸುವುದು ಹೆಚ್ಚಾಗಿದೆ.
ಶರ್ಟ್ ಹೂಡಿ ಮ್ಯಾಚ್ ಹೀಗೆ ಮಾಡಿ
ಸ್ಟೈಲಿಸ್ಟ್ ಜಿನತ್ ಹೇಳುವಂತೆ, ಶರ್ಟ್ ಸ್ಟೈಲ್‌ನ ಹೂಡಿಗಳು ಎಲ್ಲಾ ಔಟ್‌ಫಿಟ್‌ಗೂ ಮ್ಯಾಚ್ ಆಗುವುದಿಲ್ಲ. ಉದ್ದವಿರುವ ಸ್ಲಿಮ್ ಹುಡುಗಿಯರಿಗೆ ಪರ್ಫೆಕ್ಟ್ ಔಟ್‌ಫಿಟ್. ಇದನ್ನು ಯಾವುದೇ ಶೈಲಿಯ ಪ್ಯಾಂಟ್‌ಗಳೊಂದಿಗೆ ಧರಿಸಬಹುದು. ಪಲ್ಹಾಜೂ, ಕೇಪ್ರಿಸ್ ಜತೆಗೂ ಶರ್ಟ್ ಹೂಡಿ ಪರ್ಫೆಕ್ಟ್ ಸೂಟ್ ಆಗುತ್ತದೆ. ಆದರೆ, ಪ್ಯಾಂಟ್‌ಗಳ ಕಟ್ಸ್ ಹಾಗೂ ಸ್ಟಿಚ್ಚಿಂಗ್ ಈ ಹೂಡಿಗೆ ಮ್ಯಾಚ್ ಆಗಬೇಕು. ಜಾಕೆಟ್‌ನಂತೆ ಕಾಣುವ ಶರ್ಟ್ ಕ್ರಾಪ್ ಹೂಡಿ ಈ ಸೀಸನ್‌ನಲ್ಲಿ ಈಗಾಗಲೇ ಕಾಲೇಜು ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇನ್ನು ಮಿಕ್ಸ್ ಮ್ಯಾಚ್ ಟೆಕ್ನಿಕ್ ಗೊತ್ತಿದ್ದಲ್ಲಿ, ಸೆಮಿ ಫಾರ್ಮಲ್ ಉಡುಪುಗಳಿಗೂ ಶರ್ಟ್ ಹೂಡಿ ಧರಿಸಬಹುದು.
ಶರ್ಟ್ ಹೂಡಿ ಪ್ರಿಯರ ಆಯ್ಕೆ ಹೀಗಿರಲಿ
ಡಿಸೈನರ್ ಸೂರಜ್ ಪ್ರಕಾರ, ಶರ್ಟ್ ಸ್ಟೈಲ್ ಹೂಡಿಗೆ ಪ್ರಿಂಟ್ಸ್ ಅಥವಾ ಚೆಕ್ಸ್ ಒಳಗೊಂಡ ಪ್ಯಾಂಟ್ ಸೂಟ್ ಆಗುತ್ತದೆ. ಜತೆಗೆ ಕಲರ್ ಫ್ರೇಮ್‌ನ ಸನ್ ಗ್ಲಾಸ್ ಮ್ಯಾಚ್ ಆಗುತ್ತದೆ. ಹೆಚ್ಚು ಆಕ್ಸೆಸರೀಸ್ ಧರಿಸುವುದು ಬೇಡ. ಮೆಸ್ಸಿಯಾಗುತ್ತದೆ. ಶರ್ಟ್ ಹೂಡಿಗೆ ಮ್ಯಾಚ್ ಆಗುವ ಕಿರಿಕಿರಿಯಾಗದ ಮೃದುವಾದ ಇನ್ನರ್ ಟಾಪ್ ಧರಿಸುವುದು ಉತ್ತಮ ಎನ್ನುತ್ತಾರೆ.
ಹೇರ್‌ಸ್ಟೈಲ್ ಮ್ಯಾಚ್
ಶರ್ಟ್ ಸ್ಟೈಲ್ ಹೂಡಿ ಧರಿಸಿ ಲೆಯರ್ ಲುಕ್ ನೀಡುವಾಗ ಆದಷ್ಟೂ ಕಂಫರ್ಟಬಲ್ ಹೇರ್‌ಸ್ಟೈಲ್ ಮಾಡಿ. ಯಾಕೆಂದರೆ ಮೊದಲೇ ಬೆಚ್ಚಗಿನ ಉಡುಪು ಧರಿಸಿ ನಂತರ ಫ್ರೀ ಹೇರ್ ಸ್ಟೈಲ್ ಮಾಡಿದಲ್ಲಿ ಸೆಕೆಯಾಗಬಹುದು. ಹಾಗಾಗಿ ಹೈ ಪೋನಿ, ಫಿಶ್‌ಟೇಲ್, ಸೈಡ್ ಪೋನಿ, ಲಾಂಗ್ ಸೈಡ್ ಚೋಟಿಯಂತಹ ಹೇರ್‌ಸ್ಟೈಲ್‌ಗಳು ಟ್ರೈ ಮಾಡಿ.
ಶರ್ಟ್ ಹೂಡಿ ಪ್ರಿಯರಿಗೆ ಟಿಪ್ಸ್
- ನೀವು ಸ್ಲಿಮ್ ಆಗಿದ್ದಲ್ಲಿ ಫರ್ ಹಾಗೂ ಫ್ರಿಂಝ್ನ ಶರ್ಟ್ ಹೂಡಿ ಸೆಲೆಕ್ಟ್ ಮಾಡಿ.
- ಪ್ಲಂಪಿಯಾಗಿದ್ದಲ್ಲಿ ಸ್ಲಿಮ್ ಫಿಟ್ನ ಶರ್ಟ್ ಹೂಡಿ ಆಯ್ಕೆ
- ಮಾಡಿ.
- ವಿಂಟರ್ ಲುಕ್ ನೀಡಲು ಔಟ್ಫಿಟ್ನೊಂದಿಗೆ ಶೂ ಧರಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)