ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚುಮು ಚುಮು ಚಳಿಗೆ ಬೆಚ್ಚನೆಯ ಉಡುಪುಗಳನ್ನು ಕೊಂಚ ಸ್ಟೈಲಾಗಿ, ಮಿಕ್ಸ್ ಅಂಡ್ ಮ್ಯಾಚ್ ಕಾನ್ಸೆಪ್ಟ್‌ನಲ್ಲಿ ಧರಿಸುವುದೇ ಪ್ರತಿ ಚಳಿಗಾಲದ ಫ್ಯಾಷನ್.
ಪ್ರತಿಬಾರಿಯಂತೆ ಈ ಬಾರಿಯೂ ಹೊಸ ಕಲರ್‌ಕೋಡ್ ಹಾಗೂ ಡ್ರೆಸ್‌ಕೋಡ್‌ಗಳು ಆಗಮಿಸಿವೆ. ಈ ಬಾರಿಯ ವಿಂಟರ್ ಫ್ಯಾಷನ್‌ನಲ್ಲಿ ಗ್ರೀನ್ ಬೀ, ಮೈಕೋನಾಸ್ ಬ್ಲ್ಯೂ, ಬೂದು, ಆಲೀವ್ ಬ್ರಂಚ್, ಎದ್ದು ಕಾಣುವ ಯೆಲ್ಲೋ ಸೇರಿದಂತೆ ನಾನಾ ಶೆಡ್ಸ್ ಸೀಸನ್ ಕಲರ್‌ಗಳೆಂದು ಡಿಕ್ಲೇರ್ ಆಗಿ, ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಹಾಕಿವೆ.
ಲೇಯರ್ ಲುಕ್‌ಗೆ ಸೈ ಎನ್ನಿ :
ಫ್ಯಾಷನ್ ವಿನ್ಯಾಸಕಿ ರೀಟಾ ಹೇಳುವಂತೆ, ಇನ್ನು ಮಿನಿ, ಮಿಡಿ, ಬರ್ಮಾಡಾಸ್ ವಾರ್ಡ್ರೋಬ್‌ವೊಳಗೆ ಸೇರಲಿವೆ. ಬೆಚ್ಚಗಿಡುವ ನಾನಾ ಬಗೆಯ ಡೆನೀಮ್ ಜೀನ್ಸ್, ಜೆಗ್ಗಿಂಗ್ಸ್, ಟ್ರೆಂಗ್ಗಿಂಗ್ಸ್, ಸ್ಕಿನ್ ಟೈಟ್ ಪ್ಯಾಂಟ್ಸ್, ಜಾಕೆಟ್‌ಗಳು, ಫುಲ್ ಆರ್ಮ್ ಡ್ರೆಸ್‌ಗಳು ಈ ಚಳಿಗಾಲಕ್ಕೆ ಎಂಟ್ರಿ ನೀಡಿವೆ. ವೆಲ್ವೆಟ್ ಹಾಗೂ ದಪ್ಪನೆಯ ಫ್ಯಾಬ್ರಿಕ್‌ನ ಸೆಲ್ವಾರ್, ಚೂಡಿದಾರ್, ಕುರ್ತಾ, ಫುಲ್ ಆರ್ಮ್ ಸ್ವೆಟರ್, ಟಾಪ್ಸ್, ಫುಲ್ ಒವರ್ಸ್ , ಕುರ್ತಾ, ಲಾಂಗ್ ಸ್ಲೀವ್, ಪುಶ್ ಬ್ಯಾಕ್ ಪ್ಯಾಂಟ್, ಫಾರ್ಮಲ್ ವೇರ್‌ಗಳು ಬಂದಿವೆ.
ಸ್ಟೈಲಿಸ್ಟ್ ದಿವಿಜಾ ಹೇಳುವಂತೆ, ಸದಾ ಸ್ವೆಟರ್ ಧರಿಸಿ ಬೋರಾದವರು, ಈ ಬಾರಿ ಫ್ಯಾಷನ್ ಡ್ರೆಸ್‌ಕೋಡ್ ಎಂದು ಲಾಂಚ್ ಆಗಿರುವ ಲಾಂಗ್/ಥೈ ಜಾಕೆಟ್ಸ್- ಪುಲ್‌ಒವರ್ಸ್‌ಗಳನ್ನು ಧರಿಸಿ ಹೊಸ ಲುಕ್‌ಗೆ ಮೊರೆ ಹೋಗಬಹುದು.
ಲೈಟ್‌ವೇಟ್ ಲೇಯರ್ ಲುಕ್ :
ಇನ್ನು ಇವೂ ಬೇಡ ಎಂದೆನಿಸಿದಲ್ಲಿ, ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಭಾರವೇ ಇಲ್ಲದ ಕಾಶ್ಮೀರಿ ಲೈಟ್ ವೈಟ್ ಸ್ಟೆಟರ್, ಫರ್ ಜಾಕೆಟ್ಸ್, ಪ್ಲಮ್ ಫ್ರೊಸ್ಟ್ ಪುಲ್‌ಓವರ್ಸ್, ಲೇಡಿಸ್ ಪುಲ್‌ಓವರ್ಸ್, ಸ್ಲೀವ್ ಪುಲ್‌ಓವರ್ಸ್, ಕರ್ಲಿಕೌಲ್, ರಿವೆರ್ಸಿಬಲ್, ವೂಲ್ ಸ್ವಿಂಗ್ ಕೋಟ್, ಡಿಸೈನರ್ ವಿಂಟರ್ ಶರ್ಟ್‌ಗಳನ್ನು ಖರೀದಿಸಬಹುದು.
ಹೀಗಿರಲಿ ಚಳಿಗಾಲಕ್ಕೆ ಮಿಕ್ಸ್ -ಮ್ಯಾಚ್ :
ಫ್ಯಾಷನ್ ಡಿಸೈನರ್ ಅಮಿತ್ ರಾಜ್ ಪ್ರಕಾರ, ಇಂದು ಕಾಲ ಬದಲಾದಂತೆ ಹಾಕುವ ಡ್ರೆಸ್ ಕೋಡ್ ಕೂಡ ಬದಲಾಗುತ್ತಿದೆ. ಹಾಗೆಂದು ಎಲ್ಲರೂ ಆಯಾ ಕಾಲದ ಫ್ಯಾಷನ್‌ಗೆ ತಕ್ಕಂತೆ ಹೊಸ ಫ್ಯಾಷನ್ ಉಡುಪುಗಳನ್ನೇ ಕೊಂಡು ಧರಿಸಬೇಕೆಂಬುದಿಲ್ಲ! ಶಾಪಿಂಗ್ ಮಾಡುವಾಗ ಗಮನದಲ್ಲಿಟ್ಟು, ಮಿಕ್ಸ್ ಆ್ಯಡ್ ಮ್ಯಾಚ್ ಕಾನ್ಸೆಪ್ಟ್ ಬಳಸಬಹುದಾದ ಡ್ರೆಸ್‌ಗಳನ್ನು ಕೊಂಡರಾಯಿತು.
ಉದಾಹರಣೆಗೆ, ಲಾಂಗ್‌ಸ್ಕರ್ಟ್‌ನೊಂದಿಗೆ ಜಾಕೆಟ್, ಸ್ಲೀವ್‌ಲೆಸ್ ಟಾಪ್‌ಗೆ ಜೀನ್ಸ್ ಜಾಕೆಟ್, ಜೀನ್ಸ್ ಪ್ಯಾಂಟ್‌ಗೆ ಫುಲ್ ಆರ್ಮ್ ಟಾಪ್, ಇಲ್ಲವೇ ಲೆದರ್ ಥೈ ಜಾಕೆಟ್, ಟರ್ಟಲ್‌ನೆಕ್ ಪುಲ್ ಓವರ್ಸ್, ಝಿಪ್ ಕೋಟ್, ಕಲರ್‌ಫುಲ್ ಸ್ಕಾರ್ಫ್ ಹೀಗೆ ಮಿಕ್ಸ್ ಮ್ಯಾಚ್ ಫ್ಯಾಷನ್ ಮಾಡಬಹುದು. ನಯಾ ಲುಕ್ ನೀಡಲು ವೆವ್ಸ್ ಪ್ರಿಂಟ್ಸ್ ಇರುವ ಸ್ಕಾರ್ಫ್ ಬಳಸಬಹುದು.
ವಿಂಟರ್ ಫ್ಯಾಷನ್‌ಗೆ ಖರೀದಿಸುವ ಮುನ್ನ ಗಮನಿಸಿ :
· ಎಲ್ಲ ಉಡುಪಿನೊಂದಿಗೂ ಧರಿಸಬಹುದಾದ ಕಾಮನ್ ಕಲರ್‌ನ ಕೋಟ್ ಖರೀದಿಸಿ.
· ಜಾಕೆಟ್ ವೆಸ್ಟರ್ನ್ ಉಡುಪಿಗೆ ಮ್ಯಾಚ್ ಮಾಡಬಹುದು.
· ಸ್ಕಾರ್ಫ್ ಕೂಡ ಎಲ್ಲ ಉಡುಪಿಗೂ ಧರಿಸಬಹುದು.
· ಲೈಟ್‌ವೇಟ್ ಸ್ವೆಟರ್ ಆಯ್ಕೆ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Kannada Rajyotsava Celebrities Fashion | ಕನ್ನಡ ಪ್ರೇಮ ಬಿಂಬಿಸುವ ಉಡುಗೆಗಳಲ್ಲಿ ರಾಜ್ಯೋತ್ಸವ ಆಚರಿಸಿದ ಸೆಲೆಬ್ರಿಟಿಗಳು