Site icon Vistara News

Winter Fashion | ಚಳಿಗಾಲಕ್ಕೆ ಹೊಸ ರೂಪದಲ್ಲಿ ಮರಳಿದ ಟರ್ಟಲ್‌ ನೆಕ್‌ ಔಟ್‌ಫಿಟ್ಸ್

Winter Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ಚಳಿಗಾಲದಲ್ಲಿ ಟರ್ಟಲ್‌ ನೆಕ್‌ ಔಟ್‌ಫಿಟ್ಸ್‌ ಹೊಸ ರೂಪದಲ್ಲಿ ಮರಳಿವೆ. ಆದರೆ, ಹೊಸ ರೂಪಕ್ಕೆ ಪೂರಕವಾಗುವಂತೆ ಮಿಕ್ಸ್‌ ಮ್ಯಾಚ್‌ ಫ್ಯಾಷನ್‌ನಲ್ಲಿ ಕಾಣಿಸಿಕೊಂಡಿವೆ. ಅದರಲ್ಲೂ ಲೈಟ್‌ ವೇಟ್‌ ಉಡುಪುಗಳಲ್ಲಿ, ಸ್ವೆಟರ್‌ಗಳಲ್ಲಿ ಕತ್ತನ್ನು ಸುತ್ತುವರಿದ ಈ ಟರ್ಟಲ್‌ ನೆಕ್‌ ರೀ ಎಂಟ್ರಿ ನೀಡಿದ್ದು, ಎಂದಿನಂತೆ ಫುಲ್‌ ಸ್ಲೀವ್‌ ಸ್ವೆಟರ್‌ ಸ್ಟೈಲ್‌ನ ಟೀ ಶರ್ಟ್, ಪುಲ್‌ಓವರ್‌, ಫ್ರಾಕ್‌, ಟಾಪ್‌ ಹಾಗೂ ಕ್ಯಾಶುವಲ್‌ ಉಡುಪುಗಳಲ್ಲಿ ಕಾಣಿಸಿಕೊಂಡಿವೆ.

“ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಟರ್ಟಲ್‌ ನೆಕ್‌ ಡಿಸೈನರ್‌ವೇರ್‌ಗಳು ಇದೀಗ ಕಾರ್ಪೊರೇಟ್‌ ಕ್ಷೇತ್ರದವರನ್ನು ಅತಿ ಹೆಚ್ಚು ಆಕರ್ಷಿಸಿವೆ. ನೋಡಲು ಅಫಿಶಿಯಲ್‌ ಲುಕ್‌ ನೀಡುತ್ತವೆ. ಸಾಮಾನ್ಯ ಡ್ರೆಸ್‌ಗಳಂತೆ ಇವು ಕಾಣಿಸುವುದಿಲ್ಲ. ನೋಡಲು ವಿಭಿನ್ನ ಲುಕ್‌ ನೀಡುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಕ್ಯಾಶುವಲ್‌ ಧರಿಸುವವರಿಗೆ ಇದು ಈ ಸೀಸನ್‌ಗೆ ಹೇಳಿ ಮಾಡಿಸಿದ ಔಟ್‌ಫಿಟ್‌ ಎನ್ನಬಹುದು. ಇದನ್ನು ಬ್ಲೇಝರ್‌, ಕಾರ್ಡಿಗಾನ್‌ ಇಲ್ಲವೇ ಶ್ರಗ್ಸ್‌ ಜತೆಯಲ್ಲಿ ಧರಿಸಬಹುದು” ಎನ್ನುತ್ತಾರೆ ಡಿಸೈನರ್ಸ್‌.

ವ್ಯಕ್ತಿತ್ವಕ್ಕೆ ತಕ್ಕಂತೆ ಟರ್ಟಲ್‌ ನೆಕ್‌ ಡ್ರೆಸ್‌

ಉದ್ದ ಕತ್ತು ಇರುವವರಿಗೆ ಈ ನೆಕ್‌ಲೈನ್‌ ಸುಂದರವಾಗಿ ಕಾಣುತ್ತವೆ. ಮಾಡೆಲ್‌ ಲುಕ್‌ ನೀಡುತ್ತವೆ. ಕತ್ತು ಚಿಕ್ಕ ಇರುವವರಿಗೆ ಇದು ಸೂಟ್‌ ಆಗದು. ಇನ್ನು ಸೀಸನ್‌ಗೆ ತಕ್ಕಂತೆ ಶೇಡ್ಸ್‌ ಹಾಗೂ ಕಲರ್‌ಗಳನ್ನು ಆಯ್ಕೆ ಮಾಡಿದಲ್ಲಿ ಟ್ರೆಂಡಿಯಾಗಿಯೂ ಕಾಣಬಹುದು. ಇನ್ನು ಕ್ರಾಪ್‌ ಟಾಪ್‌ನವು ಕಾಲೇಜು ಹುಡುಗಿಯರಿಗೆ ಸೂಟ್‌ ಆಗುತ್ತವೆ. ಸ್ಲೀವ್‌ಲೆಸ್‌ ಟರ್ಟಲ್‌ ನೆಕ್‌ ಕಾರ್ಡಿಗಾನ್‌ ಇಲ್ಲವೇ ಬ್ಲೇಝರ್‌ ಜತೆ ಧರಿಸಿದಾಗಲೂ ನೋಡಲು ಆಕರ್ಷಕವಾಗಿ ಕಾಣುತ್ತವೆ. ಅಷ್ಟೇಕೆ! ಸ್ಟ್ರಾಪ್ ಡ್ರೆಸ್ಸನ್ನು ಇದರ ಮೇಲೆ ಧರಿಸಬಹುದು ಎಂದು ಸ್ಟೈಲಿಸ್ಟ್‌ ಜಾಯ್‌ ಟಿಪ್ಸ್‌ ನೀಡುತ್ತಾರೆ.

ಮಿಕ್ಸ್‌ ಮ್ಯಾಚ್‌ ಫ್ಯಾಷನ್‌ಗೆ ಸಾಥ್‌

ಇವ್‌ನಿಂಗ್‌ ಸ್ಕರ್ಟ್ಸ್ ಅಥವಾ ಮಿನಿ ಸ್ಕರ್ಟ್ಸ್ ಜತೆಯೂ ಧರಿಸಬಹುದು. ಇದರ ಜತೆಗೆ ಹೈ ಹೀಲ್ಸ್‌ ಸಖತ್‌ ಮ್ಯಾಚಿಂಗ್‌. ಬ್ಯಾಗಿ ಸ್ವೆಟ್‌ ಪ್ಯಾಂಟ್ಸ್‌, ಸ್ಲಿಂಕಿ ಟರ್ಟಲ್‌ ನೆಕ್‌ ಕ್ಲಾಸಿಕ್‌ ಕೊಂಬೊ ಲುಕ್‌ ನೀಡುತ್ತದೆ. ಟಿನೇಜ್‌ ಹುಡುಗಿಯರಿಗೆ ಹಾಗೂ ವರ್ಕಿಂಗ್‌ ವುಮೆನ್‌ಗೆ, ಕಾರ್ಪೊರೇಟ್‌ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಾಗೂ ಕ್ಯಾಶುವಲ್‌ ಉಡುಪನ್ನು ಚೆನ್ನಾಗಿ ಕ್ಯಾರಿ ಮಾಡುವವರಿಗೆ ಇದು ಪರ್ಫೆಕ್ಟ್‌ ಸೂಟ್‌ಆಗುತ್ತವೆ ಎನ್ನುತ್ತಾರೆ ಡಿಸೈನರ್‌ ರಾಶಿ. ಹಾಗಾಗಿ ಈ ನೆಕ್‌ಗೆ ಮೊರೆ ಹೋಗುವ ಮುನ್ನ ಪರ್ಸನಾಲಿಟಿ ಹಾಗೂ ತಮ್ಮ ಸ್ಟೈಲ್‌ಗೆ ಹೊಂದುತ್ತದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ.

ಟರ್ಟಲ್‌ ನೆಕ್‌ ಉಡುಪಿಗೆ ಜ್ಯುವೆಲರಿ ಅಗತ್ಯವಿಲ್ಲ

ಟರ್ಟಲ್‌ ನೆಕ್‌ ಕತ್ತನ್ನು ಕಂಪ್ಲೀಟ್‌nಆವರಿಸಿಕೊಳ್ಳುತ್ತದೆ. ಹಾಗಾಗಿ ಯಾವುದೇ ಆಕ್ಸೆಸರೀಸ್‌ ಬೇಡ. ಆಕ್ಸೆಸರೀಸ್‌ ಧರಿಸಲೇ ಬೇಕಿದ್ದಲ್ಲಿ ಲಾಂಗ್‌ ಚೈನ್‌ನಂತವನ್ನು ಹಾಕಿಕೊಳ್ಳಬಹುದು.

ಟರ್ಟಲ್‌ ನೆಕ್‌ ಪ್ರಿಯರಿಗೆ ಒಂದಿಷ್ಟು ಟಿಪ್ಸ್‌

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Mens Fashion | ಫಾರ್ಮಲ್‌ ಔಟ್‌ಫಿಟ್‌ ರೂಲ್ಸ್‌ ಬ್ರೇಕ್‌ ಮಾಡಿದ ನಟ ಪ್ರತೀಕ್‌ ಬಬ್ಬರ್‌

Exit mobile version