ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವರ್ಷದ ಕೊನೆಯ ವಿಂಟರ್ ಫ್ಯಾಷನ್‌ನಲ್ಲಿ ಇದೀಗ ಬಣ್ಣ ಬಣ್ಣದ ಪ್ಯಾಂಟ್‌ಗಳ ಕಲರವ. ಹೌದು. ಟೀನೇಜ್-ಕಾಲೇಜ್ ಹುಡುಗಿಯರ ಕ್ರೇಜಿ ಫ್ಯಾಷನ್ ಲಿಸ್ಟ್‌ಗೆ ಈ ಕಲರ್‌ಫುಲ್ ಪ್ಯಾಂಟ್‌ಗಳು ಸೇರಿವೆ. ಅವರ ವಾರ್ಡ್‌ರೋಬ್‌ನಲ್ಲಿ ಸದ್ಯಕ್ಕೆ ಸ್ಥಾನ ಭದ್ರವಾಗಿಸಿಕೊಂಡಿವೆ.
ಕಲರ್ ಪ್ಯಾಂಟ್‌ಗಳ ಫ್ಯಾಷನ್
ಮೊದಲೆಲ್ಲ ಬ್ಲ್ಯೂ ಅಥವಾ ಬ್ಲ್ಯಾಕ್ ಜೀನ್ಸ್ ಹಾಕಿಕೊಂಡರೇ ಫ್ಯಾಷನ್ ಎಂಬ ಬೋರ್ಡ್ ತಗುಲಿ ಹಾಕಿಕೊಳ್ಳುತ್ತಿತ್ತು. ಆದರೆ, ಇದೀಗ ಜನರೇಷನ್ ಬದಲಾದಂತೆ ಫ್ಯಾಷನ್ ಹಾಗೂ ಸೀಸನ್ ಸ್ಟೈಲ್ ಎಲ್ಲವೂ ಸಂಪೂರ್ಣ ಬದಲಾಗಿದೆ. ಇದಕ್ಕೆ ಪೂರಕ ಎಂಬಂತೆ ಪ್ಯಾಂಟ್‌ಗಳು ತಮ್ಮ ಮೂಲ ರೂಪ ಬದಲಿಸಿಕೊಂಡು ನಾನಾ ವರ್ಣಗಳಲ್ಲಿ ಬಿಡುಗಡೆಗೊಂಡಿವೆ. ಒಂದಕ್ಕಿಂತ ಒಂದು ಭಿನ್ನ-ವಿಭಿನ್ನ ವರ್ಣಗಳಲ್ಲಿ ಕಾಣಿಸಿಕೊಂಡಿವೆ. ಅದರಲ್ಲೂ ಈ ವಿಂಟರ್ ಸೀಸನ್‌ನ ವರ್ಷದ ಕೊನೆಯ ಫ್ಯಾಷನ್ ಲಿಸ್ಟ್‌ನಲ್ಲಿ ಬ್ರೈಟ್ ಬಣ್ಣದ ಪ್ಯಾಂಟ್‌ಗಳು ಅಗ್ರ ಸ್ಥಾನ ಪಡೆದುಕೊಂಡಿವೆ. ನೋಡಲು ವೈಬ್ರೆಂಟ್ ಲುಕ್ ನೀಡುವ ಇವು ಸದ್ಯಕ್ಕೆ ಟೀನೇಜ್ ಹಾಗೂ ಕಾಲೇಜ್ ಹುಡುಗಿಯರನ್ನು ಸೆಳೆದಿವೆ. ಕೇವಲ ಜೀನ್ಸ್ ಫ್ಯಾಬ್ರಿಕ್ ಮಾತ್ರವಲ್ಲ, ಇತರೇ ಫ್ಯಾಬ್ರಿಕ್‌ಗಳಲ್ಲೂ ಕಾಣಿಸಿಕೊಂಡಿವೆ. ಒಂದಕ್ಕಿಂತ ಒಂದು ವಿಭಿನ್ನವಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಜ್ ಶರ್ಮಾ.
ಮಿಕ್ಸ್ ಮ್ಯಾಚ್ ಫ್ಯಾಷನ್‌ಗೆ ನಾಂದಿ ಹಾಡಿದ ಕಲರ್ ಪ್ಯಾಂಟ್ಸ್
ಅಂದಹಾಗೆ, ಈ ಕಲರ್ ಪ್ಯಾಂಟ್‌ಗಳು ವಿಂಟರ್‌ನ ಮಿಕ್ಸ್ ಮ್ಯಾಚ್ ಫ್ಯಾಷನ್‌ಗೆ ನಾಂದಿ ಹಾಡಿವೆ. ಧರಿಸುವ ಟಾಪ್ ಅಥವಾ ಟೀ ಶರ್ಟ್ ಇಲ್ಲವೇ ಲೇಯರ್ ಲುಕ್‌ಗೆ ತಕ್ಕಂತೆ ಇವನ್ನು ಮಿಕ್ಸ್ ಮ್ಯಾಚ್ ಮಾಡಿ ಧರಿಸುವುದು ಈ ಸೀಸನ್‌ನ ಹಾಟ್ ಪ್ಯಾಂಟ್ ಫ್ಯಾಷನ್ ಲಿಸ್ಟ್‌ಗೆ ಸೇರಿದೆ. ಅದರಲ್ಲೂ ಹುಡುಗಿಯರು ಊಹೆಗೂ ಮೀರಿದ ಮಿಕ್ಸ್ ಮ್ಯಾಚ್ ಇಲ್ಲವೇ ಆಕ್ಸೆಸರೀಸ್‌ನೊಂದಿಗೆ ಧರಿಸುವುದು ಈ ಜನರೇಷನ್‌ನ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸೇರಿದೆ ಎನ್ನುತ್ತಾರೆ ಸ್ಟೈಲ್ ಅಡ್ವೈಸರ್ ರೀಟಾ. ಅವರ ಪ್ರಕಾರ, ಕೆಲವು ಬಣ್ಣದ ಪ್ಯಾಂಟ್‌ಗಳು ಕೇವಲ ಯಂಗ್ ಯುವತಿಯರಿಗೆ ಚೆನ್ನಾಗಿ ಕಾಣಿಸುತ್ತವೆ. ಹಾಗಾಗಿ ಇತರರು ಇವುಗಳ ಆಯ್ಕೆ ಮಾಡುವಾಗ ಯೋಚಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ.
ವಿಂಟರ್ ಬ್ರೈಟ್ ಕಲರ್ ಪ್ಯಾಂಟ್ ಆಯ್ಕೆ ಹೀಗಿರಲಿ
ಕಲರ್ ಪ್ಯಾಂಟ್ ಆಯ್ಕೆ ಮಾಡುವಾಗ ಆದಷ್ಟೂ ಧರಿಸುವ ಟಾಪ್‌ಗೆ ಮ್ಯಾಚ್ ಆಗುತ್ತದೆಯೇ ಎಂಬುದು ನೆನಪಿರಲಿ.
ಇದಕ್ಕೆ ಸೂಕ್ತ ಫುಟ್‌ವೇರ್ ಕೂಡ ಧರಿಸುವುದು ಅಗತ್ಯ.
ಕಾರ್ಪೋರೇಟ್ ಲುಕ್ ನೀಡಲು ಎಲಿಗೆಂಟ್ ಮಿಕ್ಸ್ ಮ್ಯಾಚ್ ಮಾಡಿ.
ಪ್ಯಾಂಟ್‌ನ ಶೇಡ್‌ಗೆ ತಕ್ಕಂತೆ ಧರಿಸುವ ಆಕ್ಸೆಸರೀಸ್ ಹೊಂದಬೇಕು.
ಮಿನಿಮಲ್ ಮೇಕಪ್ ಮಾಡುವುದು ಉತ್ತಮ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Winter Fashion | ಲಕ್ಷುರಿ ವಿಂಟರ್ ಫ್ಯಾಷನ್‌ಗೆ ಸೇರಿದ ಶಿಯರ್ಲಿಂಗ್ ಜಾಕೆಟ್