ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಚಳಿಗಾಲದಲ್ಲಿ ಕಲರ್‌ಫುಲ್ ಪಫರ್ ಜಾಕೆಟ್‌ಗಳು ಎಂಟ್ರಿ ನೀಡಿವೆ. ಮೊದಲೆಲ್ಲಾ ಕೇವಲ ಬ್ಲಾಕ್, ಬ್ರೌನ್ ಹಾಗೂ ಡಾರ್ಕ್ ಶೇಡ್‌ಗಳಲ್ಲಿ ಲಭ್ಯವಿದ್ದ ಪಫರ್ ಜಾಕೆಟ್‌ಗಳು ಇದೀಗ ಕಲರ್‌ಫುಲ್ ಶೇಡ್‌ಗಳಲ್ಲಿ ದೊರೆಯುತ್ತಿವೆ.
ಇನ್ನು ಇವುಗಳಲ್ಲಿ ಮಲ್ಟಿ ಪಾಕೆಟ್ ಪಫರ್ ಜಾಕೆಟ್, ವೀನೆಕ್ ಫರ್ ಮಿಕ್ಸ್ ಪಫ್ ಕೋಟ್, ಡೌನ್ ಕ್ವಿಲ್ಟಿಂಗ್ ಪಫರ್ ಕೋಟ್, ಡಿಟ್ಯಾಚಬಲ್ ಪಫರ್ ಜಾಕೆಟ್ ಸೇರಿದಂತೆ ನಾನಾ ಬಗೆಯವು ಚಳಿಗಾಲದ ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ.
ಇದರೊಂದಿಗೆ ಕೆಲವು ಯೂನಿಸೆಕ್ಸ್ ಪಫರ್ ಜಾಕೆಟ್‌ಗಳು ಚಾಲ್ತಿಯಲ್ಲಿವೆ.
ಈ ಪಫರ್ ಜಾಕೆಟ್‌ಗಳು ಎಕ್ಸ್‌ಟ್ರೀಮ್ ಚಳಿಯನ್ನು ತಡೆಯುತ್ತವೆ. ದೇಹದ ತಾಪಮಾನವನ್ನು ಕಾಪಾಡುತ್ತವೆ. ಹೊರಗಿನ ವಾತಾವರಣದಲ್ಲಿನ ಚಳಿಯಿಂದ ದೇಹವನ್ನು ಸಂರಕ್ಷಿಸುತ್ತವೆ. ದೇಹವನ್ನು ಬೆಚ್ಚಗಿಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಏನಿದು ಪಫರ್ ಜಾಕೆಟ್ ?
ಪಫರ್ ಜಾಕೆಟ್‌ಗಳು ಸಾದಾ ಇರುವುದಿಲ್ಲ. ಕೊಂಚ ಕುಶನ್ ಅನುಭವ ನೀಡುವ ಪಫ್ಫಿ ಲೆಯರ್ ಹೊಂದಿರುತ್ತವೆ. ಎ ಲೈನ್ ಹಾಗೂ ಸ್ಟ್ರೀಮ್ ಲೈನ್ ಸ್ಟಿಚ್ಚಿಂಗ್ ಹೊಂದಿರುತ್ತವೆ. ಕಾಮನ್ ಆಗಿ ಎಲ್ಲೆಡೆ ದೊರಕುವ ಪಫರ್ ಜಾಕೆಟ್‌ಗಳು ಒಂದೇ ಡಿಸೈನ್ ಹಾಗೂ ಸ್ಟಿಚ್ಚಿಂಗ್ ಟೈಪ್ ಹೊಂದಿರುತ್ತವೆ. ವೂಲ್ ಹಾಗೂ ಲೆದರ್‌ನದ್ದು ಹೊರತುಪಡಿಸಿದರೆ ಉಳಿದೆಲ್ಲವೂ ಹೆಚ್ಚು ಬೆಲೆ ಇರುವುದಿಲ್ಲ. ಸಿಂಥೆಟಿಕ್ ಫ್ಯಾಬ್ರಿಕ್ ಹೊಂದಿರುವ ಇವು ಲೈಟ್‌ವೇಟ್ ಹೊಂದಿರುತ್ತವೆ.
ಹುಡುಗಿಯರ ಪಫರ್ ಜಾಕೆಟ್ ಹೀಗಿರಲಿ
ಸ್ಲಿಮ್ ಹುಡುಗಿಯರಿಗೆ ಪಫರ್ ಜಾಕೆಟ್ ಹೇಳಿ ಮಾಡಿಸಿದ ಲೆಯರ್ ಲುಕ್ ನೀಡುವ ಔಟ್‌ಫಿಟ್. ಪ್ಲಂಪಿಯಾಗಿರುವವರು ಆದಷ್ಟೂ ಇದನ್ನು ಅವಾಯ್ಡ್ ಮಾಡಬೇಕು. ಇನ್ನು ಧರಿಸಲೇ ಬೇಕೆಂಬ ಆಸೆ ಇರುವವರು ಆದಷ್ಟೂ ನೀ ಲೆಂತ್ ಇರುವ ಲಾಂಗ್ ಪಫರ್ ಜಾಕೆಟ್‌ಗಳನ್ನು ಸೆಲೆಕ್ಟ್ ಮಾಡಿದರೇ ಉತ್ತಮ. ಇಲ್ಲವಾದಲ್ಲಿ ನೋಡಲು ಫಿಗರ್‌ಲೆಸ್ ಆಗಿ ಕಾಣಬಹುದು.
ಹುಡುಗರ ಪಫರ್ ಜಾಕೆಟ್ ಹೀಗಿರಲಿ
ಯಾವುದೇ ಪಫರ್ ಜಾಕೆಟ್ ಎಂದಾಕ್ಷಣ ಅತಿ ಹೆಚ್ಚು ಅದರತ್ತ ಅಟ್ರಾಕ್ಟ್ ಆಗುವುದು ಹುಡುಗರು. ರೆಡ್, ಬ್ರೌನ್ಸ್, ಟ್ಯಾನ್ಸ್, ಆರೆಂಜ್ ಹಾಗೂ ಕ್ರೀಮ್ ವರ್ಣದ ಪಫರ್ ಜಾಕೆಟ್‌ಗಳು ಹುಡುಗರಿಗೆ ಬಿಡುಗಡೆಯಾಗಿವೆ. ಬ್ಲ್ಯಾಕ್ ಕಲರ್‌ನ ಪಫರ್ ಜಾಕೆಟ್‌ಗಳು ಎವರ್‌ಗ್ರೀನ್ ಇಂದು ಯೂನಿವರ್ಸಲ್ ಚಾಯ್ಸ್ ಆಗಿದೆ. ಎಲ್ಲಾ ಉಡುಪುಗಳ ಮೇಲೂ ಸೂಟ್ ಆಗುವ ಬ್ಲಾಕ್ ಶೇಡ್‌ನ ಜಾಕೆಟ್‌ಗಳಿಗೆ ಇಂದಿಗೂ ಬೇಡಿಕೆ ಕುಂದಿಲ್ಲ!
ಪಫರ್ ಜಾಕೆಟ್ ಪ್ರಿಯರಿಗೆ ಸಲಹೆ
- ಪರ್ಸನಾಲಿಟಿಗೆ ತಕ್ಕಂತೆ ಪಫರ್ ಜಾಕೆಟ್ಸ್ ಧರಿಸಿ.
- ವಿಂಟರ್ನಲ್ಲಿ ಆದಷ್ಟೂ ಬ್ರೈಟ್ ಶೇಡ್ ಆಯ್ಕೆ ಮಾಡಿ.
- ಟ್ರೆಡಿಷನಲ್ ವೇರ್ನೊಂದಿಗೆ ಧರಿಸಬೇಡಿ.
- ರೈಡರ್ಗಳಿಗೆ ಸಖತ್ತಾಗಿ ಕಾಣುತ್ತದೆ.
- ಟೂ ಇನ್ ಒನ್ ಕೂಡ ಕೊಳ್ಳಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star beach Fashion | ಮಾಯಾ ಬೇ ಬೀಚ್‌ನಲ್ಲಿ ನಟಿ ಶುಭಾರಕ್ಷಾ ಬಿಂದಾಸ್ ಬಿಕಿನಿ ಫ್ಯಾಷನ್