Site icon Vistara News

Winter Lip Care: ಚಳಿಗಾಲದಲ್ಲಿ ಬಿರುಕು ತುಟಿಯಿಂದ ಬಚಾವಾಗಲು ಹೀಗೆ ಮಾಡಿ

Winter Lip Care

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಚಳಿಗಾಲದಲ್ಲಿ ಆಕರ್ಷಕ ತುಟಿಗಳನ್ನು ಕಾಪಾಡಲು (Winter Lip Care) ಒಂದಿಷ್ಟು ಟಿಪ್ಸ್‌ ಫಾಲೋ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಬಿರುಕು ಮೂಡಿ ಸೌಂದರ್ಯಕ್ಕೆ ಧಕ್ಕೆಯುಂಟಾಗಬಹುದು. ಹಾಗಾಗಿ ಈ ಸಿಂಪಲ್‌ ಬ್ಯೂಟಿ ಟಿಪ್ಸ್‌ ಫಾಲೋ ಮಾಡಿ ಎನ್ನುತ್ತಾರೆ ಸೌಂದರ್ಯ ತಜ್ಞರು.

ಸೂಕ್ತ ಲಿಪ್‌ ಬಾಮ್‌ ಹಚ್ಚಿ

ಚಳಿಗಾಲದಲ್ಲಿ ಪದೇ ಪದೇ ಲಿಪ್‌ ಬಾಮ್‌ ಹಚ್ಚಬೇಕಾಗುತ್ತದೆ. ಯಾಕೆಂದರೆ, ತುಟಿ ಒಣಗಿದಂತಾದಾಗ ಹಚ್ಚದಿದ್ದಲ್ಲಿ ಬಿರುಕು ಮೂಡಿ ಸಿಪ್ಪೆ ಸುಲಿಯುತ್ತದೆ. ಹಾಗಾಗಿ ನಿಮ್ಮ ಜೊತೆಯಲ್ಲೆ ಲಿಪ್‌ ಬಾಮ್‌ ಹಚ್ಚಿ. ಉತ್ತಮ ಗುಣಮಟ್ಟದ ಲಿಪ್‌ ಬಾಮ್‌ ಬಳಸಿ. ಪ್ಯಾರಾಬೆನ್‌ ಹಾಗೂ ಅಲ್ಕೋಹಾಲ್‌ ಮುಕ್ತ ಲಿಪ್‌ ಬಾಮ್‌ ಆಯ್ಕೆ ಮಾಡಿ.

ಹೆಚ್ಚೆಚ್ಚು ನೀರು ಕುಡಿಯಿರಿ

ಚಳಿಗಾಲದಲ್ಲಿ ದೇಹಕ್ಕೆ ಹೆಚ್ಚು ನೀರಿನ ಅಗತ್ಯವಿರುತ್ತದೆ. ಹಾಗಾಗಿ ಹೆಚ್ಚು ನೀರನ್ನು ಕುಡಿಯಿರಿ. ಇದು ದೇಹವನ್ನು ತಂಪಾಗಿರಿಸುವುದರೊಂದಿಗೆ ಚರ್ಮ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಲಿಪ್‌ಗೂ ಸ್ಕ್ರಬ್‌

ತುಟಿಗಳಿಗೂ ವಾರಕ್ಕೊಮ್ಮೆ ಸ್ಕ್ರಬ್‌ ಮಾಡುವುದರಿಂದ ಡೆಡ್‌ ಸ್ಕಿನ್‌ ತೊಡೆದು ಹಾಕಬಹುದು. ಮನೆಯಲ್ಲೆ ದೊರಕುವ ಕೊಂಚ ಜೇನುತುಪ್ಪ ಹಾಗೂ ಸಕ್ಕರೆಯನ್ನು 1:2 ಅನುಪಾತದಲ್ಲಿ ಮಿಕ್ಸ್‌ ಮಾಡಿ. ತುಟಿ ಮೇಲೆ ಒಂದೈದು ನಿಮಿಷ ಸ್ಕ್ರಬ್‌ ಮಾಡಿ. ಹೀಗೆ ಮಾಡುವುದರಿಂದ ತುಟಿಯ ಚರ್ಮ ಸಾಫ್ಟ್‌ ಆಗುತ್ತದೆ.

ಪದೇಪದೆ ತುಟಿಗೆ ನಾಲಿಗೆ ಮುಟ್ಟಿಸಬೇಡಿ

ಪದೇಪದೆ ತುಟಿಯನ್ನು ನಾಲಿಗೆಯಿಂದ ನೆಕ್ಕುವುದರಿಂದ ಅದು ಒಣಗಿದಂತಾಗಿ ಒರಟಾಗುತ್ತದೆ. ಇದನ್ನು ಮೊದಲು ತಪ್ಪಿಸಿ.

ಹಾಲಿನ ಕೆನೆ ಸವರಿಕೊಳ್ಳಿ

ಮನೆಯಲ್ಲಿ ದೊರೆಯುವ ಬೆಣ್ಣೆ-ತುಪ್ಪ ಅಥವಾ ಹಾಲಿನ ಕೆನೆಯನ್ನು ಮನೆಯಲ್ಲಿದ್ದಾಗ ತುಟಿಗೆ ಸವರಿಕೊಳ್ಳಿ. ಇದರಲ್ಲಿನ ಜಿಡ್ಡಿನ ಅಂಶ ತುಟಿಯನ್ನು ನ್ಯಾಚುರಲ್‌ ಆಗಿ ಸುಕೋಮಲವಾಗಿಸುತ್ತದೆ.

ಮ್ಯಾಟ್‌ ಲಿಪ್‌ಸ್ಟಿಕ್‌ ಆವಾಯ್ಡ್ ಮಾಡಿ

ಲಾಂಗ್‌ ಲಾಸ್ಟಿಂಗ್‌ 24/7 ಲಿಪ್‌ಸ್ಟಿಕ್ಸ್‌ ಹಾಗೂ ಮ್ಯಾಟ್‌ ಲಿಪ್‌ಸ್ಟಿಕ್ಸ್ ಆವಾಯ್ಡ್ ಮಾಡಿ. ಇದು ತುಟಿಯನ್ನು ಒಣಗಿಸುತ್ತದೆ. ಚಳಿಗಾಲದಲ್ಲಿ ಆದಷ್ಟೂ ಗ್ಲೊಸಿ ಲಿಪ್‌ಸ್ಟಿಕ್‌ ಬಳಸಿ. ಆಯಿಲ್‌ ಅಂಶವಿರುವ ಲಿಪ್‌ಸ್ಟಿಕ್‌ ಹಚ್ಚಿ.

ಪುರುಷರೂ ಲಿಪ್‌ಬಾಮ್‌ ಬಳಸಿ

ಕೇವಲ ಹುಡುಗಿಯರಲ್ಲ! ಹುಡುಗರು ಹಾಗೂ ಪುರುಷರೂ ಕೂಡ ಲಿಪ್‌ ಬಾಮ್‌ ಬಳಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Winter Kids Hoodie Fashion: ಇದ್ದರೆ ಹೀಗಿರಬೇಕು ಮಕ್ಕಳ ಚಳಿಗಾಲದ ಹೂಡಿ ಫ್ಯಾಷನ್‌!

Exit mobile version