ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೋಡಲು ಆಕರ್ಷಕವಾಗಿ ಕಾಣಿಸುವುದು ಮಾತ್ರವಲ್ಲ ಪುರುಷರ ಘನತೆಯನ್ನು ಎತ್ತಿ ಹಿಡಿಯುವ ಮ್ಯಾನ್ಲಿ ಲುಕ್‌ಗೆ ಸಾಥ್ ನೀಡುವ ಸಾಕಷ್ಟು ವಿಂಟರ್ ಫ್ಯಾಷನ್‌ವೇರ್‌ಗಳು ಈ ಸೀಸನ್‌ನಲ್ಲಿ ಲಗ್ಗೆ ಇಟ್ಟಿವೆ. ನೋಡಲು ಡೀಸೆಂಟ್ ಲುಕ್ ಜೊತೆಗೆ ಪ್ರೊಫೆಷನಲ್ ಲುಕ್ ಅನ್ನು ಎತ್ತಿ ಹಿಡಿಯುವ ವಿಂಟರ್ ಮೆನ್ಸ್‌ವೇರ್‌ಗಳು ಈ ಫ್ಯಾಷನ್‌ನಲ್ಲಿ ಎಂಟ್ರಿ ಪಡೆದಿದ್ದು, ವೃತ್ತಿಪರ ಪುರುಷರನ್ನು ಆಕರ್ಷಿಸುತ್ತಿವೆ.
ಎಂದಿನಂತೆ ವಿಂಟರ್‌ನಲ್ಲಿ ಪುರುಷರಿಗೆ ಲೇಯರ್ ಲುಕ್ ನೀಡುವ ಫ್ಯಾಷನ್‌ವೇರ್‌ಗಳು ಅಂದರೆ, ಫಾರ್ಮಲ್ಸ್‌ಗೆ ಸಾಥ್ ನೀಡುವ ಪ್ಯಾಂಟ್‌ಸೂಟ್, ಬ್ಲೇಝರ್ ಅಥವಾ ಕೋಟ್, ಡಿಸೆಂಟ್ ಪ್ಯಾಂಟ್ಸ್, ಫುಲ್ ಸ್ಲೀವ್ ಶಟ್ರ್ಸ್ ಆಗಮಿಸಿವೆ. ಆದರೆ, ಇವುಗಳಲ್ಲೇ ಭಿನ್ನ-ವಿಭಿನ್ನ ಪ್ರಿಂಟ್ಸ್ ಹಾಗೂ ಚೆಕ್ಸ್‌ನವು ಬಂದಿವೆ. ಫಂಕಿ ಲುಕ್ ಆವಾಯ್ಡ್ ಮಾಡುವ ಡಿಸೆಂಟ್ ಕಲರ್ ಕಾಂಬಿನೇಷನ್ ಇರುವಂತವು ಹೆಚ್ಚು ಬಿಡುಗಡೆಗೊಂಡಿವೆ.
ಲೇಯರ್ ಲುಕ್ ನೀಡುವ ಸೂಟ್‌ಗಳು:
ನೋಡಲು ಕ್ಲಾಸಿ ಲುಕ್ ಕಲ್ಪಿಸುವ ಪ್ಯಾಂಟ್‌ಸೂಟ್, ಬ್ಲೇಝರ್‌ಗಳು ಕಲರ್‌ಗಳಲ್ಲಿ ಲಭ್ಯವಿದ್ದು ಕಾರ್ಪೋರೇಟ್ ಕ್ಷೇತ್ರದವರನ್ನು ಸೆಳೆದಿದೆ. ಇವುಗಳಲ್ಲೇ ಮೈಕ್ರೋ ಸ್ಟ್ರೈಪ್ಸ್ ಹಾಗೂ ಡಬಲ್ ಶೇಡ್‌ನವು ಕೂಡ ಟ್ರೆಂಡಿಯಾಗಿವೆ.
ಉತ್ಸಾಹ ಮೂಡಿಸುವ ಜಾಕೆಟ್‌ಗಳು
ಪುರುಷರ ಜಾಕೆಟ್‌ನಲ್ಲಿ ಡೀಸೆಂಟ್ ವರ್ಣಗಳ ಬಗೆಬಗೆಯ ಜಾಕೆಟ್‌ಗಳು ಸಾದಾ ಮೋನೋಕ್ರೋಮ್ ಶೇಡ್‌ನಲ್ಲಿ ದೊರೆಯುತ್ತಿವೆ. ಉದಾಹರಣೆಗೆ., ಬ್ರೌನ್, ಬ್ಲಾಕ್, ಡೀಪ್ ಬ್ಲ್ಯೂ ಶೇಡ್‌ನವು ಡಬ್ಬಲ್ ಲೇಯರ್‌ನವು ಬೇಡಿಕೆಯಲ್ಲಿವೆ.
ಎಲಿಗೆಂಟ್ ಲುಕ್ ನೀಡುವ ಹಾಫ್ ಸ್ವೆಟರ್
ವಿಂಟರ್‌ನಲ್ಲಿ ಹಾಫ್ ಸ್ವೆಟರ್ ಧರಿಸುವ ಫ್ಯಾಷನ್ ನಿನ್ನೆ ಮೊನ್ನೆಯದಲ್ಲ! ಆದರೂ ಈ ಫ್ಯಾಷನ್ ಇಂದಿಗೂ ವಿಂಟರ್ ಮೆನ್ಸ್ ಫ್ಯಾಷನ್‌ನಲ್ಲಿ ಎವರ್‌ಗ್ರೀನ್ ಆಗಿಯೇ ಉಳಿದಿದೆ. ಹಾಫ್ ಸ್ಟೆಟರ್‌ನಲ್ಲಿ ಸಾಕಷ್ಟು ಬಗೆಯ ಪ್ರಿಂಟ್‌ನವು ಹಾಗೂ ಸ್ಟ್ರೈಪ್ಸ್‌ನವು, ಜೆಮೆಟ್ರಿಕಲ್ ಡಿಸೈನ್‌ನವು ಬಿಡುಗಡೆಗೊಂಡಿವೆ. ಇನ್ನು ಫುಲ್ ಸ್ವೆಟರ್ ಅಷ್ಟಾಗಿ ಟ್ರೆಂಡ್‌ನಲ್ಲಿ ಇಲ್ಲ. ರಿಟೈಡ್ ಆದ ಪುರುಷರು ಹೆಚ್ಚಾಗಿ ಇದನ್ನು ಧರಿಸಲು ಇಷ್ಟಪಡುತ್ತಾರೆ.
ಕೋಟ್ ಅಥವಾ ಜಾಕೆಟ್ ಜೊತೆಗೆ ಸ್ಟೋಲ್
ಪುರುಷರು ನೈಟ್ ಪಾರ್ಟಿ ಹಾಗೂ ಸಮಾರಂಭಗಳಲ್ಲಿ ಜಾಕೆಟ್ ಹಾಗೂ ಕೋಟ್‌ನೊಂದಿಗೆ ವುಲ್ಲನ್ ಸ್ಟೋಲ್‌ಗಳನ್ನು ಧರಿಸುವುದು ಕೂಡ ಈ ಬಾರಿಯ ವಿಂಟರ್ ಫ್ಯಾಷನ್‌ನಲ್ಲಿ ಸೇರಿದೆ. ಸಾದಾ ಡಾರ್ಕ್ ವರ್ಣದವನ್ನು ಇವಕ್ಕೆ ಮ್ಯಾಚ್ ಮಾಡುವುದು ಅಗತ್ಯ ಎನ್ನುತ್ತಾರೆ ಸ್ಟೈಲಿಸ್ಟ್ ರಾಜ್.
ಮ್ಯಾನ್ಲಿ ಲುಕ್‌ಗೆ ಒಂದಿಷ್ಟು ಸಲಹೆ
- ಧರಿಸುವ ಉಡುಪಿಗೆ ಫಂಕಿ ಲುಕ್ ನೀಡಕೂಡದು.
- ಫುಟ್ವೇರ್ ಕೂಡ ಡಿಸೆಂಟ್ ಆಗಿ ಕಾಣಬೇಕು.
- ಎದ್ದು ನಿಲ್ಲುವಂತಹ ಹೇರ್ಸ್ಟೈಲ್ ನಾಟ್ ಓಕೆ
- ಯಾವುದೇ ಕಾರಣಕ್ಕೂ ಟಾರ್ನ್ ಪ್ಯಾಂಟ್ ಧರಿಸಕೂಡದು.
- ದೊಗಲೆ ಉಡುಪಿನ ಆಯ್ಕೆ ಬೇಡ. ಫಿಟ್ಟಿಂಗ್ ಇರಲಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Winter Fashion | ಚಳಿಗಾಲಕ್ಕೆ ಬಂತು ಕಲರ್‌ಫುಲ್ ಕ್ರಾಪ್ ಸ್ವೆಟರ್