ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದ ಸೀಸನ್‌ಗೆ ವಿಂಟರ್‌ವೇರ್‌ಗಳನ್ನು ಶಾಪಿಂಗ್ ಮಾಡುವಾಗ ಪ್ರಯೋಜನವಾಗುವ ಐದು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಹಣ ವ್ಯರ್ಥವಾಗುವುದಿಲ್ಲ! ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್‌ಗಳು.
೧. ವಿಂಟರ್ ಶಾಪಿಂಗ್ ಪ್ಲಾನಿಂಗ್ ಮಾಡಿ
ವಿಂಟರ್ ಶಾಪಿಂಗ್ ಅನ್ನು ಮೊದಲೇ ಪ್ಲಾನ್ ಮಾಡಿ. ಅಗತ್ಯವಿರುವ ವಿಂಟರ್‌ವೇರ್‌ಗಳನ್ನು ಖರೀದಿಸುವ ಬಗ್ಗೆ ಮೊದಲೇ ಲೆಕ್ಕವಿಡಿ. ವಾರ್ಡ್‌ರೋಬ್‌ನಲ್ಲಿರುವ ವಿಂಟರ್‌ವೇರ್‌ಗಳನ್ನು ತೆಗೆದು ಚೆಕ್ ಮಾಡಿ. ಇದರಿಂದ ಮತ್ತೊಮ್ಮೆ ತಮ್ಮ ಬಳಿ ಇರುವಂತಹ ಅದೇ ಬಣ್ಣದ ಅಥವಾ ಡಿಸೈನ್‌ನ ಉಡುಪುಗಳನ್ನು ಮತ್ತೊಮ್ಮೆ ಖರೀದಿಸುವುದು ತಪ್ಪುತ್ತದೆ.
೨. ಲೇಯರ್ ಲುಕ್ ವೇರ್‌ಗಳಿಗೆ ಆದ್ಯತೆ ನೀಡಿ
ಶಾಪಿಂಗ್ ಮಾಡುವಾಗ ಆದಷ್ಟೂ ಸಿಂಗಲ್ ವಿಂಟರ್‌ವೇರ್ ಖರೀದಿಸುವುದಕ್ಕಿಂತ ಲೇಯರ್ ಲುಕ್ ನೀಡುವಂತಹ ನಾನಾ ಉಡುಪುಗಳಿಗೆ ಆದ್ಯತೆ ನೀಡಿ. ಡಲ್ ಆಗಿರುವ ಉಡುಪುಗಳ ಬದಲು ಕಲರ್‌ಫುಲ್ ಆಯ್ಕೆ ಮಾಡಿ. ಡಬಲ್ ಹಾಗೂ ತ್ರಿಬಲ್ ಲೇಯರ್ ನೀಡುವ ಉಡುಪುಗಳನ್ನು ಇತರೆ ಸೀಸನ್‌ನಲ್ಲೂ ಪ್ರತ್ಯೇಕಿಸಿ ಧರಿಸಬಹುದು. ಉದಾಹರಣೆಗೆ ಟಿಶರ್ಟ್ ವಿತ್ ಶ್ರಗ್ಸ್, ಟಿ ಶರ್ಟ್ ವಿತ್ ಕೋಟ್.
೩. ವಿನೂತನ ವಿನ್ಯಾಸದ ವಿಂಟರ್‌ವೇರ್ಸ್ ಆಯ್ಕೆ
ನೀವು ಖರೀದಿಸುವ ಚಳಿಗಾಲದ ಉಡುಪುಗಳು ಟ್ರೆಂಡಿಯಾಗಿರಬೇಕು. ಯಾವುದೋ ಹಳೆಯ ಉಡುಪಿನಂತೆ ಕಾಣಕೂಡದು. ಟ್ರಯಲ್ ನೋಡಿ, ಕೊಳ್ಳಿ. ಕೆಲವೊಮ್ಮೆ ಕಳೆದ ವರ್ಷ ಮಾರಾಟವಾಗದ ವಿಂಟರ್ ವೇರ್‌ಗಳನ್ನು ಮರು ಸೇಲ್ ಮಾಡಲು ಇರಿಸಿರುತ್ತಾರೆ. ಹಾಗಾಗಿ ಟ್ರೆಂಡ್‌ನಲ್ಲಿದೆಯೇ ಎಂಬುದನ್ನು ಕ್ರಾಸ್ ಚೆಕ್ ಮಾಡಿಕೊಳ್ಳಿ.
೪. ಲೈಟ್‌ವೇಟ್ ವಿಂಟರ್‌ವೇರ್ ಆಯ್ಕೆ
ಭಾರಿ ಗಾತ್ರದ ವಿಂಟರ್‌ವೇರ್ ಖರೀದಿಸುವುದರಿಂದ ಅವನ್ನು ಟ್ರಾವೆಲ್ ಮಾಡುವಾಗ ಅಥವಾ ಇತರೆ ಸಮಯದಲ್ಲಿ ಹೊರಲಾಗದು. ಹಾಗಾಗಿ ಆದಷ್ಟೂ ಲೈಟ್‌ವೇಟ್‌ನ ವಿಂಟರ್‌ವೇರ್ಸ್ ಆಯ್ಕೆ ಮಾಡಿಕೊಳ್ಳಿ. ಆಗ ಕ್ಯಾರಿ ಮಾಡಲು ಸುಲಭವಾಗುತ್ತದೆ. ಹೊರೆಯಾಗುವುದಿಲ್ಲ!
೫. ಟ್ರೆಂಡಿಯಾಗಿರಲಿ ವಿಂಟರ್ ಆಕ್ಸೆಸರೀಸ್
ಚಳಿಗಾಲದ ಆಕ್ಸೆಸರೀಸ್‌ಗಳಾದ ಕ್ಯಾಪ್, ಗ್ಲೌಸ್, ಶಾಲು, ಸ್ಟೋಲ್, ಸ್ಕಾರ್ಫ್ ಖರೀದಿಸುವಾಗ ಕಾಮನ್ ಕಲರ್ ಇರುವಂತದ್ದಕ್ಕೆ ಪ್ರಾಮುಖ್ಯತೆ ನೀಡಿ. ಆಗ ಎಲ್ಲಾ ಬಗೆಯ ವಿಂಟರ್‌ವೇರ್‌ಗಳಿಗೂ ಮಿಕ್ಸ್ ಮ್ಯಾಚ್ ಮಾಡಬಹುದು. ಇದೀಗ ಫಂಕಿ ವಿಂಟರ್ ಆಕ್ಸೆಸರೀಸ್ ಟ್ರೆಂಡಿಯಾಗಿವೆ. ಅವನ್ನೇ ಆಯ್ಕೆ ಮಾಡಿಕೊಳ್ಳಿ. ಮರು ಬಳಕೆ ಮಾಡಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star Fashion | ಬ್ಲ್ಯಾಕ್ ಲೆದರ್ ವೆಸ್ಟರ್ನ್ ಔಟ್‌ಫಿಟ್‌ನಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಗ್ಲಾಮರಸ್ ಲುಕ್