Site icon Vistara News

BJP Candidates List: ವಿಧಾನಸಭೆಯಲ್ಲಿ ಸೋತವರಿಗೂ ಸಿಕ್ಕಿತು ಬಿಜೆಪಿ ಟಿಕೆಟ್‌; ಚಿತ್ರದುರ್ಗ ಸಸ್ಪೆನ್ಸ್! ಅನಂತ್‌ ಕುಮಾರ್‌ಗೆ ಶಾಕ್‌

BJP Candidates List who lost in Assembly also got BJP tickets Chitradurga suspense

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ತಯಾರಿ ಜೋರಾಗಿ ನಡೆಯುತ್ತಿದೆ. ಈ ವೇಳೆ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ರಾಯಚೂರು ಹಾಗೂ ಬೆಳಗಾವಿ ಕ್ಷೇತ್ರಗಳಿಗೆ ಟಿಕೆಟ್‌ ಅನ್ನು ಅನೌನ್ಸ್‌ ಮಾಡಲಾಗಿದೆ. ಆದರೆ, ಇದರಲ್ಲಿ ಎರಡು ಕ್ಷೇತ್ರಗಳಿಗೆ ವಿಧಾನಸಭೆಯಲ್ಲಿ ಸೋತಿದ್ದ ನಾಯಕರಿಗೆ ಟಿಕೆಟ್‌ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ. ಇನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ 6 ಬಾರಿ ಗೆದ್ದಿದ್ದ ಹಾಲಿ ಸಂಸದ ಅನಂತ್‌ ಕುಮಾರ್‌ ಹೆಗಡೆ (Ananth Kumar Hegde) ಅವರಿಗೆ ಟಿಕೆಟ್‌ ಮಿಸ್‌ ಆಗಿದೆ. ಆದರೆ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಇರುವುದರಿಂದ ಅದೊಂದು ಕ್ಷೇತ್ರವನ್ನು ಪೆಂಡಿಂಗ್‌ ಇಡಲಾಗಿದೆ.

ರಾಜ್ಯದ ಬಿಜೆಪಿ ಅಭ್ಯರ್ಥಿಗಳ (BJP Karnataka) ಮೊದಲ ಪಟ್ಟಿಯನ್ನು ಮಾರ್ಚ್‌ 13ರಂದು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಒಟ್ಟು 20 ಮಂದಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿತ್ತು. ಮಿತ್ರಕೂಟದಲ್ಲಿರುವ ಜೆಡಿಎಸ್‌ಗೆ ಮೂರು ಸ್ಥಾನಗಳನ್ನು ನೀಡಲು ನಿರ್ಧರಿಸಿರುವ ಬಿಜೆಪಿ ಉತ್ತರ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಕ್ಷೇತ್ರಗಳನ್ನು ಪೆಂಡಿಂಗ್‌ ಉಳಿಸಿಕೊಂಡಿತ್ತು.

ಇದನ್ನೂ ಓದಿ: BJP Candidates List: ಕಾಗೇರಿ, ಶೆಟ್ಟರ್‌, ಸುಧಾಕರ್‌, ಅಮರೇಶ್ವರ್‌ ನಾಯಕ್‌ಗೆ ಬಿಜೆಪಿ ಟಿಕೆಟ್‌

ಮೊದಲ ಪಟ್ಟಿ ಬಿಡುಗಡೆಯ ಬೆನ್ನಿಗೇ ಒಂದಿಷ್ಟು ಬಂಡಾಯ ಚಟುವಟಿಕೆಗಳು ಆರಂಭಗೊಂಡಿತ್ತು. ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿರುವ ಡಿ.ವಿ. ಸದಾನಂದ ಗೌಡ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ, ಕೊಪ್ಪಳ ಶಾಸಕ ಸಂಗಣ್ಣ ಕರಡಿ ಸೇರಿದಂತೆ ಹಲವರು ಟಿಕೆಟ್‌ ಮಿಸ್‌ ಆಗಿದ್ದಕ್ಕೆ ತಮ್ಮ ಆಕ್ರೋಶ ಹೊರಹಾಕಿದ್ದರು.

ಸೋತವರಿಗೂ ಮಣೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ – ಸಿದ್ದಾಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೋಲು ಕಂಡಿದ್ದರು. ಆದರೆ, ಅವರನ್ನು ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಕಾಗೇರಿ ಸ್ಪೀಕರ್‌ ಆಗಿದ್ದರೂ ಸಹ ಸೋತಿದ್ದರು.

ಇದು ಬಿಜೆಪಿ ವಲಯದಲ್ಲಿ ಅಚ್ಚರಿ ಮೂಡಲು ಕಾರಣವಾಗಿದೆ. ಇನ್ನು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಾಲಿ ಸಚಿವರಾಗಿದ್ದರೂ ಡಾ. ಕೆ. ಸುಧಾಕರ್‌ ಸೋಲು ಕಂಡಿದ್ದರು. ಈ ಕ್ಷೇತ್ರದಲ್ಲಿ ಎಸ್‌.ಆರ್.‌ ವಿಶ್ವನಾಥ್‌ ಅವರ ತೀವ್ರ ವಿರೋಧದ ನಡುವೆಯೂ ಸುಧಾಕರ್‌ಗೆ ಮಣೆ ಹಾಕಲಾಗಿದೆ. ಇದು ಬಿಜೆಪಿ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಟಿಕೆಟ್‌ಗಾಗಿ ಸುಧಾಕರ್‌ ಸಾಕಷ್ಟು ಲಾಬಿ ಮಾಡಿದ್ದರು. ಈ ಸಂಬಂಧ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಲ್ಲದೆ, ನವ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದರು.

2ನೇ ಪಟ್ಟಿಯಲ್ಲಿ ಟಿಕೆಟ್‌ ಪಡೆದವರು ಇವರು

ಚಿಕ್ಕಬಳ್ಳಾಪುರ – ಡಾ.ಕೆ. ಸುಧಾಕರ್
ಉತ್ತರ ಕನ್ನಡ – ವಿಶ್ವೇಶ್ವರ ಹೆಗಡೆ ಕಾಗೇರಿ
ರಾಯಚೂರು – ಅಮರೇಶ್ವರ ನಾಯಕ್‌
ಬೆಳಗಾವಿ – ಜಗದೀಶ್ ಶೆಟ್ಟರ್

‌BJP Candidates List : ಮಾರ್ಚ್‌ 13ರ ಮೊದಲ ಪಟ್ಟಯಲ್ಲಿ ಟಿಕೆಟ್ ಪಡೆದ 20 ಅಭ್ಯರ್ಥಿಗಳು

ಇದನ್ನೂ ಓದಿ: Lok Sabha Election 2024: ಸಿಎಂ ಸಿದ್ದರಾಮಯ್ಯ, ಜಯಪ್ರಕಾಶ್‌ ಹೆಗ್ಡೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಈ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ

ಮೈತ್ರಿ ಒಪ್ಪಂದದಂತೆ ಹಾಸನ, ಮಂಡ್ಯ, ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಜೆಪಿ ಬಿಟ್ಟುಕೊಟ್ಟಿದೆ. ಹಾಸನಕ್ಕೆ ಪ್ರಜ್ವಲ್‌ ರೇವಣ್ಣ ಅಭ್ಯರ್ಥಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹಾಸನದಲ್ಲಿ ಬುಧವಾರ (ಮಾ. 13) ಘೋಷಣೆ ಮಾಡಿದ್ದರು. ಮಂಡ್ಯದಿಂದ ಸ್ವತಃ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿದ್ದಾರೆ ಎಂದು ಮಾಜಿ ಸಚಿವ ಸಿಎಸ್‌ ಪುಟ್ಟರಾಜು ಹೇಳಿದ್ದಾರೆ. ಕೋಲಾರದಲ್ಲಿ ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Exit mobile version