ಬೆಂಗಳೂರು: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಪಕ್ಷ ಸಂಘಟನೆ ಉದ್ದೇಶದಿಂದ ರಾಜ್ಯದ 7 ಜಿಲ್ಲಾ ಕಾಂಗ್ರೆಸ್ ಘಟಕಗಳಿಗೆ ಜಿಲ್ಲಾಧ್ಯಕ್ಷರು, ಕೆಪಿಸಿಸಿ ನೂತನ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆ ಮೇರೆಗೆ ಕೆಪಿಸಿಸಿಗೆ 43 ಉಪಾಧ್ಯಕ್ಷರು ಮತ್ತು 138 ಪ್ರಧಾನ ಕಾರ್ಯದರ್ಶಿಗಳು ಸೇರಿ ವಿವಿಧ ಘಟಕಗಳಿಗೆ (Congress Karnataka) ಪದಾಧಿಕಾರಿಗಳನ್ನು ನೇಮಿಸಲಾಗಿದೆ.
ಏಳು ಜಿಲ್ಲೆಗಳ ನೂತನ ಅಧ್ಯಕ್ಷರ ಪಟ್ಟಿ
ಬಳ್ಳಾರಿ- ಪ್ರಶಾಂತ್ ಅಲ್ಲಂ ವೀರಭದ್ರಪ್ಪ
ಬೆಂಗಳೂರು ಪೂರ್ವ – ಕೆ.ನಂದಕುಮಾರ್
ಹಾವೇರಿ – ಸಂಜೀವ್ ಕುಮಾರ್ ನೀರಲಗಿ
ಕೊಪ್ಪಳ – ಅಮರೇಗೌಡ ಭಯ್ಯಾಪುರ
ಉಡುಪಿ – ಕೃಷ್ಣ ಹೆಗಡೆ
ರಾಯಚೂರು – ಬಸವರಾಜ್ ಇಟಗಿ
ಶಿವಮೊಗ್ಗ – ಆರ್ ಪ್ರಸನ್ನ ಕುಮಾರ್
ರಾಜ್ಯ ಪ್ರಚಾರ ಸಮಿತಿ ಉಪಾಧ್ಯಕ್ಷ– ಮಾಜಿ ಸಚಿವ ಪಿ.ಟಿ ಪರಮೇಶ್ವರ್ ನಾಯಕ್
ಕೆಪಿಸಿಸಿ ಉಪಾಧ್ಯಕ್ಷರಾಗಿ ಡಾ.ಬಿ.ಎಲ್.ಶಂಕರ್, ಅಜಯ್ ಕುಮಾರ್ ಸರ್ನಾಯಕ್, ಮೆಹಬೂಬ್ ಸೌದಗರ್, ಆನಂದ್ ನ್ಯಾಮಗೌಡ ಸೇರಿ 43 ಮಂದಿ ನೇಮಕವಾಗಿದ್ದು, ಪ್ರಧಾನ ಕಾರ್ಯದರ್ಶಿಗಳಾಗಿ ದಯಾನಂದ್ ಎಸ್ ಪಾಟೀಲ್, ಮುರಳಿಕೃಷ್ಣ ಬಿ., ಹುಮಾಯೂನ್ ಖಾನ್, ಡಾ.ಉಮೇಶ್ ಬಾಬು ಸೇರಿ 198 ಮಂದಿಯನ್ನು ನೇಮಿಸಲಾಗಿದೆ.
ಇದನ್ನೂ ಓದಿ | ವರುಣಾದಲ್ಲಿ 60 ಸಾವಿರ ಲೀಡ್ ಕೊಟ್ಟರೆ ಮಾತ್ರ ಸಿಎಂ ಸ್ಥಾನದಲ್ಲಿ ಉಳಿಯುವೆ ಎಂದ ಸಿದ್ದರಾಮಯ್ಯ!
ನೂತನ ಪದಾಧಿಕಾರಿಗಳ ಪಟ್ಟಿ ಇಲ್ಲಿದೆ