Site icon Vistara News

DK Shivakumar: ಹೆರಿಗೆ ನೋವು ಅನುಭವಿಸಿದವರಿಗೇ ಗೊತ್ತು! ಡಿ.ಕೆ. ಶಿವಕುಮಾರ್‌ ಹೀಗೆ ಹೇಳಿದ್ದು ಯಾಕೆ?

DK Shivakumar talks about labour pain

ನವ ದೆಹಲಿ: “ಹೆರಿಗೆ ಮಾಡಿಸಿಕೊಂಡವರಿಗೆ ಗೊತ್ತು ಹೆರಿಗೆ ನೋವು (labour pain) ಏನೆಂಬುದು. ನನ್ನನ್ನು ಯಾರು ನಂಬಿದ್ದರೋ ಅವರಿಗೆ ಸಂತಸ ಆಗಿದೆ. ನನಗೆ ಅಷ್ಟೇ ಸಾಕು” ಎಂದು ಡಿ.ಕೆ. ಶಿವಕುಮಾರ್‌ (DK Shivakumar) ಹೇಳಿದ್ದಾರೆ. ಇ.ಡಿ. ಕೇಸ್‌ನಲ್ಲಿ ರಿಲೀಫ್‌ ಸಿಕ್ಕಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಆ ಸಮಯದಲ್ಲಿ ಜೈಲುವಾಸವನ್ನು ಅನುಭವಿಸಿರುವುದನ್ನು ಸ್ಮರಿಸಿದರು.

ನವ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಇ.ಡಿ.ಯಿಂದ ನನಗೆ ಇನ್ನೂ ನೋಟಿಸ್‌ಗಳು ಬರುತ್ತಿವೆ. ಮಾಧ್ಯಮಗಳು ಹಗಲು ರಾತ್ರಿ ನನ್ನನ್ನು ಕಾಯುತ್ತಾ ಕೆಲಸ ಮಾಡಿವೆ. ಹೆರಿಗೆ ನೋವು ಅನುಭವಿಸಿದವರಿಗೆ ಗೊತ್ತು ಎಂಬಂತೆ, ನನ್ನ ನೋವು ನನಗೆ ಗೊತ್ತು. ರಾಜ್ಯದ ಜನ ನನ್ನ ಪರವಾಗಿ ಹೋರಾಟ ಮಾಡಿದರು. ಪ್ರಾರ್ಥನೆ ಮಾಡಿದರು. ಈಗ ಅವರಿಗೆ ಸಮಾಧಾನ ಆಗಿದೆಯಲ್ಲ ಅಷ್ಟೇ ಸಾಕು” ಎಂದು ತಿಳಿಸಿದರು.

ಶೇ. 50ರಷ್ಟು ಅಭ್ಯರ್ಥಿಗಳ ಫೈನಲ್‌ ಇಂದು

ಇವತ್ತು ನಮ್ಮ ಪಕ್ಷದ ಸಿಇಸಿ ಸಭೆ (CEC Meeting) ಇದೆ. ಸಭೆಗೆ ಅಂತ ದೆಹಲಿಗೆ ಬಂದಿದ್ದೇನೆ. ಸಿಇಸಿ ಸಮಿತಿಯಲ್ಲಿ ನಮ್ಮ ಕೆ.ಜೆ. ಜಾರ್ಜ್ ಇದ್ದಾರೆ. ಅವರು ದೇಶದ ಅಭ್ಯರ್ಥಿಗಳ ಪಟ್ಟಿ ಬಗ್ಗೆ ತೀರ್ಮಾನ ಮಾಡುತ್ತಾರೆ. ನಾನು ಕರ್ನಾಟಕದ ಕ್ಷೇತ್ರಗಳನ್ನು ಮಾತ್ರ ನೋಡುತ್ತೇನೆ. ಇವತ್ತಿನ ಸಭೆಯಲ್ಲಿ ಶೇ. 50ರಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಫೈನಲ್‌ ಆಗಬಹುದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಎರಡು ಸುತ್ತಿನ ಸಭೆ ಬಳಿಕ ಎಲ್ಲವೂ ನಿರ್ಧಾರ ಆಗುತ್ತದೆ ಎಂದು ಡಿ.

ನಾವು ಎಲ್ಲ 28 ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದೇವೆ. ಇವತ್ತು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಬರಬೇಕಿತ್ತು. ಆದರೆ, ಬಸವಕಲ್ಯಾಣದಲ್ಲಿ ಕಾರ್ಯಕ್ರಮ ಇರುವುದರಿಂದ ಅವರು ಬಂದಿಲ್ಲ. 28 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಒಂದೇ ಬಾರಿಗೆ ಮಾಡಲು ಆಗುವುದಿಲ್ಲ. ಎರಡು ಸುತ್ತಿನ ಸಭೆ ಬಳಿಕ ಎಲ್ಲವೂ ನಿರ್ಧಾರ ಆಗುತ್ತದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ರಾಜಕಾರಣದಲ್ಲಿ ಏನ್ ಬೇಕಾದರೂ ಆಗಬಹುದು

ನಮ್ಮ ರಾಜಕಾರಣಕ್ಕೂ ಬಿಜೆಪಿಯ ರಾಜಕಾರಣಕ್ಕೂ ವ್ಯತ್ಯಾಸ ಇದೆ. ನಮ್ಮ ರಾಜ್ಯದಲ್ಲಿ ವ್ಯಕ್ತಿ ಮೇಲೆ ಚುನಾವಣೆ ನಡೆಯಲ್ಲ, ಪಕ್ಷದ ಮೇಲೆ ನಡೆಯುತ್ತದೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು, ನಮಗೆ ಗೆಲ್ಲಬೇಕು ಅನ್ನೋದು ಮುಖ್ಯ. ನಾವು 1 ತಿಂಗಳು ಮುಂಚೆನೇ ಮೀಟಿಂಗ್ ಮಾಡಿ ಎಲ್ಲವನ್ನೂ ಹೇಳಿದ್ದೇವೆ. ನಮ್ಮವರಿಗೆಲ್ಲ ಕಿವಿ ಮಾತು ಹೇಳಿ ಆಗಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ನಾಳೆ ಫೈನಲ್; ಇಲ್ಲಿದೆ 28 ಕ್ಷೇತ್ರಗಳ ಫುಲ್ ಲಿಸ್ಟ್‌!

ಮೊದಲ ಪಟ್ಟಿಯಲ್ಲಿ 10-15 ಸೀಟ್‌ಗಳ ಘೋಷಣೆ?

ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳ ಹೆಸರಿನ ಪಟ್ಟಿ ಹಿಡಿದು ಇಂದು (ಗುರುವಾರ – ಮಾ. 7) ಡಿಸಿಎಂ ಡಿಕೆ ಶಿವಕುಮಾರ್‌ ಅವರು ದೆಹಲಿಗೆ ಬಂದಿಳಿದಿದ್ದಾರೆ. ಈಗಾಗಲೇ ಎರಡು- ಮೂರು ಸುತ್ತಿನ ಸಭೆ ನಡೆಸಿರುವ ಸಿಎಂ, ಡಿಸಿಎಂ ಆಕಾಂಕ್ಷಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿದ್ದಾರೆ. ಅಲ್ಲದೆ, ಎರಡು, ಮೂರು ಹಂತಗಳಲ್ಲಿ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ. ಗೊಂದಲವಿಲ್ಲದ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗುವುದು. ಮೊದಲ ಹಂತದಲ್ಲಿ ರಾಜ್ಯದ 10-15 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ. 10-13 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯೇ ತಲೆ ನೋವಾಗಿ ಪರಿಣಮಿಸಿದೆ. ಕೆಲ ಕ್ಷೇತ್ರಗಳಲ್ಲಿ ತೀವ್ರವಾದ ಪೈಪೋಟಿ ಇದೆ. ಇನ್ನು ಕೆಲವು ಕಡೆ ಪ್ರಬಲ ಅಭ್ಯರ್ಥಿಗಳ ಕೊರತೆ ಇದೆ. ಈ ನಿಟ್ಟಿನಲ್ಲಿ ಹೈಕಮಾಂಡ್‌ ಮಟ್ಟದಲ್ಲಿ ಯಾರನ್ನು ಮಾಡಬಹುದು? ಅದರ ಸಾಧಕ-ಭಾದಕಗಳೇನು ಎಂಬ ಬಗ್ಗೆ ಚರ್ಚೆ ನಡೆಸಲಾಗುವುದು.

Exit mobile version