ಮುಂಬೈ: ಮುಂಬೈಯ ಶಿವಾಜಿ ಪಾರ್ಕ್ನಲ್ಲಿ ವಿಪಕ್ಷಗಳ ಮೈತ್ರಿ ಒಕ್ಕೂಟ ʼಇಂಡಿಯಾʼ (INDIA Bloc)ದ ನಾಯಕರು ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಶಕ್ತಿ ಪ್ರದರ್ಶನ ನಡೆಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಆರ್‌ಜೆಡಿಯ ತೇಜಸ್ವಿ ಯಾದವ್, ಎನ್‌ಸಿಪಿ ನಾಯಕ ಶರದ್ ಪವಾರ್, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತಿತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಶನಿವಾರ (ಮಾರ್ಚ್ 16) ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ನಡೆದ ʼಭಾರತ್ ಜೋಡೊ ನ್ಯಾಯ ಯಾತ್ರೆʼ (Bharat Jodo Nyay Yatra)ಗೆ ಮುಂಬೈಯಲ್ಲಿ ತೆರೆ ಬಿದ್ದಿತ್ತು. ಇದೀಗ ವಿಪಕ್ಷ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಲೋಕಸಭಾ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುವ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ.
यात्राओं से मुझे बहुत कुछ सीखने को मिला। दर्द हुआ, चोट लगी.. मगर दिल से जो प्यार मिला, उसे मैं बयां नहीं कर सकता।
— Congress (@INCIndia) March 17, 2024
ये नफरत का नहीं, मोहब्बत का देश है। देश में नफरत इसलिए फैलाई जा रही है, ताकि आपका ध्यान भटके और आपका धन छीन लिया जाए।
लेकिन आप नफरत मत फैलने दीजिए, क्योंकि… pic.twitter.com/W4KtzMSAp8
ರಾಹುಲ್ ಗಾಂಧಿ ಮಾತನಾಡಿ, ʼʼಮೋದಿ ಸರ್ಕಾರದ ಆಡಳಿತದಲ್ಲಿ ಕಳೆದೊಂದು ದಶಕದಿಂದ ದೇಶದಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ದ್ವೇಷ ಹೆಚ್ಚುತ್ತಿದ್ದು, ಇದನ್ನು ಎತ್ತಿ ತೋರಿಸಲು ಯಾತ್ರೆ ನಡೆಲಾಯಿತುʼʼ ಎಂದು ಹೇಳಿದರು. ʼʼಇವಿಎಂ, ಇ.ಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲ್ಲದೆ ಪ್ರಧಾನಿ ಮೋದಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲʼʼ ಎಂದು ಅವರು ವ್ಯಂಗ್ಯವಾಡಿದರು.
‘ʼಹಿಂದೂ ಧರ್ಮದಲ್ಲಿ ‘ಶಕ್ತಿ’ ಎಂಬ ಪದವಿದೆ. ನಾವು ಅಂತಹ ಶಕ್ತಿಯ ವಿರುದ್ಧ ಹೋರಾಡುತ್ತಿದ್ದೇವೆ. ಪ್ರಶ್ನೆಯೆಂದರೆ, ಆ ಶಕ್ತಿ ಯಾವುದು? ಎನ್ನುವುದು. ರಾಜನ ಆತ್ಮ ಇವಿಎಂನಲ್ಲಿದೆ. ಇದು ನಿಜ. ಇವಿಎಂ ಮತ್ತು ದೇಶದ ಪ್ರತಿಯೊಂದು ಸಂಸ್ಥೆಯಲ್ಲಿ, ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಲ್ಲಿ ರಾಜನ ಆತ್ಮವಿದೆ. ಮಹಾರಾಷ್ಟ್ರದ ಹಿರಿಯ ನಾಯಕರೊಬ್ಬರು ಕಾಂಗ್ರೆಸ್ ತೊರೆದ ಬಳಿಕ ನನ್ನ ತಾಯಿಯ ಬಳಿ, ʼ’ಸೋನಿಯಾ ಜೀ, ಈ ಶಕ್ತಿಯ ವಿರುದ್ಧ ಹೋರಾಡಲು ನನಗೆ ಶಕ್ತಿ ಇಲ್ಲ ಎಂದು ಹೇಳಲು ನನಗೆ ನಾಚಿಕೆಯಾಗುತ್ತದೆ. ಆದರೆ ನಾನು ಜೈಲಿಗೆ ಹೋಗಲು ಬಯಸುವುದಿಲ್ಲʼʼ ಎಂದು ಅಸಾಹಯಕತೆ ವ್ಯಕ್ತಪಡಿಸಿದ್ದಾರೆ. ಸಾವಿರಾರು ಮಂದಿಯನ್ನು ಇದೇ ರೀತಿ ಬೆದರಿಸಲಾಗಿದೆʼʼ ಎಂದು ರಾಹುಲ್ ಗಾಂಧಿ ಮೋದಿ ವಿರುದ್ಧ ಕಿಡಿಕಾರಿದರು.
ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ʼʼಪ್ರಜಾಪ್ರಭುತ್ವ, ಸಂವಿಧಾನ ಉಳಿಸಲು ನಾವು ಅಧಿಕಾರಕ್ಕೆ ಬರಬೇಕಿದೆ. ಈ ಬಾರಿ ಬಿಜೆಪಿ 400 ಸ್ಥಾನ ಗಳಿಸಲಿದೆ ಎಂದು ಹೇಳುತ್ತಿದೆ. ಇದರ ಹಿಂದಿನ ಕಾರಣವನ್ನು ಕರ್ನಾಟಕ ಸಂಸದರೊಬ್ಬರು ಬಹಿರಂಗಪಡಿಸಿದ್ದಾರೆ. ನಮಗೆ 400ಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಟ್ಟರೆ ಸಂವಿಧಾನ ಬದಲಿಸುತ್ತೇವೆ ಎಂದಿದ್ದಾರೆ. ಬಿಜೆಪಿ ದೇಶವನ್ನು ಏಕತೆಯಲ್ಲಿಡಲು ಇಷ್ಟಪಡುತ್ತಿಲ್ಲ. ಬಿಜೆಪಿ ನಾಯಕರಿಗೆ ಸಂವಿಧಾನ ಬದಲಿಸುವುದೇ ಮುಖ್ಯʼʼ ಎಂದು ವಾಗ್ದಾಳಿ ನಡೆಸಿದರು.
ಜನವರಿ 14ರಂದು ಸಂಘರ್ಷ ಪೀಡಿತ ಮಣಿಪುರದಲ್ಲಿ ಪ್ರಾರಂಭವಾದ ʼಭಾರತ್ ಜೋಡೊ ನ್ಯಾಯ ಯಾತ್ರೆʼ 63 ದಿನಗಳ ನಂತರ ಮುಂಬೈನಲ್ಲಿ ಮುಕ್ತಾಯಗೊಂಡಿತು. ಇದು ಅಸ್ಸಾಂ, ಪಶ್ಚಿಮ ಬಂಗಾಳ, ಗುಜರಾತ್, ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ಸೇರಿದಂತೆ 15 ರಾಜ್ಯಗಳ 100ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಹಾದು ಹೋಗಿದೆ.
ಇದನ್ನೂ ಓದಿ: Bharat Jodo Nyay Yatra : ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಸಮಾಪ್ತಿ