ಲೋಕಸಭಾ ಚುನಾವಣೆಯ (Lok Sabha Election 2024) ಮೂರನೇ ಹಂತದ (phase 3) ಮತದಾನದ (voting) ವೇಳೆ ಗುಜರಾತ್ ನ (gujarat) ನಾಡಿಯಾಡ್ (Nadiad) ಮತಗಟ್ಟೆ ಒಂದು ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು. 20 ವರ್ಷಗಳ ಹಿಂದೆ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡ ಅಂಕಿತ್ ಸೋನಿ ( Ankit Soni) ಎಂಬವರು ಮತಗಟ್ಟೆಗೆ ಬಂದು ಕಾಲಿನ ಬೆರಳುಗಳ ಸಹಾಯದಿಂದ ಮತದಾನ ಮಾಡಿ ಮಾದರಿಯಾದರು.
ಲೋಕಸಭೆ ಚುನಾವಣೆ 2024 ರ ಮೂರನೇ ಹಂತದ ಮತದಾನವು ಮಂಗಳವಾರ ಬೆಳಗ್ಗೆ 7 ಗಂಟೆಗೆ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 93 ಕ್ಷೇತ್ರಗಳಲ್ಲಿ ಪ್ರಾರಂಭವಾಯಿತು. ಈ ವೇಳೆ ನಾಡಿಯಾಡ್‌ನ ಮತಗಟ್ಟೆಯಲ್ಲಿ ಅಂಕಿತ್ ಸೋನಿ ಮತದಾನ ಮಾಡಿ ಇತರರು ತಮ್ಮ ಮನೆಗಳಿಂದ ಹೊರಗೆ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ವಿದ್ಯುತ್ ಶಾಕ್ ಅಪಘಾತದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದರೂ, ನಾನು ಎಂದಿಗೂ ಎದೆಗುಂದಲಿಲ್ಲ. ಶಿಕ್ಷಕರು ಮತ್ತು ಗುರುಗಳಿಂದ ಪ್ರೇರಿತರಾಗಿ ಕಲಿಕೆಯ ಪ್ರಯಾಣವನ್ನು ಪ್ರಾರಂಭಿಸಿದೆ. ಮೊದಲು ಚಿತ್ರಕಲೆ ಮತ್ತು ಬರವಣಿಗೆಯೊಂದಿಗೆ, ಅನಂತರ ಶಿಕ್ಷಣವನ್ನು ಮುಂದುವರಿಸಿದೆ. ಕಠಿಣ ಪರಿಶ್ರಮದಿಂದ ನಾನು ಪದವಿ ಮತ್ತು ಸಿಎಸ್ ಪದವಿ ಪಡೆದು ಎಂಬಿಎ ಗಳಿಸಿದೆ. ಮತದಾನ ನಮ್ಮ ಹಕ್ಕು. ಹಲವಾರು ವರ್ಷಗಳಿಂದ ನನ್ನ ಮತವನ್ನು ಚಲಾಯಿಸಲು ನಾನು ಒಂದು ಮಾರ್ಗವನ್ನು ಕಂಡುಕೊಂಡಿದ್ದೇನೆ. ನಾವೆಲ್ಲರೂ ಇದನ್ನು ಅನುಸರಿಸೋಣ ಮತ್ತು ಈ ಅಮೂಲ್ಯ ಹಕ್ಕನ್ನು ಚಲಾಯಿಸೋಣ ಎಂದು ಹೇಳಿದರು.
#WATCH | Nadiad, Gujarat: Ankit Soni, a voter, casts his vote through his feet at a polling booth in Nadiad
— ANI (@ANI) May 7, 2024
He says, "I lost both my hands due to electric shock 20 years ago. With the blessings of my teachers and guru, I did my graduation, CS… I appeal to people to come out… pic.twitter.com/UPx8G5MTPz
ವಿಶೇಷ ಮತಗಟ್ಟೆ
ಸ್ವಾತಂತ್ರ್ಯದ 75 ವರ್ಷಗಳ ಅನಂತರ ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದ ಬುರುದ್ಮಲ್ ಗ್ರಾಮದಲ್ಲಿ ವಿಶೇಷ ಮತಗಟ್ಟೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಬುರುದ್ಮಾಲ್ ಕೇವಲ 41 ಮತದಾರರನ್ನು ಹೊಂದಿರುವ ಅತ್ಯಂತ ಚಿಕ್ಕ ಕ್ಷೇತ್ರವಾಗಿದೆ.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ನಾಯಕರು ಮತ ಚಲಾಯಿಸಿದರು.
ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಿ, ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದರು.
ಮೂರನೇ ಹಂತದಲ್ಲಿ ಅಸ್ಸಾಂನ 4, ಬಿಹಾರದ 5, ಛತ್ತೀಸ್‌ಗಢದ 7, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು 2, ಗೋವಾ 2, ಗುಜರಾತ್ ನ 25, ಕರ್ನಾಟಕದ 14 , ಮಹಾರಾಷ್ಟ್ರದ 11, ಮಧ್ಯಪ್ರದೇಶದ 8, ಉತ್ತರ ಪ್ರದೇಶದ 10 ಮತ್ತು ಪಶ್ಚಿಮ ಬಂಗಾಳದ 4 ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಿತು. ಸೂರತ್ ಕ್ಷೇತ್ರವನ್ನು ಈಗಾಗಲೇ ಬಿಜೆಪಿ ಅವಿರೋಧವಾಗಿ ಗೆದ್ದುಕೊಂಡಿದೆ.
ಇದನ್ನೂ ಓದಿ: Lok Sabha Election 2024: ಭಾಲ್ಕಿಯಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಮತದಾನ
120 ಮಹಿಳಾ ಅಭ್ಯರ್ಥಿಗಳು
ಮೂರನೇ ಹಂತದ ಚುನಾವಣಾ ಕಣದಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1300ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಂತದಲ್ಲಿ 1.85 ಲಕ್ಷ ಮತಗಟ್ಟೆಗಳಲ್ಲಿ ಒಟ್ಟು 17.24 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.
2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದು ನಡೆದ 93 ಸ್ಥಾನಗಳಲ್ಲಿ ಬಿಜೆಪಿ 72 ಸ್ಥಾನಗಳನ್ನು ಗೆದ್ದು ಕೊಂಡಿತ್ತು.